IPL 2021: ಆರ್ಸಿಬಿಯಲ್ಲಿ ಇಬ್ಬರು 360 ಡಿಗ್ರಿ ಆಟಗಾರರಿದ್ದಾರೆ, ಬೌಲರ್ಸ್ ಆದ್ರೂ ಏನ್ ಮಾಡ್ಬೇಕು?: ಸುನಿಲ್ ಗಾವಸ್ಕರ್
ಆರ್ಸಿಬಿ ತಂಡದಲ್ಲಿ ಇಬ್ಬರು 360 ಡಿಗ್ರಿ ಬ್ಯಾಟ್ಸ್ಮನ್ಗಳು ಇದ್ದಾರೆ. ಬೌಲರ್ಗಳು ಇಬ್ಬರು ಮಿಸ್ಟರ್ 360 ಆಟಗಾರರಿಗೆ ಬೌಲಿಂಗ್ ಮಾಡಬೇಕಾಗಿದೆ ಎಂದು ಹೇಳಿದ್ದಾರೆ. ಒಬ್ಬ ಮಿಸ್ಟರ್ 360 ಡಿಗ್ರಿ ಯಾರೆಂದು ಹೊಸದಾಗಿ ಹೇಳಬೇಕಾದ್ದಿಲ್ಲ. ಎಬಿ ಡಿವಿಲಿಯರ್ಸ್ ಎಂದು ಎಲ್ಲರಿಗೂ ಗೊತ್ತಿದೆ.
ಐಪಿಎಲ್ 2021 ಟೂರ್ನಿಯ ಆರಂಭಿಕ ನಾಲ್ಕು ಪಂದ್ಯಗಳನ್ನು ಗೆಲ್ಲುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿಯ ಫೇವರಿಟ್ ತಂಡ ಎನಿಸಿಕೊಂಡಿದೆ. ನಾಯಕ ವಿರಾಟ್ ಕೊಹ್ಲಿ, ಯುವ ಆಟಗಾರ ದೇವದತ್ ಪಡಿಕ್ಕಲ್, ಅದ್ಭುತ ಆಟಗಾರ ಎಬಿ ಡಿವಿಲಿಯರ್ಸ್, ಈ ಬಾರಿ ಆರ್ಸಿಬಿಯಲ್ಲಿ ಮಿಂಚುತ್ತಿರುವ ಗ್ಲೆನ್ ಮ್ಯಾಕ್ಸ್ವೆಲ್ ಎಲ್ಲರೂ ಫಾರ್ಮ್ ಕಂಡುಕೊಂಡಿದ್ದಾರೆ. ಬೌಲಿಂಗ್ ವಿಭಾಗವು ಕೂಡ ಬಲಿಷ್ಠವಾಗಿದೆ. ಹರ್ಷಲ್ ಪಟೇಲ್, ಸಿರಾಜ್ ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ. ಆರ್ಸಿಬಿ ಪ್ರದರ್ಶನ ಹಾಗೂ ಆಟಗಾರರ ಬಗ್ಗೆ ವಿವಿಧ ಕ್ರಿಕೆಟಿಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಸುನಿಲ್ ಗಾವಸ್ಕರ್ ಕೂಡ ಆರ್ಸಿಬಿ ದಾಂಡಿಗರ ಬಗ್ಗೆ ಮಾತನಾಡಿದ್ದಾರೆ.
ಆರ್ಸಿಬಿ ತಂಡದಲ್ಲಿ ಇಬ್ಬರು 360 ಡಿಗ್ರಿ ಬ್ಯಾಟ್ಸ್ಮನ್ಗಳು ಇದ್ದಾರೆ. ಬೌಲರ್ಗಳು ಇಬ್ಬರು ಮಿಸ್ಟರ್ 360 ಆಟಗಾರರಿಗೆ ಬೌಲಿಂಗ್ ಮಾಡಬೇಕಾಗಿದೆ ಎಂದು ಹೇಳಿದ್ದಾರೆ. ಒಬ್ಬ ಮಿಸ್ಟರ್ 360 ಡಿಗ್ರಿ ಯಾರೆಂದು ಹೊಸದಾಗಿ ಹೇಳಬೇಕಾದ್ದಿಲ್ಲ. ಎಬಿ ಡಿವಿಲಿಯರ್ಸ್ ಎಂದು ಎಲ್ಲರಿಗೂ ಗೊತ್ತಿದೆ. ಎರಡನೇ ಮಿಸ್ಟರ್ 360 ಆಟಗಾರ ಮತ್ಯಾರೂ ಅಲ್ಲ. ಅದುವೇ ಗ್ಲೆನ್ ಮ್ಯಾಕ್ಸ್ವೆಲ್. ಮ್ಯಾಕ್ಸಿ ಆಟವನ್ನು ಉದ್ದೇಶಿಸಿ ಸುನಿಲ್ ಗವಾಸ್ಕರ್ ಹೀಗೆ ಹೇಳಿದ್ದಾರೆ.
ಕಳೆದ ಬಾರಿಯ ಟೂರ್ನಿಯ 13 ಪಂದ್ಯದಲ್ಲಿ ಕೇವಲ 108 ರನ್ ಗಳಿಸಿದ್ದ ಮ್ಯಾಕ್ಸ್ವೆಲ್, ಈ ಬಾರಿ ಕೇವಲ 3 ಪಂದ್ಯವಾಡಿ ಅದಕ್ಕೂ ಹೆಚ್ಚು ರನ್ ಪೇರಿಸಿದ್ದಾರೆ. 39, 59 ಮತ್ತು 78 ರನ್ ಗಳಿಸಿ ಆರ್ಸಿಬಿ ಯಶಸ್ಸಿಗೆ ಕಾರಣರಗುತ್ತಿದ್ದಾರೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿದ ಸುನಿಲ್ ಗಾವಸ್ಕರ್, ಆಸ್ಟ್ರೇಲಿಯಾದ ಮ್ಯಾಕ್ಸ್ವೆಲ್ ಮತ್ತೊಬ್ಬ 360 ಆಟಗಾರ ಎಂದು ಹೇಳಿದ್ದಾರೆ. ಮ್ಯಾಕ್ಸ್ವೆಲ್ ಆಡುತ್ತಿರುವ ರೀತಿ, ಅವರ ರಿವರ್ಸ್ ಸ್ವೀಪ್, ಸ್ಕೂಪ್ ಶಾಟ್ಗಳು, ಸ್ವಿಚ್ ಹಿಟ್ ಮುಂತಾದವು ಅತ್ಯುತ್ತಮವಾಗಿದೆ. ಈ ಬಾರಿ ಮ್ಯಾಕ್ಸ್ವೆಲ್ರನ್ನು ಹಿಡಿದಿಡುವುದು ಸುಲಭವಲ್ಲ. ಅವರು ಆರ್ಸಿಬಿಯ ಮತ್ತೊಬ್ಬ 360 ಡಿಗ್ರಿ ದಾಂಡಿಗ ಎಂದು ಹೇಳಿದ್ದಾರೆ.
ಮ್ಯಾಕ್ಸ್ವೆಲ್, ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಮೇಲಿರುವ ಒತ್ತಡವನ್ನು ಹಂಚಿಕೊಳ್ಳುತ್ತಿದ್ದಾರೆ. ರನ್ಗೆ ಮ್ಯಾಕ್ಸ್ವೆಲ್ ಮೇಲೂ ಅವಲಂಬನೆ ಹೊಂದಬಹುದು ಎಂದು ಗಾವಸ್ಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಒಂದು ಬದಿ ಇದ್ದರೆ, ಮತ್ತೊಂದೆಡೆ ಎಬಿ ಡಿವಿಲಿಯರ್ಸ್ ಹಾಗೂ ಮ್ಯಾಕ್ಸ್ವೆಲ್ ಆಟವಾಡುತ್ತಾರೆ. ಹೀಗಾಗಿ ಆರ್ಸಿಬಿ ಬ್ಯಾಟಿಂಗ್ ಲೈನ್ಅಪ್ ಬಲಿಷ್ಠವಾಗಿದೆ.
ಇದನ್ನೂ ಓದಿ: IPL 2021, RCB: ಒಂದೇ ದಿನ ಆರ್ಸಿಬಿ ಸೃಷ್ಟಿ ಮಾಡಿತು ಸಾಲು ಸಾಲು ದಾಖಲೆ! ಇಲ್ಲಿದೆ ವಿವರ
(Bowlers have to bowl to two 360 degree players Sunil Gavaskar on Glenn Maxwell)
Published On - 4:41 pm, Sat, 24 April 21