AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಧುರಂಧರ್ 2’ ಚಿತ್ರಕ್ಕಿಂತ ‘ಟಾಕ್ಸಿಕ್’ ಚಿತ್ರಕ್ಕೆ ಸಿಕ್ತು ಹೆಚ್ಚುವರಿ 1200 ಪರದೆಗಳು?

ಮಾರ್ಚ್ 19ರಂದು ‘ಟಾಕ್ಸಿಕ್’ ಮತ್ತು ‘ಧುರಂಧರ್ 2’ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಸೆಣಸಲಿವೆ. ಯಶ್ ನಟನೆಯ ‘ಟಾಕ್ಸಿಕ್’ ಚಿತ್ರಕ್ಕೆ ‘ಧುರಂಧರ್ 2’ ಗಿಂತ ಹೆಚ್ಚುವರಿಯಾಗಿ 1200 ಸ್ಕ್ರೀನ್‌ಗಳು ಸಿಗುವ ಸಾಧ್ಯತೆಯಿದೆ. ಯಶ್ ಕಥೆ ಬರೆದು ನಿರ್ಮಾಣದಲ್ಲಿ ಕೈ ಜೋಡಿಸಿರುವುದು ಪ್ರಮುಖ ಆಕರ್ಷಣೆ. ಮೊದಲ ದಿನದ ಕಲೆಕ್ಷನ್‌ನಲ್ಲೂ ‘ಟಾಕ್ಸಿಕ್’ ಭಾರಿ ಮುನ್ನಡೆ ಸಾಧಿಸುವ ನಿರೀಕ್ಷೆಯಿದೆ.

‘ಧುರಂಧರ್ 2’ ಚಿತ್ರಕ್ಕಿಂತ ‘ಟಾಕ್ಸಿಕ್’ ಚಿತ್ರಕ್ಕೆ ಸಿಕ್ತು ಹೆಚ್ಚುವರಿ 1200 ಪರದೆಗಳು?
ರಣವೀರ್-ಯಶ್
ರಾಜೇಶ್ ದುಗ್ಗುಮನೆ
|

Updated on:Feb 23, 2026 | 1:42 PM

Share

‘ಧುರಂಧರ್ 2’ vs ‘ಟಾಕ್ಸಿಕ್’ ಫೈಟ್​​ಗೆ ವೇದಿಕೆ ಸಿದ್ಧವಾಗುತ್ತಿದೆ. ಮಾರ್ಚ್ 19ರಂದು ಎರಡೂ ಸಿನಿಮಾಗಳು ಮುಖಾ ಮುಖಿ ಆಗುತ್ತಿವೆ. ಈ ಎರಡು ಸಿನಿಮಾಗಳ ಪೈಕಿ ಯಾರು ಗೆಲ್ಲುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಿಗೆ ಮೂಡಿದೆ. ಹೀಗಿರುವಾಗಲೇ, ‘ಟಾಕ್ಸಿಕ್’ ಸಿನಿಮಾಗೆ (Toxic Movie) ‘ಧುರಂಧರ್ 2’ ಚಿತ್ರಕ್ಕಿಂತ ಹೆಚ್ಚುವರಿಯಾಗಿ 1200 ಸ್ಕ್ರೀನ್​​ಗಳು ಸಿಗಲಿವೆ ಎಂದು ಹೇಳಲಾಗುತ್ತಾ ಇದೆ.

‘ಧುರಂಧರ್ 2’ ಸಿನಿಮಾ ಬಗ್ಗೆ ಒಂದು ವರ್ಗದ ಜನರಿಗೆ ನಿರೀಕ್ಷೆ ಇದೆ. ಈಗಾಗಲೇ ರಿಲೀಸ್ ಆಗಿರುವ ಮೊದಲ ಪಾರ್ಟ್​ ಹಲ್​ಚಲ್ ಎಬ್ಬಿಸಿರುವುದರಿಂದ ಎರಡನೇ ಪಾರ್ಟ್ ಇಷ್ಟ ಆಗಬಹುದು ಎಂದು ಹೇಳಲಾಗುತ್ತಾ ಇದೆ. ‘ಟಾಕ್ಸಿಕ್’ ಚಿತ್ರದ ಬಗ್ಗೆ ನಿರೀಕ್ಷೆ ಹುಟ್ಟಲು ಕಾರಣ ಆಗಿದ್ದು ಯಶ್. ‘ಕೆಜಿಎಫ್ 2’ ಚಿತ್ರದ ಬಳಿಕ ಅವರು ಮತ್ತೊಂದು ಹಂತಕ್ಕೆ ಹೋಗಿದ್ದಾರೆ. ಈಗ ‘ಟಾಕ್ಸಿಕ್’ ಚಿತ್ರಕ್ಕೆ ಗೀತು ಮೋಹನ್​ ದಾಸ್ ಜೊತೆ ಅವರು ಕೂಡ ಕಥೆ ಬರೆದು, ಸಿನಿಮಾ ನಿರ್ಮಾಣದಲ್ಲಿ ಅವರು ಕೈ ಜೋಡಿಸಿದ್ದಾರೆ.

ಇದನ್ನೂ ಓದಿ: ಕೇರಳದಲ್ಲಿ ಡಾಮಿನೇಷನ್ ಮಾಡಲು ರೆಡಿ ಆದ ‘ಟಾಕ್ಸಿಕ್’; ದೊಡ್ಡ ಸಂಸ್ಥೆ ಪಾಲಾಯ್ತು ಹಂಚಿಕೆ ಹಕ್ಕು

ಈಗ ಕೇಳಿ ಬರುತ್ತಿರುವ ಮಾಹಿತಿ ಪ್ರಕಾರ ‘ಟಾಕ್ಸಿಕ್’ ಚಿತ್ರಕ್ಕೆ ಭಾರತಾದ್ಯಂತ ಸುಮಾರು 5,500 ಪರದೆಗಳು ಸಿಗುವ ಸಾಧ್ಯತೆ ಇದೆ. ‘ಧುರಂಧರ್ 2’ ಚಿತ್ರಕ್ಕೆ 4,300 ಪರದೆಗಳು ಸಿಗಲಿವೆ ಎಂದು ಹೇಳಲಾಗುತ್ತಾ ಇದೆ. ಹೀಗಾದಲ್ಲಿ ಯಶ್​ ಚಿತ್ರಕ್ಕೆ ಹೆಚ್ಚಿನ ಮೈಲೇಜ್ ಸಿಗಲಿದೆ.

ಮೊದಲ ದಿನದ ಕಲೆಕ್ಷನ್ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ‘ಧುರಂಧರ್ 2’ ಸಿನಿಮಾ ಮೊದಲ ದಿನ ಭಾರತದಲ್ಲಿ 80-100 ಕೋಟಿ ರೂಪಾಯಿ ಕಲೆಕ್ಷನ್ ಮಾಡಬಹುದು ಎನ್ನಲಾಗುತ್ತಿದೆ. ‘ಟಾಕ್ಸಿಕ್’ ಸಿನಿಮಾ 260 ಕೋಟಿ ರೂಪಾಯಿಗೂ ಹೆಚ್ಚಿನ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ಹಾಗಾದಲ್ಲಿ ಯಶ್ ಚಿತ್ರಕ್ಕೆ ದೊಡ್ಡ ಗೆಲುವು ಸಿಕ್ಕಂತೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 1:41 pm, Mon, 23 February 26

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More