ದಾವಣಗೆರೆ: ಹೊನ್ನಾಳಿ ಕ್ಷೇತ್ರದಲ್ಲಿ ವ್ಯಾಪಕ ಭ್ರಷ್ಟಾಚಾರ(Corruption) ನಡೆದಿದೆ ಎಂದು ಶಾಸಕ ರೇಣುಕಾಚಾರ್ಯ(MP Renukacharya) ವಿರುದ್ಧ ಮಾಜಿ ಶಾಸಕ ಡಿ.ಜಿ.ಶಾಂತನಗೌಡ(DG Shantana Gowda) ಗಂಭೀರ ಆರೋಪ ಮಾಡಿದ್ದಾರೆ. ರೇಣುಕಾಚಾರ್ಯ ವಿರುದ್ಧ ಆರೋಪ ಪಟ್ಟಿಯನ್ನೇ ಬಿಡುಗಡೆ ಮಾಡಿದ್ದಾರೆ. ಸರ್ಕಾರಿ ಆಡಳಿತ ಯಂತ್ರ ದುರುಪಯೋಗ ಮಾಡಿಕೊಂಡು ತನ್ನ ಸ್ವಂತ ಜಮೀನಿಗೆ 18 ಲಕ್ಷ ವೆಚ್ಚದಲ್ಲಿ ವಿದ್ಯುತ್ ಲೈನ್ ಎಳೆದುಕೊಂಡಿದ್ದಾರೆ ಎಂದಿದ್ದಾರೆ.
ಕಳೆದ ಎರಡು ದಿನಗಳ ಹಿಂದೆಯಷ್ಟೇ ಅತಿವೃಷ್ಟಿಯಿಂದ ಹಾನಿಯಾದ ಮನೆಗಳಿಗೆ ಪರಿಹಾರ ವಿಚಾರವಾಗಿ ಹಾಲಿ ಶಾಸಕ ತಾರತಮ್ಯ ಮಾಡಿದ್ದಾರೆ ಎಂದು ರೇಣುಕಾಚಾರ್ಯ ಹಾಗೂ ಶಾಂತನಗೌಡ ನಡುವೆ ತಹಶೀಲ್ದಾರ್ ಕಚೇರಿಯಲ್ಲಿ ವಾಗ್ವಾದ ನಡೆದಿತ್ತು. ಇದರ ಬೆನ್ನಲ್ಲೇ ಈಗ ಶಾಂತನಗೌಡ ಆರೋಪಗಳ ಸುರಿ ಮಳೆಗೈದಿದ್ದಾರೆ. ಇದನ್ನೂ ಓದಿ: ಗರಿ ಗರಿ ಸೀರೆ, ಗರಿ ಗರಿ ನೋಟು ಹಂಚಿದ ಶಾಸಕ ಎಂ.ಪಿ.ರೇಣುಕಾಚಾರ್ಯ
ಸರ್ಕಾರಿ ಆಡಳಿತ ಯಂತ್ರವನ್ನು ದುರುಪಯೋಗ ಮಾಡಿಕೊಂಡು ತನ್ನ ಸ್ವಂತ ಜಮೀನಿಗೆ 18 ಲಕ್ಷ ವೆಚ್ಚದಲ್ಲಿ ವಿದ್ಯುತ್ ಕಂಬ ಲೈನ್ ಎಳೆದುಕೊಂಡಿದ್ದಾರೆ. ಜನ-ಜಾನುವಾರಿಗೆ ನೀರು ಬೇಕೆಂದು ರಸ್ತೆಯಲ್ಲಿ ಸಣ್ಣ ಸಣ್ಣ ನೀರಿನ ತೊಟ್ಟಿ ನಿರ್ಮಿಸಿ ತನ್ನ ತೋಟಕ್ಕೆ ವಿದ್ಯುತ್ ಮಾರ್ಗ ಎಳೆಸಿಕೊಂಡಿದ್ದಾರೆ. ನೇರಲಗುಂಡಿ ಬಳಿ 50 ಲಕ್ಷ ರೂ ವೆಚ್ಚದಲ್ಲಿ ಕೆರೆ ನಿರ್ಮಾಣ ಮಾಡುತ್ತೇನೆಂದು ಅನುದಾನ ಮೀಸಲಿಟ್ಟು ಅಲ್ಲಿನ ಕೆರೆ ಮಣ್ಣನ್ನು ತನ್ನ ತೋಟಕ್ಕೆ ಹೊಡೆದುಕೊಂಡಿದ್ದಾರೆ. 35 ಎಕರೆ ಅಡಿಕೆ ತೋಟ ನಿರ್ಮಾಣ ಮಾಡಲು ಸಾವಿರಾರು ಲೋಡು ಮಣ್ಣ ಬಳಸಿಕೊಂಡಿದ್ದಾರೆ ಎಂದು ಶಾಂತನಗೌಡ ಆರೋಪ ಮಾಡಿದ್ದಾರೆ.
ಕೆರೆ ನಿರ್ಮಾಣ ಕೇವಲ ನಾಮಕಾವಸ್ತೆಗೆ ಮಾತ್ರ. ಅಲ್ಲಿನ ಮಣ್ಣು ತೆಗೆದು ತನ್ನ ತೋಟ ಅಭಿವೃದ್ಧಿ ಮಾಡಿಕೊಂಡಿದ್ದಾರೆ. ಸರ್ಕಾರಿ ದುಡ್ಡಲ್ಲಿ ತನ್ನ ತೋಟಕ್ಕೆ ಮಣ್ಣು ಹೊಡೆಸಿಕೊಂಡ್ರಾ? ಶಾಸಕ ರೇಣುಕಾಚಾರ್ಯ. ಮಾಸಡಿ ಮುಖ್ಯರಸ್ತೆಯಿಂದ ತನ್ನ ಜಮೀನಿಗೆ 6 ಲಕ್ಷ ವೆಚ್ಚದಲ್ಲಿ ರಸ್ತೆ ನಿರ್ಮಾಣ ಮಾಡಿಕೊಂಡಿದ್ದಾರೆ. ಸರ್ಕಾರಿ ಹಣದಲ್ಲಿ ಸ್ವಾಮಿ ಕಾರ್ಯ ಸ್ವಕಾರ್ಯ ಎಂದು ಮಾಜಿ ಶಾಸಕ ಡಿಜಿ ಶಾಂತನಗೌಡ ವಿರುದ್ಧ ರೇಣುಕಾಚಾರ್ಯ ಲೇವಡಿ ಮಾಡಿದರು. ಹಾಗೂ ರೇಣುಕಾಚಾರ್ಯರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲು ನಿರ್ಧರಿಸಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:12 am, Sun, 18 September 22