ದಾವಣಗರೆ, ಜ.6: ಜಿಲ್ಲೆಯಲ್ಲಿ (Davanagere) ಕಳವಾಗಿದ್ದ ಅಥವಾ ಕಳೆದುಹೋಗಿದ್ದ ಸುಮಾರು 25 ಲಕ್ಷ ಮೌಲ್ಯದ 880 ಮೊಬೈಲ್ಗಳನ್ನು ಪೊಲೀಸರು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಪತ್ತೆಹಚ್ಚಿದ ಮೊಬೈಲ್ಗಳನ್ನು ಪೊಲೀಸರು ಸಂಬಂಧಪಟ್ಟವರಿಗೆ ಹಿಂದಿರುಗಿಸಿದ್ದಾರೆ. ಹಾಗಾದರೆ, ಕಳವಾಗಿರುವ ಅಥವಾ ಮಿಸ್ ಆಗಿರುವ ಮೊಬೈಲ್ಗಳನ್ನು ಪತ್ತೆಹಚ್ಚುವುದು ಹೇಗೆ? ಆ ಆ್ಯಪ್ ಯಾವುದು? ನಿಮ್ಮ ಮೊಬೈಲ್ ಕಳೆದುಹೋಗಿದ್ದರೆ ಕೂಡಲೇ ಈ ಆ್ಯಪ್ ಮೂಲಕ ನೋಂದಾಯಿಸಿಕೊಳ್ಳಿ.
ಪೊಲೀಸ್ ಇಲಾಖೆಯ CEIR ಪೋರ್ಟಲ್ನಲ್ಲಿ ಮೊಬೈಲ್ ಕಳೆದುಕೊಂಡವರು ಮಾಹಿತಿ ದಾಖಲಿಸಿದರೆ ಕಳೆದುಕೊಂಡ ಮೊಬೈಲ್ ಪತ್ತೆ ಮಾಡಲು ಅನುಕೂಲ ಆಗುತ್ತದೆ. ಈ ಬಗ್ಗೆ ಸಾರ್ವಜನಿಕರು ಗಮನ ಹರಿಸಬೇಕು ಎಂದು ಎಸ್ಪಿ ಉಮಾ ಪ್ರಶಾಂತ ಹೇಳಿದರು.
ಕಳುವಾದ ಅಥವಾ ಕಳೆದು ಹೋದು ಮೊಬೈಲ್ ಫೋನ್ಗಳನ್ನು CEIR PORTAL ನಲ್ಲಿ ಮೊಬೈಲ್ ವಾರಸುದಾರರ ವಿವರಗಳನ್ನು ನಮೂದು ಮಾಡಿ ಮೊಬೈಲ್ IMEI ನಂಬರ್ ಅನ್ನು ಬ್ಲಾಕ್ ಮಾಡಬೇಕು. ನಂತರ ಆ ಮೊಬೈಲ್ನಲ್ಲಿ ಬೇರೊಂದು ಸಿಮ್ ಹಾಕಿದ ಕೂಡಲೇ ಪೋರ್ಟಲ್ನಲ್ಲಿ ಲಕೇಶ್ ಸಹಿತ ಮೆಸೇಜ್ ಬರುತ್ತದೆ. ಈ ಮೂಲಕ ಕಳವಾದ ಅಥವಾ ಕಳೆದು ಹೋಗಿರುವ ಮೊಬೈಲ್ಗಳನ್ನು ಪತ್ತೆಹಚ್ಚಲಾಗುತ್ತದೆ.
ಇದನ್ನೂ ಓದಿ; ದಾವಣಗೆರೆ: ಕಪ್ಪು ಬಣ್ಣಕ್ಕೆ ತಿರುಗಿದ ಸೂಳೆಕೆರೆ ನೀರು?; ಸಂತೇಬೆನ್ನೂರು ಗ್ರಾಮಸ್ಥರ ಆಕ್ರೋಶ
2023 ರಲ್ಲಿ ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ಕಳುವಾದ ಅಥವಾ ಕಳೆದು ಹೋದ ಮೊಬೈಲ್ಗಳ ವಿವರಗಳನ್ನು ಮಾಲೀಕರು ಈ ಪೋರ್ಟಲ್ನಲ್ಲಿ ನೋಂದಾಯಿಸಿ ಮೊಬೈಲ್ ಐಎಂಇಐ ನಂಬರ್ ಮೂಲಕ ಒಟ್ಟು 3880 ಮೊಬೈಲ್ಗಳನ್ನು ಬ್ಲಾಕ್ ಮಾಡಲಾಗಿದೆ. ಈ ಪೈಕಿ 880 ಮೊಬೈಲ್ಗಳನ್ನು ಪತ್ತೆಹಚ್ಚಿ ಸಂಬಂಧಪಟ್ಟವರಿಗೆ ಹಿಂದಿರುಗಿಸಲಾಗಿದೆ.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಸ್ಪಿ ಉಮಾ ಅವರು ಪೊಲೀಸರು ಪತ್ತೆಹಚ್ಚಿರುವ ಮೊಬೈಲ್ಗಳನ್ನು ಸಂಬಂಧಪಟ್ಟವರಿಗೆ ಹಿಂದಿರುಗಿಸಿರು. ಈ ವೇಳೆ ಸಾರ್ವಜನಿಕರಿಗೆ ಕಳುವಾದ ಅಥವಾ ಕಳೆದು ಹೋದ ಮೊಬೈಲ್ ಫೋನ್ಗಳನ್ನು ಕೆಎಸ್ಪಿ ಮೊಬೈಲ್ ಆ್ಯಪ್ ಮೂಲಕ e-lostನಲ್ಲಿ ದೂರು ದಾಖಲಿಸಿ, ದೂರಿನ ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು CEIR web portal (https://www.ceir.gov.in) ಗೆ ಭೇಟಿ ನೀಡಿ ಕೆಎಸ್ಪಿ ಮೊಬೈಲ್ ಆ್ಯಪ್ ಮೂಲಕ ಡೌನ್ಲೋಡ್ ಮಾಡಿಕೊಂಡ ದೂರಿನ ಪ್ರತಿ, ಆಧಾರ್ ಅಥವಾ ಇತರೆ ಗುರುತಿನ ಚೀಟಿ ಅಪ್ಲೋಡ್ ಮಾಡಿ ಮೊಬೈಲ್ ಬ್ಲಾಕ್ ಮಾಡುವ ವಿಧಾನವನ್ನು ತಿಳಿಸಲಾಯಿತು.
ಸಾರ್ವಜನಿಕರು ತಮ್ಮ ಮೊಬೈಲ್ ಕಳುವಾಗಿದ್ದಲ್ಲಿ ಅಥವಾ ಸುಲಿಗೆಯಾಗಿದ್ದಲ್ಲಿ ಅಥವಾ ಕಳೆದು ಹೋಗಿದ್ದಲ್ಲಿ ಕೂಡಲೇ CEIR ವೆಬ್ ಪೋರ್ಟಲ್ ಮೂಲಕ ನೋಂದಾಯಿಸಿ ಹಾಗೂ ಇದರ ಸದುಪಯೋಗ ಮಾಡಿಕೊಳ್ಳುವಂತೆ ಪೊಲೀಸರು ಮನವಿ ಮಾಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ