ಲಾಕ್​ಡೌನ್ ಉಲ್ಲಂಘಿಸಿದ್ದಕ್ಕೆ ಪೊಲೀಸರಿಂದ ಸಿಕ್ತು ಹಣೆ ಪಟ್ಟಿ!

|

Updated on: Apr 20, 2020 | 2:05 PM

ದಾವಣಗೆರೆ: ಕೊರೊನಾ ಸೋಂಕನ್ನು ತಡೆಯುವ ನಿಟ್ಟಿನಲ್ಲಿ ಇಡೀ ದೇಶವನ್ನು ಎರಡನೇ ಹಂತದ ಲಾಕ್​ಡೌನ್ ಮಾಡಲಾಗಿದೆ. ಆದರೆ ನಮ್ಮ ಜನ ಮಾತ್ರ ಯಾವುದಕ್ಕೂ ಕ್ಯಾರೆ ಅಂತಿಲ್ಲ. ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ. ಇದೇ ರಿತಿ ಆದೇಶವನ್ನು ಉಲ್ಲಂಘಿಸಿದ 86 ಮಂದಿಯನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರ ಕೈಗೆ ಕ್ಷಮಿಸಿ ನಾನು ಲಾಕ್​ಡೌನ್ ಉಲ್ಲಂಘಿಸಿದ್ದೇನೆ. ಮತ್ತೆ ಈ ರೀತಿ ಕಾನೂನು ಉಲ್ಲಂಘಿಸಲ್ಲ ಎಂಬ ಬರಹವಿರುವ ಸ್ಲೇಟ್ ಕೊಟ್ಟು ಕೈ ಮೇಲೇರಿಸಿ ಕೂರಿಸಿದ್ದಾರೆ. ಅನಗತ್ಯ ತಿರುಗಾಟ ನಡೆಸಿದವರ ವಿರುದ್ಧ […]

ಲಾಕ್​ಡೌನ್ ಉಲ್ಲಂಘಿಸಿದ್ದಕ್ಕೆ ಪೊಲೀಸರಿಂದ ಸಿಕ್ತು ಹಣೆ ಪಟ್ಟಿ!
Follow us on

ದಾವಣಗೆರೆ: ಕೊರೊನಾ ಸೋಂಕನ್ನು ತಡೆಯುವ ನಿಟ್ಟಿನಲ್ಲಿ ಇಡೀ ದೇಶವನ್ನು ಎರಡನೇ ಹಂತದ ಲಾಕ್​ಡೌನ್ ಮಾಡಲಾಗಿದೆ. ಆದರೆ ನಮ್ಮ ಜನ ಮಾತ್ರ ಯಾವುದಕ್ಕೂ ಕ್ಯಾರೆ ಅಂತಿಲ್ಲ. ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ. ಇದೇ ರಿತಿ ಆದೇಶವನ್ನು ಉಲ್ಲಂಘಿಸಿದ 86 ಮಂದಿಯನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತರ ಕೈಗೆ ಕ್ಷಮಿಸಿ ನಾನು ಲಾಕ್​ಡೌನ್ ಉಲ್ಲಂಘಿಸಿದ್ದೇನೆ. ಮತ್ತೆ ಈ ರೀತಿ ಕಾನೂನು ಉಲ್ಲಂಘಿಸಲ್ಲ ಎಂಬ ಬರಹವಿರುವ ಸ್ಲೇಟ್ ಕೊಟ್ಟು ಕೈ ಮೇಲೇರಿಸಿ ಕೂರಿಸಿದ್ದಾರೆ. ಅನಗತ್ಯ ತಿರುಗಾಟ ನಡೆಸಿದವರ ವಿರುದ್ಧ ಪೊಲೀಸ್ ಇಲಾಖೆ, ಜಿಲ್ಲಾಡಳಿತ ಈ ರೀತಿಯ ಕ್ರಮ ಕೈಗೊಂಡಿದೆ.

ಎಷ್ಟೇ ಜಾಗೃತಿ ಮೂಡಿಸಿದರು ಜನ ಹೊರ ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅನಗತ್ಯ ತಿರುಗಾಟ ನಡೆಸುವವರಿಗೆ ತಕ್ಕ ಶಾಸ್ತ್ರಿ ಮಾಡಿದ್ದೇವೆ. ಮೊನ್ನೆ ನೂರಕ್ಕೂ ಅಧಿಕ ಮಂದಿಯನ್ನ ಬಂಧಿಸಲಾಗಿತ್ತು. ಇಂದು 86 ಜನರನ್ನು ಬಂಧಿಸಿದ್ದೇವೆ. ಇವರ ಮೇಲೆ ಕಾನೂನು ಕ್ರಮ‌ ಕೈಗೊಳ್ಳುತ್ತೇವೆ. ಅಗತ್ಯ ವಸ್ತು ಕೊಳ್ಳುವವರಿಗೆ ಮಾತ್ರ ಬಿಟ್ಟಿದ್ದೇವೆ. ಉಳಿದವರಿಗೆ ಇದು ಎಚ್ಚರಿಕೆಯ ಗಂಟೆ ಎಂದು ದಾವಣಗೆರೆಯಲ್ಲಿ ಎಸ್ಪಿ ಹನುಮಂತರಾಯ ಎಚ್ಚರಿಸಿದ್ದಾರೆ.