IPL 2021 Points Table: ಚೆನ್ನೈ ಸೂಪರ್ ಕಿಂಗ್ಸ್ ಹಿಂದಿಕ್ಕಿ ಮತ್ತೆ ಟಾಪ್ ಸ್ಥಾನಕ್ಕೇರಿದ ಆರ್ಸಿಬಿ; ವಿವರಗಳು ಇಲ್ಲಿದೆ
Orange Cap, Purple Cap holders list: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 4 ಪಂದ್ಯಗಳಲ್ಲಿ ನಾಲ್ಕನ್ನೂ ಗೆಲ್ಲುವ ಮೂಲಕ ಮತ್ತೆ ಮೊದಲ ಸ್ಥಾನಕ್ಕೆ ಏರಿದೆ. ಚೆನ್ನೈ ಸೂಪರ್ ಕಿಂಗ್ಸ್ ನಿನ್ನೆಯ ಪಂದ್ಯಕ್ಕೂ ಮೊದಲ ಸ್ಥಾನದಲ್ಲಿ ಇತ್ತು. ಆದರೆ, ನಿನ್ನೆಯ ಗೆಲುವಿನ ಬಳಿಕ ಆರ್ಸಿಬಿ ಮತ್ತೆ ಅಬ್ಬರಿಸಿದೆ.
ಐಪಿಎಲ್ 2021 ಟೂರ್ನಿಯ ಪಂದ್ಯಗಳು ಮುಂಬೈ ಹಾಗೂ ಚೆನ್ನೈನ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿದೆ. ಮೊದಲ 16 ಪಂದ್ಯಗಳು ನಡೆದಿದ್ದು ಪ್ರತಿ ತಂಡಗಳು ನಾಲ್ಕು- ನಾಲ್ಕು ಪಂದ್ಯಗಳಲ್ಲಿ ಭಾಗಿಯಾಗಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಉತ್ತಮ ಪ್ರದರ್ಶನ ನೀಡಿ ಅಂಕಪಟ್ಟಿಯ ಮೊದಲ ನಾಲ್ಕು ಸ್ಥಾನಗಳಲ್ಲಿ ಪೈಪೋಟಿ ನಡೆಸುತ್ತಿದೆ. ಉಳಿದ ನಾಲ್ಕು ತಂಡಗಳಾದ ಸನ್ರೈಸರ್ಸ್ ಹೈದರಾಬಾದ್, ಕೋಲ್ಕತ್ತಾ ನೈಟ್ ರೈಡರ್ಸ್, ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಕೇವಲ 1 ಪಂದ್ಯದಲ್ಲಿ ಗೆದ್ದು ಕೊನೆಯ ನಾಲ್ಕು ಸ್ಥಾನದಲ್ಲಿ ಉಳಿದುಕೊಂಡಿವೆ. ಮೊದಲ ನಾಲ್ಕು ತಂಡಗಳ ಪಟ್ಟಿಗೆ ಬಂದು ಪ್ಲೇ ಆಫ್ ಹಂತಕ್ಕೆ ಪ್ರವೇಶಿಸುವುದು ಇನ್ನೂ ಯಾವ ತಂಡಕ್ಕೂ ಅಸಾಧ್ಯವೆಂದಲ್ಲ. ನಿನ್ನೆ (ಏಪ್ರಿಲ್ 22) ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ನಡುವೆ ನಡೆದ ಹಣಾಹಣಿಯ ಬಳಿಕ ಅಂಕಪಟ್ಟಿ ಹೇಗಿದೆ ಎಂದು ಇಲ್ಲಿದೆ ಮಾಹಿತಿ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 4 ಪಂದ್ಯಗಳಲ್ಲಿ ನಾಲ್ಕನ್ನೂ ಗೆಲ್ಲುವ ಮೂಲಕ ಮತ್ತೆ ಮೊದಲ ಸ್ಥಾನಕ್ಕೆ ಏರಿದೆ. ಚೆನ್ನೈ ಸೂಪರ್ ಕಿಂಗ್ಸ್ ನಿನ್ನೆಯ ಪಂದ್ಯಕ್ಕೂ ಮೊದಲ ಸ್ಥಾನದಲ್ಲಿ ಇತ್ತು. ಆದರೆ, ನಿನ್ನೆಯ ಗೆಲುವಿನ ಬಳಿಕ ಆರ್ಸಿಬಿ ಮತ್ತೆ ಅಬ್ಬರಿಸಿದೆ. ಅಂಕಪಟ್ಟಿಯಲ್ಲಿ ಟಾಪ್ ಆಗಿದೆ. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ 4ರಲ್ಲಿ 3 ಪಂದ್ಯ ಗೆದ್ದು 2ನೇ ಮತ್ತು 3ನೇ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್ ಆಡಿದ 4ರಲ್ಲಿ 2 ಪಂದ್ಯ ಗೆದ್ದು 4ನೇ ಸ್ಥಾನದಲ್ಲಿದೆ. ಉಳಿದಂತೆ, ಎಸ್ಆರ್ಎಚ್, ಕೆಕೆಆರ್, ಪಿಬಿಕೆಎಸ್ ಮತ್ತು ಆರ್ಆರ್ ತಂಡಗಳು ತಲಾ 1ರಲ್ಲಿ ಮಾತ್ರ ಗೆದ್ದು ಕ್ರಮವಾಗಿ ನಂತರದ ಸ್ಥಾನದಲ್ಲಿದೆ.
ಆರೆಂಜ್ ಕ್ಯಾಪ್ ಪಟ್ಟಿ ಹೀಗಿದೆ ಐಪಿಎಲ್ 2021 ಟೂರ್ನಿಯಲ್ಲಿ ಅತಿ ಹೆಚ್ಚು ರನ್ ದಾಖಲಿಸಿದವರ ಪಟ್ಟಿಯಲ್ಲಿ ನಿನ್ನೆಯ (ಏಪ್ರಿಲ್ 22) ಪಂದ್ಯದ ಬಳಿಕ ಯಾವುದೇ ಬದಲಾವಣೆಗಳು ಆಗಿಲ್ಲ. ಪಡಿಕ್ಕಲ್ ನಿನ್ನೆ ಶತಕ ಬಾರಿಸಿದರಾದರೂ, ಆಡಿದ ಮೊದಲೆರಡು ಪಂದ್ಯಗಳಲ್ಲಿ ದೊಡ್ಡ ಮೊತ್ತ ದಾಖಲಿಸಿರಲಿಲ್ಲ. ಹೀಗಾಗಿ, ಪಡಿಕ್ಕಲ್ ಆರೆಂಜ್ ಕ್ಯಾಪ್ ಪಟ್ಟಿ ಪ್ರವೇಶಿಸಿಲ್ಲ. ಸನ್ರೈಸರ್ಸ್ನ ಶಿಖರ್ ಧವನ್ 231 ರನ್ ಗಳಿಸಿ ಮೊದಲ ಸ್ಥಾನ ಉಳಿಸಿಕೊಂಡಿದ್ದಾರೆ. ಆರ್ಸಿಬಿಯ ಗ್ಲೆನ್ ಮ್ಯಾಕ್ಸ್ವೆಲ್ 176 ರನ್ ಕಲೆಹಾಕಿ ಎರಡನೇ ಸ್ಥಾನದಲ್ಲಿದ್ದಾರೆ. ಜಾನಿ ಬೇರ್ಸ್ಟೋ 173, ಫಫ್ ಡುಪ್ಲೆಸಿಸ್ 164 ಮತ್ತು ನಿತೀಶ್ ರಾಣಾ 164 ರನ್ ಗಳಿಸಿ ನಂತರದ ಸ್ಥಾನ ಪಡೆದುಕೊಂಡಿದ್ದಾರೆ.
ಪರ್ಪಲ್ ಕ್ಯಾಪ್ ಪಟ್ಟಿ ಹೀಗಿದೆ ರಾಜಸ್ಥಾನ್ ರಾಯಲ್ಸ್ ವಿರುದ್ಧ 3 ವಿಕೆಟ್ ಕಬಳಿಸಿ ಆರ್ಸಿಬಿಯ ಹರ್ಷಲ್ ಪಟೇಲ್ ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಹರ್ಷಲ್ ಆರ್ಸಿಬಿ ಪರ 16 ಓವರ್ ಬೌಲಿಂಗ್ ಮಾಡಿ 12 ವಿಕೆಟ್ ಪಡೆದುಕೊಂಡಿದ್ದಾರೆ. ಸಿಎಸ್ಕೆಯ ದೀಪಕ್ ಚಹರ್, ಡೆಲ್ಲಿ ಕ್ಯಾಪಿಟಲ್ಸ್ನ ಅವೇಶ್ ಖಾನ್ ಹಾಗೂ ಮುಂಬೈ ಇಂಡಿಯನ್ಸ್ನ ರಾಹುಲ್ ಚಹರ್ ತಲಾ 8 ವಿಕೆಟ್ ಕಿತ್ತು 2, 3, 4ನೇ ಸ್ಥಾನ ಪಡೆದುಕೊಂಡಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ಆಲ್ರೌಂಡರ್ ಆಂಡ್ರೆ ರಸ್ಸೆಲ್ 7 ವಿಕೆಟ್ ಪಡೆದು 5ನೇ ಸ್ಥಾನದಲ್ಲಿದ್ದಾರೆ.
ಅಂಕಪಟ್ಟಿಯಲ್ಲಿ ಮೊದಲ ಎರಡು ಸ್ಥಾನದಲ್ಲಿ ಇರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಹೈ ವೋಲ್ಟೇಜ್ ಪಂದ್ಯಾಟ ಏಪ್ರಿಲ್ 25 (ಭಾನುವಾರ) ನಡೆಯಲಿದೆ. ಅಂಕಪಟ್ಟಿಯ ವಿಚಾರವಾಗಿ ಗಮನಿಸಿದರೂ ಈ ಉಭಯ ತಂಡಗಳ ಹಣಾಹಣಿ ಭಾರೀ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: IPL 2021, RCB: ಒಂದೇ ದಿನ ಆರ್ಸಿಬಿ ಸೃಷ್ಟಿ ಮಾಡಿತು ಸಾಲು ಸಾಲು ದಾಖಲೆ! ಇಲ್ಲಿದೆ ವಿವರ
ಇದನ್ನೂ ಓದಿ: RCB vs RR: ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್ಸಿಬಿ ಗೆಲ್ಲೋದಕ್ಕೆ ಇಲ್ಲಿದೆ ಪ್ರಮುಖ ಮೂರು ಕಾರಣಗಳು
(IPL 2021 Points Table Orange Cap Purple Cap holders list after RCB Match against RR)
Published On - 4:39 pm, Fri, 23 April 21