AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PBKS vs MI Predicted Playing 11: ಪಂಜಾಬ್ ಕಿಂಗ್ಸ್- ಮುಂಬೈ ಇಂಡಿಯನ್ಸ್ ತಂಡದಲ್ಲಿ ಬದಲಾವಣೆಗಳು ಏನೇನು?

ಆಡಿರುವ2 ಪಂದ್ಯದಲ್ಲಿ ಗೆದ್ದಿದ್ದರೂ 2ರಲ್ಲಿ ಸೋತು, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೊನೆಯ ಪಂದ್ಯದಲ್ಲೂ ಸೋತಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ ತನ್ನ ವರ್ಚಸ್ಸು ಉಳಿಸಿಕೊಳ್ಳಲು ಇಂದಿನ ಗೆಲುವು ಅನಿವಾರ್ಯವಾಗಿದೆ.

PBKS vs MI Predicted Playing 11: ಪಂಜಾಬ್ ಕಿಂಗ್ಸ್- ಮುಂಬೈ ಇಂಡಿಯನ್ಸ್ ತಂಡದಲ್ಲಿ ಬದಲಾವಣೆಗಳು ಏನೇನು?
ಪಂಜಾಬ್ ಕಿಂಗ್ಸ್- ಮುಂಬೈ ಇಂಡಿಯನ್ಸ್
TV9 Web
| Updated By: ganapathi bhat|

Updated on:Nov 30, 2021 | 12:13 PM

Share

ಐಪಿಎಲ್ 2021 ಟೂರ್ನಿಯ ತಾವಾಡಿದ ನಾಲ್ಕು ಪಂದ್ಯಗಳ ಪೈಕಿ ಎರಡರಲ್ಲಿ ಗೆಲುವು ಕಂಡಿರುವ ಮುಂಬೈ ಇಂಡಿಯನ್ಸ್, ಕೇವಲ ಒಂದು ಪಂದ್ಯದಲ್ಲಿ ಗೆದ್ದು ಆಡುತ್ತಿರುವ ಪಂಜಾಬ್ ಕಿಂಗ್ಸ್ ವಿರುದ್ಧ ಇಂದು (ಏಪ್ರಿಲ್ 23) ಚೆನ್ನೈನ ಎಮ್.ಎ. ಚಿದಂಬರಂ ಮೈದಾನದಲ್ಲಿ ಸೆಣೆಸಾಡಲಿದೆ. ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಸೋತಿರುವ ಪಂಜಾಬ್ ಕಿಂಗ್ಸ್, ಸತತ ಸೋಲುಂಡು ಗೆಲುವು ಕಾಣುವ ತವಕದಲ್ಲಿದೆ. ಆಡಿರುವ2 ಪಂದ್ಯದಲ್ಲಿ ಗೆದ್ದಿದ್ದರೂ 2ರಲ್ಲಿ ಸೋತು, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೊನೆಯ ಪಂದ್ಯದಲ್ಲೂ ಸೋತಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ ತನ್ನ ವರ್ಚಸ್ಸು ಉಳಿಸಿಕೊಳ್ಳಲು ಇಂದಿನ ಗೆಲುವು ಅನಿವಾರ್ಯವಾಗಿದೆ.

ಪಂಜಾಬ್ ಕಿಂಗ್ಸ್ ತಂಡ ಆಟಗಾರರ ಉತ್ತಮ ಪ್ರದರ್ಶನದ ಹೊರತಾಗಿಯೂ ಸೋಲು ಕಾಣುತ್ತಿದೆ. ತಂಡ ಗೆಲ್ಲಿಸುವ ಆಟ ಒಟ್ಟಾಗಿ ಕಂಡುಬರುತ್ತಿಲ್ಲ. ರಾಹುಲ್ ಹಾಗೂ ಮಯಾಂಕ್ ಅಗರ್​ವಾಲ್ ಶಿಸ್ತುಬದ್ಧ ಆರಂಭ ನೀಡಿದರೂ ನಂತರದ ದಾಂಡಿಗರು ವಿಫಲರಾಗುತ್ತಿದ್ದಾರೆ. ಮಧ್ಯಮ ಕ್ರಮಾಂಕ ಆಡಿದರೆ ಆರಂಭಿಕ ಆಟಗಾರರು ಇನ್ನಿಂಗ್ಸ್ ಕಟ್ಟಿರುವುದಿಲ್ಲ. ಒಟ್ಟಾರೆ ತಂಡದ ಪ್ರದರ್ಶನ ಇನ್ನೂ ಬಲಿಷ್ಠವಾಗಬೇಕಿದೆ. ಬ್ಯಾಟಿಂಗ್ ಕ್ರಮಾಂಕ ಬಲಿಷ್ಠ ಆಟಗಾರರನ್ನು ಹೊಂದಿದ್ದು ಯಾವುದೇ ಬದಲಾವಣೆ ಮಾಡಿಕೊಳ್ಳುವುದು ಅನುಮಾನವಾಗಿದೆ.

ಮುಂಬೈ ಇಂಡಿಯನ್ಸ್ ಕೂಡ ತಂಡ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಇಲ್ಲ. ಆದರೆ, ಜಯಂತ್ ಯಾದವ್ ಬದಲಿಗೆ ಅನುಕುಲ್ ರಾಯ್ ಕಣಕ್ಕಿಳಿಯುವ ಸಂಭವ ಅಲ್ಲಗಳೆಯುವಂತಿಲ್ಲ. ಉಳಿದಂತೆ ಬ್ಯಾಟಿಂಗ್ ಹಾಗೂ ಬೌಲಿಂಗ್​ನಲ್ಲಿ ಅನುಭವಿ ಮತ್ತು ಯುವ ಆಟಗಾರರು ಕೂಡಿದ್ದಾರೆ. ಎಂಥಾ ಸಮಯದಲ್ಲೂ ಪುಟಿದೇಳುವ ಸಾಮರ್ಥ್ಯ ತಂಡಕ್ಕಿದೆ. ಇಂದಿನ ಪಂದ್ಯದ ಫಲಿತಾಂಶ ಏನಾಗಬಹುದು ಎಂದು ಕಾದುನೋಡಬೇಕಿದೆ.

ಪಂಜಾಬ್ ಕಿಂಗ್ಸ್ ಸಂಭಾವ್ಯ ಪ್ಲೇಯಿಂಗ್ ಇಲೆವೆನ್: 1. ಕೆ.ಎಲ್. ರಾಹುಲ್ (ನಾಯಕ/ ವಿಕೆಟ್ ಕೀಪರ್) 2. ಮಾಯಾಂಕ್ ಅಗರ್ವಾಲ್ 3. ಕ್ರಿಸ್ ಗೇಲ್ 4. ದೀಪಕ್ ಹೂಡಾ 5. ನಿಕೋಲಸ್ ಪೂರನ್ 6. ಮೊಯಿಸಸ್ ಹೆನ್ರಿಕ್ಸ್ / ಫ್ಯಾಬಿಯನ್ ಅಲೆನ್ 7. ಶಾರುಖ್ ಖಾನ್ 8. ಜೈ ರಿಚರ್ಡ್ಸನ್ 9. ಎಂ. ಅಶ್ವಿನ್ 10. ಅರ್ಷ್‌ದೀಪ್ ಸಿಂಗ್ 11. ಮೊಹಮ್ಮದ್ ಶಮಿ

ಮುಂಬೈ ಇಂಡಿಯನ್ಸ್ ಸಂಭಾವ್ಯ ಪ್ಲೇಯಿಂಗ್ ಇಲೆವೆನ್: 1. ರೋಹಿತ್ ಶರ್ಮಾ (ನಾಯಕ) 2. ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್) 3. ಸೂರ್ಯಕುಮಾರ್ ಯಾದವ್ 4. ಇಶಾನ್ ಕಿಶನ್ 5. ಕೀರನ್ ಪೊಲಾರ್ಡ್ 6. ಹಾರ್ದಿಕ್ ಪಾಂಡ್ಯ 7. ಕೃನಾಲ್ ಪಾಂಡ್ಯ 8. ಜಯಂತ್ ಯಾದವ್ / ಅನುಕುಲ್ ರಾಯ್ 9. ರಾಹುಲ್ ಚಹರ್ 10. ಟ್ರೆಂಟ್ ಬೋಲ್ಟ್ 11. ಜಸ್ಪ್ರಿತ್ ಬುಮ್ರಾ

ಇದನ್ನೂ ಓದಿ: IPL 2021 Points Table: ಚೆನ್ನೈ ಸೂಪರ್ ಕಿಂಗ್ಸ್ ಹಿಂದಿಕ್ಕಿ ಮತ್ತೆ ಟಾಪ್ ಸ್ಥಾನಕ್ಕೇರಿದ ಆರ್​ಸಿಬಿ; ವಿವರಗಳು ಇಲ್ಲಿದೆ

IPL 2021, RCB: ಒಂದೇ ದಿನ ಆರ್​ಸಿಬಿ ಸೃಷ್ಟಿ ಮಾಡಿತು ಸಾಲು ಸಾಲು ದಾಖಲೆ! ಇಲ್ಲಿದೆ ವಿವರ

(PBKS vs MI Team Prediction Playing 11 Punjab Kings vs Mumbai Indians)

Published On - 5:27 pm, Fri, 23 April 21

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್