ದಾವಣಗೆರೆ, ಏ.28: ಬೀಗರ ಊಟ ಮಾಡಿದ್ದ 96 ಜನರಲ್ಲಿ ವಾಂತಿ-ಭೇದಿ ಕಾಣಿಸಿಕೊಂಡ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ(Harapanahalli) ತಾಲೂಕಿನ ಶಿಂಗ್ರಿಹಳ್ಳಿಯಲ್ಲಿ ನಡೆದಿದೆ. ಇದರಲ್ಲಿ 22 ಮಕ್ಕಳಿದ್ದು, ಅಸ್ವಸ್ಥರಿಗೆ ದಾವಣಗೆರೆಯ ಚಿಗಟೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮದುವೆ ಸಮಾರಂಭದ ಬಳಿಕ ನಿನ್ನೆ(ಏ.27) ಬೀಗರ ಊಟ ಮಾಡಿ ಮಲಗಿದ್ದವರ ಆರೋಗ್ಯದಲ್ಲಿ ತಡರಾತ್ರಿ ಏರುಪೇರಾಗಿದೆ. ಇನ್ನು ಹರಪನಹಳ್ಳಿ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್, ಡಿಎಚ್ಒ ಡಾ.ಶಂಕರನಾಯ್ಕ ಭೇಟಿ ನೀಡಿ ಪರಿಶೀಲನೆ ನಡೆಸಿ ಎಲ್ಲರೂ ಸ್ಟೇಬಲ್ ಆಗಿದ್ದಾರೆ ಎಂದು ಡಿಎಚ್ಒ ಸ್ಪಷ್ಡನೆ ನೀಡಿದ್ದಾರೆ.
ರಾಯಚೂರು: ತಾಲೂಕಿನ ಚಿಕ್ಕಸುಗೂರು ಗ್ರಾಮದ ಹುಸೇನಮ್ಮ ಹಾಗೂ ಮಾರುತಿ ದಂಪತಿ ಮಕ್ಕಳಾದ ಆರತಿ (9) ಹಾಗೂ ಪ್ರಿಯಾಂಕಾ (7) ಅವರು ಇಂದು(ಏ.28) ಬಿಸಲಿನ ತಾಪಕ್ಕೆ ನಿರ್ಜಲೀಕರಣ ಉಂಟಾಗಿ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಇನ್ನುಳಿದಂತೆ ಇಬ್ಬರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಈ ಕುಟುಂಬ ಕೃಷ್ಣಾ ನದಿ ನೀರನ್ನ ಕುಡಿಯುತ್ತಿತ್ತು ಎಂಬ ಮಾಹಿತಿ ದೊರೆತಿದ್ದು, ಶನಿವಾರ (ಏ.27)ರ ಸಂಜೆ ಏಕಾಏಕಿ ಸಮಸ್ಯೆ ಉಲ್ಬಣಗೊಂಡಿತ್ತು ಎನ್ನಲಾಗಿದೆ.
ವಾಂತಿ,ಬೇಧಿಯಿಂದ ಇಬ್ಬರು ಮಕ್ಕಳು ಸಾವನ್ನಪ್ಪಿದ ಪ್ರಕರಣವನ್ನ ಟಿವಿ9 ವರದಿ ಪ್ರಸಾರ ಮಾಡಿದ ಬೆನ್ನಲ್ಲೇ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಘಟನಾ ಸ್ಥಳಕ್ಕೆ ರಾಯಚೂರು ಗ್ರಾಮೀಣ ಪೊಲೀಸರು, ಆರೋಗ್ಯ ಇಲಾಖೆ, ಆಹಾರ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ಮನೆಯಲ್ಲಿ ನೀರಿನ ಸ್ಯಾಂಪಲ್,ಆಹಾರದ ಸ್ಯಾಂಪಲ್ ಪಡೆದಿದ್ದು, ಮೃತ ಮಕ್ಕಳ ತಂದೆ ಮಾರುತಿ ಕರೆಸಿ ವಿಚಾರಣೆ ಶುರುಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:28 pm, Sun, 28 April 24