Sanchari Vijay Obituary: ವಿಜಯ್​ ಕುಮಾರ್​ ‘ಸಂಚಾರಿ’ ವಿಜಯ್​ ಆಗಿದ್ದು ಹೇಗೆ? ಇಲ್ಲಿದೆ ಅವರ ಲೈಫ್​ ಜರ್ನಿ

1983ರ ಜುಲೈ 18ರಂದು ಚಿಕ್ಕಮಗಳೂರಿನ ಕಡೂರಿನ ಪಂಚನಹಳ್ಳಿಯಲ್ಲಿ ವಿಜಯ್​ ಜನಿಸಿದರು. ವಿಜಯ್​ ಕುಮಾರ್​ ಬಿ. ಎಂಬುದು ಅವರಿಗೆ ಇಟ್ಟ ಹೆಸರು. ಸಣ್ಣ ವಯಸ್ಸಿನಿಂದಲೇ ನಟನೆ ಬಗ್ಗೆ ಆಸಕ್ತಿ ಹೊಂದಿದ್ದ ಅವರು, ರಂಗಭೂಮಿಯಲ್ಲಿ ಪಳಗಿದರು.

Sanchari Vijay Obituary: ವಿಜಯ್​ ಕುಮಾರ್​ ‘ಸಂಚಾರಿ’ ವಿಜಯ್​ ಆಗಿದ್ದು ಹೇಗೆ? ಇಲ್ಲಿದೆ ಅವರ ಲೈಫ್​ ಜರ್ನಿ
ಸಂಚಾರಿ ವಿಜಯ್
Follow us
ರಾಜೇಶ್ ದುಗ್ಗುಮನೆ
| Updated By: ಮದನ್​ ಕುಮಾರ್​

Updated on: Jun 14, 2021 | 2:41 PM

ಅದ್ಭುತ ನಟನೆ ಮೂಲಕ ಎಲ್ಲರ ಗಮನ ಸೆಳೆದ ವಿಜಯ್ ಕೇವಲ 37ನೇ ವಯಸ್ಸಿಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಸಾಕಷ್ಟು ಸಮಾಜಮುಖಿ ಕೆಲಸ ಮಾಡಿದ ಅವರನ್ನು ದೇವರು ಇಷ್ಟು ಬೇಗ ಕರೆಸಿಕೊಳ್ಳುತ್ತಾನೆ ಎಂದು ಯಾರೂ ಕೂಡ ಊಹಿಸಿಕೊಂಡಿರಲಿಲ್ಲ. ‘ನಾನು ಅವನಲ್ಲ.. ಅವಳು’ ಸಿನಿಮಾದಲ್ಲಿನ ಅವರ ನಟನೆಗೆ ಮನ ಸೋಲದವರಿಲ್ಲ. ಪ್ರತಿ ಸಿನಿಮಾದಲ್ಲೂ ಭಿನ್ನ ಪಾತ್ರ ಆಯ್ಕೆ ಮಾಡಿಕೊಳ್ಳುತ್ತಿದ್ದ ವಿಜಯ್​ ಈಗ ನಮ್ಮೊಂದಿಗಿಲ್ಲ ಎಂಬುದನ್ನು ಅಭಿಮಾನಿಗಳಿಗೆ, ಆಪ್ತರಿಗೆ ಮತ್ತು ಕುಟುಂಬದವರಿಗೆ ಅರಗಿಸಿಕೊಳ್ಳೋಕೂ ಸಾಧ್ಯವಾಗುತ್ತಿಲ್ಲ.

ಚಿತ್ರರಂಗದಲ್ಲಿ ಅದೃಷ್ಟಪರೀಕ್ಷೆಗೆ ಸಾಕಷ್ಟು ಜನರು ಮುಂದಾಗುತ್ತಾರೆ. ಆದರೆ, ಎಲ್ಲರಿಗೂ ಯಶಸ್ಸು ಸಿಗೋದಿಲ್ಲ. ಆದರೆ, ಸಂಚಾರಿ ವಿಜಯ್​ಗೆ ನಟನಾ ಕಲೆ ಅದ್ಭುತವಾಗಿ ಒಲಿದಿತ್ತು. ಯಾವುದೇ ಪಾತ್ರ ಕೊಟ್ಟರೂ ಅದನ್ನು ಸುಲಲಿತವಾಗಿ ನಿಭಾಯಿಸುತ್ತಿದ್ದರು. ತಾವು ಸೆಲೆಬ್ರಿಟಿ ಎನ್ನುವ ಅಹಂ ಅವರಲ್ಲಿ ಎಂದಿಗೂ ಇರಲಿಲ್ಲ. ಕೊವಿಡ್​ ಸಂದರ್ಭದಲ್ಲಿಯೂ ಸಂಚಾರಿ ವಿಜಯ್​ ಸಾಕಷ್ಟು ಜನಪರ ಕೆಲಸಗಳನ್ನು ಮಾಡಿದ್ದರು ಎಂಬುದನ್ನು ಇಲ್ಲಿ ನೆನೆಯಲೇಬೇಕು.

1983ರ ಜುಲೈ 18ರಂದು ಚಿಕ್ಕಮಗಳೂರಿನ ಕಡೂರಿನ ಪಂಚನಹಳ್ಳಿಯಲ್ಲಿ ವಿಜಯ್​ ಜನಿಸಿದರು. ವಿಜಯ್​ ಕುಮಾರ್​ ಬಿ. ಎಂಬುದು ಅವರಿಗೆ ಇಟ್ಟ ಹೆಸರು. ಸಣ್ಣ ವಯಸ್ಸಿನಿಂದಲೇ ನಟನೆ ಬಗ್ಗೆ ಆಸಕ್ತಿ ಹೊಂದಿದ್ದ ಅವರು, ರಂಗಭೂಮಿಯಲ್ಲಿ ಪಳಗಿದವರು. ‘ಸಂಚಾರಿ’ ಥಿಯೇಟರ್​ ಗ್ರೂಪ್​ನಿಂದ ಬಂದ ಕಾರಣ ಸ್ಯಾಂಡಲ್​ವುಡ್​ನಲ್ಲಿ ಸಂಚಾರಿ ವಿಜಯ್​ ಎಂದೇ ಅವರು ಖ್ಯಾತಿ ಪಡೆದುಕೊಂಡರು.

2011ರಲ್ಲಿ ತೆರೆಗೆ ಬಂದ ‘ರಂಗಪ್ಪ ಹೋಗ್ಬಿಟ್ಟಾ’ ಸಂಚಾರಿ ವಿಜಯ್​ ಅವರ ಮೊದಲ ಸಿನಿಮಾ. ರಮೇಶ್​ ಅರವಿಂದ್ ಅಭಿನಯಿಸಿದ ಈ ಚಿತ್ರದಲ್ಲಿ ನೀನಾಸಂ ಸತೀಶ್​, ಮೊದಲಾದವರು ನಟಿಸಿದ್ದರು. ಈ ಚಿತ್ರದಲ್ಲಿ ಸಂಚಾರಿ ವಿಜಯ್​ ಕೂಡ ಕಾಣಿಸಿಕೊಂಡಿದ್ದರು.

ಅದೇ ವರ್ಷ ತೆರೆಗೆ ಬಂದ ‘ರಾಮ ರಾಮ ರಘು ರಾಮ’ ಚಿತ್ರದಲ್ಲಿ ವಿಜಯ್​ ನಟಿಸಿದರು. 2013ರಲ್ಲಿ ಪ್ರೇಮ್​ ನಟನೆಯ ‘ದಾಸ್ವಾಳ’ ಚಿತ್ರದಲ್ಲಿ ಪಾತ್ರ ಒಂದನ್ನು ನಿರ್ವಹಿಸಿದ್ದರು. 2014ರಲ್ಲಿ ಬಂದ ‘ಹರಿವು’ ಚಿತ್ರದಲ್ಲಿ ಸಂಚಾರಿ ಮೊದಲ ಬಾರಿಗೆ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡರು. ಮಂಸೋರೆ ನಿರ್ದೇಶಿಸಿದ ಆ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು.

2015ರಲ್ಲಿ ತೆರೆಗೆ ಬಂದ ಅವರ ನಟನೆಯ ‘ನಾನು ಅವನಲ್ಲ ಅವಳು’ ಸಿನಿಮಾ ಸಂಚಾರಿ ವಿಜಯ್​ ಅವರ ವೃತ್ತಿ ಜೀವನವನ್ನೇ ಬದಲಾಯಿಸಿತು. ಈ ಚಿತ್ರದಲ್ಲಿ ಅವರ ಅದ್ಭುತ ನಟನೆಗೆ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗಳು ಸಿಕ್ಕವು. ಈ ಚಿತ್ರ ತೆರೆಕಂಡ ನಂತರ ಅವರಿಗೆ ಅವಕಾಶಗಳು ತೀವ್ರವಾಗಿ ಹೆಚ್ಚಿದವು. 2017 ಮತ್ತು 2018ರಲ್ಲಿ ಅವರ ನಟನೆಯ 8-9 ಚಿತ್ರಗಳು ತೆರೆಗೆ ಬಂದವು. ‘ಆ್ಯಕ್ಟ್​ 1978’ ಅವರ ಕೊನೆಯ ಚಿತ್ರ. ‘ಮೇಲೊಬ್ಬ ಮಾಯಾವಿ’ ಚಿತ್ರದಲ್ಲಿ ನಟಿಸುತ್ತಿದ್ದರು.

ಇಲ್ಲೊಂದು ವಿಚಿತ್ರ ಇದೆ. ‘ಮೇಲೊಬ್ಬ ಮಾಯಾವಿ’ ಸಿನಿಮಾದ ಹೆಸರಿನಂತೆಯೇ ಸಂಚಾರಿ ವಿಜಯ್​ ಕೂಡ ಮೇಲಿರುವ ಮಾಯಾವಿಯ ಆಟದ ಕೈಗೊಂಬೆಯಾಗಿ ಮೃತಪಟ್ಟಿದ್ದು ನಿಜಕ್ಕೂ ಬೇಸರದ ಸಂಗತಿ.

ಇದನ್ನೂ ಓದಿ:

ಸಂಚಾರಿ ವಿಜಯ್​ ಬದುಕುಳಿಯುವ ಸಾಧ್ಯತೆ ಕಡಿಮೆ, ಆತನ ಅಂಗಾಂಗ ದಾನ ಮಾಡುತ್ತೇವೆ: ಸಹೋದರ ಸಿದ್ದೇಶ್​ ಗದ್ಗದಿತ

Sanchari Vijay: ನಟ ಸಂಚಾರಿ ವಿಜಯ್​ಗೆ ಶ್ರದ್ಧಾಂಜಲಿ ಅರ್ಪಿಸಿದ ಸಿಎಂ ಯಡಿಯೂರಪ್ಪ ಮತ್ತು ಸುದೀಪ್​

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ