ಇಂದಿನಿಂದ ರಾಜ್ಯದಲ್ಲಿ ಲಾಕ್‌ಡೌನ್ 5.0 ಜಾರಿ, ಮೂರು ಹಂತದಲ್ಲಿ ಬಂಧಮುಕ್ತವಾಗಲಿದೆ ಕರುನಾಡು
ದೆಹಲಿ: ಭಾರತ ಬಂಧ ಮುಕ್ತವಾಗ್ತಿದೆ. ದೇಶ ಲಾಕ್‌ಡೌನ್ ಸರಪಳಿಯಿಂದ ಬಿಡುಗಡೆಯಾಗ್ತಿದೆ. ಕರುನಾಡು ಕೂಡಾ ರಿಲೀಫ್‌ಗೆ ಅಣಿಯಾಗ್ತಿದೆ. ಒಂದ್ಕಡೆ ಕೊರೊನಾದ ಕಬಂಧ ಬಾಹು, ಮತ್ತೊಂದು ಕಡೆ ಪತಾಳಕ್ಕಿಂತಲೂ ಕೆಳಗಿರೋ ಆರ್ಥಿಕತೆ. ಇದೆಲ್ಲವನ್ನ ಅಳೆದು ತೂಗಿರೋ ಸರ್ಕಾರ ಕೊರೊನಾದೊಂದಿಗೆ ಬದುಕೋಣ ಅನ್ನೋ ನಿರ್ಧಾರಕ್ಕೆ ಬಂದಿದೆ. ಜೂನ್ 30 ರವರೆಗೆ ಐದನೇ ಹಂತದ ಲಾಕ್‌ಡೌನ್ ವಿಸ್ತರಿಸಿ ಹಲವು ರಿಲೀಫ್ ನೀಡಿದೆ . 5 ನೇ ಹಂತದ ಲಾಕ್‌ಡೌನ್‌ಗೆ ಸರ್ಕಾರದ ಮಾರ್ಗಸೂಚಿ: ಯೆಸ್… ದೇಶದಲ್ಲಿ ಕೊರೊನಾದ ಕರಾಳ ಅಧ್ಯಾಯ ಆರಂಭವಾಗ್ತಿದ್ದಂತೆ, ಲಾಕ್‌ಡೌನ್ ಅಸ್ತ್ರದಿಂದಲೇ […]
ದೆಹಲಿ: ಭಾರತ ಬಂಧ ಮುಕ್ತವಾಗ್ತಿದೆ. ದೇಶ ಲಾಕ್‌ಡೌನ್ ಸರಪಳಿಯಿಂದ ಬಿಡುಗಡೆಯಾಗ್ತಿದೆ. ಕರುನಾಡು ಕೂಡಾ ರಿಲೀಫ್‌ಗೆ ಅಣಿಯಾಗ್ತಿದೆ. ಒಂದ್ಕಡೆ ಕೊರೊನಾದ ಕಬಂಧ ಬಾಹು, ಮತ್ತೊಂದು ಕಡೆ ಪತಾಳಕ್ಕಿಂತಲೂ ಕೆಳಗಿರೋ ಆರ್ಥಿಕತೆ. ಇದೆಲ್ಲವನ್ನ ಅಳೆದು ತೂಗಿರೋ ಸರ್ಕಾರ ಕೊರೊನಾದೊಂದಿಗೆ ಬದುಕೋಣ ಅನ್ನೋ ನಿರ್ಧಾರಕ್ಕೆ ಬಂದಿದೆ. ಜೂನ್ 30 ರವರೆಗೆ ಐದನೇ ಹಂತದ ಲಾಕ್‌ಡೌನ್ ವಿಸ್ತರಿಸಿ ಹಲವು ರಿಲೀಫ್ ನೀಡಿದೆ .
5 ನೇ ಹಂತದ ಲಾಕ್‌ಡೌನ್‌ಗೆ ಸರ್ಕಾರದ ಮಾರ್ಗಸೂಚಿ: ಯೆಸ್… ದೇಶದಲ್ಲಿ ಕೊರೊನಾದ ಕರಾಳ ಅಧ್ಯಾಯ ಆರಂಭವಾಗ್ತಿದ್ದಂತೆ, ಲಾಕ್‌ಡೌನ್ ಅಸ್ತ್ರದಿಂದಲೇ ವೈರಸ್ ವಿರುದ್ಧ ಭಾರತ ಯುದ್ಧ ಮಾಡ್ತಿದೆ. ಏಪ್ರಿಲ್‌ನಿಂದ ಆರಂಭವಾದ ಲಾಕ್‌ಡೌನ್ ಈಗ ನಾಲ್ಕು ಹಂತಗಳನ್ನ ಮುಗಿಸಿ ಐದನೇ ಹಂತಕ್ಕೆ ಕಾಲಿಡುತ್ತಿದೆ. ಕರ್ನಾಟಕದಲ್ಲೂ ಇಂದಿನಿಂದ ಲಾಕ್‌ಡೌನ್ 5.0 ಆರಂಭವಾಗಲಿದೆ. ಹೀಗಾಗಿ ಹೊಸ ಲಾಕ್‌ಡೌನ್‌ಗೆ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಗಳನ್ನ ರಿಲೀಸ್ ಮಾಡಿದೆ.
ಐದನೇ ಹಂತದ ಲಾಕ್‌ಡೌನ್‌ನಲ್ಲಿ ಹಲವು ರಿಲೀಫ್‌ಗಳಿದ್ದು, ಜೂನ್ 8 ರಿಂದ ಈ ಸಡಿಲಿಕೆ ಜಾರಿಗೆ ಬರುತ್ವೆ. ಸದ್ಯ ಜಾರಿಯಲ್ಲಿದ್ದ ಸಂಜೆ 7 ರಿಂದ ಬೆಳಗ್ಗೆ 7 ಗಂಟೆವರೆಗಿನ ಕರ್ಪ್ಯೂ ಬದಲು, ರಾತ್ರಿ 9ರಿಂದ ಬೆಳಗ್ಗೆ 5ರ ವರೆಗೆ ಕರ್ಫ್ಯೂ ಇರಲಿದೆ. ಹಿಂದಿನಂತೆ 65 ವರ್ಷ ಮೇಲ್ಪಟ್ಟವರು, 10 ವರ್ಷ ಕೆಳಗಿನವರು ಮನೆಯಲ್ಲೇ ಇರ್ಬೇಕು. ಅಷ್ಟಕ್ಕೂ ಲಾಕ್‌ಡೌನ್‌ನ್ನ ಒಮ್ಮೆಲೆ ಸಡಿಲ ಮಾಡದಿರಲು ನಿರ್ಧರಿಸಿರೋ ಸರ್ಕಾರ, ಮೂರು ಹಂತಗಳಲ್ಲಿ ರಾಜ್ಯದ ಜನಕ್ಕೆ ರಿಲೀಫ್ ನೀಡಲು ನಿರ್ಧರಿಸಿದೆ. ಮೊದಲ ಹಂತದಲ್ಲಿ ಏನೆಲ್ಲಾ ರಿಲೀಫ್ ಸಿಗುತ್ತೆ ಅನ್ನೋದನ್ನ ನೋಡೋದಾದ್ರೆ.
ಮೊದಲ ಹಂತದ ರಿಲೀಫ್! ಲೌಕ್‌ಡೌನ್ ಐದನೇ ಹಂತದಲ್ಲಿ ದೇವಸ್ಥಾನ, ಚರ್ಚ್, ಮಸೀದಿ ಸೇರಿದಂತೆ ಧಾರ್ಮಿಕ ಸ್ಥಳಗಳ ಬಾಗಿಲು ತೆರೆಯಲು ಸರ್ಕಾರ ಅನುಮತಿ ನೀಡಿದೆ. ಅದ್ರಂತೆ ಬಹುದಿನಗಳಿಂದ ಕಾದು ಕುಳಿತಿದ್ದ ಮಾಲ್ ಮಾಲೀಕರಿಗೂ ಕೂಡಾ ಸರ್ಕಾರ ರಿಲೀಫ್ ನೀಡಿದ್ದು, ಶಾಪಿಂಗ್ ಮಾಲ್‌ಗಳ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಇನ್ನು ಹೋಟೆಲ್‌ಗಳು ಓಪನ್ ಇದ್ರು ಪಾರ್ಸಲ್ ಸೇವೆ ಮಾತ್ರ ಇತ್ತು. ಆದ್ರೆ ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳಲ್ಲೇ ಸೇವೆ ಆರಂಭಿಸಲು ಸರ್ಕಾರ ಅನುಮತಿ ನೀಡಿದೆ. ಜೂನ್ 8 ರಿಂದ ಕೆಲ ಕಠಿಣ ರೂಲ್ಸ್ ಪಾಲನೆಯೊಂದಿಗೆ ಇವೆಲ್ಲವೂ ಓಪನ್ ಆಗಲಿವೆ. ಜತೆಗೆ ಅಂತಾರಾಜ್ಯ ಸಂಚಾರಕ್ಕೂ ಅನುಮತಿ ನೀಡಲಾಗಿದೆ.
ಇನ್ನು ಎರಡನೇ ಹಂತದಲ್ಲಿ ಯಾವುದೆಲ್ಲಾ ಓಪನ್ ಆಗುತ್ತೆ ಅನ್ನೋದನ್ನ ನೋಡೋದಾದ್ರೆ. ಎರಡನೇ ಹಂತದ ರಿಲೀಫ್! ಇನ್ನು ಎರಡನೇ ಹಂತದ ಸಡಿಲಿಕೆಯಲ್ಲಿ ಶಾಲಾ-ಕಾಲೇಜುಗಳು ಓಪನ್ ಆಗುವ ಸಾಧ್ಯತೆ ಹೆಚ್ಚಿದೆ. ಜೂನ್ ತಿಂಗಳ ಬದಲು ಜುಲೈ ನಂತರ ಶಾಲಾ ಕಾಲೇಜುಗಳ ಆರಂಭದ ಬಗ್ಗೆ ಚಿಂತನೆ ನಡೆದಿದೆ. ಆದ್ರೆ SSLC ಹಾಗೂ PUCಯ ಇಂಗ್ಲಿಷ್ ಪರೀಕ್ಷೆ ನಿಗದಿಯಂತೆ ನಡೆಯಲಿದೆ. ಜೂನ್ 25ರಿಂದ ಜುಲೈ 3ರವರೆಗೆ SSLC ಪರೀಕ್ಷೆಗಳು ನಡೆದ್ರೆ ಜೂನ್ 18ರಂದು ಪಿಯುಸಿ ಇಂಗ್ಲಿಷ್ ಪರೀಕ್ಷೆ ನಡೆಯಲಿದೆ.
ಶಾಲಾ ಕಾಲೇಜ್‌ಗಳ ಆರಂಭದ ಬಗ್ಗೆ ಸ್ವತಃ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರೇ ಮಾಹಿತಿ ನೀಡಿದ್ದಾರೆ.
ಇನ್ನು ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನೇ ಯಥಾವತ್ತಾಗಿ ಪಾಲಿಸುತ್ತೇವೆ ಅಂತಾ ರಾಜ್ಯ ಸರ್ಕಾರ ಹೇಳಿದೆ. ಹೀಗಾಗಿ ಜೂನ್ 7 ರ ಬಳಿಕವೂ ಥಿಯೇಟರ್, ಜಿಮ್ ಓಪನ್ ಆಗೋ ಸಾಧ್ಯತೆ ಇಲ್ಲ. ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡ್ಬೇಕು ಅಂದ್ರೆ ಮೂರನೇ ಹಂತದ ರಿಲೀಫ್‌ವರೆಗೂ ಕಾಯಲೇ ಬೇಕು. ಅಷ್ಟಕ್ಕೂ ಮೂರನೇ ಹಂತದಲ್ಲಿ ಯಾವುಗಳು ಬಂಧಮುಕ್ತವಾಗಲಿವೆ ಅನ್ನೋದನ್ನ ನೋಡೋದಾದ್ರೆ.
ಮೂರನೇ ಹಂತದ ರಿಲೀಫ್! ಇನ್ನು ಮೂರನೇ ಹಂತದಲ್ಲಿ ಮೆಟ್ರೋ ರೈಲು ಸಂಚಾರಕ್ಕೆ ಅನುಮತಿ ನೀಡೋ ಸಾಧ್ಯತೆ ಇದೆ. ಸದ್ಯ ದೇಶಿಯಾ ವಿಮಾನ ಸಂಚಾರ ಆರಂಭವಾಗಿದ್ರೂ ವಿದೇಶ ಸಂಚಾರಕ್ಕೆ ಗ್ರೀನ್‌ಸಿಗ್ನಲ್ ಕೊಟ್ಟಿಲ್ಲ. ಅಂತಾರಾಷ್ಟ್ರೀಯ ವಿಮಾನಯಾನಕ್ಕೆ ಮೂರನೇ ಹಂತದಲ್ಲಿ ಗ್ರೀನ್‌ಸಿಗ್ನಲ್ ಸಿಗಲಿದೆ. ಅದ್ರಂತೆ ಚಿತ್ರಮಂದಿರ, ಜಿಮ್, ಸ್ವಿಮ್ಮಿಂಗ್ ಪೂಲ್, ಆಡಿಟೋರಿಯಂ ಹಾಗೂ ಮನರಂಜನಾ ಪಾರ್ಕ್ಗಳು ಮೂರನೇ ಹಂತದ ರಿಲೀಫ್‌ನಲ್ಲೇ ಬಾಗಿಲು ತೆರೆಯಲಿವೆ.
ದೇಶಕ್ಕೆ ಬೀಗ ಹಾಕಿದ್ದ ಸರ್ಕಾರ ಹಂತಹಂತವಾಗಿ ಹೀಗೆ ರಿಲೀಫ್ ನೀಡ್ತಿದೆ. ಆದ್ರೆ ಈ ಹಿಂದಿನಂತೆ ಎಲ್ಲಾ ಕಡೆಯೂ ಜನಜಾತ್ರೆ ನಡೆಸುವಂತಿಲ್ಲ. ಎಲ್ಲಾ ಕಡೆ ಯರ್ರಾಬಿರ್ರಿ ನುಗ್ಗುವಂತಿಲ್ಲ. ಕಟ್ಟು ನಿಟ್ಟಿನ ಆದೇಶ ಪಾಲನೆ ಮಾಡಿದ್ರೆ ಮಾತ್ರ ಎಲ್ಲಾ ಕಡೆ ಪ್ರವೇಶಕ್ಕೆ ಅನುಮತಿ ಇದೆ. ಹಾಗಾದ್ರೆ ಹೋಟೆಲ್, ಮಾಲ್, ದೇಗುಲಗಳಲ್ಲಿ ರೂಲ್ಸ್ ಹೇಗಿರುತ್ತವೆ ಅನ್ನೋದನ್ನ ನೋಡೋದಾದ್ರೆ.
ರಿಲೀಫ್‌ಗೆ ರೂಲ್ಸ್! ಜೂನ್ 8 ರಿಂದ ಹೋಟೆಲ್‌ಗಳ ಆರಂಭಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಆದ್ರೆ ಹಲವು ರೂಲ್ಸ್ ಪಾಲನೆ ಮಾಡ್ಬೇಕು. ಹೋಟೆಲ್‌ಗಳಲ್ಲಿ ಸಾಮಾಜಿಕ ಅಂತರ ಕಡ್ಡಾಯವಾಗಿದ್ದು, ಒಂದು ಟೇಬಲ್ಗೆ ಇಬ್ಬರು ಮಾತ್ರ ಕೂರಲು ಅವಕಾಶ ಇದೆ. ಮತ್ತೊಬ್ಬರ ಜತೆ ಸಂಪರ್ಕವಾಗದಂತೆ ಪ್ರತೀ ಟೆಬಲ್‌ಗೂ ಗ್ಲಾಸ್ ಡಿವೈಡರ್ ಹಾಕ್ಬೇಕು.
ಇನ್ನು ಮೊದಲಿನಂತೆ ಒಂದು ಟೀ ತಗೊಂಡು ಒಂದು ತಾಸು ಕುಳಿತು ಹರಟೆ ಹೊಡೆಯುವಂತಿಲ್ಲ. ಉಪಾಹಾರ ಹಾಗೂ ಟೀ ಸೇವನೆಗೆ ಒಬ್ಬರಿಗೆ 15 ನಿಮಿಷ ಮಾತ್ರ ಕಾಲಾವಕಾಶ ಇದ್ರೆ, ಊಟ ಮಾಡಲು ಒಬ್ಬರಿಗೆ ಕೇವಲ 25 ನಿಮಿಷ ಟೈಂ ನಿಗದಿ ಮಾಡಲಾಗಿದೆ. ತೊಳೆಯು ತಟ್ಟೆ, ಲೋಟ ಬದಲು ಉಪಯೋಗಿಸಿ ಬಿಸಾಕುವ ವಸ್ತುಗಳ ಬಳಕೆ ಮಾಡ್ಬೇಕು ಅಂತಾ ಹೇಳಲಾಗಿದೆ. ಮಾಲ್‌ನಲ್ಲೂ ಸಹ ಸಾಮಾಜಿಕ ಅಂತರ ಕಡ್ಡಾಯವಾಗಿದ್ದು, ಥರ್ಮಲ್ ಸ್ಕ್ರೀನಿಂಗ್‌ನಲ್ಲಿ ಆರೋಗ್ಯ ತಪಾಸಣೆ ಪಾಸ್ ಆದ್ರೆ ಮಾತ್ರ ಎಂಟ್ರಿ ಇರುತ್ತೆ. ಧಾರ್ಮಿಕ ಸ್ಥಳಗಳಿಗೂ ಈ ರೂಲ್ಸ್ ಅನ್ವಯವಾಗಲಿವೆ.
ಒಟ್ನಲ್ಲಿ ನಾಳೆಯಿಂದ ಜೂನ್ 30ರವರೆಗೂ ದೇಶದಲ್ಲಿ ಐದನೇ ಹಂತದ ಲಾಕ್‌ಡೌನ್ ಜಾರಿಯಾಗ್ತಿದೆ. ಪಾತಾಳಕ್ಕೆ ಬಿದ್ದಿರೋ ಆರ್ಥಿಕತೆ ಮೇಲಕ್ಕೆತ್ತಲು ಸರ್ಕಾರ ಹಲವು ರಿಲೀಫ್ ನೀಡಿದ್ದು, ರೂಲ್ಸ್‌ಗಳನ್ನ ಪಾಲಿಸಿ ಅಂತಾ ಹೇಳಿದೆ.
Published On - 7:14 am, Mon, 1 June 20