ನನ್ನ ವಿರುದ್ಧ ಹಬ್ಬುತ್ತಿರೋ ಸುದ್ದಿಯೆಲ್ಲಾ ಬರೀ ಸುಳ್ಳು, ವಿಡಿಯೋ ರಿಲೀಸ್ ಮಾಡಿದ ಇಮ್ರಾನ್ ಪಾಷಾ
ಬೆಂಗಳೂರು: ಕಾರ್ಪೊರೇಟರ್ ಇಮ್ರಾನ್ ಪಾಷಾಗೆ ಕೊರೊನಾ ಬಂದಿದ್ದೇ ತಡ ಆರೋಗ್ಯಾಧಿಕಾರಿಗಳು ಬೆಚ್ಚಿಬಿದ್ದಿದ್ರು. ಕಾರ್ಪೊರೇಟರ್ ಸಾವಿರಾರು ಮಂದಿ ಜೊತೆ ಓಡಾಡ್ತಿದ್ದಾರೆ. ಹೇಗಪ್ಪಾ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನ ಕಂಡು ಹಿಡಿಯೋದು ಅಂತಾ ಟೆನ್ಷನ್ ಆಗಿದ್ರು. ಜೊತೆಗೆ ಆಸ್ಪತ್ರೆಗೆ ಶಿಫ್ಟ್ ಆಗುವಾಗ್ಲೂ ಕಾರ್ಪೊರೇಟರ್ ಮಾಡಿರೋ ಅವಾಂತರ ಎಲ್ಲರನ್ನ ಕೆರಳಿಸಿತ್ತು. ಇದ್ರ ಬೆನ್ನಲ್ಲೇ ಇಮ್ರಾನ್ ಪಾಷಾ ವಿಡಿಯೋ ರಿಲೀಸ್ ಮಾಡಿದ್ದಾರೆ. ಆಗಿದ್ದೇ ಒಂದು ಸುದ್ದಿ ಹಬ್ಬಿಸ್ತಿರೋದೇ ಮತ್ತೊಂದು.. ಜನಪ್ರತಿನಿಧಿಯಾಗಿ ನಾನೇ ತಪ್ಪು ಮಾಡೋಕೆ ಸಾಧ್ಯನಾ? ನಾನು ಯಾವುದೇ ಹೈಡ್ರಾಮಾನೂ ಮಾಡಿಲ್ಲ.. ಮನೆಯಲ್ಲೇ ಕ್ವಾರಂಟೈನ್ ಆಗ್ತೀನಿ ಅಂತಾ […]
ಬೆಂಗಳೂರು: ಕಾರ್ಪೊರೇಟರ್ ಇಮ್ರಾನ್ ಪಾಷಾಗೆ ಕೊರೊನಾ ಬಂದಿದ್ದೇ ತಡ ಆರೋಗ್ಯಾಧಿಕಾರಿಗಳು ಬೆಚ್ಚಿಬಿದ್ದಿದ್ರು. ಕಾರ್ಪೊರೇಟರ್ ಸಾವಿರಾರು ಮಂದಿ ಜೊತೆ ಓಡಾಡ್ತಿದ್ದಾರೆ. ಹೇಗಪ್ಪಾ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನ ಕಂಡು ಹಿಡಿಯೋದು ಅಂತಾ ಟೆನ್ಷನ್ ಆಗಿದ್ರು. ಜೊತೆಗೆ ಆಸ್ಪತ್ರೆಗೆ ಶಿಫ್ಟ್ ಆಗುವಾಗ್ಲೂ ಕಾರ್ಪೊರೇಟರ್ ಮಾಡಿರೋ ಅವಾಂತರ ಎಲ್ಲರನ್ನ ಕೆರಳಿಸಿತ್ತು. ಇದ್ರ ಬೆನ್ನಲ್ಲೇ ಇಮ್ರಾನ್ ಪಾಷಾ ವಿಡಿಯೋ ರಿಲೀಸ್ ಮಾಡಿದ್ದಾರೆ.
ಆಗಿದ್ದೇ ಒಂದು ಸುದ್ದಿ ಹಬ್ಬಿಸ್ತಿರೋದೇ ಮತ್ತೊಂದು.. ಜನಪ್ರತಿನಿಧಿಯಾಗಿ ನಾನೇ ತಪ್ಪು ಮಾಡೋಕೆ ಸಾಧ್ಯನಾ? ನಾನು ಯಾವುದೇ ಹೈಡ್ರಾಮಾನೂ ಮಾಡಿಲ್ಲ.. ಮನೆಯಲ್ಲೇ ಕ್ವಾರಂಟೈನ್ ಆಗ್ತೀನಿ ಅಂತಾ ಹೇಳೇ ಇಲ್ಲ.. ಸುಳ್ಳೇ ಸುಳ್ಳು.. ಎಲ್ಲಾ ಬರೀ ಸುಳ್ಳು.
ಹೈಡ್ರಾಮಾ ಬಗ್ಗೆ ಬಾಯ್ಬಿಟ್ಟ ಇಮ್ರಾನ್ ಪಾಷಾ! ಬೆಂಗಳೂರಿನ ಪಾದರಾಯನಪುರ ಮೊದಲೇ ಕೊರೊನಾದ ಹಾಟ್ಸ್ಪಾಟ್. ಇಲ್ಲಿರೋ ಕಾರ್ಪೊರೇಟರ್ ಇಮ್ರಾನ್ ಪಾಷಾಗೆ ಕೊರೊನಾ ಕನ್ಫರ್ಮ್ ಆಗಿದ್ದೇ ತಡ ಆರೋಗ್ಯಾಧಿಕಾರಿಗಳು ಅಲರ್ಟ್ ಆದ್ರು. ಮೇ 30ರಂದು ಇಮ್ರಾನ್ ಪಾಷಾರನ್ನ ಆಸ್ಪತ್ರೆಗೆ ಶಿಫ್ಟ್ ಮಾಡೋಕೆ ಅಂತಾ ಅವ್ರ ಮನೆಗೆ ಹೋಗಿದ್ರು.
ಈ ವೇಳೆ ಕಾರ್ಪೊರೇಟರ್ ಆರೋಗ್ಯಾಧಿಕಾರಿಗಳನ್ನ ಗಂಟೆಗಟ್ಟಲೆ ಕಾಯಿಸಿದ್ರು. ಬಳಿಕ ದೊಡ್ಡ ಹೈಡ್ರಾಮಾ ಮಾಡಿದ್ದಕ್ಕೆ ಏರಿಯಾ ಜನ ಎಲ್ಲಾ ಜಮಾಯಿಸಿದ್ರು. ಅಷ್ಟೇ ಅಲ್ಲದೆ ಌಂಬುಲೆನ್ಸ್ ಹತ್ತುವಾಗಲೂ ಇಮ್ರಾನ್ ಪಾಷಾ ಯುದ್ಧಕ್ಕೆ ಹೋಗೋರ ರೇಂಜ್ಗೆ ಬಿಲ್ಡಪ್ ಕೊಟ್ರು. ಇದ್ರಿಂದ ರೊಚ್ಚಿಗೆದ್ದ ಬಿಬಿಎಂಪಿ ಅಧಿಕಾರಿಗಳು ಇಮ್ರಾನ್ ಪಾಷಾ ವಿರುದ್ಧ ದೂರು ನೀಡಿದ್ದರಿಂದ ಎಫ್ಐಆರ್ ಕೂಡ ದಾಖಲಾಗಿದೆ. ಇದ್ರ ಬೆನ್ನಲ್ಲೇ ನಿನ್ನೆ ಕಾರ್ಪೊರೇಟರ್ ವಿಕ್ಟೋರಿಯಾ ಆಸ್ಪತ್ರೆಯಿಂದಲೇ ವಿಡಿಯೋ ರಿಲೀಸ್ ಮಾಡಿದ್ದಾರೆ. ನಂದೇನ್ ತಪ್ಪೇ ಇಲ್ಲ. ಸುಮ್ನೆ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಅಂದ್ರು.
ಜನರಲ್ ವಾರ್ಡ್ನಲ್ಲೇ ಚಿಕಿತ್ಸೆ ಪಡೀತಿದ್ದೇನೆ! ಸದ್ಯ ಇಮ್ರಾನ್ ಪಾಷಾ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಕ್ವಾರಂಟೈನ್ನಲ್ಲಿದ್ದಾರೆ. ಸ್ವಲ್ಪ ಉಸಿರಾಟದ ತೊಂದರೆಯಿದ್ದು, ವೈದ್ಯರು ಕ್ಷಣಕ್ಷಣಕ್ಕೂ ಆರೋಗ್ಯ ತಪಾಸಣೆ ಮಾಡ್ತಿದ್ದಾರೆ. ಈ ನೆಲದ ಕಾನೂನು ಎಲ್ರಿಗೂ ಒಂದೆನೇ. ನಾನು ಕೂಡ ಜನರಲ್ ವಾರ್ಡ್ನಲ್ಲೇ ಚಿಕಿತ್ಸೆ ಪಡೀತಿದ್ದೀನಿ ಅಂದ್ರು.
ಇನ್ನು ಆಸ್ಪತ್ರೆ ಕ್ವಾರಂಟೈನ್ ಬಳಿಕ ಇಮ್ರಾನ್ ಪಾಷಾ 14 ದಿನ ಹೋಂ ಕ್ವಾರಂಟೈನ್ನಲ್ಲಿರಲಿದ್ದಾರೆ. ಇದಾದ ಬಳಿಕವಷ್ಟೇ ಪೊಲೀಸರು ವಿಚಾರಣೆಗೆ ಕರೆದೊಯ್ಯಲಿದ್ದಾರೆ. ಅದೇನೇ ಇರ್ಲಿ, ಜನರಿಗೆ ಬುದ್ಧಿ ಹೇಳಬೇಕಿದ್ದ ಕಾರ್ಪೊರೇಟರೇ ಎಡವಟ್ಟು ಕೆಲ್ಸ ಮಾಡಿದ್ದಾರೆ. ಎಫ್ಐಆರ್ ದಾಖಲಾಗ್ತಿದ್ದಂತೆಯೇ ಆರೋಪಗಳಿಗೆ ಇಮ್ರಾನ್ ಪಾಷಾ ತೇಪೆ ಹಚ್ಚೋ ಕೆಲ್ಸ ಮಾಡಿದ್ದಾರೆ.
Published On - 7:52 am, Mon, 1 June 20