ಕೊವಿಡ್​ 19 ನಿಯಮಗಳನ್ನೆಲ್ಲ ಮುರಿದು ಮದ್ಯ ಪಾರ್ಟಿ ನಡೆಸಿದ ದಾವಣಗೆರೆ ಯೂತ್​ ಕಾಂಗ್ರೆಸ್ ಅಧ್ಯಕ್ಷ; ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನೂ ಭಾಗಿ !

|

Updated on: May 20, 2021 | 7:44 PM

ಎಂಎಲ್​ಸಿ ಮೋಹನ್​ ಕೊಂಡಜ್ಜಿಯವರ ಸಹೋದರನ ಪುತ್ರ ನಿಖಿಲ್ ಕೊಂಡಜ್ಜಿ​ ದಾವಣಗೆರೆ ಜಿಲ್ಲಾ ಯೂತ್​ ಕಾಂಗ್ರೆಸ್​ ಅಧ್ಯಕ್ಷ. ಹರಿಹರ ತಾಲೂಕಿನ ಕೊಂಡಜ್ಜಿ ಗ್ರಾಮದಲ್ಲಿ ಎರಡು ದಿನಗಳ ಹಿಂದೆ ಇವರು ಮೋಜು-ಮಸ್ತಿ ಪಾರ್ಟಿ ಮಾಡಿದ್ದಾರೆ.

ಕೊವಿಡ್​ 19 ನಿಯಮಗಳನ್ನೆಲ್ಲ ಮುರಿದು ಮದ್ಯ ಪಾರ್ಟಿ ನಡೆಸಿದ ದಾವಣಗೆರೆ ಯೂತ್​ ಕಾಂಗ್ರೆಸ್ ಅಧ್ಯಕ್ಷ; ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನೂ ಭಾಗಿ !
ಪಾರ್ಟಿ ನಡೆದ ಸ್ಥಳ ಮತ್ತು ನಡೆಸಿದವರು
Follow us on

ದಾವಣಗೆರೆ: ಕೊರೊನಾ ತೀವ್ರವಾಗುತ್ತಿರುವ ಬೆನ್ನಲ್ಲೇ ಹಲವು ರಾಜ್ಯಾದ್ಯಂತ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಆದರೆ ದಾವಣಗೆರೆ ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಾತ್ರ ಇದೆಲ್ಲ ತನಗೆ ಸಂಬಂಧವೇ ಇಲ್ಲವೆಂಬಂತೆ ವರ್ತಿಸಿದ್ದಾರೆ. ಕೊಂಡಜ್ಜಿ ಗ್ರಾಮದಲ್ಲಿರುವ ಸ್ಕೌಟ್ಸ್​ ಆ್ಯಂಡ್ ಗೈಡ್ಸ್ ಭವನದಲ್ಲಿ ಹಾಡಹಗಲೇ ಮದ್ಯದ ಪಾರ್ಟಿ ನಡೆಸಿ ಉದ್ಧಟತನ ತೋರಿಸಿದ್ದಾರೆ. ಈ ಪಾರ್ಟಿಯಲ್ಲಿ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್​ಕರ್​ ಪುತ್ರನೂ ಭಾಗವಹಿಸಿದ್ದರು ಎಂಬದು ಗೊತ್ತಾಗಿದೆ.

ಎಂಎಲ್​ಸಿ ಮೋಹನ್​ ಕೊಂಡಜ್ಜಿಯವರ ಸಹೋದರನ ಪುತ್ರ ನಿಖಿಲ್ ಕೊಂಡಜ್ಜಿ​ ದಾವಣಗೆರೆ ಜಿಲ್ಲಾ ಯೂತ್​ ಕಾಂಗ್ರೆಸ್​ ಅಧ್ಯಕ್ಷ. ಹರಿಹರ ತಾಲೂಕಿನ ಕೊಂಡಜ್ಜಿ ಗ್ರಾಮದಲ್ಲಿ ಎರಡು ದಿನಗಳ ಹಿಂದೆ ಇವರು ಮೋಜು-ಮಸ್ತಿ ಪಾರ್ಟಿ ಮಾಡಿದ್ದಾರೆ. ಇದರಲ್ಲಿ ಯುವತಿಯರೂ ಭಾಗವಹಿಸಿದ್ದರು. ಇನ್ನು ಕೊರೊನಾ ಕಠಿಣ ನಿಯಮಗಳ ಮಧ್ಯೆ ಪಾರ್ಟಿ ಮಾಡಿದ್ದನ್ನು ಪ್ರಶ್ನೆ ಮಾಡಿದ ಸ್ಥಳೀಯ ಯುವಕರ ಮೇಲೆ ನಿಖಿಲ್​ ಹರಿಹಾಯ್ದಿದ್ದಾರೆ.

ನಿಖಿಲ್​ ಕೊಂಡಜ್ಜಿ ಎರಡು ದಿನಗಳ ಹಿಂದೆ ಮಾಡಿದ ಪಾರ್ಟಿಯ ವಿಡಿಯೋ ಇದೀಗ ವೈರಲ್ ಆಗಿದೆ. ಅಲ್ಲಿನ ಜನರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದುವರೆಗೂ ಜಿಲ್ಲಾಡಳಿತ, ಪೊಲೀಸ್​ ನಿಖಿಲ್​ ಕೊಂಡಜ್ಜಿ ವಿರುದ್ಧ ಕ್ರಮ ಕೈಗೊಂಡಿಲ್ಲ. ಶ್ರೀಮಂತರ ಮಕ್ಕಳು ಏನು ಮಾಡಿದರೂ ನಡೆಯುತ್ತದಾ? ಎಂಬ ಪ್ರಶ್ನೆಯನ್ನೂ ಸ್ಥಳೀಯರು ಎತ್ತಿದ್ದಾರೆ. ಅಲ್ಲದೆ, ಈ ಸ್ಕೌಟ್ಸ್​ ಆ್ಯಂಡ್​ ಗೈಡ್ಸ್​ ಭವನದಲ್ಲಿ ರಾಜ್ಯದ ಅಷ್ಟೇ ಅಲ್ಲ, ದೇಶದ ಹಲವು ಶಿಬಿರಗಳು ನಡೆದಿವೆ.

ಇದನ್ನೂ ಓದಿ: ಕೊವಿಡ್-19 ಮೂರನೇ ಅಲೆ ಮಕ್ಕಳನ್ನು ಗುರಿಯಾಗಿಸಲಿರುವುದರಿಂದ ಹೆಚ್ಚು ಜಾಗರೂಕರಾಗಿರುವಂತೆ ಅಧಿಕಾರಿಗಳಿಗೆ ಪ್ರಧಾನಿ ಸೂಚನೆ

COVID-19 Treatment: ಪ್ಲಾಸ್ಮಾ ಥೆರಪಿ ನಿಲ್ಲಿಸಿದ ನಂತರ ಇದೀಗ ರೆಮ್​ಡಿಸಿವಿರ್ ಔಟ್, ಇಲ್ಲಿವರೆಗೆ ಸರ್ಕಾರ ಕೈ ಬಿಟ್ಟಿರುವ ಔಷಧಿಗಳು ಯಾವುದು?