IPL 2021, RCB: ಒಂದೇ ದಿನ ಆರ್​ಸಿಬಿ ಸೃಷ್ಟಿ ಮಾಡಿತು ಸಾಲು ಸಾಲು ದಾಖಲೆ! ಇಲ್ಲಿದೆ ವಿವರ

RCB Records: ರಾಜಸ್ಥಾನ್ ವಿರುದ್ಧ ರಾಯಲ್ ಚಾಲೆಂಜರ್ಸ್ ಭರ್ಜರಿ 10 ವಿಕೆಟ್​ಗಳ ಗೆಲುವು ದಾಖಲಿಸಿತು. ಒಂದಲ್ಲ, ಎರಡಲ್ಲ.. ನಾಲ್ಕಾರು ದಾಖಲೆಗಳನ್ನೂ ಈ ವೇಳೆ ಆರ್​ಸಿಬಿ ಮಾಡಿತು.

IPL 2021, RCB: ಒಂದೇ ದಿನ ಆರ್​ಸಿಬಿ ಸೃಷ್ಟಿ ಮಾಡಿತು ಸಾಲು ಸಾಲು ದಾಖಲೆ! ಇಲ್ಲಿದೆ ವಿವರ
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಇಂದು 28 ನೇ ಬಾರಿಗೆ ಐಪಿಎಲ್​ನಲ್ಲಿ ಮುಖಾಮುಖಿಯಾಗಲಿವೆ. ಚೆನ್ನೈ ಈ ಮೊದಲು ನಡೆದ 27 ಪಂದ್ಯಗಳಲ್ಲಿ 17ರಲ್ಲಿ ಗೆದ್ದಿದೆ. ಅದೇ ಸಮಯದಲ್ಲಿ, ಆರ್ಸಿಬಿ ಹೆಸರಿನಲ್ಲಿ ಕೇವಲ 9 ಪಂದ್ಯಗಳು ಇವೆ. ಉಭಯ ತಂಡಗಳ ನಡುವೆ 1 ಪಂದ್ಯವು ಪಲಿತಾಂಶವಿಲ್ಲದೆ ಕೊನೆಗೊಂಡಿದೆ.
Follow us
TV9 Web
| Updated By: ganapathi bhat

Updated on:Nov 30, 2021 | 12:13 PM

ಐಪಿಎಲ್ 2021 ಟೂರ್ನಿಯು ಯಶಸ್ವಿಯಾಗಿ ನಡೆಯುತ್ತಿದೆ. ಮುಂಬೈ ಹಾಗೂ ಚೆನ್ನೈನಲ್ಲಿ ಲೀಗ್ ಹಂತದ 16 ಪಂದ್ಯಗಳು ನಡೆದಿವೆ. ಒಂದಕ್ಕಿಂತ ಒಂದು ರೋಚಕ ಪಂದ್ಯ ಎಂದು ನೋಡುವ ಕ್ರಿಕೆಟ್ ಅಭಿಮಾನಿಗಳಿಗೆ ನಿನ್ನೆ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಿನ ಹಣಾಹಣಿ ಹಬ್ಬವೇ ಆಗಿತ್ತು. ಅದರಲ್ಲೂ ಆರ್​ಸಿಬಿ ಅಭಿಮಾನಿಗಳು ಇನ್ನಿಲ್ಲದಂತೆ ಸಂಭ್ರಮಿಸಿದರು. ರಾಜಸ್ಥಾನ್ ವಿರುದ್ಧ ರಾಯಲ್ ಚಾಲೆಂಜರ್ಸ್ ಭರ್ಜರಿ 10 ವಿಕೆಟ್​ಗಳ ಗೆಲುವು ದಾಖಲಿಸಿತು. ಒಂದಲ್ಲ, ಎರಡಲ್ಲ.. ನಾಲ್ಕಾರು ದಾಖಲೆಗಳನ್ನೂ ಈ ವೇಳೆ ಆರ್​ಸಿಬಿ ಮಾಡಿತು. ಕೊಹ್ಲಿ- ಪಡಿಕ್ಕಲ್ ಅಬ್ಬರಿಸಿದರು. 181 ರನ್​ಗಳನ್ನು ವಿಕೆಟ್ ಕಳೆದುಕೊಳ್ಳದೆ ಬೆನ್ನತ್ತಿ ವಿಜಯ ಪತಾಕೆ ಹಾರಿಸಿದರು. ನಿನ್ನೆಯ (ಏಪ್ರಿಲ್ 22) ಪಂದ್ಯದಲ್ಲಿ ಆರ್​ಸಿಬಿ ತಂಡ ಮಾಡಿದ ದಾಖಲೆಗಳು ಎಷ್ಟು? ಯಾವುವು? ಎಂಬ ಮಾಹಿತಿ ಇಲ್ಲಿದೆ ನೋಡಿ.

ದೇವದತ್ ಪಡಿಕ್ಕಲ್ ಭರ್ಜರಿ ಶತಕ ರಾಯಲ್ ಚಾಲೆಂಜರ್ಸ್ ಪರ ಆರಂಭಿಕರಾಗಿ ಕಣಕ್ಕಿಳಿದ ದೇವದತ್ ಪಡಿಕ್ಕಲ್ ತಮ್ಮ ಮೊದಲ ಐಪಿಎಲ್ ಶತಕ ದಾಖಲಿಸಿದ್ದಾರೆ. ದೇವದತ್ ಪಡಿಕ್ಕಲ್ ಎಂಬ 20 ವರ್ಷದ ಆಟಗಾರ ಇನ್ನೂ ಕೂಡ ಟೀಮ್ ಇಂಡಿಯಾಕ್ಕೆ ಪಾದಾರ್ಪಣೆ ಮಾಡಿಲ್ಲ. ಅದಕ್ಕೂ ಮೊದಲೇ ಐಪಿಎಲ್​ನಲ್ಲಿ ಶತಕ ಸಿಡಿಸಿ ಮಿಂಚಿದ್ದಾರೆ. ಈ ಸಾಧನೆ ಮಾಡಿದ ಭಾರತದ ಮೂರನೇ ಯುವ ಆಟಗಾರ ಎಂದೂ ಗುರುತಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ 2011ರಲ್ಲಿ ಪಂಜಾಬ್ ತಂಡದ ಪೌಲ್ ವೆಲ್ತಾಟಿ ಮತ್ತು 2009ರಲ್ಲಿ ಆರ್​ಸಿಬಿ ತಂಡದಲ್ಲಿದ್ದ ಮನೀಶ್ ಪಾಂಡೆ ಶತಕ ಸಿಡಿಸಿದ ಸಾಧನೆ ಮಾಡಿದ್ದರು.

ವಿರಾಟ್ ಕೊಹ್ಲಿ 6,000 ರನ್ ಐಪಿಎಲ್ ಕ್ರಿಕೆಟ್​ನಲ್ಲಿ 6,000 ರನ್ ಗಳಿಸಿದ ಮೊದಲ ಕ್ರಿಕೆಟರ್ ಆಗಿ ವಿರಾಟ್ ಕೊಹ್ಲಿ ಹೊರಹೊಮ್ಮಿದರು. ನಿನ್ನೆಯ ಪಂದ್ಯದಲ್ಲಿ ಕೊಹ್ಲಿ 47 ಬಾಲ್​ಗೆ 6 ಬೌಂಡರಿ, 3 ಸಿಕ್ಸರ್ ಸಹಿತ 72 ರನ್ ಗಳಿಸಿದರು. 153.19 ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿದ ಕೊಹ್ಲಿ ಅತಿ ವೇಗವಾಗಿ 6,000 ರನ್ ಪೂರೈಸಿ, ಐಪಿಎಲ್ ಟೂರ್ನಿಯಲ್ಲಿ ಆರು ಸಾವಿರ ರನ್ ಗಳಿಸಿದ ಮೊದಲ ಆಟಗಾರ ಎನಿಸಿಕೊಂಡರು.

ಅಮೋಘ ಓಪನಿಂಗ್ ಪಾರ್ಟ್ನರ್​ಶಿಪ್ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ 181 ರನ್​ಗಳ ಅಮೋಘ ಓಪನಿಂಗ್ ಜೊತೆಯಾಟ ನೀಡಿದರು. ಆರ್​ಸಿಬಿ ಕಪ್ತಾನ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ವಿಕೆಟ್ ಕಳೆದುಕೊಳ್ಳದೆ 181 ರನ್ ದಾಖಲಿಸಿದರು. ಈ ಜೊತೆಯಾಟ ಆರ್​ಸಿಬಿ ಪರವಾಗಿ ಬಂದ ಅತಿ ದೊಡ್ಡ ಮೊದಲ ವಿಕೆಟ್ ಜೊತೆಯಾಟವಾಗಿದೆ. 2013ರಲ್ಲಿ ತಿಲಕರತ್ನೆ ದಿಲ್ಶಾನ್ ಮತ್ತು ಕ್ರಿಸ್ ಗೈಲ್, ಪುಣೆ ವಾರಿಯರ್ಸ್ ವಿರುದ್ಧ 167 ರನ್​ಗಳ ಜೊತೆಯಾಟ ನೀಡಿದ್ದರು.

ವಿಕೆಟ್ ನಷ್ಟವಿಲ್ಲದೆ ರನ್ ಚೇಸ್ 178 ರನ್ ಟಾರ್ಗೆಟ್ ಬೆನ್ನತ್ತಿದ ಆರ್​ಸಿಬಿ, ಒಂದೂ ವಿಕೆಟ್ ಕಳೆದುಕೊಳ್ಳದೆ 181 ರನ್ ಪೇರಿಸಿತು. ಇದು ಒಂದೂ ವಿಕೆಟ್ ಕಳೆದುಕೊಳ್ಳದೆ ಮಾಡಿದ ಐಪಿಎಲ್​ನ ಮೂರನೇ ರನ್ ಚೇಸ್ ಆಗಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ಪರವಾಗಿ ಗೌತಮ್ ಗಂಭೀರ್ ಹಾಗೂ ಕ್ರಿಸ್ ಲಿನ್ 2017ರಲ್ಲಿ, ಗುಜರಾತ್ ಲಯನ್ಸ್ ವಿರುದ್ಧ 184 ರನ್​ಗಳ ಗುರಿ ಬೆನ್ನತ್ತಿದ್ದರು. ಶೇನ್ ವಾಟ್ಸನ್ ಮತ್ತು ಡುಪ್ಲೆಸಿಸ್ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಹಾಗೂ ಪಂಜಾಬ್ ಕಿಂಗ್ಸ್ ವಿರುದ್ಧ ಕಳೆದ ಸೀಸನ್​ನಲ್ಲಿ 179 ರನ್​ಗಳ ಟಾರ್ಗೆಟ್ ಚೇಸ್ ಮಾಡಿದ್ದರು.

10 ವಿಕೆಟ್​ಗಳ ಗೆಲುವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 10 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿತು. ಇದು ನಾಲ್ಕನೇ ಬಾರಿ ಐಪಿಎಲ್​ನಲ್ಲಿ ಆರ್​ಸಿಬಿ 10 ವಿಕೆಟ್​ಗಳ ಅಂತರದಿಂದ ಗೆಲುವು ದಾಖಲಿಸುತ್ತಿರುವುದಾಗಿದೆ.

ಇದನ್ನೂ ಓದಿ: RCB vs RR: ರಾಜಸ್ಥಾನ್​ ರಾಯಲ್ಸ್​ ವಿರುದ್ಧ ಆರ್​ಸಿಬಿ ಗೆಲ್ಲೋದಕ್ಕೆ ಇಲ್ಲಿದೆ ಪ್ರಮುಖ ಮೂರು ಕಾರಣಗಳು

IPL 2021: ರಾಜಸ್ಥಾನ್ ಎದುರು ಆರ್​ಸಿಬಿ 10 ವಿಕೆಟ್​ಗಳಿಂದ ಗೆದ್ದ ಬಳಿಕ ಹೇಗಿದೆ ಗೊತ್ತಾ ನೆಟ್ಟಿಗರ ರಿಯಾಕ್ಷನ್! ನೀವೇ ನೋಡಿ

Published On - 3:49 pm, Fri, 23 April 21

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್