ಕರ್ನಾಟಕ ಉತ್ತಮ ಬ್ಯಾಟ್ಸ್​ಮನ್​ಗಳನ್ನು ನೀಡುವ ಫ್ಯಾಕ್ಟರಿಯಿದ್ದಂತೆ! ಈತ ಇಷ್ಟರಲ್ಲೇ ಟೀಂ ಇಂಡಿಯಾದ ಕದ ತಟ್ಟಲಿದ್ದಾನೆ; ಗಾವಸ್ಕರ್

ಪಡಿಕ್ಕಲ್ ಶೀಘ್ರದಲ್ಲೇ ಯಾವುದೇ ಒಂದು ಸ್ವರೂಪದಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕಾಗಿ ಆಡುತ್ತಾನೆ ಎಂಬುದರಲ್ಲಿ ನನಗೆ ಆಶ್ಚರ್ಯವಾಗುವುದಿಲ್ಲ. ಪಡಿಕ್ಕಲ್​ ಆ ಸಾಮರ್ಥ್ಯವನ್ನು ಹೊಂದಿರುವುದೇ ಇದಕ್ಕೆ ಕಾರಣ.

ಕರ್ನಾಟಕ ಉತ್ತಮ ಬ್ಯಾಟ್ಸ್​ಮನ್​ಗಳನ್ನು ನೀಡುವ ಫ್ಯಾಕ್ಟರಿಯಿದ್ದಂತೆ! ಈತ ಇಷ್ಟರಲ್ಲೇ ಟೀಂ ಇಂಡಿಯಾದ ಕದ ತಟ್ಟಲಿದ್ದಾನೆ; ಗಾವಸ್ಕರ್
ಸುನಿಲ್ ಗವಾಸ್ಕರ್
Follow us
ಪೃಥ್ವಿಶಂಕರ
|

Updated on: Apr 23, 2021 | 3:53 PM

ಭಾರತೀಯ ಕ್ರಿಕೆಟ್ ತಂಡದಲ್ಲಿ, ಯುವ ಆಟಗಾರರು ನಿರಂತರವಾಗಿ ಅವಕಾಶಗಳನ್ನು ಪಡೆಯುತ್ತಿದ್ದಾರೆ ಮತ್ತು ಅವಕಾಶ ಸಿಕ್ಕಾಗಲೆಲ್ಲಾ ತಮ್ಮ ಸಾಮಥ್ರ್ಯವನ್ನು ತೋರಿಸುತ್ತಿದ್ದಾರೆ. ಟೀಮ್ ಇಂಡಿಯಾದ ತಂಡದ ಸಾಮರ್ಥ್ಯವು ತುಂಬಾ ಬಲವಾಗಿರಲು ಇದು ಒಂದು ಕಾರಣವಾಗಿದೆ. ಒಳ್ಳೆಯ ವಿಷಯವೆನೆಂದರೆ, ದೇಶೀಯ ಕ್ರಿಕೆಟ್‌ನಲ್ಲಿ ಸತತ ಉತ್ತಮ ಪ್ರದರ್ಶನದಿಂದಾಗಿ ಟೀಮ್ ಇಂಡಿಯಾದ ಕದ ತಟ್ಟುತ್ತಿರುವ ಇನ್ನೂ ಅನೇಕ ಯುವ ಆಟಗಾರರಿದ್ದಾರೆ. ಇದಕ್ಕಾಗಿ ಇಂಡಿಯನ್ ಪ್ರೀಮಿಯರ್ ಲೀಗ್ ಕೂಡ ಅವರಿಗೆ ಉತ್ತಮ ವೇದಿಕೆಯಾಗಿದೆ. ಇದಕ್ಕೆ ಉತ್ತಮ ಉದಾಹರಣೆ ಎಂಬಂತೆ ಭಾರತೀಯ ಬ್ಯಾಟ್ಸ್‌ಮನ್ ಐಪಿಎಲ್ ವೇದಿಕೆಯಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಟೀಂ ಇಂಡಿಯಾಕ್ಕೆ ಕಾಲಿಡುವ ಸೂಚನೆ ನೀಡಿದ್ದಾರೆ. ಶೀಘ್ರದಲ್ಲೇ 20 ವರ್ಷದ ಭಾರತೀಯ ಬ್ಯಾಟ್ಸ್‌ಮನ್ ಟೀಮ್ ಇಂಡಿಯಾದಲ್ಲಿ ಆಡಲಿದ್ದಾರೆ ಎಂದು ಸುನಿಲ್ ಗಾವಸ್ಕರ್ ಕೂಡ ಭವಿಷ್ಯ ನುಡಿದ್ದಿದ್ದಾರೆ.

ಸತತ ನಾಲ್ಕು ಶತಕಗಳನ್ನು ಮತ್ತು ಮೂರು ಅರ್ಧಶತಕ ವಾಸ್ತವವಾಗಿ, ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಗುರುವಾರ ರನ್ ಸುನಾಮಿಯೇ ನಡೆಯಿತು. ದೇವದತ್ ಪಡಿಕ್ಕಲ್ ಅವರ ಶತಕ ಮತ್ತು ವಿರಾಟ್ ಕೊಹ್ಲಿಯ ಅರ್ಧಶತಕದ ಸಹಾಯದಿಂದ ಆರ್‌ಸಿಬಿ ರಾಜಸ್ಥಾನ ನೀಡಿದ 178 ರನ್ ಗುರಿಯನ್ನು ಸುಲಭವಾಗಿ ಬೆನ್ನಟ್ಟಿತು. ದೇವದತ್ತ್ 52 ಎಸೆತಗಳಲ್ಲಿ 11 ಬೌಂಡರಿ ಮತ್ತು 6 ಸಿಕ್ಸರ್ ನೆರವಿನಿಂದ ಅಜೇಯ 101 ರನ್ ಗಳಿಸಿದರು. ದೇವದತ್ ಅವರ ಈ ಆಟದಿಂದಾಗಿ ಸುನಿಲ್ ಗವಾಸ್ಕರ್ ತುಂಬಾ ಪ್ರಭಾವಿತರಾಗಿದ್ದಾರೆ. ದೇವದತ್ತ ಪಡಿಕ್ಕಲ್ ಇತ್ತೀಚೆಗೆ ವಿಜಯ್ ಹಜಾರೆ ಟ್ರೋಫಿಯ ಏಳು ಪಂದ್ಯಗಳಲ್ಲಿ ಸತತ ನಾಲ್ಕು ಶತಕಗಳನ್ನು ಮತ್ತು ಮೂರು ಅರ್ಧಶತಕಗಳನ್ನು ಗಳಿಸಿದರು.

ಕರ್ನಾಟಕ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳನ್ನು ನೀಡುವ ಫ್ಯಾಕ್ಟರಿ ಸುನಿಲ್ ಗಾವಸ್ಕರ್ ಮಾತನಾಡಿ, ಪಡಿಕ್ಕಲ್ ಶೀಘ್ರದಲ್ಲೇ ಯಾವುದೇ ಒಂದು ಸ್ವರೂಪದಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕಾಗಿ ಆಡುತ್ತಾನೆ ಎಂಬುದರಲ್ಲಿ ನನಗೆ ಆಶ್ಚರ್ಯವಾಗುವುದಿಲ್ಲ. ಪಡಿಕ್ಕಲ್​ ಆ ಸಾಮರ್ಥ್ಯವನ್ನು ಹೊಂದಿರುವುದೇ ಇದಕ್ಕೆ ಕಾರಣ. ದೇವ್ ದೇಶೀಯ ಕ್ರಿಕೆಟ್‌ನಲ್ಲಿ ಸತತವಾಗಿ ಸಾಕಷ್ಟು ರನ್ ಗಳಿಸಿದ್ದಾರೆ ಮತ್ತು ರಣಜಿ ಟ್ರೋಫಿಯಲ್ಲಿ ಅವರ ಹೆಸರಿನಲ್ಲಿ ದೊಡ್ಡ ಶತಕ ಕೂಡ ಸೇರಿದೆ. ದೇವ್ 50 ಓವರ್‌ಗಳ ಆಟದಲ್ಲಿ ಹಲವು ಶತಕಗಳನ್ನು ಮತ್ತು ರನ್ ಗಳಿಸಿದ್ದಾರೆ.

ಆದ್ದರಿಂದ, ಇಂದು ಇಲ್ಲದಿದ್ದರೆ, ನಾಳೆ ಅವರು ಟೀಮ್ ಇಂಡಿಯಾ ಪರ ಆಡುತ್ತಾರೆ ಎಂದು ಗಾವಸ್ಕರ್​ ಭವಿಷ್ಯ ನುಡಿದರು. ಜೊತೆಗೆ ಕರ್ನಾಟಕ ಯಾವಾಗಲೂ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳನ್ನು ನೀಡಿದೆ. ಗುಂಡಪ್ಪ ವಿಶ್ವನಾಥ್, ರಾಹುಲ್ ದ್ರಾವಿಡ್ ಮತ್ತು ನಂತರ ಕೆ.ಎಲ್. ರಾಹುಲ್. ಇದರ ನಂತರ ತ್ರಿವಳಿ ಶತಕ ಗಳಿಸಿದ ಮಾಯಾಂಕ್ ಅಗರ್‌ವಾಲ್ ಮತ್ತು ಕರುಣ್ ನಾಯರ್. ದೇವದತ್ತ ಪಡಿಕ್ಕಲ್ ಈ ಸಂಚಿಕೆಯಲ್ಲಿ ಮುಂದಿನ ಹೆಸರು, ಅವರು ತಮ್ಮ ಆಟದಿಂದ ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ ಎಂದು ಗಾವಸ್ಕರ್​ ಹೇಳಿದರು.

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್