Dearness Allowance: ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ – ತುಟ್ಟಿ ಭತ್ಯೆ ಹೆಚ್ಚಳ
Karnataka government employees: ರಾಜ್ಯ ಸರ್ಕಾರವು ತನ್ನ ನೌಕರರಿಗೆ ಸಿಹಿ ಸುದ್ದಿ ನೀಡಿದೆ. ತುಟ್ಟಿ ಭತ್ಯೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಶೇ. 21.50 ರಿಂದ ಶೇ. 24.50 ಕ್ಕೆ ತುಟ್ಟಿ ಭತ್ಯೆ ಹೆಚ್ಚಳ ಮಾಡಲಾಗಿದೆ. ತುಟ್ಟಿ ಭತ್ಯೆ ಹೆಚ್ಚಳ ದಿಂದ ನಿವೃತ್ತ ಸರ್ಕಾರಿ ನೌಕರರಿಗೂ ಅನುಕೂಲವಾಗಲಿದೆ.
ಬೆಂಗಳೂರು: ರಾಜ್ಯ ಸರ್ಕಾರವು ತನ್ನ ನೌಕರರಿಗೆ ಸಿಹಿ ಸುದ್ದಿ ನೀಡಿದೆ. ತುಟ್ಟಿ ಭತ್ಯೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಶೇ. 21.50 ರಿಂದ ಶೇ. 24.50 ಕ್ಕೆ ತುಟ್ಟಿ ಭತ್ಯೆ ಹೆಚ್ಚಳ ಮಾಡಲಾಗಿದೆ. ತುಟ್ಟಿ ಭತ್ಯೆ ಹೆಚ್ಚಳ ದಿಂದ ನಿವೃತ್ತ ಸರ್ಕಾರಿ ನೌಕರರಿಗೂ ಅನುಕೂಲವಾಗಲಿದೆ. ಜುಲೈ 1 ರಿಂದಲೇ ಜಾರಿಗೆ ಬರುವಂತೆ ತುಟ್ಟಿ ಭತ್ಯೆ ಹೆಚ್ಚಳ ಮಾಡಿ ಆದೇಶಿಸಲಾಗಿದೆ. ಮೂರು ತಿಂಗಳ ಹಿಂದೆ ಜುಲೈನಲ್ಲಿ ರಾಜ್ಯ ಸರ್ಕಾರವು ತನ್ನ ನೌಕರರಿಗೆ ಶೇ 11.15ರಿಂದ 21.50ಕ್ಕೆ ತುಟ್ಟಿ ಭತ್ಯೆ ಹೆಚ್ಚಿಸಿತ್ತು. ಡಿಎ ಹೆಚ್ಚಳದಿಂದ 6 ಲಕ್ಷ ಸರ್ಕಾರಿ ನೌಕರರು, 4.5 ಲಕ್ಷ ಪಿಂಚಣಿದಾರರು ಮತ್ತು ವಿವಿಧ ನಿಗಮ ಮಂಡಳಿಗಳಲ್ಲಿ ಸೇವೆ ಸಲ್ಲಿಸುತ್ತಿರುವ 3 ಲಕ್ಷ ಉದ್ಯೋಗಿಗಳಿಗೆ ಅನುಕೂಲವಾಗಲಿದೆ.
ಕೇಂದ್ರ ಸರ್ಕಾರಿ ನೌಕರರಿಗೂ ಇತ್ತೀಚೆಗೆ DA ಹೆಚ್ಚಳವಾಗಿತ್ತು: ದೆಹಲಿ: ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಶೇ 3ರಷ್ಟು ತುಟ್ಟಿಭತ್ಯೆ (Dearness Allowance – DA) ನೀಡುವ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟ ಕಳೆದ ವಾರ ಅನುಮೋದನೆ ನೀಡಿದೆ. ಈ ಹೊಸ ಪ್ರಸ್ತಾವ ಅನುಷ್ಠಾನದಿಂದ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯು ಶೇ. 31ಕ್ಕೆ ಏರಿಕೆಯಾಗಲಿದೆ.
ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಹಣಕಾಸು ಇಲಾಖೆಯು ಜ್ಞಾಪನಾ ಪತ್ರವೊಂದನ್ನು ಹೊರಡಿಸಿ ನಿವೃತ್ತ ಕೇಂದ್ರ ಸರ್ಕಾರಿ ನೌಕರರಿಗೆ ಗ್ರಾಚ್ಯುಟಿ ಮತ್ತು ನಗದು ಪಾವತಿಯ ವಿವರ ನೀಡಿತ್ತು. ಶೇ 17ರಿಂದ ಶೇ 28ಕ್ಕೆ ತುಟ್ಟಿಭತ್ಯೆ ಹಾಗೂ ಬೆಲೆಏರಿಕೆ ಪರಿಹಾರ ಒದಗಿಸುವ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತ್ತು. ಕೇಂದ್ರ ಸರ್ಕಾರದ ಈ ನಿರ್ಧಾರವು ಕಳೆದ ಜುಲೈ 1, 2021ರಿಂದಲೇ ಪೂರ್ವಾನ್ವಯವಾಗಲಿದೆ. 48.34 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ 65.26 ಲಕ್ಷ ಪಿಂಚಣಿದಾರರಿಗೆ ಸರ್ಕಾರದ ಈ ನಿರ್ಧಾರದಿಂದ ಅನುಕೂಲವಾಗಲಿದೆ. ಜನವರಿ 1, 2020ರಿಂದ ಜೂನ್ 30, 2021ರ ಅವಧಿಯ ತುಟ್ಟಿಭತ್ಯೆ ನೀಡಿಕೆ ಬಗ್ಗೆಯೂ ಕೇಂದ್ರ ಸರ್ಕಾರದ ಜ್ಞಾಪನಾ ಪತ್ರ ಮಾಹಿತಿ ನೀಡಿದೆ. ಈ ಅವಧಿಯ ತುಟ್ಟಿಭತ್ಯೆಯು ಮೂಲ ವೇತನದ ಶೇ 17ಕ್ಕೆ ಸೀಮಿತವಾಗಿರುತ್ತದೆ. ನಂತರದ ದಿನಗಳಲ್ಲಿ ಈ ಪ್ರಮಾಣವು ಶೇ 28ಕ್ಕೆ ಏರಿಕೆಯಾಗಿದೆ.
ಈ ಅವಧಿಯಲ್ಲಿ ನಿವೃತ್ತರಾಗಿರುವ ಉದ್ಯೋಗಿಗಳಿಗೆ ನೀಡುವ ತುಟ್ಟಿಭತ್ಯೆಯ ವಿವರವನ್ನೂ ಕೇಂದ್ರ ಸರ್ಕಾರ ಒದಗಿಸಿದೆ. ಜನವರಿ 1, 2020ರಿಂದ ಜೂನ್ 30, 2020ರ ಅವಧಿಗೆ ಮೂಲ ವೇತನದ ಶೇ 21, ಜುಲೈ 1, 2020ರಿಂದ ಡಿಸೆಂಬರ್ 31, 2020ರ ಅವಧಿಗೆ ಶೇ 24, ಜನವರಿ 1, 2021ರಿಂದ ಮೇ 30, 2021ರ ಅವಧಿಗೆ ಶೇ 28 ಎಂದು ನಿಗದಿಪಡಿಸಲಾಗಿದೆ.
ಕೊವಿಡ್-19 ಪಿಡುಗಿನ ಅವಧಿಯಲ್ಲಿ ಸರ್ಕಾರವು ತುಟ್ಟಿಭತ್ಯೆ ಮತ್ತು ಬೆಲೆ ಏರಿಕೆ ಪರಿಹಾರವನ್ನು ತಡೆಹಿಡಿದಿತ್ತು. ಜನವರಿ 1, 2020, ಜುಲೈ 1, 2020 ಮತ್ತು ಜನವರಿ 1, 2021ರ ತುಟ್ಟಿಭತ್ಯೆಗಳನ್ನು ಸರ್ಕಾರ ನೌಕರರಿಗೆ ನೀಡಿರಲಿಲ್ಲ.
Hanagal ByElection CM Bommai Rally | ಹಾನಗಲ್ ಬೈಎಲೆಕ್ಷನ್ನಲ್ಲಿ ಸಿಎಂ ಬೊಮ್ಮಾಯಿ ಪ್ರಚಾರ | TV9 Kannada
(karnataka government increases dearness allowance for its employees)
Published On - 1:29 pm, Wed, 27 October 21