ದಾವಣಗೆರೆ: ಅಪಘಾತದಲ್ಲಿ ಗಾಯಗೊಂಡಿದ್ದ ಇಬ್ಬರು ಚಿಕಿತ್ಸೆ ಸಿಗದೆ ಆಸ್ಪತ್ರೆಯ ಬಾಗಿಲಲ್ಲೇ ನರಳಾಡಿದ್ದಾರೆ. ಈ ಮನಕಲಕುವ ದೃಶ್ಯವನ್ನು ಸಾರ್ವಜನಿಕರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು, ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ತ್ಯಾವಣಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಈ ಘಟನೆ ನಡೆದಿದೆ. ಬೇರೆ ಆಸ್ಪತ್ರೆಗೆ ಕರೆದೊಯ್ಯುಲು ಆ್ಯಂಬುಲೆನ್ಸ್ ಸಿಗದ ಹಿನ್ನೆಲೆ ಗಾಯಾಳುಗಳು ಒಂದೂವರೆ ಗಂಟೆಗೂ ಹೆಚ್ಚು ಕಾಲ ಆಸ್ಪತ್ರೆಯ ಹೊರಗೆ ಒದ್ದಾಡಿದ್ದಾರೆ.
ನಲ್ಲೂರು ಗ್ರಾಮದ ಹನುಮಂತಪ್ಪ, ಫಯಾಜ್ ಎಂಬುವವರು ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದಾರೆ. ಚಿಕಿತ್ಸೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರಲಾಗಿದೆ. ಆರೋಗ್ಯ ಕೇಂದ್ರ ವೈದ್ಯರು, ಸಿಬ್ಬಂದಿಗಳಿಲ್ಲದ ಹಿನ್ನೆಲೆ ಗಾಯಾಳುಗಳು ನರಳಾಡಿದ್ದಾರೆ. ಬೇರೆ ಆಸ್ಪತ್ರೆಗೆ ಕರೆದೊಯ್ಯುಲು ಅಂಬ್ಯೂಲೆನ್ಸ್ ಕೂಡ ಸಿಕ್ಕಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರದ ಆ್ಯಂಬುಲೆನ್ಸ್ ಕೆಟ್ಟು ನಿಂತಿದೆ. ಹೀಗಾಗಿ ಇಬ್ಬರು ಪ್ರಾಥಮಿಕ ಆರೋಗ್ಯ ಕೇಂದ್ರ ಎದುರು ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ.
ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದರೂ ವೈದ್ಯರು ಸಿಬ್ಬಂದಿಗಳಿಲ್ಲ. ಸರಿಯಾದ ಆ್ಯಂಬುಲೆನ್ಸ್ ಇಲ್ಲ ಅಂತ ಸ್ಥಳೀಯರು ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಸ್ ಚಾಲಕ, ನಿರ್ವಾಹಕನ ಮೇಲೆ ಹಲ್ಲೆ
ರಾಯಚೂರು: ತಮ್ಮ ವಾಹನಕ್ಕೆ ಸೈಡ್ ನೀಡದ ಹಿನ್ನೆಲೆ ಬಸ್ ಚಾಲಕ, ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ್ದು, ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಬಸ್ ಚಾಲಕ, ನಿರ್ವಾಹಕನನ್ನ ಆರೋಪಿಗಳು ಮನಸೋ ಇಚ್ಛೆ ಥಳಿಸಿದ್ದರು. ಚಾಲಕ ನಿಂಗಪ್ಪ ದೂರಿನನ್ವಯ ಹಟ್ಟಿ ಪೊಲೀಸ್ ಠಾಣೆಯಲ್ಲಿ ಮೆಹಬೂಬಾ, ಶಮೂದ್ದೀನ್ ಸೇರಿದಂತೆ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಇದನ್ನೂ ಓದಿ
ಬರಡು ಭೂಮಿಯಲ್ಲಿ ಬಂದಿದೆ ಬಾಳೆಯ ಬಂಪರ್ ಫಸಲು; ವೈಜ್ಞಾನಿಕ ಪದ್ಧತಿಯಿಂದ ರೈತನ ಮೊಗದಲ್ಲಿ ಮಂದಹಾಸ
Published On - 8:50 am, Sat, 25 December 21