ಕುಡಿಯುವ ನೀರಿಗೆ ಒಳಚರಂಡಿಯ ನೀರು ಮಿಶ್ರಣ; ಕಲುಷಿತ ನೀರು ಕುಡಿದ ಮಕ್ಕಳು, ಮಹಿಳೆಯರಿಗೆ ವಾಂತಿ-ಭೇದಿ
ಕುಡಿಯುವ ನೀರಿಗೆ ಒಳಚರಂಡಿ ನೀರು ಮಿಶ್ರಣವಾಗಿದ್ದು ತಿಳಿಯದೆ ನಾಗಪ್ಪ ಬೀದಿಯ ಜನರು ಕಲುಷಿತವಾಗಿರುವ ನೀರು ಕುಡಿದ ಹಿನ್ನೆಲೆಯಲ್ಲಿ ಕೆಲ ಮಕ್ಕಳು, ಮಹಿಳೆಯರು, ಹಿರಿಯರಿಗೆ ವಾಂತಿ, ಭೇದಿ ಜೊತೆಗೆ ಆರೋಗ್ಯ ಸಮಸ್ಯೆ ಎದುರಾಗಿದೆ.
ಬೆಂಗಳೂರು: ಜಲಮಂಡಳಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನರ ಪ್ರಾಣಕ್ಕೆ ಸಂಕಷ್ಟ ಎದುರಾಗಿದೆ. ಬೆಂಗಳೂರಿನ ಪ್ಯಾಲೇಸ್ ಗುಟ್ಟಹಳ್ಳಿಯ ನಾಗಪ್ಪ ಬೀದಿಯಲ್ಲಿ ಕುಡಿಯುವ ನೀರಿಗೆ ಒಳಚರಂಡಿಯ ನೀರು ಮಿಶ್ರಣವಾಗಿದ್ದು ಕೆಲವರಿಗೆ ವಾಂತಿ, ಭೇದಿ ಜೊತೆಗೆ ಆರೋಗ್ಯ ಸಮಸ್ಯೆ ಎದುರಾಗಿದೆ.
ಕುಡಿಯುವ ನೀರಿಗೆ ಒಳಚರಂಡಿ ನೀರು ಮಿಶ್ರಣವಾಗಿದ್ದು ತಿಳಿಯದೆ ನಾಗಪ್ಪ ಬೀದಿಯ ಜನರು ಕಲುಷಿತವಾಗಿರುವ ನೀರು ಕುಡಿದ ಹಿನ್ನೆಲೆಯಲ್ಲಿ ಕೆಲ ಮಕ್ಕಳು, ಮಹಿಳೆಯರು, ಹಿರಿಯರಿಗೆ ವಾಂತಿ, ಭೇದಿ ಜೊತೆಗೆ ಆರೋಗ್ಯ ಸಮಸ್ಯೆ ಎದುರಾಗಿದೆ. ಕಲುಷಿತ ನೀರನ್ನು ಬಾಟಲಿಯಲ್ಲಿ ತೆಗೆದುಕೊಂಡು ಹೋಗಿ ಅಧಿಕಾರಿಗಳಿಗೆ ತೋರಿಸಿದರೂ ಯಾವುದೇ ಕ್ರಮವಿಲ್ಲ. ಹೀಗಾಗಿ ಅಧಿಕಾರಿಗಳ ವಿರುದ್ಧ ಸ್ಥಳೀಯ ನಿವಾಸಿಗಳು ಆಕ್ರೋಶ ಹೊರ ಹಾಕಿದ್ದಾರೆ.
ಕಳೆದ 15 ದಿನಗಳಿಂದ ಜಲಮಂಡಳಿ ಪೂರೈಸುತ್ತಿರುವ ನೀರಿನಲ್ಲಿ ಒಳಚರಂಡಿಯ ನೀರು ಮಿಶ್ರಣವಾಗುತ್ತಿದೆ. ಎರಡು ದಿನಗಳಿಂದ ನೀರಿನಲ್ಲಿ ದುರ್ವಾಸನೆ ಬರ್ತಿದ್ದು ಒಂದು ತೊಟ್ಟು ನೀರು ಸಹ ಕುಡಿಯಲು ಯೋಗ್ಯವಾಗಿಲ್ಲ. ಕಲುಷಿತ ನೀರನ್ನ, ಕುಮಾರ ಪಾರ್ಕ್ ಸೇವಾ ಠಾಣೆ ಈಶಾನ್ಯ 2, ಉಪ ವಿಭಾಗಕ್ಕೆ ನೀಡಿದ್ರೂ ಯಾವ ಪ್ರಯೋಜನವೂ ಆಗಿಲ್ಲ. ಮೇಲಾಧಿಕಾರಿಗಳ ಗಮನಕ್ಕೆ ತರದೇ ಕಲುಷಿತ ನೀರನ್ನು ತುಂಬಿಸಿಕೊಂಡು ಹೋಗಿದ್ದ ಬಾಟಲಿಯನ್ನು ಅಲ್ಲಿನ ಸಿಬ್ಬಂದಿ ಆಚೆಗೆ ಎಸೆದ್ರು. ಕಲುಷಿತ ನೀರು ಕುಡಿದ ಕೆಲ ಮಹಿಳೆಯರಿಗೆ ವಾಂತಿ ಶುರುವಾಗಿದೆ ಎಂದು ಸ್ಥಳೀಯರೊಬ್ಬರು ತಮ್ಮ ಅಳಲನ್ನು ತೋಡಿಕೊಂಡಿದ್ದು ಜಲಮಂಡಳಿ ಅಧಿಕಾರಿಗಳು ಹಾಗೂ ಸಿಬ್ಬಂದಿ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.