ಈ ಎರಡು ದಾಖಲೆಗಳಲ್ಲಿ ಅಣ್ಣಾವ್ರು ಮತ್ತು ಸಚಿನ್ಗೆ ಸಾಟಿ ಯಾರೂ ಇಲ್ಲ!
Dr Rajkumar and Sachin Tendulkar Birthday: ಚಿತ್ರರಂಗದಲ್ಲಿ ಅಣ್ಣಾವ್ರು ಮಾಡಿದ ಸಾಧನೆಯನ್ನು ಸಿಪ್ರಿಯರು ಮರೆಯಲು ಸಾಧ್ಯವಿಲ್ಲ. ಕ್ರಿಕೆಟ್ ಲೋಕದಲ್ಲಿ ಸಚಿನ್ ಅವರಿಗೆ ಸರಿಸಮನಾಗಿ ಇನ್ನೊಬ್ಬರ ಆಟಗಾರ ಬರಲೇ ಇಲ್ಲ.
ಭಾರತೀಯ ಚಿತ್ರರಂಗದ ಮೇರುನಟ ಡಾ. ರಾಜ್ಕುಮಾರ್ ಮತ್ತು ಕ್ರಿಕೆಟ್ ದೇವರು ಎನಿಸಿಕೊಂಡ ಸಚಿನ್ ತೆಂಡುಲ್ಕರ್ ಅವರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಇಂದು (ಏ.24) ಈ ಮಹಾನ್ ಸಾಧಕರಿಬ್ಬರ ಜನ್ಮದಿನ. ಇಬ್ಬರಿಗೂ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಮಳೆ ಸುರಿಸಲಾಗುತ್ತಿದೆ. ಚಿತ್ರರಂಗದಲ್ಲಿ ಅಣ್ಣಾವ್ರು ಮಾಡಿದ ಸಾಧನೆಯನ್ನು ಸಿಪ್ರಿಯರು ಮರೆಯಲು ಸಾಧ್ಯವಿಲ್ಲ. ಕ್ರಿಕೆಟ್ ಲೋಕದಲ್ಲಿ ಸಚಿನ್ ಅವರಿಗೆ ಸರಿಸಮನಾಗಿ ಇನ್ನೊಬ್ಬರ ಆಟಗಾರ ಬರಲೇ ಇಲ್ಲ. ಇವರಿಬ್ಬರ ಹೆಸರಿನಲ್ಲೂ ಒಂದು ಅಪರೂಪದ ದಾಖಲೆ ಇದೆ.
ಕೋಟ್ಯಂತರ ಜನರಿಗೆ ಸ್ಫೂರ್ತಿ ಆಗಿರುವ ಸಚಿನ್ ತೆಂಡುಲ್ಕರ್ ಮಾಡಿದ ದಾಖಲೆಗಳು ಹಲವು. ಅತಿ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಆಟಗಾರ ಎಂಬ ಖ್ಯಾತಿ ಸಚಿನ್ಗೆ ಸಲ್ಲುತ್ತದೆ. ತಮ್ಮ ವೃತ್ತಿಜೀವನದಲ್ಲಿ ಅವರು 463 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅತಿ ಹೆಚ್ಚು, ಅಂದರೆ 200 ಟೆಸ್ಟ್ ಮ್ಯಾಚ್ ಆಡಿದ ಏಕೈಕ ಆಟಗಾರ ಸಚಿನ್. ಸದ್ಯಕ್ಕೆ ಈ ದಾಖಲೆಯನ್ನು ಯಾರೂ ಮುರಿದಿಲ್ಲ.
ಅಂಕಿಸಂಖ್ಯೆಯ ವಿಚಾರದಲ್ಲಿ ಡಾ. ರಾಜ್ಕುಮಾರ್ ಅವರದ್ದು ಕೂಡ ಇಂಥದ್ದೇ ಒಂದು ಸಾಧನೆ ಇದೆ. ನಾಯಕ ನಟನಾಗಿ ಅತಿ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ ಕಲಾವಿದ ಎಂದರೆ ಅದು ಅಣ್ಣಾವ್ರು ಮಾತ್ರ. ಡಾ. ರಾಜ್ ನಟಿಸಿದ ಒಟ್ಟು ಸಿನಿಮಾಗಳ ಸಂಖ್ಯೆ 206. ಅವುಗಳಲ್ಲಿ ‘ಭಾಗ್ಯವಂತ’ ಮತ್ತು ‘ಗಂಧದ ಗುಡಿ-2’ ಸಿನಿಮಾದಲ್ಲಿ ಅವರು ಅತಿಥಿ ಪಾತ್ರ ಮಾಡಿದ್ದರು. ಇನ್ನುಳಿದಂತೆ ಎಲ್ಲ ಸಿನಿಮಾಗಳಲ್ಲಿಯೂ ಅವರು ಹೀರೋ ಆಗಿದ್ದರು. ನಾಯಕನಟನಾಗಿ 204 ಚಿತ್ರಗಳಲ್ಲಿ ಅವರು ನಟಿಸಿದರು.
ಕನ್ನಡದಲ್ಲಿ ಬೇರೆ ಯಾವುದೇ ನಟ ಕೂಡ ಹೀರೋ ಆಗಿ ಇಷ್ಟು ಸಿನಿಮಾಗಳಲ್ಲಿ ನಟಿಸಿಲ್ಲ. ಬೇರೆ ಕಲಾವಿದರು ಪೋಷಕ ನಟರಾಗಿ 600ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದುಂಟು. ಆದರೆ ನಾಯಕನಟನಾಗಿ ಅಣ್ಣಾವ್ರದ್ದು ಸಾಧನೆ. ನಟ ಸಾರ್ವಭೌಮ ಅಭಿನಯಿಸಿದ ಬಹುತೇಕ ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು. ಇಂದಿಗೂ ಅವರ ಚಿತ್ರಗಳನ್ನು ಜನರು ಕಣ್ಣರಳಿಸಿ ನೋಡುತ್ತಾರೆ. ಕಸ್ತೂರಿ ನಿವಾಸ ಚಿತ್ರ ಕೆಲವೇ ವರ್ಷಗಳ ಹಿಂದೆ ಮರುಬಿಡುಗಡೆ ಆದಾಗ ಇಂದಿನ ಪೀಳಿಗೆ ಪ್ರೇಕ್ಷಕರು ಕೂಡ ಥಿಯೇಟರ್ಗೆ ಮುಗಿಬಿದ್ದಿದ್ದರು.
ಇದನ್ನೂ ಓದಿ: Dr. Rajkumar: ವಿಶೇಷ ಸಿಹಿ ತಿನಿಸಿಗೆ ರಾಜ್ ಲಡ್ಡು ಎಂದು ಅಣ್ಣಾವ್ರ ಹೆಸರು ಇಟ್ಟಿದ್ದಕ್ಕೆ ಇಲ್ಲಿದೆ ಇಂಟರೆಸ್ಟಿಂಗ್ ಕಾರಣ
Dr. Rajkumar Birth Anniversary: ರಾಜ್ಕುಮಾರ್ ಜತೆ ಫೋಟೋ ತೆಗೆಸಿಕೊಳ್ಳಲು ಲವರ್ ಕಾಯಿಸಿದ್ದೆ
(Dr Rajkumar and Sachin Tendulkar Birthday: Unique records of these two Indian legends)