AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇವಲ 2 ಸಾವಿರ ನೆರವು ಏನಕ್ಕೆ ಸಾಲುತ್ತೆ? ಸರ್ಕಾರದ ವಿರುದ್ಧ ಮನೆಗೆಲಸದ ಕಾರ್ಮಿಕರ ಬೇಸರ

ಕೊರೊನಾ ಇಂದ ಗೃಹ ಕೆಲಸದವರಿಗೆ ಆರ್ಥಿಕ ಸಂಕಷ್ಟ ಇದೆ. ಈ ಎರಡು ಸಾವಿರ ಪರಿಹಾರ ಒಂದು ವಾರಕ್ಕೂ ಸಾಕಾಗೋದಿಲ್ಲ ಎಂದು ಟಿವಿ9ಬಳಿ ಗೀತಾ ಮೆನನ್​ ತಮ್ಮ ಬೇಸರವನ್ನು ತೋಡಿಕೊಂಡಿದ್ದಾರೆ.

ಕೇವಲ 2 ಸಾವಿರ ನೆರವು ಏನಕ್ಕೆ ಸಾಲುತ್ತೆ? ಸರ್ಕಾರದ ವಿರುದ್ಧ ಮನೆಗೆಲಸದ ಕಾರ್ಮಿಕರ ಬೇಸರ
ಸಾಂಕೇತಿಕ ಚಿತ್ರ
guruganesh bhat
|

Updated on:May 20, 2021 | 5:13 PM

Share

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿರುವ ಕೊರೊನಾ ಪ್ಯಾಕೇಜ್​ಗೆ ಗೃಹ ಕಾರ್ಮಿಕ ಸಂಘಟನೆಯ ಕಾರ್ಮಿಕರೂ ಸೇರಿದಂತೆ ಮನೆಗೆಲಸದ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ನೀಡುವ 2 ಸಾವಿರ ರೂ. ಪರಿಹಾರ ಸಾಕಾಗುವುದಿಲ್ಲ. ಕೇವಲ 2 ಸಾವಿರ ರೂಪಾಯಿ ಏನಕ್ಕೆ ತಾನೇ ಸಾಲುತ್ತದೆ? ಬೆಂಗಳೂರಿನಲ್ಲಿ ಕೊವಿಡ್​ನಿಂದ ಮನೆಗೆಲಸ ಇಲ್ಲದಂತಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ನಮ್ಮ ನೆರವಿಗೆ ಬರಬೇಕಿತ್ತು ₹ 2,000ದಲ್ಲಿ ಏನನ್ನು ಖರೀದಿಸಬಹುದು? ನಾವು ಏನು ತಿನ್ನಬೇಕು? ಎಂದು ಕೊವಿಡ್ ಪರಿಹಾರಕ್ಕೆ ಗೃಹ ಕಾರ್ಮಿಕ ಸಂಘಟನೆಯ ಗೀತಾ ಮೆನನ್​ ಆಕ್ರೋಶ ಹೊರಹಾಕಿದ್ದಾರೆ.

ಬೆಂಗಳೂರಿನಲ್ಲಿ ಕೊವಿಡ್​ನಿಂದ ಮನೆ ಕೆಲಸಕ್ಕೆ ಹೋಗಲು ಸಾಧ್ಯವಿಲ್ಲದಂತಾಗಿದೆ. ಇಂತಹ ಸಮಯದಲ್ಲಿಯೂ ಸಿಎಂ ಕೇವಲ ಎರಡು ಸಾವಿರ ಪರಿಹಾರ ನೀಡಿದ್ದಾರೆ. ಈ ಪರಿಹಾರ ಹೇಗೆ ಪಡೆಯೋ ಬಗ್ಗೆ ಕೂಡಾ ಮಾಹಿತಿ ನೀಡಿಲ್ಲ. ಕೊರೊನಾ ಇಂದ ಗೃಹ ಕೆಲಸದವರಿಗೆ ಆರ್ಥಿಕ ಸಂಕಷ್ಟ ಇದೆ. ಈ ಎರಡು ಸಾವಿರ ಪರಿಹಾರ ಒಂದು ವಾರಕ್ಕೂ ಸಾಕಾಗೋದಿಲ್ಲ ಎಂದು ಟಿವಿ9 ಬಳಿ ಗೀತಾ ಮೆನನ್​ ತಮ್ಮ ಬೇಸರವನ್ನು ತೋಡಿಕೊಂಡಿದ್ದಾರೆ.

ಆರ್ಥಿಕ ಪ್ಯಾಕೇಜ್​ನಲ್ಲಿ ಏನಿದೆ? ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿನ್ನೆ (ಮೇ 19) ಆರ್ಥಿಕ ಪ್ಯಾಕೇಜ್ ಘೋಷಿಸಿದ್ದರು. ₹1,250 ಕೋಟಿಗೂ ಹೆಚ್ಚು ಪ್ಯಾಕೇಜ್ ಘೋಷಣೆಯಲ್ಲಿ ಹೂವು ಬೆಳೆಗಾರರಿಗೆ ಹೆಕ್ಟೇರ್‌ಗೆ 10 ಸಾವಿರ ಸಹಾಯಧನ, ಇದಕ್ಕೆ 70 ಕೋಟಿ ರೂಪಾಯಿ ಖರ್ಚಾಗಲಿದೆ. ನೋಂದಣಿ ಮಾಡಿಸಿದ ಆಟೋ ಚಾಲಕರಿಗೆ ಆಟೋ, ಮ್ಯಾಕ್ಸಿ ಚಾಲಕರಿಗೆ 3 ಸಾವಿರ ರೂಪಾಯಿ, ಅಸಂಘಟಿತ ಕಾರ್ಮಿಕರಿಗೆ ತಲಾ 2 ಸಾವಿರ ರೂಪಾಯಿ ನೀಡಲಾಗುವುದು, ಇದಕ್ಕಾಗಿ 61 ಕೋಟಿ ರೂಪಾಯಿ ಖರ್ಚಾಗಲಿದೆ ಹಾಗೂ ಕಲಾವಿದರು, ಕಲಾ ತಂಡಗಳಿಗೆ ತಲಾ 3 ಸಾವಿರ ರೂ.ನಂತೆ 16,100 ಜನರಿಗೆ ನೀಡಲಾಗುವುದು  ಎಂದಿದ್ದಾರೆ.  ಇದಕ್ಕೆ 4 ಕೋಟಿ ರೂಪಾಯಿ ಖರ್ಚಾಗಲಿದೆ. ಸಾಲ ಮರು ಪಾವತಿ ದಿನಾಂಕ ಜುಲೈ ಅಂತ್ಯದವರೆಗೆ ವಿಸ್ತರಣೆ ಮಾಡುವುದಾಗಿ  ಯಡಿಯೂರಪ್ಪ ಹೇಳಿದ್ದರು.

ಹೂವು ಬೆಳೆಗಾರರಿಗೆ ಹೆಕ್ಟೇರ್‌ಗೆ 10 ಸಾವಿರ ರೂಪಾಯಿ, ಇದರಿಂದ 20,000 ಹೂವು ಬೆಳೆಗಾರರಿಗೆ ಸಹಾಯವಾಗುತ್ತದೆ. ಹಣ್ಣು, ತರಕಾರಿ ಬೆಳೆಗಾರರಿಗೆ ಹೆಕ್ಟೇರ್‌ಗೆ 10 ಸಾವಿರ ರೂ., ಇದರಿಂದ ಸುಮಾರು 69 ಸಾವಿರ ರೈತರಿಗೆ ಸಹಾಯವಾಗುತ್ತದೆ. ಆಟೋ, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ-3 ಸಾವಿರ ರೂ., ಸುಮಾರು 2.10 ಲಕ್ಷ ಚಾಲಕರಿಗೆ ಸಹಾಯಧನ ಸಿಗುತ್ತದೆ. ಕಟ್ಟಡ ಕಾರ್ಮಿಕರಿಗೆ ತಲಾ 3 ಸಾವಿರ ರೂ. ನೀಡಲಾಗುವುದು. ಇದು ನೋಂದಣಿ ಮಾಡಿಸಿಕೊಂಡ ಕಾರ್ಮಿಕರಿಗೆ ಮಾತ್ರ ಹಣ. ಕರ್ನಾಟಕ ಕಟ್ಟಡ, ಇತರೆ ನಿರ್ಮಾಣ ಕಾರ್ಮಿಕರ, ಕಲ್ಯಾಣ ಮಂಡಳಿಯಲ್ಲಿ ನೋಂದಣಿ ಮಾಡಿಸಿಕೊಂಡಿರಬೇಕು. ಸವಿತಾ ಸಮಾಜದವರಿಗೆ 2 ಸಾವಿರ ರೂಪಾಯಿ ನೆರವು. ಮಡಿವಾಳರಿಗೆ 2 ಸಾವಿರ ರೂಪಾಯಿ ನೆರವು.

ಹೂವು ಬೆಳೆಗಾರರಿಗೆ ಹೆಕ್ಟೇರ್‌ಗೆ ₹10 ಸಾವಿರ ಸಹಾಯಧನ. ಇದಕ್ಕೆ 70 ಕೋಟಿ ರೂಪಾಯಿ ಖರ್ಚಾಗಲಿದೆ. ನೋಂದಣಿ ಮಾಡಿಸಿದ ಆಟೋ ಚಾಲಕರಿಗೆ 3 ಸಾವಿರ ರೂ.

ಅಸಂಘಟಿತ ವಲಯದ ಕಾರ್ಮಿಕರಿಗೆ ತಲಾ ₹2 ಸಾವಿರ.ಇದಕ್ಕಾಗಿ 61 ಕೋಟಿ ರೂಪಾಯಿ ಖರ್ಚಾಗಲಿದೆ. ಕಲಾವಿದರು, ಕಲಾ ತಂಡಗಳಿಗೆ ತಲಾ 3 ಸಾವಿರ ರೂಪಾಯಿ. 16,100 ಜನರಿಗೆ 4 ಕೋಟಿ ರೂಪಾಯಿ ವೆಚ್ಚದಲ್ಲಿ ನೆರವು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸಾಲ ಪಾವತಿ, ಸಾಲ ಮರುಪಾವತಿ ಅವಧಿ ಜುಲೈ 31ರವರೆಗೆ ವಿಸ್ತರಣೆ. ಗರೀಬ್ ಕಲ್ಯಾಣ್ ಯೋಜನೆಯಡಿ ಪ್ರತಿ ತಿಂಗಳು 5 ಕೆಜಿ ಅಕ್ಕಿ, 30 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಈ ಯೋಜನೆ ಸಿಗಲಿದೆ. ಇದಕ್ಕಾಗಿ 180 ಕೋಟಿ ರೂಪಾಯಿ ಖರ್ಚಾಗಲಿದೆ.

ಇದನ್ನೂ ಓದಿ: ಕೊರೊನಾ ಸಂಕಷ್ಟ; ಮಕ್ಕಳ ಶಿಕ್ಷಣ ಹಕ್ಕು ರಕ್ಷಿಸುವ ಸಲುವಾಗಿ ಪರ್ಯಾಯ ಕ್ರಮಕ್ಕೆ ಸಿದ್ಧತೆ: ಸಚಿವ ಸುರೇಶ್ ಕುಮಾರ್

ರಾಜ್​ಕುಮಾರ್​ಗೆ ಯೋಗಾಸನ ಹೇಳಿಕೊಟ್ಟ ಹೊನ್ನಪ್ಪ ನಾಯ್ಕರ್​ ಕೊವಿಡ್​​ನಿಂದ ನಿಧನ

(housekeeping workers questions Karnataka govt what can we do with 2 thousand rs of Lockdown Package)

Published On - 5:08 pm, Thu, 20 May 21

‘ಎಕ್ಕ’ ಸಿನಿಮಾಕ್ಕೂ ಅಪ್ಪುವಿನ ‘ಜಾಕಿ’ ಸಿನಿಮಾಕ್ಕೂ ಲಿಂಕ್ ಏನು?
‘ಎಕ್ಕ’ ಸಿನಿಮಾಕ್ಕೂ ಅಪ್ಪುವಿನ ‘ಜಾಕಿ’ ಸಿನಿಮಾಕ್ಕೂ ಲಿಂಕ್ ಏನು?
ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ನಾವು ಎಷ್ಟೇ ಬೆಳೆದರೂ ನಮ್ಮ ಕಾಲು ನೆಲದ ಮೇಲೆ ಇರಬೇಕು: ಹರ್ಷಿಕಾ ಪೂಣಚ್ಚ
ನಾವು ಎಷ್ಟೇ ಬೆಳೆದರೂ ನಮ್ಮ ಕಾಲು ನೆಲದ ಮೇಲೆ ಇರಬೇಕು: ಹರ್ಷಿಕಾ ಪೂಣಚ್ಚ
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಓರ್ವ ಸಾವು, ನಾಲ್ವರಿಗೆ ಗಂಭೀರ
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಓರ್ವ ಸಾವು, ನಾಲ್ವರಿಗೆ ಗಂಭೀರ
Video: ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ ಕಾರು ಚಲಾಯಿಸಿದ ವ್ಯಕ್ತಿ
Video: ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ ಕಾರು ಚಲಾಯಿಸಿದ ವ್ಯಕ್ತಿ
ಇಡೀ ಕುಟುಂಬವನ್ನು ಕಳೆದುಕೊಂಡು ಅನಾಥವಾದ 11ತಿಂಗಳ ಮಗು
ಇಡೀ ಕುಟುಂಬವನ್ನು ಕಳೆದುಕೊಂಡು ಅನಾಥವಾದ 11ತಿಂಗಳ ಮಗು
‘ಗೋಲಿ ಚಲ್ ಜಾವೇಗಿ’ ಹಾಡಿಗೆ ನೃತ್ಯ ಮಾಡುತ್ತಲೇ ಗುಂಡು ಹಾರಿಸಿದ ವ್ಯಕ್ತಿ
‘ಗೋಲಿ ಚಲ್ ಜಾವೇಗಿ’ ಹಾಡಿಗೆ ನೃತ್ಯ ಮಾಡುತ್ತಲೇ ಗುಂಡು ಹಾರಿಸಿದ ವ್ಯಕ್ತಿ
ರಶ್ಮಿಕಾ ಮಂದಣ್ಣ ತಪ್ಪು ಮಾತಾಡಿದ್ದಾರೆ, ಕ್ಷಮಿಸಿ ಬಿಡೋಣ: ನಟಿ ಹರ್ಷಿಕಾ
ರಶ್ಮಿಕಾ ಮಂದಣ್ಣ ತಪ್ಪು ಮಾತಾಡಿದ್ದಾರೆ, ಕ್ಷಮಿಸಿ ಬಿಡೋಣ: ನಟಿ ಹರ್ಷಿಕಾ