IPL 2021: ಹೈದರಾಬಾದ್ಗೆ ಆಘಾತ! ಮೊಣಕಾಲಿನ ಗಾಯದಿಂದಾಗಿ ಯಾರ್ಕರ್ ಕಿಂಗ್ ಟಿ. ನಟರಾಜನ್ ಐಪಿಎಲ್‌ನಿಂದ ಔಟ್
IPL 2021: ಗಾಯದ ಸಮಸ್ಯೆಯಿಂದ ಬಳಲುತ್ತಿರುವ ನಟರಾಜನ್ ಐಪಿಎಲ್ 2021 ರ ಆವೃತ್ತಿಯಿಂದ ಹೊರಬಿದ್ದಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ಪರ ಆಡುತ್ತಿರುವ ನಟರಾಜನ್‌ಗೆ ಮೊಣಕಾಲಿನ ಗಾಯವು ಗಂಭೀರವಾದ ಸ್ವರೂಪ ಪಡೆದುಕೊಂಡಿದೆ.
ಹೈದರಾಬಾದ್ ತಂಡದ ಎಡಗೈ ಮಧ್ಯಮ ವೇಗಿ ಟಿ ನಟರಾಜನ್‌ಗೆ ಸಂಬಂಧಿಸಿದ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ನಟರಾಜನ್ ಐಪಿಎಲ್ 2021 ರ ಆವೃತ್ತಿಯಿಂದ ಹೊರಬಿದ್ದಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ಪರ ಆಡುತ್ತಿರುವ ನಟರಾಜನ್‌ಗೆ ಮೊಣಕಾಲಿನ ಗಾಯವು ಗಂಭೀರವಾದ ಸ್ವರೂಪ ಪಡೆದುಕೊಂಡಿದೆ. ಈ ಕಾರಣದಿಂದಾಗಿ ಅವರು ಐಪಿಎಲ್‌ನಿಂದ ಹೊರಗುಳಿಯಲಿದ್ದಾರೆ. 30 ವರ್ಷದ ಬೌಲರ್‌ಗೆ ವಿಶ್ರಾಂತಿ ನೀಡುವಂತೆ ಸೂಚಿಸಲಾಗಿದೆ. ಈಆವೃತ್ತಿಯಲ್ಲಿ ಅವರು ಎರಡು ಪಂದ್ಯಗಳನ್ನು ಆಡಿದ್ದಾರೆ. ಅವರು ಕೊನೆಯದಾಗಿ ಏಪ್ರಿಲ್ 11 ರಂದು ಚೆನ್ನೈನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಆಡಿದ್ದರು. ಇದರ ನಂತರ ಅವರು ಹೈದರಾಬಾದ್‌ನ ಕೊನೆಯ ಎರಡು ಪಂದ್ಯಗಳಿಗೆ ಹಾಜರಾಗಲಿಲ್ಲ. ಸನ್‌ರೈಸರ್ಸ್ ಹೈದರಾಬಾದ್ ಅವರ ಬದಲಿ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳುವ ತವಕದಲ್ಲಿದೆ.
ನಟರಾಜನನ್ನು ತಂಡದಿಂದ ಕೈಬಿಡುವಂತೆ ಮನವಿ ನಟರಾಜನ್ ಅವರನ್ನು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಕಳುಹಿಸಬಹುದು ಎಂದು ಬಿಸಿಸಿಐ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ. ಅವನ ಗಾಯ ಯಾವಾಗ ಮತ್ತು ಎಷ್ಟು ಗಂಭೀರವಾಯಿತು ಎಂಬುದು ಇನ್ನೂ ತಿಳಿದುಬಂದಿಲ್ಲ. ನಟರಾಜನ್ ಆಸ್ಟ್ರೇಲಿಯಾ ಪ್ರವಾಸದಿಂದ ಬಂದ ನಂತರ ಎರಡು ತಿಂಗಳು ಎನ್‌ಸಿಎಯಲ್ಲಿದ್ದರು. ಎನ್‌ಸಿಎ ಫಿಸಿಯೋ, ನಟರಾಜನ್ ಅವರ ಫಿಟ್‌ನೆಸ್ ಅನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ನಟರಾಜನ್ ಗಾಯದ ಗಂಭೀರತೆಯ ಬಗ್ಗೆ ಅವರು ಬಿಸಿಸಿಐಗೆ ಮಾಹಿತಿ ನೀಡಿದ್ದಾರೆ. ನಟರಾಜನನ್ನು ತಂಡದಿಂದ ಕೈಬಿಡುವಂತೆ ಬಿಸಿಸಿಐ ಈಗ ಹೈದರಾಬಾದ್ ಫ್ರಾಂಚೈಸಿಯನ್ನು ಕೇಳಬಹುದು ಎಂದು ಹೇಳಲಾಗಿದೆ.
ನಟರಾಜನ್ ಪ್ರಸ್ತುತ ಹೈದರಾಬಾದ್ ತಂಡದೊಂದಿಗೆ ಚೆನ್ನೈನಲ್ಲಿದ್ದಾರೆ. ಮೂಲಗಳ ಪ್ರಕಾರ, ನಾವು ಇನ್ನೂ ಪೂರ್ಣ ವರದಿಯನ್ನು ಸ್ವೀಕರಿಸಿಲ್ಲ ಆದರೆ ಅವರಿಗೆ ಮೊಣಕಾಲು ನೋವು ಇದೆ ಎಂದು ತಿಳಿಸಲಾಗಿದೆ. ಅವರು ಪುನರ್ವಸತಿಯಲ್ಲಿ ಎನ್‌ಸಿಎಗೆ ಹೋಗುತ್ತಾರೆ ಎಂದು ಪ್ರಾಂಚೈಸಿ ತಿಳಿಸಿದೆ.
ನಟರಾಜನ್ ಬಗ್ಗೆ ವಾರ್ನರ್ ಈ ಹೇಳಿಕೆ ನೀಡಿದ್ದಾರೆ ಇದಕ್ಕೂ ಮೊದಲು ಏಪ್ರಿಲ್ 21 ರಂದು ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ನಂತರ ನಟರಾಜನ್ ಅವರ ಗಾಯದ ಬಗ್ಗೆ ಸನ್‌ರೈಸರ್ಸ್ ಹೈದರಾಬಾದ್ ನಾಯಕ ಡೇವಿಡ್ ವಾರ್ನರ್ ಅವರನ್ನು ಕೇಳಿದಾಗ, ಈ ಬೌಲರ್ ಪಂದ್ಯಾವಳಿಯಿಂದ ಹೊರಗುಳಿಯುವ ಯಾವುದೇ ಸೂಚನೆಯನ್ನು ಅವರು ನೀಡಿಲ್ಲ. ವಾರ್ನರ್ ಹೇಳಿದರು, ಅವನ ಮೊಣಕಾಲಿನ ಮೇಲೆ ಸ್ವೆಲಿಂಗ್ ಇದೆ. ಹೀಗಾಗಿ ನಟರಾಜನ್ ಏಳು ದಿನಗಳ ಕಾಲ ಆಟದಿಂದ ಹೊರಗುಳಿಯಬೇಕಾಗುತ್ತದೆ ಎಂದಿದ್ದರು.
Published On - 10:09 pm, Thu, 22 April 21