IPL 2021: ರಾಜಸ್ಥಾನ್ ಎದುರು ಆರ್​ಸಿಬಿ 10 ವಿಕೆಟ್​ಗಳಿಂದ ಗೆದ್ದ ಬಳಿಕ ಹೇಗಿದೆ ಗೊತ್ತಾ ನೆಟ್ಟಿಗರ ರಿಯಾಕ್ಷನ್! ನೀವೇ ನೋಡಿ

IPL 2021: ಆರ್​ಸಿಬಿಯ ಈ ಅದ್ಭುತ ಗೆಲುವನ್ನು ನೆಟ್ಟಿಗರು ತುಂಬಾ ವಿಶೇಷವಾಗಿ ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಿಸುತ್ತಿದ್ದಾರೆ. ಕೆಲವೊಬ್ಬರು ರಾಜಸ್ಥಾನ್​ ಬ್ಯಾಟಿಂಗ್ ವಿಭಾಗವನ್ನು ಕಿಚ್ಚಾಯಿಸುತ್ತಿದ್ದರೆ, ಇನ್ನೂ ಕೆಲವರು ಪಡಿಕಲ್ ಹಾಗೂ ಕೊಹ್ಲಿಯ ಈ ಬ್ಯಾಟಿಂಗ್ ನೋಡಿ ಈ ಸಲ ಕಪ್ ನಮ್ದೇ ಎನ್ನುವ ರೀತಿಯ ಖುಷಿಯಲ್ಲಿದ್ದಾರೆ

IPL 2021: ರಾಜಸ್ಥಾನ್ ಎದುರು ಆರ್​ಸಿಬಿ 10 ವಿಕೆಟ್​ಗಳಿಂದ ಗೆದ್ದ ಬಳಿಕ ಹೇಗಿದೆ ಗೊತ್ತಾ ನೆಟ್ಟಿಗರ ರಿಯಾಕ್ಷನ್! ನೀವೇ ನೋಡಿ
ವಿರಾಟ್ ಕೊಹ್ಲಿ, ದೇವದತ್ ಪಡಿಕಲ್
Follow us
ಪೃಥ್ವಿಶಂಕರ
| Updated By: Skanda

Updated on: Apr 23, 2021 | 6:50 AM

ರಾಜಸ್ಥಾನ ರಾಯಲ್ಸ್ ವಿರುದ್ಧದ ನಾಲ್ಕನೇ ಪಂದ್ಯದಲ್ಲಿ ಆರ್​ಸಿಬಿ 10 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿದೆ. ಕನ್ನಡಿಗ ದೇವದತ್ ಪಡಿಕ್ಕಲ್ ಸ್ಫೋಟಕ ಶತಕ ಹಾಗೂ ಕಿಂಗ್ ಕೊಹ್ಲಿ ಅರ್ಧಶತಕದ ನೆರವಿನಿಂದ ಬೆಂಗಳೂರು, ದಾಖಲೆಯ ಗೆಲುವು ಸಾಧಿಸಿದೆ. ಆರ್​ಸಿಬಿಯ ಈ ಅದ್ಭುತ ಗೆಲುವನ್ನು ನೆಟ್ಟಿಗರು ತುಂಬಾ ವಿಶೇಷವಾಗಿ ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಿಸುತ್ತಿದ್ದಾರೆ. ಕೆಲವೊಬ್ಬರು ರಾಜಸ್ಥಾನ್​ ಬ್ಯಾಟಿಂಗ್ ವಿಭಾಗವನ್ನು ಕಿಚಾಯಿಸುತ್ತಿದ್ದರೆ, ಇನ್ನೂ ಕೆಲವರು ಪಡಿಕಲ್ ಹಾಗೂ ಕೊಹ್ಲಿಯ ಈ ಬ್ಯಾಟಿಂಗ್ ನೋಡಿ ಈ ಸಲ ಕಪ್ ನಮ್ದೇ ಎನ್ನುವ ರೀತಿಯ ಖುಷಿಯಲ್ಲಿದ್ದಾರೆ.

ಆರ್​ಸಿಬಿ ಬೌಲರ್​​ಗಳು ಬ್ಯಾಕ್ ಟು ಬ್ಯಾಕ್ ಶಾಕ್ ಕೊಟ್ರು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ರಾಜಸ್ಥಾನಕ್ಕೆ, ಆರ್​ಸಿಬಿ ಬೌಲರ್​​ಗಳು ಬ್ಯಾಕ್ ಟು ಬ್ಯಾಕ್ ಶಾಕ್ ಕೊಟ್ರು. ಜೋಸ್ ಬಟ್ಲರ್ ಹಾಗೂ ಡೇವಿಡ್ ಮಿಲ್ಲರ್​ ಇಬ್ಬರನ್ನೂ ಸಿರಾಜ್ ಸಲೀಸಾಗಿ ಬಲಿ ಪಡೆದ್ರು. ಸಂಜು ಸ್ಯಾಮ್ಸನ್ ಕೂಡಾ ಸುಂದರ್ ಸ್ಪಿನ್ ಮೋಡಿಗೆ ಬಲಿಯಾದ್ರು. 43ರನ್ ಗಳಿಸುವಷ್ಟರಲ್ಲಿ ರಾಜಸ್ಥಾನ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಳ್ತು.

ಆರ್​ಸಿಬಿ ತಂಡದ ಮಾಜಿ ಆಟಗಾರ ಶಿವಂ ದುಬೆ 46ರನ್, ರಿಯಾನ್ ಪರಾಗ್ 25 ಹಾಗೂ ರಾಹುಲ್ ತೆವಾಟಿಯಾ 40ರನ್ ಗಳಿಸಿದ್ರು. ಇದ್ರೊಂದಿಗೆ ರಾಯಲ್ಸ್ 9 ವಿಕೆಟ್ ನಷ್ಟಕ್ಕೆ 177ರನ್ ಕಲೆಹಾಕ್ತು. ವಾಂಖೆಡೆ ಮೈದಾನದಲ್ಲಿ 178ರನ್ ಚೇಸ್ ಮಾಡಿದ ಆರ್ಸಿಬಿಗೆ ನಾಯಕ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಅದ್ಭುತ ಆರಂಭವನ್ನೇ ತಂದುಕೊಟ್ರು. ರಾಜಸ್ಥಾನ ಬೌಲರ್ಗಳ ದಾಳಿಯನ್ನ ದಿಟ್ಟವಾಗಿ ಎದುರಿಸಿದ ಕೊಹ್ಲಿ ಪಡಿಕ್ಕಲ್ ಜೋಡಿ, ರನ್ ಮಳೆಯನ್ನ ಹರಿಸಿತು.

ಸ್ಫೋಟಕ ಬ್ಯಾಟಿಂಗ್​ಗೆ ರಾಜಸ್ಥಾನ ಕಂಗಾಲಾಗಿ ಹೋಯ್ತು ಕನ್ನಡಿಗ ಪಡಿಕ್ಕಲ್ ಸ್ಫೋಟಕ ಬ್ಯಾಟಿಂಗ್​ಗೆ ರಾಜಸ್ಥಾನ ಕಂಗಾಲಾಗಿ ಹೋಯ್ತು. 52ಬಾಲ್ಗಳಲ್ಲಿ 11ಬೌಂಡರಿ, 6ಸಿಕ್ಸರ್ ಸಿಡಿಸಿದ ದೇವದತ್ ಅಜೇಯ 101ರನ್ ಗಳಿಸಿದ್ರು. ಇದ್ರೊಂದಿಗೆ ಐಪಿಎಲ್​ನಲ್ಲಿ ಚೊಚ್ಚಲ ಶತಕ ದಾಖಲಿಸಿದ್ರು. ಪಡಿಕ್ಕಲ್​ಗೆ ಉತ್ತಮ ಸಾಥ್ ನೀಡಿದ ಚೇಸಿಂಗ್ ಮಾಸ್ಟರ್ ಕೊಹ್ಲಿ, 47 ಎಸೆತಗಳಲ್ಲಿ 72 ರನ್ ಬಾರಿಸಿದ್ರು. ಇದ್ರೊಂದಿಗೆ ಆರ್​ಸಿಬಿ 16.3 ಓವರ್​ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೇ ದಿಗ್ವಿಜಯ ಸಾಧಿಸ್ತು. ಈ ಆವೃತ್ತಿಯಲ್ಲಿ ಸತತ ನಾಲ್ಕನೇ ಜಯ ಸಾಧಿಸಿರೋ ಬೆಂಗಳೂರು ತಂಡ, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಟ್ವಿಟರ್​ ರಿಯಾಕ್ಷನ್ಸ್