AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಚಾರಿ ವಿಜಯ್ ಅವರನ್ನು ಕಳೆದುಕೊಂಡ ಹುಟ್ಟೂರಿನಲ್ಲಿ ಮಡುಗಟ್ಟಿದ ಶೋಕ

ಊರಿನ ಮಗನನ್ನು ಕಳೆದುಕೊಂಡು ತುಂಬಾ ನೋವಾಗಿದೆ. ವಿಜಯ್ ನೆನೆಸಿಕೊಂಡರೆ ಬೇಸರವಾಗುತ್ತದೆ ಎಂದು ವಿಜಯ್ ಸ್ನೇಹಿತರು ಕಣ್ಣೀರು ಹಾಕಿದ್ದಾರೆ.

ಸಂಚಾರಿ ವಿಜಯ್ ಅವರನ್ನು ಕಳೆದುಕೊಂಡ ಹುಟ್ಟೂರಿನಲ್ಲಿ ಮಡುಗಟ್ಟಿದ ಶೋಕ
ಸಂಚಾರಿ ವಿಜಯ್
ರಾಜೇಶ್ ದುಗ್ಗುಮನೆ
|

Updated on: Jun 14, 2021 | 9:20 PM

Share

ನಟ ಸಂಚಾರಿ ವಿಜಯ್ ಮೃತಪಟ್ಟ ಬಗ್ಗೆ ಸಾಕಷ್ಟು ಸೆಲೆಬ್ರಿಟಿಗಳು ಪೋಸ್ಟ್ ಮಾಡುತ್ತಿದ್ದಾರೆ. ಈ ಬಗ್ಗೆ ಅಧಿಕೃತ ಘೋಷಣೆ ಒಂದೇ ಬಾಕಿ ಇದೆ. ಈ ವಿಚಾರ ತಿಳಿದು ಅವರ ಹುಟ್ಟೂರಾದ ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಪಂಚನಹಳ್ಳಿಯಲ್ಲಿ ಸೂತಕದ ಛಾಯೆ ಮೂಡಿದೆ. ವಿಜಯ್ ಅವರನ್ನು ಕಳೆದುಕೊಂಡ ಗ್ರಾಮಸ್ಥರು ಬೇಸರ ಹೊರ ಹಾಕುತ್ತಿದ್ದಾರೆ. ‘ಟಿವಿಯಲ್ಲಿ ವಿಜಯ್ ಪರಿಸ್ಥಿತಿ ನೋಡಿ ತುಂಬಾ ಬೇಜಾರಾಗಿದೆ. ವಿಜಯ್ ಗ್ರಾಮಕ್ಕೆ ಬಂದಾಗ ಎಲ್ಲರ ಮನೆಗೆ ಬರುತ್ತಿದ್ದರು. ಸ್ಕೂಲ್​ನಲ್ಲಿ ನಾವೆಲ್ಲ ಒಟ್ಟಿಗೆ ಆಡಿಕೊಂಡು ಬೆಳೆದವರು. ಪಂಚನಹಳ್ಳಿ ಗ್ರಾಮವನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಮಹಾನ್ ವ್ಯಕ್ತಿ ವಿಜಯ್. ಊರಿನ ಮಗನನ್ನು ಕಳೆದುಕೊಂಡು ತುಂಬಾ ನೋವಾಗಿದೆ. ವಿಜಯ್ ನೆನೆಸಿಕೊಂಡರೆ ಬೇಸರವಾಗುತ್ತದೆ ಎಂದು ವಿಜಯ್ ಸ್ನೇಹಿತರು ಕಣ್ಣೀರು ಹಾಕುತ್ತಾರೆ. ಸಂಚಾರಿ ವಿಜಯ್ ತಾಯಿ ಹಾಡು ಹೇಳುತ್ತಿದ್ದರು. ವಿಜಯ್ ತಂದೆ ಚೆನ್ನಾಗಿ ತಬಲ ನುಡಿಸುತ್ತಿದ್ದರು ಎಂದು ಗ್ರಾಮಸ್ಥರು ಹೇಳಿಕೊಂಡಿದ್ದಾರೆ.

ಮಂಗಳವಾರ ಬೆಳಗ್ಗೆ 8-10ರವರೆಗೆ ರವೀಂದ್ರ ಕಲಾ ಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿದೆ.  ಬಳಿಕ ಹುಟ್ಟೂರು ಪಂಚನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

2011ರಲ್ಲಿ ತೆರೆಗೆ ಬಂದ ‘ರಂಗಪ್ಪ ಹೋಗ್ಬಿಟ್ಟಾ’ಸಂಚಾರಿ ವಿಜಯ್ ಅವರ ಮೊದಲ ಸಿನಿಮಾ. ರಮೇಶ್ ಅರವಿಂದ್ ಅಭಿನಯಿಸಿದ ಈ ಚಿತ್ರದಲ್ಲಿ ನೀನಾಸಂ ಸತೀಶ್, ಮೊದಲಾದವರು ನಟಿಸಿದ್ದರು. ಈ ಚಿತ್ರದಲ್ಲಿ ಸಂಚಾರಿ ವಿಜಯ್ ಕೂಡ ಕಾಣಿಸಿಕೊಂಡಿದ್ದರು. 2015ರಲ್ಲಿ ತೆರೆಗೆ ಬಂದ ಅವರ ನಟನೆಯ ‘ನಾನು ಅವನಲ್ಲ ಅವಳು’ಸಿನಿಮಾ ಸಂಚಾರಿ ವಿಜಯ್ ಅವರ ವೃತ್ತಿ ಜೀವನವದ ಪ್ರಮುಖ ಚಿತ್ರ. ಈ ಚಿತ್ರದಲ್ಲಿ ಅವರ ಅದ್ಭುತ ನಟನೆಗೆ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗಳು ಸಿಕ್ಕವು.

ಇದನ್ನೂ ಓದಿ:

Sanchari Vijay Obituary: ವಿಜಯ್​ ಕುಮಾರ್​ ‘ಸಂಚಾರಿ’ ವಿಜಯ್​ ಆಗಿದ್ದು ಹೇಗೆ? ಇಲ್ಲಿದೆ ಅವರ ಲೈಫ್​ ಜರ್ನಿ

Sanchari Vijay: ನಟ ಸಂಚಾರಿ ವಿಜಯ್​ಗೆ ಶ್ರದ್ಧಾಂಜಲಿ ಅರ್ಪಿಸಿದ ಸಿಎಂ ಯಡಿಯೂರಪ್ಪ ಮತ್ತು ಸುದೀಪ್​