AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB: ರಾಜ್​ಕುಮಾರ್ ಹುಟ್ಟುಹಬ್ಬಕ್ಕೆ ‘ಬಭ್ರುವಾಹನ’ ಸಿನಿಮಾ ಹಾಡಿನ ಸಾಲು ಬರೆದು ಶುಭಕೋರಿದ ಆರ್​ಸಿಬಿ!

ರಾಜ್‌ಕುಮಾರ್ ಮತ್ತು ಆರ್‌ಸಿಬಿ ಎರಡನ್ನೂ ಹೇಳಲು ಕಾರಣವಿದೆ. ವರನಟ ಡಾ. ರಾಜ್‌ಕುಮಾರ್ ಹುಟ್ಟುಹಬ್ಬದ ದಿನವಾದ ಇಂದು, ಆರ್‌ಸಿಬಿ ತಂಡ ವಿಭಿನ್ನ ರೀತಿಯಲ್ಲಿ ಶುಭಾಶಯ ಕೋರಿದೆ.

RCB: ರಾಜ್​ಕುಮಾರ್ ಹುಟ್ಟುಹಬ್ಬಕ್ಕೆ ‘ಬಭ್ರುವಾಹನ’ ಸಿನಿಮಾ ಹಾಡಿನ ಸಾಲು ಬರೆದು ಶುಭಕೋರಿದ ಆರ್​ಸಿಬಿ!
ಡಾ. ರಾಜ್​ಕುಮಾರ್ ಮತ್ತು ಆರ್​ಸಿಬಿ ಚಿಹ್ನೆ
TV9 Web
| Edited By: |

Updated on:Nov 30, 2021 | 12:11 PM

Share

ಕನ್ನಡ ಭಾಷಿಕರಿಗೆ ಯಾರ್ಯಾರು ಇಷ್ಟ ಎಂದು ಕೇಳಿದರೆ ಡಾ. ರಾಜ್‌ಕುಮಾರ್ ಹೆಸರು ಆ ಪಟ್ಟಿಯಲ್ಲಿ ಇಲ್ಲದೇ ಇರದು. ಸಿನಿಮಾ, ನಟನೆ, ರಂಗಭೂಮಿಯ ಮಟ್ಟಿಗೆ ಕ್ಲಾಸ್ ಆಗಿಯೂ ಮಾಸ್ ಆಗಿಯೂ ಅಭಿಮಾನಿ ವರ್ಗವನ್ನು ಸೆಳೆದಿಟ್ಟುಕೊಂಡು, ಸಿನಿರಂಗದಲ್ಲಿ ಕೀರ್ತಿಯ ಉತ್ತುಂಗಕ್ಕೆ ಏರಿದವರು ಡಾ. ರಾಜ್‌ಕುಮಾರ್. ಅಚ್ಚ-ಸ್ವಚ್ಛ ಕನ್ನಡದ ಮೂಲಕ ಎಂಥವರೂ ಹೆಮ್ಮೆ ಪಡುವಂತೆ ಸಂಭಾಷಣೆ ಹೇಳಿದವರು.‌ ಹಾಡು ಹಾಡಿದವರು. ಪೌರಾಣಿಕ, ಸಾಮಾಜಿಕ ಇತ್ಯಾದಿ ಬಗೆಬಗೆಯ ಚಿತ್ರಗಳಲ್ಲಿ ಕಾಣಿಸಿಕೊಂಡವರು. ಕನ್ನಡಿಗರಿಗೆ ಡಾ. ರಾಜ್‌ಕುಮಾರ್ ಮೇಲಿರುವ ಪ್ರೀತಿ ವಿವರಿಸಲು ಅಸಾಧ್ಯ.

ಇದು ಒಂದು ಕಡೆಯಾದರೆ, ಕನ್ನಡದ ಕ್ರಿಕೆಟ್ ಪ್ರೇಮಿಗಳ‌ ಮತ್ತೊಂದು ಹೆಮ್ಮೆ ಆರ್‌ಸಿಬಿ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂಬ ಇಂಡಿಯನ್ ಪ್ರೀಮಿಯರ್ ಲೀಗ್‌ನ ಕ್ರಿಕೆಟ್ ತಂಡ ಬೆಂಗಳೂರಿನ ಜನರಿಗಂತೂ ಅಚ್ಚುಮೆಚ್ಚು. ಆರ್‌ಸಿಬಿ ತಂಡದ ಅಂತಾರಾಷ್ಟ್ರೀಯ ಮಟ್ಟದ ಆಟಗಾರರು ಕೂಡ ಕನ್ನಡದ ಬಗ್ಗೆ ಅಭಿಮಾನ ತೋರುವಷ್ಟು ಪ್ರೀತಿ ತೋರಿಸಿದ್ದಾರೆ ಕನ್ನಡದ ಕ್ರಿಕೆಟ್ ಪ್ರೇಮಿಗಳು.

ರಾಜ್‌ಕುಮಾರ್ ಮತ್ತು ಆರ್‌ಸಿಬಿ ಎರಡನ್ನೂ ಹೇಳಲು ಕಾರಣವಿದೆ. ವರನಟ ಡಾ. ರಾಜ್‌ಕುಮಾರ್ ಹುಟ್ಟುಹಬ್ಬದ ದಿನವಾದ ಇಂದು, ಆರ್‌ಸಿಬಿ ತಂಡ ವಿಭಿನ್ನ ರೀತಿಯಲ್ಲಿ ಶುಭಾಶಯ ಕೋರಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು, ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಕನ್ನಡದಲ್ಲೇ ಟ್ವೀಟ್ ಮಾಡಿ ರಾಜ್‌ಕುಮಾರ್‌ ಹುಟ್ಟುಹಬ್ಬವನ್ನು ಸಂಭ್ರಮಿಸಿದೆ. ಅದಕ್ಕೆ ಡಾ. ರಾಜ್‌ರ ಬಭ್ರುವಾಹನ ಸಿನಿಮಾದ ಹಾಡಿನ ಸಾಲನ್ನೂ ಬಳಸಿಕೊಂಡಿದೆ.

‘ಯಾರು ತಿಳಿಯರು‌ ನಿನ್ನ ಭುಜಬಲದ ಪರಾಕ್ರಮ’ ಎಂಬ ಸಾಲು ಬರೆದುಕೊಂಡಿದ್ದು, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ 92ನೇ ಜನ್ಮಮಹೋತ್ಸವದ ನೆನಪಿನಲ್ಲಿ ಎಂದು ಶುಭಕೋರಿದೆ. ರಾಜ್ ನೆನಪು, ನಮ್ಮ ಆರ್‌ಸಿಬಿ ಹ್ಯಾಷ್‌ಟ್ಯಾಗ್‌ಗಳನ್ನು ಬಳಸಿಕೊಂಡಿದೆ.

ಇದನ್ನೂ ಓದಿ: IPL 2021: ಆರ್​ಸಿಬಿಯಲ್ಲಿ ಇಬ್ಬರು 360 ಡಿಗ್ರಿ ಆಟಗಾರರಿದ್ದಾರೆ, ಬೌಲರ್ಸ್ ಆದ್ರೂ ಏನ್ ಮಾಡ್ಬೇಕು?: ಸುನಿಲ್ ಗಾವಸ್ಕರ್

Dr. Rajkumar Birth Anniversary: ರಾಜ್​ಕುಮಾರ್​ ಜತೆ ಫೋಟೋ ತೆಗೆಸಿಕೊಳ್ಳಲು ಲವರ್​​ ಕಾಯಿಸಿದ್ದೆ

(RCB wishes Dr Rajkumar on his 92nd Birthday tweets Babhruvahana Cinema Song Lyrics in Kannada)

Published On - 6:28 pm, Sat, 24 April 21

ಮಾಧ್ಯಮದ ಕ್ಯಾಮೆರಾ​​​ ನೋಡುತ್ತಿದ್ದಂತೆ ಮುಖ ಮುಚ್ಚಿಕೊಂಡ ಯುವತಿ
ಮಾಧ್ಯಮದ ಕ್ಯಾಮೆರಾ​​​ ನೋಡುತ್ತಿದ್ದಂತೆ ಮುಖ ಮುಚ್ಚಿಕೊಂಡ ಯುವತಿ
New Year 2026 Live: ನ್ಯೂ ಇಯರ್; ರಾಜ್ಯದ ಉದ್ದಗಲಕ್ಕೂ ಸಂಭ್ರಮ ಜೋರು
New Year 2026 Live: ನ್ಯೂ ಇಯರ್; ರಾಜ್ಯದ ಉದ್ದಗಲಕ್ಕೂ ಸಂಭ್ರಮ ಜೋರು
ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ
ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ