ದಾವಣಗೆರೆ: ಕಿಡಿಗೇಡಿಗಳ‌ ಕಿತಾಪತಿ; ಲಕ್ಷಾಂತರ ರೂಪಾಯಿ ಮೌಲ್ಯದ ಸಾವಿರಾರು ಅಡಿಕೆ ಮರಗಳಿಗೆ ಬೆಂಕಿ

ದ್ವೇಷಕ್ಕೆ ಅಡಿಕೆ ಹಾಗೂ ಬಾಳೆ ಗಿಡಗಳು ಬೆಂಕಿಗಾಹುತಿಯಾದ ಘಟನೆ ದಾವಣಗೆರೆ(Davanagere) ತಾಲೂಕಿನ ಹುಣಸಡಕಟ್ಟೆ ಗ್ರಾಮದಲ್ಲಿ ನಡೆದಿದೆ. ಕಳೆದ ವರ್ಷ ಇದೇ ತೋಟದಿಂದ ಬರೊಬ್ಬರಿ ಎಳು‌ ಲಕ್ಷ ರೂಪಾಯಿ ಆದಾಯ ಬಂದಿತ್ತು. ಈ ವರ್ಷ ಬೆಂಕಿಗೆ ಬಲಿಯಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಹೊಟ್ಟೆಕಿಚ್ಚಿನಿಂದ ಫಲಕ್ಕೆ ಬಂದ ಅಡಿಕೆ ಮರಗಳಿಗೆ ದುಷ್ಕರ್ಮಿಗಳು ಬೆಂಕಿ ಇಟ್ಟ ಶಂಕೆ ವ್ಯಕ್ತವಾಗಿದೆ.

ದಾವಣಗೆರೆ: ಕಿಡಿಗೇಡಿಗಳ‌ ಕಿತಾಪತಿ; ಲಕ್ಷಾಂತರ ರೂಪಾಯಿ ಮೌಲ್ಯದ ಸಾವಿರಾರು ಅಡಿಕೆ ಮರಗಳಿಗೆ ಬೆಂಕಿ
ದಾವಣಗೆರೆಯಲ್ಲಿ ಸಾವಿರಾರು ಅಡಿಕೆ ಮರಗಳಿಗೆ ಬೆಂಕಿಯಿಟ್ಟ ಕಿಡಿಗೇಡಿಗಳು
Edited By: ಕಿರಣ್ ಹನುಮಂತ್​ ಮಾದಾರ್

Updated on: Feb 18, 2024 | 11:12 AM

ದಾವಣಗೆರೆ, ಫೆ.18: ಲಕ್ಷಾಂತರ ರೂಪಾಯಿ ಮೌಲ್ಯದ ಅಡಿಕೆ ಹಾಗೂ ಬಾಳೆ ಗಿಡಗಳು ಬೆಂಕಿಗಾಹುತಿಯಾದ ಘಟನೆ
ದಾವಣಗೆರೆ(Davanagere) ತಾಲೂಕಿನ ಹುಣಸಡಕಟ್ಟೆ ಗ್ರಾಮದಲ್ಲಿ ನಡೆದಿದೆ. ವಿಶ್ವನಾಥ್​ ಎಂಬುವವರಿಗೆ ಸೇರಿದ ತೋಟ ಇದಾಗಿದ್ದು,  1,300 ಅಡಿಕೆ ಹಾಗೂ 1,400 ಬಾಳೆ ಗಿಡಗಳು ಸುಟ್ಟು ಭಸ್ಮವಾಗಿದೆ. ರೈತನ ಕುಟುಂಬ ಗ್ರಾಮದಲ್ಲಿ ಇಲ್ಲದನ್ನ ತಿಳಿದ ಕಿಡಿಗೇಡಿಗಳು, ದ್ವೇಷದಿಂದ ಬೆಂಕಿ ಇಟ್ಟ ಶಂಕೆ ವ್ಯಕ್ತವಾಗಿದೆ. ಇನ್ನು ಸ್ಥಳೀಯರು ಸೇರಿ ಅರ್ಧ ಅಡಿಕೆ ಹಾಗೂ ಬಾಳೆ ತೋಟವನ್ನು ಬೆಂಕಿಯಿಂದ ಉಳಿಸಿದ್ದಾರೆ.

ಫಲಕ್ಕೆ ಬಂದ ಅಡಿಕೆ ಮರಗಳನ್ನ ಬೆಂಕಿ ಇಟ್ಟ ದುಷ್ಕರ್ಮಿಗಳು

ಇನ್ನು ಕಳೆದ ವರ್ಷ ಇದೇ ತೋಟದಿಂದ ಬರೊಬ್ಬರಿ ಎಳು‌ ಲಕ್ಷ ರೂಪಾಯಿ ಆದಾಯ ಬಂದಿತ್ತು. ಈ ವರ್ಷ ಬೆಂಕಿಗೆ ಬಲಿಯಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಹೊಟ್ಟೆಕಿಚ್ಚಿನಿಂದ ಫಲಕ್ಕೆ ಬಂದ ಅಡಿಕೆ ಮರಗಳಿಗೆ ದುಷ್ಕರ್ಮಿಗಳು ಬೆಂಕಿ ಇಟ್ಟ ಶಂಕೆಯಿದ್ದು, ಈ ಕುರಿತು ರೈತ ವಿಶ್ವನಾಥ್​ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು‌ ನೀಡಿದ್ದು, ಪೊಲೀಸರು ತನಖೆ ಆರಂಭಿಸಿದ್ದಾರೆ.

ಇದನ್ನೂ ಓದಿ:ದ್ವೇಷಕ್ಕೆ ಬಲಿಯಾದ ಅಡಿಕೆ ಗಿಡಗಳು: ಹಗಲಿರುಳು ಬೆಳೆಸಿದ್ದ ಬೆಳೆ ಬೆಂಕಿಗಾಹುತಿ: ಕಂಗಾಲಾದ ರೈತ

ಹಸು ಮೇಲೆ ಚಿರತೆ ದಾಳಿ, ಹಸು ಸಾವು

ತುಮಕೂರು: ಜಿಲ್ಲೆಯ ಶಿರಾ ತಾಲೂಕಿನ ಕಾರ್ಪೆಹಳ್ಳಿಯಲ್ಲಿ ಚಿರತೆ ದಾಳಿಗೆ ಹಸು ಬಲಿಯಾದ ಘಟನೆ ನಡೆದಿದೆ. ಗೋಪಾಲಪ್ಪ ಎಂಬುವರಿಗೆ ಸೇರಿದ ಹಸು ಇದಾಗಿದ್ದು, ಕಳೆದ ತಿಂಗಳಷ್ಟೇ ಹಸುವನ್ನ ಖರೀದಿಸಲಾಗಿತ್ತು. ತಡರಾತ್ರಿ ಕೊಟ್ಟಿಗೆಗೆ ನುಗಿದ್ದ ಚಿರತೆ ದಾಳಿಗೆ ಹಸು ಸಾವನ್ನಪ್ಪಿದೆ. ಇದರಿಂದ ಗ್ರಾಮಸ್ಥರು ಕಂಗಾಲಾಗಿದ್ದು, ಸ್ಥಳಕ್ಕೆ ಶಿರಾ ವಲಯ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳ್ಳಂಬೆಳ್ಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:07 am, Sun, 18 February 24

ಬಸವರಾಜ್​ ದೊಡ್ಡಮನಿ, ದಾವಣಗೆರೆ

ಬಸವರಾಜ್ ದೊಡಮನಿ. 2007ರಿಂದ ಟಿವಿ9 ಕನ್ನಡದ ದಾವಣಗೆರೆ ಜಿಲ್ಲಾ ವರದಿಗಾರರಾಗಿದ್ದಾರೆ. ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತಳಕಟನಾಳದಲ್ಲಿ. ತಂದೆ ಗಂಗಪ್ಪ ದೊಡಮನಿ ಕೃಷಿಕ. ತಾಯಿ ಲಕ್ಕಮ್ಮ ದೊಡಮನಿ. ಇವರದ್ದು ನಾಟಿ ವೈದ್ಯರ ಕುಟುಂಬ. ಜನ ಜಾನುವಾರುಗಳು ರೋಗಕ್ಕೆ ಔಷಧಿ ನೀಡುವುದು ಇವರ ಕುಟುಂಬದ ಕಾಯಕ. 2000 ನಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ‌ ಮತ್ತು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದಾರೆ. ವೃತ್ತಿ ಜೀವನ ಆರಂಭವಾಗಿದ್ದು ಕನ್ನಡ ಪ್ರಭ ಪತ್ರಿಕೆಯಿಂದ. ಧಾರವಾಡ ಜಿಲ್ಲಾ ವರದಿಗಾರನಾಗಿ ಸೇವೆ. ಹತ್ತಕ್ಕೂ ಹೆಚ್ಚು ಲೋಕಸಭೆ ಹಾಗೂ ವಿಧಾನ ಸಭೆ ಸದನದ ವರದಿ ಮಾಡಿದ ಅನುಭವ. ಪುಸ್ತಕ ಓದುವುದು, ಜಾನಪದ ಕಲೆ ಉಳಿವಿಗೆ ದಾಖಲೆ ಸಂಗ್ರಹಿಸಿವುದು ಇವರ ಹವ್ಯಾಸ.

Read More
Loading...
Unable to load recommendations.
Follow Us