IPL 2021: ಕೆಲಸ ಪೂರ್ಣಗೊಳಿಸದೆ ಆಟಗಾರರಿಗೆ ಮುಖ ತೋರಿಸುವುದು ಹೇಗೆ? ಅದಕ್ಕೆ ಮೆಟ್ಟಿಲ ಬಳಿಯೇ ಕುಳಿತೆ; ಆಂಡ್ರೆ ರಸ್ಸೆಲ್
IPL 2021: ಲೆಗ್ ಸೈಡ್‌ನಲ್ಲಿ ವಿಕೆಟ್ ಬಿಟ್ಟು ಬೌಲ್ಡ್ ಔಟ್ ಆಗಿದ್ದ ಕಾರಣ ಡ್ರೆಸಿಂಗ್ ರೂಮ್‌ನಲ್ಲಿ ಸಹ ಆಟಗಾರರಿಗೆ ಮುಖ ತೋರಿಸುವುದು ಹೇಗೆ ಎಂಬುದು ನನಗೆ ತಿಳಿಯಲಿಲ್ಲ.

ಚೆನ್ನೈ ನೀಡಿದ 221ರನ್ಗಳ ಬೃಹತ್ ಗುರಿ ಬೆನ್ನತ್ತಿದ್ದ ಕೆಕೆಆರ್, ದೀಪಕ್ ಚಹರ್ ದಾಳಿಗೆ ಕಕ್ಕಾಬಿಕ್ಕಿಯಾಯ್ತು. 31ರನ್ ಗಳಿಸುವಷ್ಟರಲ್ಲಿ ಕೊಲ್ಕತ್ತಾ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಯ್ತು. ನಿತೀಶ್ ರಾಣಾ, ಶುಭಮನ್ ಗಿಲ್, ಇಯಾನ್ ಮಾರ್ಗನ್ ಹಾಗೂ ಸುನಿಲ್ ನರೈನ್ಗೆ ಚಹರ್ ಗೇಟ್ಪಾಸ್ ನೀಡಿದ್ರು. 6ನೇ ವಿಕೆಟ್ಗೆ ಜೊತೆಯಾದ ಌಂಡ್ರೆ ರಸ್ಸೆಲ್ ಹಾಗೂ ಕಾರ್ತಿಕ್ ಜೋಡಿ, 81ರನ್ಗಳ ಜೊತೆಯಾಟವಾಡ್ತು. ವಾಂಖಡೆ ಮೈದಾನದಲ್ಲಿ ಪವರ್ ತೋರಿಸಿದ ರಸ್ಸೆಲ್, ಕೇವಲ 22ಬಾಲ್ಗಳಲ್ಲಿ 54 ರನ್ ಚಚ್ಚಿ ಔಟಾದ್ರು. ಆದ್ರೆ ಪಂದ್ಯ ಗೆಲ್ಲಿಸಿಕೊಡೋಕಾಗ್ಲಿಲ್ಲ ಅನ್ನೋ ನಿರಾಸೆಯಿಂದ ಪೆವಲಿಯನ್ಗೆ ತೆರಳದ ರಸ್ಸೆಲ್, ಮೆಟ್ಟಿಲ ಮೇಲೆ ಮಂಕಾಗಿ ಕುಳಿತುಕೊಂಡಿದ್ರು.
ಮುಖ ತೋರಿಸುವುದು ಹೇಗೆ ಎಂಬುದು ನನಗೆ ತಿಳಿಯಲಿಲ್ಲ ಅಂದು ಆ ರೀತಿ ಮಾಡಲು ಕಾರಣ ಏನೆಂಬುದನ್ನು ರಸೆಲ್ ತೆರೆದಿಟ್ಟಿದ್ದಾರೆ. ನಾನು ನಿಜಕ್ಕೂ ಭಾವುಕನಾಗಿದ್ದೆ. ಡ್ರೆಸಿಂಗ್ ರೂಮ್‌ಗೆ ಮರಳುವುದು ಹೇಗೆ ಎಂಬುದೇ ನನಗೆ ಗೊತ್ತಾಗಲಿಲ್ಲ. ಲೆಗ್ ಸೈಡ್‌ನಲ್ಲಿ ವಿಕೆಟ್ ಬಿಟ್ಟು ಬೌಲ್ಡ್ ಔಟ್ ಆಗಿದ್ದ ಕಾರಣ ಡ್ರೆಸಿಂಗ್ ರೂಮ್‌ನಲ್ಲಿ ಸಹ ಆಟಗಾರರಿಗೆ ಮುಖ ತೋರಿಸುವುದು ಹೇಗೆ ಎಂಬುದು ನನಗೆ ತಿಳಿಯಲಿಲ್ಲ. ಏಕೆಂದರೆ ನನ್ನ ಕೆಲಸವನ್ನು ನಾನು ಮುಗಿಸಿರಲಿಲ್ಲ. ತಂಡಕ್ಕೆ ಜಯ ತಂದುಕೊಡುವುದು ನನ್ನ ಉದ್ದೇಶವಾಗಿತ್ತು. ಹೀಗಾಗಿ ಬಹಳಾ ಭಾವುಕನಾಗಿ ಅಲ್ಲಿಯೇ ಕುಳಿತಿದ್ದೆ, ಎಂದು ಕೆಕೆಆರ್ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ರಸೆಲ್ ಹೇಳಿಕೊಂಡಿದ್ದಾರೆ.
ನಾನು ಬಹಳಾ ಭಾವುಕನಾದೆ ಕೆಲಸ ಮುಗಿಸದೇ ಔಟಾಗಿ ಬಂದಂತಹ ಸಂದರ್ಭದಲ್ಲಿ ಕೋಪ ಹೆಚ್ಚಿರುತ್ತದೆ. ಈ ಸಂದರ್ಭದಲ್ಲಿ ಕೋಪ ಹೊರಹಾಕುವ ಸಾಧ್ಯತೆಯೂ ಉಂಟು. ಆದರೆ, ಕಳೆದ ರಾತ್ರಿ ಹಾಗಾಗಲಿಲ್ಲ. ನಾನು ಬಹಳಾ ಭಾವುಕನಾದೆ. ಅತೀವ ಬೇಸರ ನನ್ನನ್ನು ಆವರಿಸಿತ್ತು. ತಂಡಕ್ಕೆ ಜಯ ತಂದುಕೊಡಲೇ ಬೇಕೆಂದು ನಾನು ನನ್ನ ಶಕ್ತಿ ಮೀರಿ ಪ್ರಯತ್ನಿಸಿದ್ದೆ. ಆದರೆ ಅದು ಸಾಧ್ಯವಾಗಲಿಲ್ಲ. ಹೀಗಾಗಿ ನನ್ನ ಹೃದಯ ಒಡೆದು ಹೋದಂತೆ ನನಗೆ ಬಾಸವಾಗುತ್ತಿತ್ತು ಎಂದು ರಸೆಲ್ ತಮ್ಮೊಳಗಿನ ಭಾವನೆಗಳನ್ನು ಹಂಚಿಕೊಂಡಿದ್ದಾರೆ.
ಕೊನೇ ಓವರ್ವರೆಗೂ ರಣರೋಚಕತೆಯಿಂದ ಕೂಡಿದ್ದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ರೋಚಕ ಗೆಲುವು ಸಾಧಿಸಿತು. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಸಿಎಸ್ಕೆಗೆ, ಋತುರಾಜ್ ಗಾಯಕ್ವಾಡ್ ಹಾಗೂ ಫಾ ಡುಪ್ಲೆಸಿಸ್ ಭರ್ಜರಿ ಆರಂಭ ನೀಡಿದ್ರು. ವಾಂಖೆಡೆ ಅಂಗಳದಲ್ಲಿ ಋತುರಾಜ್ ಹಾಗೂ ಡುಪ್ಲೆಸಿಸ್, 115ರನ್ಗಳ ಜೊತೆಯಾಟವಾಡಿದ್ರು. 42ಬಾಲ್ಗಳಲ್ಲಿ 6ಬೌಂಡರಿ, 4ಸಿಕ್ಸರ್ ಬಾರಿಸಿದ ಗಾಯಕ್ವಡ್ 64ರನ್ ಬಾರಿಸಿದ್ರು.
ಮನಬಂದಂತೆ ಚೆಂಡಾಡಿದ ಡುಪ್ಲಸಿಸ್ ಕೊಲ್ಕತ್ತಾ ಬೌಲರ್ಗಳನ್ನ ಮನಬಂದಂತೆ ಚೆಂಡಾಡಿದ ಡುಪ್ಲಸಿಸ್, ರನ್ ಮಾರುತವನ್ನ ಎಬ್ಬಿಸಿದ್ರು. 60ಬಾಲ್ಗಳಲ್ಲಿ 9ಬೌಂಡರಿ, 4ಸಿಕ್ಸರ್ ಸಿಡಿಸಿದ ಡುಪ್ಲೆಸಿಸ್, ಅಜೇಯ 95ರನ್ ಗಳಿಸಿದ್ರು. ಮೊಯಿನ್ ಅಲಿ 25ರನ್ ಗಳಿಸಿದ್ರು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಎಂ.ಎಸ್.ಧೋನಿ 8ಬಾಲ್ಗಳಲ್ಲಿ 17ರನ್ ಚಚ್ಚಿದ್ರು. ಇದ್ರೊಂದಿಗೆ ಚೆನ್ನೈ ಬರೋಬ್ಬರಿ 220ರನ್ ಕಲೆಹಾಕ್ತು.
ಇನ್ನೇನು ಗೆಲುವು ನಮ್ದೇ ಅಂದುಕೊಂಡಿದ್ದ ಸಿಎಸ್ಕೆ ವಿಲನ್ ಆಗಿದ್ದೇ ಪ್ಯಾಟ್ ಕಮಿನ್ಸ್. ಸ್ಯಾಮ್ ಕರ್ರನ್ ಮಾಡಿದ 16ನೇ ಓವರ್ನಲ್ಲಿ ಕಮ್ಮಿನ್ಸ್ ಬರೋಬ್ಬರಿ 30ರನ್ ಬಾರಿಸಿ, ಪಂದ್ಯಕ್ಕೆ ದೊಡ್ಡ ತಿರುವು ಕೊಟ್ರು. ಕಮಿನ್ಸ್ ಅಬ್ಬರಿಸಿದ್ದಕ್ಕೆ, ನಾಯಕ ಧೋನಿ ಸ್ಯಾಮ್ಸನ್ ವಿರುದ್ಧ ಗರಂ ಆದ್ರು. 34ಬಾಲ್ಗಳಲ್ಲಿ 4ಬೌಂಡರಿ, 6ಸಿಕ್ಸರ್ ಸಿಡಿಸಿದ ಕಮ್ಮಿನ್ಸ್, ಅಜೇಯ 66ರನ್ ಗಳಿಸಿದ್ರು. ಆದ್ರೆ, ಕಮ್ಮಿನ್ಸ್ಗೆ ಯಾವೊಬ್ಬ ಬ್ಯಾಟ್ಸ್ಮನ್ ಕೂಡ ಸಾಥ್ ನೀಡಲಿಲ್ಲ. ಇದ್ರಿಂದ ಕೆಕೆಆರ್ 202ರನ್ಗೆ ಆಲೌಟ್ ಆಯ್ತು. 18ರನ್ಗಳ ರೋಚಕ ಗೆಲುವು ಸಾಧಿಸಿದ ಸಿಎಸ್ಕೆ ಸತತ ಮೂರನೇ ಗೆಲುವು ದಾಖಲಿಸ್ತು.
Published On - 4:49 pm, Sat, 24 April 21