ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರ: ಸಿದ್ದರಾಮಯ್ಯಗೆ ಈಗ ತಪ್ಪಿನ ಅರಿವಾಗಿದೆ – ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ

ವಿಪಕ್ಷ ನಾಯಕ ಸಿದ್ದರಾಮಯ್ಯನಿಗೆ ಈಗ ತಪ್ಪಿನ ಅರಿವಾಗಿದೆ ಎಂದು ದಾವಣಗೆರೆಯಲ್ಲಿ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷ, ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.

ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರ: ಸಿದ್ದರಾಮಯ್ಯಗೆ ಈಗ ತಪ್ಪಿನ ಅರಿವಾಗಿದೆ - ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ
ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ
Updated By: ವಿವೇಕ ಬಿರಾದಾರ

Updated on: Aug 20, 2022 | 5:39 PM

ದಾವಣಗೆರೆ: ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರಿಗೆ ಈಗ ತಪ್ಪಿನ ಅರಿವಾಗಿದೆ ಎಂದು ದಾವಣಗೆರೆಯಲ್ಲಿ (Davangere) ವೀರಶೈವ ಲಿಂಗಾಯತ (Lingayat) ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷ, ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ (Shamanur Shivashankarappa) ಹೇಳಿದ್ದಾರೆ. ಬಾಳೆಹೊನ್ನೂರಿನ ರಂಭಾಪುರಿ ಮಠಕ್ಕೆ ಚೊಚ್ಚಲ ಭೇಟಿ ನೀಡಿದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಸ್ವಾಮಿಗಳ ಸಮ್ಮುಖದಲ್ಲಿ ಲಿಂಗಾಯತ – ವೀರಶೈವ ಧರ್ಮ ಒಡೆದ ಆರೋಪದ ಬಗ್ಗೆ ಮಾತನಾಡುತ್ತಾ ಪಶ್ಚಾತಾಪ, ವಿಶಾದ ವ್ಯಕ್ತಪಡಿಸಿದ ಕುರಿತು ಮಾತನಾಡಿದ ಅವರು ಸಿದ್ದರಾಮಯ್ಯ ಪಶ್ಚಾತ್ತಾಪ ಪಟ್ಟಿದ್ದಾರೆ ಅಲ್ಲಿಗೆ ಮುಗಿತು. ನಾನು ಮತ್ತೊಮ್ಮೆ ಧರ್ಮ ಹೊಡೆಯುವ ಪ್ರಯತ್ನಕ್ಕೆ ಹೋಗುವುದಿಲ್ಲ ಎಂದು ಹೇಳಿದ್ದಾರೆ ಎಂದು ಹೇಳಿದರು.

ಸಿದ್ದರಾಮಯ್ಯನಿಗೆ ಒಳ್ಳೆಯ ಬುದ್ದಿ ಬಂದಿದೆ. ಅದರಲ್ಲಿ ಅವರ ಪಾತ್ರ ಏನು ಇಲ್ಲ, ಬೇರೆಯವರ ಒತ್ತಡ ಇತ್ತು. ಆ ಆರೋಪ ಮಾತ್ರ ಅವರ ಮೇಲೆ ಬಂತು ಅಷ್ಟೇ. ನಾನು ಈ ಬಾರಿ ಮತ್ತೊಮ್ಮೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ತಿಳಿಸಿದರು.

ಯಡಿಯೂರಪ್ಪ ನವರಿಗೆ ಸಂಸದೀಯ ಸ್ಥಾನ ವಿಚಾರವಾಗಿ ಮಾತನಾಡಿದ ಅವರು ಬಿ ಎಸ್​ ಯಡಿಯೂರಪ್ಪ ಒಬ್ಬರಿಂದ ಏನ್ ಮಾಡೋಕೆ ಆಗೋದಿಲ್ಲ. ಸರ್ಕಾರ ನಾವು ರಚನೆ ಮಾಡುತ್ತೇವೆ, ನಮ್ಮ ಸರ್ಕಾರವೇ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಘಟನೆ ಹಿನ್ನೆಲೆ 

ನಿನ್ನೆ (ಆಗಸ್ಟ್​ 19) ಬಾಳೆಹೊನ್ನೂರಿನ ರಂಭಾಪುರಿ ಪೀಠಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯನವರು ಭೇಟಿ ನೀಡಿದ್ದರು. ಈ ವೇಳೆ ಜಗದ್ಗುರು ಶ್ರೀ ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರೊಂದಿಗೆ ಮಾತನಾಡುವಾಗ ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ  ಅವರಿಗೆ ಪಶ್ಚಾತ್ತಾಪವಾಗಿದೆ ಎಂದು ಹೇಳಿದರು ಎಂದು ರಂಭಾಪುರಿ ಶ್ರೀಗಳು ಹೇಳಿದ್ದರು.

Published On - 4:04 pm, Sat, 20 August 22