AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟ ಸಂಚಾರಿ ವಿಜಯ್ ಇನ್ನು ನೆನೆಪು ಮಾತ್ರ.. ರವೀಂದ್ರ ಕಲಾಕ್ಷೇತ್ರ ತಲುಪಿದ ಪಾರ್ಥಿವ ಶರೀರ

ಸಂಚಾರಿ ವಿಜಯ್.. ನಾನು ಅವನಲ್ಲ ಅವಳು ಅನ್ನುತ್ತಲೇ ಸ್ಯಾಂಡಲ್ವುಡ್ನ ಸಿಪಾಯಿಯಾಗಿದ್ದರು. ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸೋ ಜಂಟಲ್ಮ್ಯಾನ್. ಪಾದರಸದಂಥಾ ಌಕ್ಟಿಂಗ್ನಲ್ಲಿ ಫೇಮಸ್ ಆಗಿದ್ದ ಸಂಚಾರಿಯ ವರ್ತಮಾನ ಮಾತ್ರವಲ್ಲ, ಭವಿಷ್ಯವೂ ಅವ್ಯಕ್ತವಾಗಿದೆ. 6ನೇ ಮೈಲಿಗಲ್ಲಿನ ಮೇಲೊಬ್ಬ ಕೂತಿದ್ದ ಮಾಯಾವಿ, ಸಂಚಾರಿ ವಿಜಯ್ ಪ್ರಾಣವನ್ನೇ ಆಟಕ್ಕುಂಟು ಲೆಕ್ಕಕ್ಕಿಲ್ಲದಂತೆ ತಲೆದಂಡ ಮಾಡಿದ್ದಾನೆ. ಕೋಟ್ಯಂತರ ಪ್ರೇಕ್ಷಕರ ಮನದಲ್ಲಿದ್ದ ಆಡುವ ಗೊಂಬೆಯನ್ನೇ ಕ್ರೂರ ವಿಧಿ ಕಿತ್ಕೊಂಡು ಬಿಟ್ಟಿದೆ. ಸ್ಕ್ರೀನ್ ಮೇಲೆ ವಿಭಿನ್ನವಾಗೇ ಕಮಾಲ್ ಮಾಡ್ತಿದ್ದ ನಟ ಸಂಚಾರಿ ವಿಜಯ್ ಇನ್ನು ನೆನಪು ಮಾತ್ರ.

ನಟ ಸಂಚಾರಿ ವಿಜಯ್ ಇನ್ನು ನೆನೆಪು ಮಾತ್ರ.. ರವೀಂದ್ರ ಕಲಾಕ್ಷೇತ್ರ ತಲುಪಿದ ಪಾರ್ಥಿವ ಶರೀರ
ನಟ ಸಂಚಾರಿ ವಿಜಯ್ ಇನ್ನು ನೆನೆಪು ಮಾತ್ರ
Follow us
TV9 Web
| Updated By: ಆಯೇಷಾ ಬಾನು

Updated on:Jun 15, 2021 | 7:35 AM

ಬೆಂಗಳೂರು: ಎರಡು ದಿನಗಳ ಹಿಂದೆ ನಡೆದ ಭೀಕರ ಅಪಘಾತದಿಂದ ಗಂಭೀರವಾಗಿ ಗಾಯಗೊಂಡಿದ್ದ ನಟ ಸಂಚಾರಿ ವಿಜಯ್(38) ನಮ್ಮನ್ನಗಲಿದ್ದಾರೆ. ವಿಭಿನ್ನ ಅಭಿನಯದ ಮೂಲಕ ಸ್ಯಾಂಡಲ್ವುಡ್ ಮಾತ್ರವಲ್ಲ ರಾಷ್ಟ್ರಮಟ್ಟದಲ್ಲೇ ಗುರುತಿಸಿಕೊಂಡಿದ್ದ ಕಲಾವಿದ. ಸಂಕಷ್ಟಕ್ಕೊಳಗಾದವರ ಸೇವೆಯೇ ಸರ್ವಸ್ವ ಅಂದುಕೊಂಡು ಬದುಕ್ತಿದ್ದ ನಟ ಸಂಚಾರಿ ವಿಜಯ್ ಜೀವನದ ಕೊನೇವರೆಗೂ ನೊಂದವರ ಬೆನ್ನಿಗೆ ನಿಂತಿದ್ರು. ಮಧ್ಯರಾತ್ರಿವರೆಗೂ ಒಂದಷ್ಟು ಜನರ ಕಣ್ಣೀರು ಒರೆಸಿ ಇನ್ನೇನು ಮನೆ ಸೇರಬೇಕು ಅನ್ನುವಷ್ಟರಲ್ಲಿ ವಿಜಯ್ ಬಾಳಲ್ಲಿ ವಿಧಿ ಕ್ರೂರ ಆಟ ಆಡಿಬಿಡ್ತು. ಬೈಕ್ ಅಪಘಾತದ ತೀವ್ರತೆಗೆ ಕೋಮಾದಲ್ಲಿದ್ದ ನಟ ವಿಜಯ್ ಶಾಶ್ವತವಾಗಿ ಕಣ್ಣುಮುಚ್ಚಿದ್ದಾರೆ. ಇಂದು ಬೆಳಗ್ಗೆ 3.34ಕ್ಕೆ ಜೀವನ್ಮರಣ ಹೋರಾಟ ಅಂತ್ಯಗೊಂಡಿದೆ. ಸದ್ಯ ರವೀಂದ್ರ ಕಲಾಕ್ಷೇತ್ರದತ್ತ ನಟ ವಿಜಯ್ ಪಾರ್ಥಿವ ಶರೀರ ಹೊರಟಿದೆ.

ವಿಜಯ್‌ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರ ಇನ್ನು ಅಂಗಾಂಗ ಕಸಿ ಕಾರ್ಯ ಮುಗಿದ ನಂತರ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರಿಂದ ಅಪೋಲೊ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ. ಬಳಿಕ ವಿಜಯ್‌ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಈಗ ಸಂಚಾರಿ ವಿಜಯ್ ಪಾರ್ಥಿವ ಶರೀರ ರವೀಂದ್ರ ಕಲಾಕ್ಷೇತ್ರಕ್ಕೆ ತಲುಪಿದ್ದು ನಿನಾಸಂ ಸತೀಶ್ ಆಂಬುಲೆನ್ಸ್ ಒಳಗೆ ಹೋಗಿದ್ದಾರೆ. ಆಂಬುಲೆನ್ಸ್ ಒಳಗಿರುವ ನಿನಾಸಂ ಸತೀಶ್ ಮತ್ತು ವಿಜಯ್ ಸೋದರ ಸಿದ್ದೇಶ್ ಅಣ್ಣನನ್ನ ನೆನೆದು ಕಣ್ಣೀರು ಹಾಕ್ತಿದ್ದಾರೆ.

ಅಂತಿಮ ದರ್ಶನಕ್ಕೆ ಸಿದ್ಧತೆ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್ರ ಅಂತಿಮ ದರ್ಶನಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 8ರಿಂದ 10ರವರೆಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದ್ದು ಸಂಜೆ ಸಕಲ ಸರ್ಕಾರಿ ಗೌರವಗಳೊಂದಿಗೆ ನಟ ವಿಜಯ್ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿ ಅಂತ್ಯಕ್ರಿಯೆ ಮಾಡಲಾಗುತ್ತೆ. ಎಸ್.ಜೆ ಪಾರ್ಕ್ ಪೊಲೀಸರು ಯಾವುದೇ ಗೊಂದಲವಾಗದಂತೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ. ವಿಐಪಿ ಮತ್ತು ಸೆಲೆಬ್ರಿಟಿ, ಅಭಿಮಾನಿಗಳು, ಸಾರ್ವಜನಿರಿಗೆ ದರ್ಶನಕ್ಕೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಎಸ್.ಜೆ ಪಾರ್ಕ್ ಪೊಲೀಸರಿಂದ ಬಿಗಿ‌ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

Actor sanchari vijay

ಅಂತಿಮ ದರ್ಶನಕ್ಕೆ ಸಿದ್ಧತೆ

ಕೊನೇ ಕ್ಷಣದಲ್ಲೂ ‘ಜೀವಸಾರ್ಥಕತೆ’ ಮೆರೆದ ‘ಸಿಪಾಯಿ’ ನಟ ಸಂಚಾರಿ ವಿಜಯ್ ಇನ್ಮುಂದೆ ನಮ್ಮ ನಡುವೆ ಇರಲ್ಲ. ಆದ್ರೆ ಸಾವಿನಲ್ಲೂ ಸಾರ್ಥಕತೆ ಮೆರೆದಿರೋ ಅಪ್ರತಿಮ ಕಲಾವಿದ ವಿಜಯ್ ಅಂಗಾಂಗ ದಾನ ಮಾಡಲಾಯ್ತು. ಬ್ರೈನ್ ಡೆಡ್ ಆಗಿರೋ ಹಿನ್ನೆಲೆಯಲ್ಲಿ ಕುಟುಂಬಸ್ಥರ ಸಹಿ ಪಡೆದ ವೈದ್ಯರು ರಾತ್ರಿಯೇ ಅಂಗಾಂಗ ಕಸಿ ಪ್ರಕ್ರಿಯೆ ಮುಗಿಸಿದ್ರು. ಸಂಚಾರಿ ವಿಜಯ್ ಅಂಗಾಂಗಗಳನ್ನು ಜೀವಸಾರ್ಥಕತೆ ಸಂಸ್ಥೆಯ ಮೂಲಕ ಅವಶ್ಯಕತೆ ಇರೋವ್ರಿಗೆ ನೀಡಲು ನಿರ್ಧರಿಸಲಾಗಿದೆ. ಹೀಗಾಗಿ ರಾತ್ರಿಯೇ ವಿಜಯ್ ಲಿವರ್, 2 ಕಿಡ್ನಿ, 2 ಕಣ್ಣು, ಹೃದಯದ ವಾಲ್ವ್ ಸಂರಕ್ಷಿಸಿಡಲಾಯ್ತು. ಈ ಮೂಲಕ ಬದುಕಿದ್ದಾಗ ನೊಂದವ್ರ ಕಣ್ಣೀರು ಒರೆಸ್ತಿದ್ದ ನಟ ಸಂಚಾರಿ ವಿಜಯ್ ಮೃತಪಟ್ಟ ಬಳಿಕವೂ ಕನಿಷ್ಠ 6 ಜನರ ಬಾಳಿಗೆ ಬೆಳಕಾಗೋ ಮೂಲಕ ಜೀವಂತವಾಗಿರಲಿದ್ದಾರೆ.

ನಟ ವಿಜಯ್ ಬ್ರೈನ್ ಡೆಡ್ ಘೋಷಿಸೋ ಮುನ್ನ ಎರಡು ಬಾರಿ ಅಪ್ನಿಯಾ ಟೆಸ್ಟ್ ಮಾಡಿದ ಬಳಿಕ ಅಂಗಾಂಗ ದಾನಕ್ಕೆ ನಿರ್ಧರಿಸಲಾಯ್ತು. ಇದಕ್ಕೂ ಮೊದಲು ಅಂಗಾಂಗ ದಾನಕ್ಕೆ ಕುಟುಂಬಸ್ಥರ ಅನುಮತಿ ಪಡೆಯಲಾಯ್ತು. ಸಂಚಾರಿ ವಿಜಯ್ ಅಂಗಾಂಗ ದಾನದ ಬಗ್ಗೆ ಮಾತಾಡುತ್ತಲೇ ಗದ್ಗದಿತರಾದ ಸಹೋದರ ಸಿದ್ದೇಶ್, ಸಂಚಾರಿ ವಿಜಯ್ ಅಂಗಾಂಗ ದಾನ ಮಾಡುತ್ತೇವೆ ಅಂತಾ ಘೋಷಿಸಿದ್ರು.

ಒಟ್ನಲ್ಲಿ ವಿರಳವಾಗಿ ಸಿನಿಮಾದಲ್ಲಿ ಕಾಣಿಸಿಕೊಳ್ತಿದ್ದ ನಟ ಸಂಚಾರಿ ವಿಜಯ್ ತಮ್ಮ ಮನೋಜ್ಞ ನಟನೆ ಮೂಲಕ ಪ್ರೇಕ್ಷರ ಮನದಲ್ಲಿ ಅಚ್ಚಳಿಯದೆ ಉಳಿದುಕೊಂಡಿದ್ದಾರೆ. ರಾಷ್ಟ್ರಪ್ರಶಸ್ತಿ ಸಿಕ್ಕಿದ್ರೂ ಸಿಂಪಲ್ ಆಗೇ ಬದುಕ್ತಿದ್ದ ನಟ ಸಂಚಾರಿ ವಿಜಯ್ ಕೊನೇ ಗಳಿಗೆಯಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಅಂಗಾಂಗ ದಾನದ ಮೂಲಕ 6 ಜನರ ಬದುಕಲ್ಲಿ ನಟ ವಿಜಯ್ ಚಿರಾಯುವಾಗಿದ್ದಾರೆ.

ಇದನ್ನೂ ಓದಿ: ಸಂಚಾರಿ ವಿಜಯ್​ ರೀತಿಯಲ್ಲೇ ಅಪಘಾತದಲ್ಲಿ ಮೃತಪಟ್ಟ ಸ್ಯಾಂಡಲ್​ವುಡ್​ ಕಲಾವಿದರಿವರು

Published On - 7:21 am, Tue, 15 June 21

ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ನೆಲೆಮಂಗಲ: ಮನೆ ಮುಂದೆ ಕಟ್ಟಿದ್ದ ಹಸುಗಳನ್ನ ಕದ್ದು ಪರಾರಿ, ರೈತ ಕಂಗಾಲು
ನೆಲೆಮಂಗಲ: ಮನೆ ಮುಂದೆ ಕಟ್ಟಿದ್ದ ಹಸುಗಳನ್ನ ಕದ್ದು ಪರಾರಿ, ರೈತ ಕಂಗಾಲು
ಗಂಗಾವತಿ ಉಪ ಚುನಾವಣೆಗೆ ಅನ್ಸಾರಿ ಟಿಕೆಟ್ ಬಯಸಿದ್ದರೆ ತಪ್ಪಿಲ್ಲ: ಸಂಗಣ್ಣ
ಗಂಗಾವತಿ ಉಪ ಚುನಾವಣೆಗೆ ಅನ್ಸಾರಿ ಟಿಕೆಟ್ ಬಯಸಿದ್ದರೆ ತಪ್ಪಿಲ್ಲ: ಸಂಗಣ್ಣ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್
ಒಡಿಷಾದಿಂದ ಬಂದಿರುವ ಕೊಹ್ಲಿ ಕಟ್ಟಾಭಿಮಾನಿಗೆ ಟಿಕೆಟ್ ಸಿಕ್ಕಿಲ್ಲ
ಒಡಿಷಾದಿಂದ ಬಂದಿರುವ ಕೊಹ್ಲಿ ಕಟ್ಟಾಭಿಮಾನಿಗೆ ಟಿಕೆಟ್ ಸಿಕ್ಕಿಲ್ಲ
ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ಮದುಮಗ ಸಾವು: ಅಸಲಿಗೆ ಆಗಿದ್ದೇನು?
ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ಮದುಮಗ ಸಾವು: ಅಸಲಿಗೆ ಆಗಿದ್ದೇನು?