ದುಷ್ಟನ ಹುಚ್ಚಾಟಕ್ಕೆ ಅಮಾಯಕ ಜೀವ ಬಲಿ, ಯುವಕನ ಕಾಟಕ್ಕೆ ಬೇಸತ್ತಳಾ ಬಾಲಕಿ, ಹಾಸ್ಟೆಲ್ ಸಿಬ್ಬಂದಿ ಬೇಜವಾಬ್ದಾರಿ?

| Updated By: ಸಾಧು ಶ್ರೀನಾಥ್​

Updated on: Mar 09, 2023 | 4:41 PM

Harihara, Davanagere: ಮೃತಳು ದಾವಣಗೆರೆ ಜಿಲ್ಲೆಯ ಹರಿಹರ ನಗರದ ಸರ್ಕಾರಿ ಹಾಸ್ಟೆಲ್ ನಲ್ಲಿ ಇದ್ದಳು. ನಿಜಕ್ಕೂ ಇಂತಹ ದುಷ್ಟನ ಹುಚ್ಚಾಟಕ್ಕೆ ಅಮಾಯಕ ಜೀವ ಬಲಿಯಾಗಿದೆ. ಜೊತೆಗೆ ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಇಂತಹ ಕಿರಿಕಿರಿ ಮಾಡುವ ಜನರು ಹೆಚ್ಚಾಗಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಇಂತಹ ವಿದ್ಯಾರ್ಥಿನಿಯರ ನಿಲಯದ ಬಗ್ಗೆ ಗಮನ ಹರಿಸಬೇಕಾಗಿದೆ.

ದುಷ್ಟನ ಹುಚ್ಚಾಟಕ್ಕೆ ಅಮಾಯಕ ಜೀವ ಬಲಿ, ಯುವಕನ ಕಾಟಕ್ಕೆ ಬೇಸತ್ತಳಾ ಬಾಲಕಿ, ಹಾಸ್ಟೆಲ್ ಸಿಬ್ಬಂದಿ ಬೇಜವಾಬ್ದಾರಿ?
ದುಷ್ಟನ ಹುಚ್ಚಾಟಕ್ಕೆ ಅಮಾಯಕ ಜೀವ ಬಲಿ
Follow us on

ದಾವಣಗೆರೆ: ಅಲ್ಲೊಬ್ಬ ವಿದ್ಯಾರ್ಥಿನಿ (Girl) ನೇಣಿಗೆ ಶರಣಾಗಿದ್ದಳು. ಅದಕ್ಕೆ ಅಲ್ಲಿನ ಸರ್ಕಾರಿ ಹಾಸ್ಟೆಲ್ ಸಿಬ್ಬಂದಿ ಮೇಲೆ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ ಪ್ರಕರಣ ತೀವ್ರ ಸ್ವರೂಪಕ್ಕೆ ಹೋಗಿತ್ತು. ನೋಡಿದ್ರೆ ಸತ್ಯಾನೇ ಬೇರೆ ಇದೆ. ಇಲ್ಲೊಬ್ಬ ಕಿರಾತಕ ಅಮಾಯಕ ಹುಡುಗಿಗೆ ನಿತ್ಯ ಕಿರುಕುಳ (Harassment) ಕೊಡುತ್ತಿದ್ದನಂತೆ. ಈ ಕಿರಾತಕನ ಕಾಟಕ್ಕೆ ಬೇಸತ್ತು ಆ ಹುಡುಗಿ ಆತ್ಮಹತ್ಯೆ ಹತ್ಯೆಗೆ ಶರಣಾಗಿದ್ದಾಳೆ. ಇಲ್ಲಿದೆ ಕಿರಾತಕನ ಕಾಟದ ಸ್ಟೋರಿ. ಮೃತ ಯುವತಿಯ ಹೆಸರು ವರ್ಷಿಕಾ. ವಯಸ್ಸು18. ಪಿಯುಸಿ ಓದುತ್ತಿದ್ದಳು. ದಾವಣಗೆರೆ ಜಿಲ್ಲೆಯ ಹರಿಹರ ನಗರದ (Harihara, Davanagere) ಸರ್ಕಾರಿ ಹಾಸ್ಟೆಲ್ (Hostel) ನಲ್ಲಿ ಇದ್ದಳು.

ಮನೆಯಲ್ಲಿ ಬಡತನ ಎಂದು ದಾವಣಗೆರೆ ಜಿಲ್ಲೆಯ ಹರಿಹರ ನಗರದ ಸರ್ಕಾರಿ ಹಾಸ್ಟೆಲ್ ನಲ್ಲಿ ಇದ್ದಳು. ಜೊತೆಗೆ ಶಿಕ್ಷಣ ಕೊಡಿಸಲೇ ಬೇಕು ಎಂಬ ಕುಟುಂಬ ಸದಸ್ಯರ ಹಠ. ಇದೇ ಕಾರಣಕ್ಕೆ ಪುತ್ರಿಯನ್ನ ಹರಿಹರದ ಸರ್ಕಾರಿ ಹಾಸ್ಟೆಲ್ ನಲ್ಲಿ ಇಟ್ಟು ಓದಿಸುತ್ತಿದ್ದರು. ಇಂತಹ ಯುವತಿ ಮಂಗಳವಾರ ರಾತ್ರಿ ಹಾಸ್ಟೆಲ್ ನಲ್ಲಿ ಫ್ಯಾನ್ ಗೆ ನೇಣು ಬಿಗಿದು ವಿದ್ಯಾರ್ಥಿನಿ ಅತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮೃತ ಬಾಲಕಿ ಮೂಲತಃ ದಾವಣಗೆರೆ ತಾಲೂಕಿನ ಮಾಯಕೊಂಡ ಬಳಿಯ ಬಸಾಪುರ ಗ್ರಾಮದ ನಿವಾಸಿ. ಹೀಗೆ ಯುವತಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಂತೆ ಹಾಸ್ಟೆಲ್ ಸಿಬ್ಬಂದಿ ಮೇಲೆ ಸಂಶಯ ಶುರುವಾಗಿತ್ತು. ಇವರ ಬೇಜವಾಬ್ದಾರಿಯಿಂದಲೇ ತಮ್ಮ ಪುತ್ರಿ ಸಾವನ್ನಪ್ಪಿದ್ದಾಳೆ ಎಂಬ ಆರೋಪ ಕೇಳಿ ಬಂದಿತ್ತು. ಇದೇ ಕಾರಣಕ್ಕೆ ಪ್ರತಿಭಟನೆ ನಡೆಯಿತು.

ಇದನ್ನೂ ಓದಿ:

ಲಾಕ್ ಡೌನ್ ವೇಳೆ ಪ್ರೀತಿಯಲ್ಲಿ ಲಾಕ್​ ಆಗಿದ್ದ ಮುಗಳಖೋಡ ಪ್ರೇಮಿಗಳು, ಈಗ ಮದುವೆ ಮಾಡಿಕೊಂಡು ಠಾಣೆ ಮೆಟ್ಟಿಲೇರಿದ್ದಾರೆ

ಜೊತೆಗೆ ಸ್ವಗ್ರಾಮಕ್ಕೆ ಶವ ತೆಗೆದುಕೊಂಡು ಹೋಗಿ ಹೋರಾಟ ನಡೆಸಿದರು. ನಂತರ ವಿಚಾರ ಗೊತ್ತಾಗಿದ್ದು ಇಲ್ಲೊಬ್ಬ ಯುವಕ ಇವಳಿಗೆ ನಿತ್ಯ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದನಂತೆ. ಈತನ ಹೆಸರು ರಮೇಶ್ ಕುರುಬರ ಹಳ್ಳಿ ಅಂತಾ. ಯುವತಿ ಇತನ ಕಾಟಕ್ಕೆ ಬೇಸತ್ತು ಇರುವ ವಿಚಾರವನ್ನ ಮನೆಯಲ್ಲಿ ಸಹ ಹೇಳದೆ ಸಾವಿಗೆ ಶರಣಾಗಿದ್ದಾಳೆ. ಈತನಿಗೆ ಶಿಕ್ಷೆ ಆಗಬೇಕು ಎಂದು ಕುಟುಂಬ ಸದಸ್ಯರು ಆಗ್ರಹಿಸಿದ್ದಾರೆ.

ಈ ಬಗ್ಗೆ ಹರಿಹರ ನಗರ ಠಾಣೆಯಲ್ಲಿಯುವಕನ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಆರೋಪಿ ಬಗ್ಗೆ ಯುವತಿ ತನ್ನ ಪುಸ್ತಕದಲ್ಲಿ ಬರೆದು ಇಟ್ಟಿದ್ದಳು ಎನ್ನಲಾಗಿದೆ. ಆದ್ರೆ ಇದರ ಪ್ರತಿ ಕುಟುಂಬ ಸದಸ್ಯರ ಬಳಿ ಸಹ ಇಲ್ಲಾ. ಮೇಲ್ನೋಟಕ್ಕೆ ರಮೇಶ್ ಕುರುಬರಹಳ್ಳಿ ಆರೋಪಿ ಎಂಬುದು ಸ್ಪಷ್ಟವಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ. ಒಟ್ಟಿನಲ್ಲಿ ನಿರಂತರವಾಗಿ ಹೋರಾಟ ಮಾಡಿದ ಬಳಿಕ ಪೊಲೀಸರು ಆರೋಪಿಯನ್ನ ಬಂಧಿಸಲು ಮುಂದಾಗಿದ್ದಾರೆ.

ಇದನ್ನೂ ಓದಿ:

ಅಯ್ಯೋ ಹೆಂಡತಿ ಹೊಡೀತಾಳೆ! ಕಾಪಾಡಿ ನನ್ನನ್ನು ಎಂದು ಪ್ರಧಾನಿ ಮೋದಿಗೆ ಮೊರೆಯಿಟ್ಟ ಬೆಂಗಳೂರಿನ ಪತಿರಾಯ

ನಿಜಕ್ಕೂ ಇಂತಹ ದುಷ್ಟನ ಹುಚ್ಚಾಟಕ್ಕೆ ಅಮಾಯಕ ಜೀವ ಬಲಿಯಾಗಿದೆ. ಜೊತೆಗೆ ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಇಂತಹ ಕಿರಿಕಿರಿ ಮಾಡುವ ಜನರು ಹೆಚ್ಚಾಗಿದ್ದಾರೆ. ಹಾಸ್ಟೆಲ್ ಗಳಿಗೆ ಬಂದು ಬಡ ವಿದ್ಯಾರ್ಥಿನಿಯರಿಗೆ ಕಿರುಕಳ ನೀಡುತ್ತಿರುವ ಬಗ್ಗೆ ಮಾಹಿತಿ ಇದೆ. ಸಮಾಜ ಕಲ್ಯಾಣ ಇಲಾಖೆ ಇಂತಹ ವಿದ್ಯಾರ್ಥಿನಿಯರ ನಿಲಯದ ಬಗ್ಗೆ ಗಮನ ಹರಿಸಬೇಕಾಗಿದೆ.

ವರದಿ: ಬಸವರಾಜ್ ದೊಡ್ಮನಿ ಟಿವಿ9 ದಾವಣಗೆರೆ

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ