AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್​ಕುಮಾರ್​ಗೆ ಯೋಗಾಸನ ಹೇಳಿಕೊಟ್ಟ ಹೊನ್ನಪ್ಪ ನಾಯ್ಕರ್​ ಕೊವಿಡ್​​ನಿಂದ ನಿಧನ

Rajkumar: ಹೊನ್ನಪ್ಪ ನಾಯ್ಕರ್​​ ಅವರಿಗೆ ಇತ್ತೀಚೆಗೆ ಕೊವಿಡ್​ ಕಾಣಿಸಿಕೊಂಡಿತ್ತು. ಆದರೆ, ಅವರಿಗೆ ಚಿಕಿತ್ಸೆ ಫಲಕಾರಿಯಾಗಿಲ್ಲ. ಇಂದು ಬೆಳಗ್ಗೆ ಅವರು ನಿಧನ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.

ರಾಜ್​ಕುಮಾರ್​ಗೆ ಯೋಗಾಸನ ಹೇಳಿಕೊಟ್ಟ ಹೊನ್ನಪ್ಪ ನಾಯ್ಕರ್​ ಕೊವಿಡ್​​ನಿಂದ ನಿಧನ
ಹೊನ್ನಪ್ಪ ನಾಯ್ಕರ್​-ರಾಜ್​ಕುಮಾರ್
ರಾಜೇಶ್ ದುಗ್ಗುಮನೆ
| Edited By: |

Updated on:May 20, 2021 | 4:23 PM

Share

 ಕೊರೊನಾ ವೈರಸ್​ ಮಿತಿಮೀರಿ ಹರಡುತ್ತಿದೆ. ಚಿತ್ರರಂಗದ ಸಾಕಷ್ಟು ಮಂದಿ ಕೊರೊನಾದಿಂದ ಬಲಿಯಾಗುತ್ತಿದ್ದಾರೆ. ನಿತ್ಯ ಲಕ್ಷಾಂತರ ಕೊವಿಡ್​ ಕೇಸ್​​ಗಳು ವರದಿಯಾಗುತ್ತಿರುವುದು ಸಾಕಷ್ಟು ಆತಂಕ ಸೃಷ್ಟಿಸಿದೆ. ಈಗ, ವರನಟ ಡಾಕ್ಟರ್ ರಾಜ್​ಕುಮಾರ್ ಸೇರಿದಂತೆ ಅವರ ಕುಟುಂಬದವರಿಗೆ ಯೋಗಾಸನ ಹೇಳಿಕೊಡುತ್ತಿದ್ದ ಹೊನ್ನಪ್ಪ ನಾಯ್ಕರ್ ಮೃತಪಟ್ಟಿದ್ದಾರೆ. ಅವರಿಗೆ ಸುಮಾರು 90 ವರ್ಷ ವಯಸ್ಸಾಗಿತ್ತು.

ಹೊನ್ನಪ್ಪ ನಾಯ್ಕರ್​​ ಅವರಿಗೆ ಇತ್ತೀಚೆಗೆ ಕೊವಿಡ್​ ಕಾಣಿಸಿಕೊಂಡಿತ್ತು. ಆದರೆ, ಅವರಿಗೆ ಚಿಕಿತ್ಸೆ ಫಲಕಾರಿಯಾಗಿಲ್ಲ. ಇಂದು (ಮೇ 20) ಬೆಳಗ್ಗೆ ಅವರು ನಿಧನ ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಇವರು  ಪೊಲೀಸ್ ಇಲಾಖೆಯಲ್ಲಿ ಈ ಹಿಂದೆ ಕಾರ್ಯನಿರ್ವಹಿಸಿದ್ದರು ಎಂಬುದು ವಿಶೇಷ.

ಹೊನ್ನಪ್ಪ ನಾಯ್ಕರ್ ರಾಜ್​ಕುಮಾರ್  ಮತ್ತು ಅವರ ಕುಟುಂಬದವರಿಗೆ ಯೋಗಾಸನವನ್ನು ಹೇಳಿಕೊಡುತ್ತಿದ್ದರು. ಅಲ್ಲದೆ ಗಣ್ಯವ್ಯಕ್ತಿಗಳಿಗೆ ಅವರು ಯೋಗಾಸನ ಹೇಳಿಕೊಡುತ್ತಿದ್ದರು. ಇವರಿಗೆ ಮೂರು ಗಂಡು ಮಕ್ಕಳಿದ್ದಾರೆ. ಹೊನ್ನಪ್ಪ ನಾಯ್ಕರ್​ ಬೆಂಗಳೂರಿನ ಜೆ.ಪಿ. ನಗರದಲ್ಲಿ ವಾಸವಿದ್ದರು. ಕನಕಪುರದ ಬಳಿ ಇವರ ಯೋಗಾಶ್ರಮವಿದೆ.

ಇವರ ಅಂತ್ಯಕ್ರಿಯೆಯನ್ನು ಕನಕಪುರದ ನಾಗದೇವನಹಳ್ಳಿ ಬಳಿ ನೆರವೇರಿಸಲು ಅವರ ಕುಟುಂಬಸ್ಥರು  ತೀರ್ಮಾನಿಸಿದ್ದಾರೆ. ಹೊನ್ನಪ್ಪ ನಾಯ್ಕರ್ ಅವರ ಆತ್ಮೀಯರಾದ ಎಸ್.ಎ. ಚಿನ್ನೇಗೌಡ ಅವರು  ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಕೋರಿದ್ದಾರೆ.

ರಾಜ್​ಕುಮಾರ್ ಅವರು ಯೋಗಾಸನದಲ್ಲಿ ಪಳಗಿದ್ದರು. ಹಾಗಂತ ಅವರು ಚಿಕ್ಕ ವಯಸ್ಸಿನಿಂದ ಯೋಗಾಸನ ಆರಂಭಿಸಿದವರಲ್ಲ. ಆದಾಗ್ಯೂ, ಯೋಗಾಸನದಲ್ಲಿ ಪಳಗಿದ್ದರು. ಇದಕ್ಕೆ ಹೊನ್ನಪ್ಪ ನಾಯ್ಕರ್ ಅವರ ಕೊಡುಗೆ ದೊಡ್ಡದಿದೆ.

ಸೆಲೆಬ್ರಿಟಿಗಳ ವಲಯದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮೆರೆಯುತ್ತಿದೆ. ಪ್ರತಿದಿನ ಒಬ್ಬರಲ್ಲ ಒಬ್ಬರು ಕೊವಿಡ್​ಗೆ ಬಲಿಯಾಗುತ್ತಿದ್ದಾರೆ. ಬಾಲಿವುಡ್​, ಸ್ಯಾಂಡಲ್​ವುಡ್​ ಹಾಗೂ ಕಾಲಿವುಡ್​ನಲ್ಲಿ ಸಾಕಷ್ಟು ಜನರು ಕೊವಿಡ್​ಗೆ ಬಲಿಯಾಗಿದ್ದಾರೆ.

ಇದನ್ನೂ ಓದಿ: RCB: ರಾಜ್​ಕುಮಾರ್ ಹುಟ್ಟುಹಬ್ಬಕ್ಕೆ ‘ಬಭ್ರುವಾಹನ’ ಸಿನಿಮಾ ಹಾಡಿನ ಸಾಲು ಬರೆದು ಶುಭಕೋರಿದ ಆರ್​ಸಿಬಿ!

550ಕ್ಕೂ ಹೆಚ್ಚು ಬಾರಿ ರೀ-ರಿಲೀಸ್​ ಆದ ಶಿವರಾಜ್​ಕುಮಾರ್​-ಉಪೇಂದ್ರ ಓಂ ಚಿತ್ರಕ್ಕೆ 26 ವರ್ಷ; ಸಿನಿಮಾ ಮಾಡಿದ ದಾಖಲೆಗಳೆಷ್ಟು?

Published On - 3:58 pm, Thu, 20 May 21

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More