ಕಲ್ಲು ಒಡೆದು ಜೀವನ ಮಾಡುವ ಬೋವಿಗಳಿಗೆ ಅಧಿಕಾರಿಗಳ ಕಿರುಕುಳ ನಿಲ್ಲಬೇಕು: ಮಾಜಿ ಸಚಿವ ಅರವಿಂದ ಲಿಂಬಾವಳಿ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 01, 2022 | 1:05 PM

ನಮ್ಮದು ರಾಷ್ಟ್ರೀಯ ಪಕ್ಷ, ನಾವು ಭೇದಭಾವ ಮಾಡಲ್ಲ ಎಂದು ಪರಿಹಾರ ವಿಚಾರವಾಗಿ ಕಿಡಿಕಾರಿದ್ದ ಹೆಚ್.ಡಿ.ಕುಮಾರಸ್ವಾಮಿ ನಗರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದರು.

ಕಲ್ಲು ಒಡೆದು ಜೀವನ ಮಾಡುವ ಬೋವಿಗಳಿಗೆ ಅಧಿಕಾರಿಗಳ ಕಿರುಕುಳ ನಿಲ್ಲಬೇಕು: ಮಾಜಿ ಸಚಿವ ಅರವಿಂದ ಲಿಂಬಾವಳಿ
ಮಾಜಿ ಸಚಿವ ಅರವಿಂದ ಲಿಂಬಾವಳಿ
Follow us on

ದಾವಣಗೆರೆ: ಕಲ್ಲು ಹೊಡೆದು ಜೀವನ ಮಾಡುವ ಬೋವಿ (Bowie) ಗಳಿಗೆ ಅಧಿಕಾರಿಗಳ ಕಿರುಕುಳ ನಿಲ್ಲಬೇಕು. ಸಮಸ್ಯೆ ಬಗೆಹರಿಸಿ ಬೋವಿ ಸಮಾಜಕ್ಕೆ ಸಹಕರಿಸಿ ಎಂದು ಸಿದ್ಧರಾಮೇಶ್ವರ ದೇವರ ರಥ ವಜ್ರ ಮಹೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿ ಸಿಎಂ ಬೊಮ್ಮಾಯಿಗೆ ಮನವಿ ಮಾಡಿದರು. ಬೋವಿ ಸಮಾಜಕ್ಕೆ ನೀವು ಒಳಿತು ಮಾಡುವ ವಿಶ್ವಾಸವಿದೆ. ಬೋವಿ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರ ನೇಮಕ ಆಗಿಲ್ಲ. ಅಧಿಕಾರಿಗಳಿಂದ ಬೋವಿ ನಿಗಮದ ಹಣ ಲೂಟಿ ಮಾಡಿದ್ದು, ನಿಗಮದ ಹಣ ಲೂಟಿಗೆ ಬ್ರೇಕ್ ಹಾಕಬೇಕು. ಬೋವಿ ಸಮಾಜದ ಮುಖಂಡರಿಂದ ಸಮಸ್ಯೆ ಕೇಳಿ ಸಮುದಾಯದ ಸಮಸ್ಯೆ ಬಗೆಹರಿಸಿ ಎಂದು ಮನವಿ ಮಾಡಲಾಯಿತು. ಸರ್ಕಾರ ರಚನೆ ಮಾಡುವ ವೇಳೆ ನನ್ನ ರೋಲ್ ಏನೆಂಬುದು ಸಿಎಂಗೆ ಗೊತ್ತಿದೆ. ಒಯಕ್ತಿಕವಾಗಿ ನನಗೇನು ಮಾಡಿದಿರಿ ಎಂದು ಕೇಳಲ್ಲ. ಅನ್ಯಾಯ ಆಗಿದೆ, ನಾನು ಒಯಕ್ತಿಕ ವಿಚಾರ ಹೇಳಲ್ಲ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಹೇಳಿದರು.

ನಮ್ಮದು ರಾಷ್ಟ್ರೀಯ ಪಕ್ಷ, ನಾವು ಭೇದಭಾವ ಮಾಡಲ್ಲ: ಸಿಎಂ ಬೊಮ್ಮಾಯಿ 

ನಮ್ಮದು ರಾಷ್ಟ್ರೀಯ ಪಕ್ಷ, ನಾವು ಭೇದಭಾವ ಮಾಡಲ್ಲ ಎಂದು ಪರಿಹಾರ ವಿಚಾರವಾಗಿ ಕಿಡಿಕಾರಿದ್ದ ಹೆಚ್.ಡಿ.ಕುಮಾರಸ್ವಾಮಿ ನಗರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದರು. ಮಂಕಿಪಾಕ್ಸ್​ ಬಗ್ಗೆ ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಈ ಕುರಿತು ನಾಳೆ ಸಭೆ ನಡೆಸಿ ತೀರ್ಮಾನ ಮಾಡುತ್ತೇವೆ. ಯಾವ ರೀತಿ ಕ್ರಮಕೈಗೊಳ್ಳಬೇಕು ಎಂದು ನಾಳೆ ತೀರ್ಮಾನ ಮಾಡಲಾಗುವುದು ಎಂದು ಹೇಳಿದರು. ಇನ್ನೂ ಗೃಹಸಚಿವರ ಮನೆಗೆ ಎಬಿವಿಪಿ ಕಾರ್ಯಕರ್ತರ ಮುತ್ತಿಗೆ ವಿಚಾರವಾಗಿ ಮಾತನಾಡಿದ್ದು, ಯಾವ ಸಚಿವರ ಮನೆಗೂ ಭದ್ರತೆಯನ್ನ ಒದಗಿಸಿಲ್ಲ. ಗೃಹ ಸಚಿವರ ಭದ್ರತೆಯನ್ನು ಬದಲಾಯಿಸಿದ್ದಾರೆ. ಪ್ರತಿಭಟನೆ ವೇಳೆ ಇದ್ದಿರದ ಅಧಿಕಾರಿಗಳಿಗೆ ತಾಕೀತು ಮಾಡಿದೆ ಎಂದು ಹೇಳಿದರು.

ಸಿದ್ದರಾಮೇಶ್ವರ ದೇವರ ರಥ ವಜ್ರ ಮಹೋತ್ಸವಕ್ಕೆ ಸಿಎಂ ಚಾಲನೆ:

ಸಿದ್ದರಾಮೇಶ್ವರ ದೇವರ ರಥ ವಜ್ರ ಮಹೋತ್ಸವಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ದಾವಣಗೆರೆ ನಗರದ ಜಯದೇವ ವೃತ್ತದ ಬಳಿ ಭೋವಿಮಠದ ಇಮ್ಮಡಿ ಸಿದ್ದರಾಮೇಶ್ವರಶ್ರೀ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದು,
ಸಚಿವ ಭೈರತಿ ಬಸವರಾಜ್, ಡಾ.ಸುಧಾಕರ್, ಸಂಸದ ಜಿ.ಎಂ.ಸಿದ್ದೇಶ್ವರ್, ಚಿತ್ರದುರ್ಗದ ಮುರುಘಾಮಠದ ಡಾ. ಶಿವಮೂರ್ತಿ ಮುರುಘಾ ಶರಣರು, ಶಿವಶರಣ ಮಾದಾರ ಚನ್ನಯ್ಯ ಮಠದ ಬಸವಮೂರ್ತಿ ಸ್ವಾಮೀಜಿ, ಕಾಗಿನೆಲೆ ಮಠದ ನಿರಂಜನಾನಂದಪುರಿ ಸ್ವಾಮೀಜಿ, ಹರಿಹರ ಪಂಚಮಸಾಲಿ ಮಠದ ವಚನಾನಂದ ಸ್ವಾಮೀಜಿ, ಕುಂಚಿಟಿಗ ಮಠದ ಶಾಂತವೀರಶ್ರೀ ಸೇರಿ ವಿವಿಧ ಮಠಾಧೀಶರು ಭಾಗಿಯಾಗಿದ್ದರು.

ಕುಲ‌ ಕಸುಬಿನಿಂದ ಸಮಾಜ ನಿರ್ಮಾಣ, ದೇಶ ನಿರ್ಮಾಣ: ಸಿಎಂ ಬೊಮ್ಮಾಯಿ

ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಮಾತನಾಡಿದ್ದು, ಶಿಕ್ಷಣ, ಆರೋಗ್ಯ ಇತರೆ ಕ್ಷೇತ್ರದಲ್ಲಿ ಹಿಂದುಳಿದ ಸಮಾಜಕ್ಕೆ ನೆರವು ಮಾಡಲಾಗುವುದು. ರಾಜ್ಯ ಸರ್ಕಾರದ ಪೀಠ ಚಲನಶೀಲ ಆಗಿರಬೇಕು, ಸಂಗ್ರಹಶೀಲ ಆಗಿರಬಾರದು. ಹಿಂದುಳಿದ, ದಲಿತ, ಕೆಳವರ್ಗದ ಜನರಲ್ಲಿ ಶ್ರೀಮಂತಿಕೆ ಬರುವಂತೆ ನಾವು ನೋಡಿಕೊಳ್ಳಬೇಕು. ಬೋವಿ ಸಮಾಜ ನಿರಂತರವಾಗಿ ಸಮಸ್ಯೆ‌ ಎದುರಿಸುತ್ತಿದೆ. ಕುಲ ಕಸುಬು ಮಾಡಲು ಸಮಸ್ಯೆ ಆಗುತ್ತಿದೆ. ಪಾರಂಪರಿಕ ಕಸುಬು ಅಲ್ಲೋಲಕಲ್ಲೋಲ ಆಗುವ ಕಾನೂನು ಬಂದಿವೆ. ಅಧಿಕಾರಿಗಳ ಕಿರುಕುಳ ಸಹ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಕಾನೂನು ತಿದ್ದುಪಡಿ ತರುತ್ತೇವೆ. ಯಾರೂ ತೊಂದರೆ ಕೊಡದಂಥ ಸ್ಥಿತಿ ನಿರ್ಮಿಸುತ್ತೇವೆ. ಕುಲ‌ ಕಸುಬಿನಿಂದ ಸಮಾಜ ನಿರ್ಮಾಣ, ದೇಶ ನಿರ್ಮಾಣ. ಬೋವಿಗಳು ಬಂಡೆ ಹೊಡೆಯದಿದ್ದರೆ ಮನೆ, ದೇಗುಲ, ಡ್ಯಾಂ ಕಟ್ಟಲಾಗಲ್ಲ. ಬೋವಿ, ಲಂಬಾಣಿ ಮಕ್ಕಳಿಗೆ ಅವಕಾಶ ಸಿಕ್ಕರೆ ಎಲ್ಲರನ್ನೂ ಮೀರಿಸುತ್ತಾರೆ ಎಂದು ಹೇಳಿದರು.

ಎಸ್ಸಿ, ಎಸ್ಟಿ ಸಮುದಾಯದ ಮಕ್ಕಳೂ ಎಲ್ಲರನ್ನು ಮೀರಿಸುತ್ತಾರೆ. ಎಸ್ಸಿ, ಎಸ್ಟಿ ಸಮುದಾಯಗಳಿಗೆ ಹೆಚ್ಚಿನ ಅನುದಾನ ನೀಡಿದ್ದೇನೆ. ಬೋವಿ ಸಮುದಾಯಕ್ಕೆ 121ಕೋಟಿ ಅನುದಾನಕ್ಕೆ ಪ್ರಸ್ತಾವನೆ ಮಾಡಲಾಗಿದೆ. ಬೋವಿ ಅಭಿವೃದ್ಧಿ ನಿಗಮದಲ್ಲಿ ಕೆಲ ಅಧಿಕಾರಿಗಳು ಸಮಸ್ಯೆ ಮಾಡಿದ್ದಾರೆ. ಆ ಎಲ್ಲ ಅಧಿಕಾರಿಗಳನ್ನೂ ತೆಗೆದು ಹಾಕಿದ್ದೇವೆ. ಶೀಘ್ರ ಬೋವಿ ನಿಗಮಕ್ಕೆ ಅಧ್ಯಕ್ಷರ ನೇಮಕ ಮಾಡುತ್ತೇವೆ. ಬಡ ದುಡಿಯುವ ಜನರು ಈ ದೇಶ ಕಟ್ಟುತ್ತಿದ್ದಾರೆ. ಸಿದ್ದರಾಮೇಶ್ವರರು ಅಂದರೆ ಕರ್ತವ್ಯ, ಕಾಯಕ. ಕೆರೆ ಕಟ್ಟೆಗಳನ್ನು ನಿರ್ಮಿಸಿ ಜನ ಸಮುದಾಯ ಉಳಿಸಿದ ಚೇತನ. ಶ್ರಮ, ದುಡಿಮೆ, ಬೆವರಿಗೆ ಬೆಲೆ‌ ನೀಡಿದವರು ಸಿದ್ಧರಾಮೇಶ್ವರ ಎಂದು ಹೇಳಿದರು.

Published On - 1:02 pm, Mon, 1 August 22