IPL 2021: ರೋಹಿತ್, ವಿರಾಟ್, ಡಿವಿಲಿಯರ್ಸ್ ಆಟವನ್ನು ನೋಡಿ ಸಂಜು ಸ್ಯಾಮ್ಸನ್ ಕಲಿಯಬೇಕಿದ್ದು ಸಾಕಷ್ಟಿದೆ; ಗೌತಮ್ ಗಂಭೀರ್

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಅವರನ್ನು ನೋಡಿದರೆ, 80 ಅಥವಾ ಹೆಚ್ಚಿನ ರನ್ ಗಳಿಸಿದ ನಂತರವೂ ಅವರು ಎಂದಿಗೂ 0 ಅಥವಾ 1 ಅಥವಾ 10 ಸ್ಕೋರ್ ಮಾಡಲಿಲ್ಲ, ಆದರೆ ಮುಂದಿನ ಕೆಲವು ಇನ್ನಿಂಗ್ಸ್‌ಗಳಲ್ಲಿ 30-40 ರನ್ ಗಳಿಸುತ್ತಾರೆ.

IPL 2021: ರೋಹಿತ್, ವಿರಾಟ್, ಡಿವಿಲಿಯರ್ಸ್ ಆಟವನ್ನು ನೋಡಿ ಸಂಜು ಸ್ಯಾಮ್ಸನ್ ಕಲಿಯಬೇಕಿದ್ದು ಸಾಕಷ್ಟಿದೆ; ಗೌತಮ್ ಗಂಭೀರ್
ಎಬಿಡಿ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡದೇ ಇರಬಹುದು. ಆದರೆ ಚುಟುಕು ಕ್ರಿಕೆಟ್​ನಲ್ಲಿ ಅತ್ಯಂತ ಬೇಡಿಕೆಯ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದಾರೆ. ಆರ್​ಸಿಬಿ ತಂಡದಲ್ಲಿ ಡಿವಿಲಿಯರ್ಸ್ ಇರುವುದು ನಾಯಕ ವಿರಾಟ್ ಕೊಹ್ಲಿ ಪ್ಲಸ್ ಪಾಯಿಂಟ್ ಎಂದು ಗಂಭೀರ್ ತಿಳಿಸಿದ್ದಾರೆ.
Follow us
ಪೃಥ್ವಿಶಂಕರ
|

Updated on: Apr 23, 2021 | 4:49 PM

ಈ ಆಟಗಾರ ತನ್ನ ಮೊದಲ ಪಂದ್ಯದಲ್ಲಿ ಅಬ್ಬರದ ಶತಕವನ್ನು ಗಳಿಸುವ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್‌ನ 14 ನೇ ಋತುವನ್ನು ಪ್ರಾರಂಭಿಸಿದ. ಜೊತೆಗೆ ಮೊದಲ ಬಾರಿಗೆ ಈ ಆಟಗಾರ ಐಪಿಎಲ್ ತಂಡದ ನಾಯಕತ್ವವನ್ನು ನಿರ್ವಹಿಸುತ್ತಿದ್ದಾನೆ. ಈ ಬ್ಯಾಟ್ಸ್‌ಮನ್ ಪಂಜಾಬ್ ಕಿಂಗ್ಸ್ ವಿರುದ್ಧ 119 ರನ್ ಗಳಿಸಿದಾಗ, ಎಲ್ಲರೂ ಈ ಆಟಗಾರನ ಮೇಲೆ ಹೊಗಳಿಕೆಯ ಸೇತುವೆಯನ್ನು ಕಟ್ಟಿದರು. ಆದರೆ ಈಗ ಪರಿಸ್ಥಿತಿ ವ್ಯತಿರಿಕ್ತವಾಗಿದೆ. ನಂತರದ ಮೂರು ಪಂದ್ಯಗಳಲ್ಲಿ ಈ ಆಟಗಾರ 4, 1 ಮತ್ತು 21 ರನ್ ಗಳಿಸಿದರು. ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಅವರ ಸಮಸ್ಯೆ ಸತತವಾಗಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಭಾರತದ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ಕೂಡ ಸಂಜು ಸ್ಯಾಮ್ಸನ್​ ಅವರನ್ನು ಟೀಕಿಸಿದರು. ಆದರೆ ಈಗ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಕೂಡ ಸಂಜು ಸ್ಯಾಮ್ಸನ್ ಅವರ ಬ್ಯಾಟಿಂಗ್ ಬಗ್ಗೆ ಮಾತಾನಾಡಿದ್ದಾರೆ.

ಪಂದ್ಯಾವಳಿಯಲ್ಲಿ ಚೆನ್ನಾಗಿ ಆರಂಭ ಮಾಡುತ್ತಾರೆ ವಾಸ್ತವವಾಗಿ, ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಸೋತಿದೆ. ಮೂರು ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ ಅವರ ಬ್ಯಾಟ್ ಮೌನವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಸಂಜು ಸ್ಯಾಮ್ಸನ್ ಅವರ ಬ್ಯಾಟಿಂಗ್ನಲ್ಲಿ ಈ ಸಮಸ್ಯೆ ಉಳಿದಿದೆ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ. ಸಂಜು ಯಾವಾಗಲೂ ಪಂದ್ಯಾವಳಿಯಲ್ಲಿ ಚೆನ್ನಾಗಿ ಆರಂಭ ಮಾಡುತ್ತಾರೆ ಆದರೆ ನಂತರದ ಪಂದ್ಯಗಳಲ್ಲಿ ನಿರಸ ಪ್ರದರ್ಶನ ನೀಡುತ್ತಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್‌ರಂತಹ ಬ್ಯಾಟ್ಸ್‌ಮನ್‌ಗಳು ದೊಡ್ಡ ಸ್ಕೋರ್ ಗಳಿಸಿದ ನಂತರವೂ ತಮ್ಮ ಫಾರ್ಮ್ ಅನ್ನು ಹಾಗೆಯೇ ಉಳಿಸಿಕೊಳ್ಳುತ್ತಾರೆ. ಆದರೆ ಸಂಜು ವಿಷಯದಲ್ಲಿ ಇದು ಭಿನ್ನವಾಗಿದೆ ಎಂದು ಗಂಭೀರ್ ಹೇಳಿದ್ದಾರೆ.

ಆಟಗಾರನ ಗ್ರಾಫ್ ಯಾವಾಗಲೂ ಸಮತೋಲನದಲ್ಲಿರಬೇಕು ಈ ಬಗ್ಗೆ ಮಾತಾನಾಡಿದ ಗೌತಮ್ ಗಂಭೀರ್, ನೀವು ಹಿಂದಿನ ಹಲವು ಐಪಿಎಲ್‌ಗಳನ್ನು ವೀಕ್ಷಿಸಿದರೆ, ಸಂಜು ಸ್ಯಾಮ್ಸನ್ ಪಂದ್ಯಾವಳಿಯಲ್ಲಿ ಉತ್ತಮ ಆರಂಭವನ್ನು ನೀಡುತ್ತಾರೆ ಎಂದು ನಿಮಗೆ ತಿಳಿಯುತ್ತದೆ, ಆದರೆ ನಂತರದ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡುತ್ತಾರೆ. ಇದರಿಂದ ಅವರ ಕಾರ್ಯಕ್ಷಮತೆಯ ಗ್ರಾಫ್ ಅನಿಯಮಿತವಾಗಿ ಉಳಿದಿದೆ. ಆದರೆ ಉತ್ತಮ ಆಟಗಾರನ ಗ್ರಾಫ್ ಯಾವಾಗಲೂ ಸಮತೋಲನದಲ್ಲಿರುತ್ತದೆ. ನೀವು ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಅವರನ್ನು ನೋಡಿದರೆ, 80 ಅಥವಾ ಹೆಚ್ಚಿನ ರನ್ ಗಳಿಸಿದ ನಂತರವೂ ಅವರು ಎಂದಿಗೂ 0 ಅಥವಾ 1 ಅಥವಾ 10 ಸ್ಕೋರ್ ಮಾಡಲಿಲ್ಲ, ಆದರೆ ಮುಂದಿನ ಕೆಲವು ಇನ್ನಿಂಗ್ಸ್‌ಗಳಲ್ಲಿ 30-40 ರನ್ ಗಳಿಸುತ್ತಾರೆ.

ಐಪಿಎಲ್ 2020 ರಲ್ಲಿ ಪರಿಸ್ಥಿತಿ ಒಂದೇ ಆಗಿತ್ತು ಆದರೆ ನೀವು ಸಂಜು ಸ್ಯಾಮ್ಸನ್‌ನನ್ನು ನೋಡಿದರೆ, ಅವನು 80-90 ರನ್ ಬಾರಿಸಿದ ನಂತರದ ಪಂದ್ಯಗಳಲ್ಲಿ ಹೀನಾಯ ಪ್ರದರ್ಶನ ತೋರುತ್ತಾರೆ ಎಂಬುದು ನಿಮಗೆಲ್ಲ ತಿಳಿದಿದೆ. ಪ್ರದರ್ಶನದಲ್ಲಿ ತುಂಬಾ ಲೋಪಗಳಿದ್ದರೆ, ಅದು ನೇರವಾಗಿ ಆಟಗಾರನ ಆಲೋಚನೆಗೆ ಸಂಬಂಧಿಸಿದೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆದ ಕಳೆದ ಆವೃತ್ತಿಯಲ್ಲಿ ಸಂಜು ಸ್ಯಾಮ್ಸನ್ ಎರಡು ಬಾರಿ 80 ಕ್ಕೂ ಹೆಚ್ಚು ರನ್ ಗಳಿಸಿದ್ದರು, ಆದರೆ ಇದರ ಹೊರತಾಗಿಯೂ ಅವರು ಪಂದ್ಯಾವಳಿಯಲ್ಲಿ ಕೇವಲ 375 ರನ್ ಗಳಿಸಲು ಸಾಧ್ಯವಾಯಿತು.

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ