ಸರ್ಕಾರಿ ಲಿವರ್ ಕಸಿ ಆಸ್ಪತ್ರೆ ಆರಂಭಿಸಲು ವಿಳಂಬ; ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ಹೈಕೋರ್ಟ್

ಹೈಕೋರ್ಟ್ ನಿರ್ದೇಶನದ ಬಳಿಕ ಲಿವರ್ ಕಸಿ ಕೇಂದ್ರವನ್ನು ಜುಲೈ ತಿಂಗಳಲ್ಲಿ ಉದ್ಘಾಟಿಸಲಾಗಿತ್ತು. ಆದ್ರೆ ಈವರೆಗೂ ಲಿವರ್ ಕಸಿ ವಿಭಾಗ ಆರಂಭಿಸದ ಹಿನ್ನೆಲೆಯಲ್ಲಿ ಸ್ಯಾನಿಟೈಸ್ ಮಾಡಲು 2 ತಿಂಗಳ ಸಮಯ ಕೇಳಿದ್ದಕ್ಕೆ ಹೈಕೋರ್ಟ್ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದೆ.

ಸರ್ಕಾರಿ ಲಿವರ್ ಕಸಿ ಆಸ್ಪತ್ರೆ ಆರಂಭಿಸಲು ವಿಳಂಬ; ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ಹೈಕೋರ್ಟ್
ಕರ್ನಾಟಕ ಹೈಕೋರ್ಟ್‌
Follow us
TV9 Web
| Updated By: ಆಯೇಷಾ ಬಾನು

Updated on:Oct 27, 2021 | 2:00 PM

ಬೆಂಗಳೂರು: ಸರ್ಕಾರಿ ಲಿವರ್ ಕಸಿ ಆಸ್ಪತ್ರೆ ಆರಂಭಿಸಲು ಸರ್ಕಾರ ವಿಳಂಬ ಮಾಡಿದ್ದು ಸರ್ಕಾರದ ವಿಳಂಬ ನೀತಿಗೆ ಹೈಕೋರ್ಟ್ ತೀವ್ರ ಅಸಮಾಧಾನ ಹೊರ ಹಾಕಿದೆ. ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದೆ. ಖಾಸಗಿ ಆಸ್ಪತ್ರೆಗಳ ಜತೆ ಅಧಿಕಾರಿಗಳು ಶಾಮೀಲಾದಂತಿದೆ. ಬಡ ಜನರ ಜೀವದೊಂದಿಗೆ ಅಧಿಕಾರಿಗಳು ಆಟವಾಡುತ್ತಿದ್ದಾರೆ. ಉದ್ದೇಶಪೂರ್ವಕ ವಿಳಂಬ ನೀತಿಯನ್ನು ಖಂಡಿಸುತ್ತೇವೆ. ಇದು ಸರ್ಕಾರ ಕಾರ್ಯನಿರ್ವಹಿಸುವ ರೀತಿಯೇ? ನಾವು ಈ ಅಧಿಕಾರಿಗಳನ್ನು ಜೈಲಿಗೆ ಕಳುಹಿಸುತ್ತೇವೆ ಎಂದು ಸಿಜೆ ರಿತುರಾಜ್ ಅವಸ್ತಿ ನೇತೃತ್ವದ ಪೀಠ ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದೆ.

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿನ ಕ್ಯಾಸ್ಟ್ರೋ ಎಂಟರಾಲಜಿ ಮತ್ತು ಲಿವರ್ ಕಸಿ ಕೇಂದ್ರ ಆರಂಭಿಸಲು ವಿಳಂಬ ಧೋರಣೆ ಅನುಸರಿಸುತ್ತಿರುವ ಅಧಿಕಾರಿಗಳಿಗೆ ಹೈಕೋರ್ಟ್ ಚಾಟಿ ಬೀಸಿದೆ. ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿರುವ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ಹಾಗೂ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ರವರಿದ್ದ ವಿಭಾಗೀಯ ಪೀಠ, ಖಾಸಗಿ ಆಸ್ಪತ್ರೆಗಳೊಂದಿಗೆ ಅಧಿಕಾರಿಗಳು ಶಾಮೀಲಾಗಿರುವಂತಿದೆ. ಬಡ ಜನರ ಜೀವದೊಂದಿಗೆ ಅಧಿಕಾರಿಗಳು ಆಟವಾಡುತ್ತಿದ್ದಾರೆ. ಆಸ್ಪತ್ರೆ ಆರಂಭಿಸಲು ಅಧಿಕಾರಿಗಳು ಅನುಸರಿಸುತ್ತಿರುವ ಉದ್ದೇಶಪೂರ್ವಕ ವಿಳಂಬ ನೀತಿಯನ್ನು ಖಂಡಿಸುತ್ತೇವೆ. ಇದು ಸರ್ಕಾರ ಕಾರ್ಯನಿರ್ವಹಿಸುವ ರೀತಿಯೇ ? ಗ್ಯಾಸ್ಟ್ರೋ ಎಂಟರಾಲಜಿ ವಿಭಾಗದ ನಿರ್ದೇಶಕ ಯಾರು, ಕಾರ್ಯದರ್ಶಿ ಯಾರು, ನಾವು ಈ ಅಧಿಕಾರಿಗಳನ್ನು ಜೈಲಿಗೆ ಕಳುಹಿಸುತ್ತೇವೆ ಎಂದು ವಿಭಾಗೀಯ ಪೀಠ ತರಾಟೆಗೆ ತೆಗೆದುಕೊಂಡಿದೆ. ಎರಡು ವಾರಗಳಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಖುದ್ದು ಹಾಜರಾಗುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಬೆಂಗಳೂರಿನಲ್ಲಿ ರಾಷ್ಟ್ರದ ಎರಡನೇ ಸರ್ಕಾರಿ ಗ್ಯಾಸ್ಟ್ರೋ ಎಂಟರಾಲಜಿ ಲಿವರ್ ಕಸಿ ಕೇಂದ್ರ ಸ್ಥಾಪನೆ ಸುದೀರ್ಘ ವಿಳಂಬವಾಗಿದೆ. 2016 ರಲ್ಲಿಯೇ ಅನುಮೋದನೆ ದೊರೆತಿದ್ದ ಈ ಕೇಂದ್ರಕ್ಕೆ 2018 ರಲ್ಲಿಯೇ ನಿರ್ದೇಶಕರ ನೇಮಕವಾಗಿತ್ತು. ಆದರೆ ಆಸ್ಪತ್ರೆ ಆರಂಭ ವಿಳಂಬವಾದುದರಿಂದ ಕೂಡಲೇ ಮೂಲಸೌಕರ್ಯ ಒದಗಿಸುವಂತೆ ಹೈಕೋರ್ಟ್ ಕಳೆದ ಪೆಬ್ರವರಿ ತಿಂಗಳಲ್ಲೇ ನಿರ್ದೇಶನ ನೀಡಿತ್ತು. ಹೈಕೋರ್ಟ್ ನಿರ್ದೇಶನದ ಬಳಿಕ ಜುಲೈ ತಿಂಗಳಲ್ಲಿ ಉದ್ಘಾಟನೆಗೊಂಡಿದ್ದ ಆಸ್ಪತ್ರೆ ಕೇವಲ‌ ಹೊರರೋಗಿಗಳಿಗಷ್ಟೇ ಸೀಮಿತವಾಗಿದೆ. ಹೊಸ ಕಟ್ಟಡವಾಗಿರುವುದರಿಂದ ಸ್ಯಾನಿಟೈಸ್ ಮಾಡಲು ಎರಡು ತಿಂಗಳು ಕಾಲಾವಕಾಶ ಕೇಳಿದ್ದು ಹೈಕೋರ್ಟ್ ಸಿಟ್ಟಿಗೆ ಕಾರಣವಾಗಿದೆ. ಜುಲೈ ನಲ್ಲೇ ಉದ್ಘಾಟನೆ ಆದರೂ ಇನ್ನೂ ಸ್ಯಾನಿಟೈಸ್ ಮಾಡಿಲ್ಲವೇಕೆ. ಬೇಕೆಂದೇ ಅಧಿಕಾರಿಗಳು ವಿಳಂಬ ಮಾಡಿರುವಂತಿದೆ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಗೃಹ ಸಚಿವ ಆರಗ ಜ್ಞಾನೇಂದ್ರರವರ ಜಿಲ್ಲೆಯಲ್ಲೇ ಮಿತಿಮೀರಿದ ರೌಡಿಗಳ ಹಾವಳಿ! ಜೀವ ಬೆದರಿಕೆ ಹಾಕಿ ಹಣಕ್ಕೆ ಡಿಮ್ಯಾಂಡ್

ನಟ ಸಂಚಾರಿ ವಿಜಯ್ ಇನ್ನು ನೆನೆಪು ಮಾತ್ರ.. ರವೀಂದ್ರ ಕಲಾಕ್ಷೇತ್ರ ತಲುಪಿದ ಪಾರ್ಥಿವ ಶರೀರ

Published On - 1:16 pm, Wed, 27 October 21