AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RR vs KKR, IPL 2021 Match 18 Result: ಸಂಜು- ಮಿಲ್ಲರ್ ಜೊತೆಯಾಟ; ಕೋಲ್ಕತ್ತಾ ವಿರುದ್ಧ ಗೆದ್ದ ರಾಜಸ್ಥಾನ್ ರಾಯಲ್ಸ್

TV9 Web
| Updated By: ganapathi bhat

Updated on:Nov 30, 2021 | 12:11 PM

RR vs KKR Scorecard: ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಐಪಿಎಲ್ 2021 ಟೂರ್ನಿಯ 18ನೇ ಪಂದ್ಯದ ಸಂಪೂರ್ಣ ವಿವರಗಳು ಇಲ್ಲಿದೆ.

RR vs KKR, IPL 2021 Match 18 Result: ಸಂಜು- ಮಿಲ್ಲರ್ ಜೊತೆಯಾಟ; ಕೋಲ್ಕತ್ತಾ ವಿರುದ್ಧ ಗೆದ್ದ ರಾಜಸ್ಥಾನ್ ರಾಯಲ್ಸ್
ಸಂಜು ಸ್ಯಾಮ್ಸನ್ ಹಾಗೂ ಡೇವಿಡ್ ಮಿಲ್ಲರ್

ಮುಂಬೈ: ಐಪಿಎಲ್ ಟೂರ್ನಿಯ 18ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ 6 ವಿಕೆಟ್‌ಗಳ ಸುಲಭ ಜಯ ದಾಖಲಿಸಿದೆ. ರಾಜಸ್ಥಾನ್ ಪರ ನಾಯಕ ಸಂಜು ಸ್ಯಾಮ್ಸನ್ ಔಟಾಗದೆ 41 ಬಾಲ್‌ಗೆ 42, ಮಿಲ್ಲರ್ ಔಟಾಗದೆ 24 ರನ್ ಕಲೆಹಾಕಿದ್ದಾರೆ. ಶಿವಂ ದುಬೆ ಹಾಗೂ ಜೈಸ್ವಾಲ್ ತಲಾ 22 ರನ್ ದಾಖಲಿಸಿ ತಂಡಕ್ಕೆ ನೆರವಾಗಿದ್ದಾರೆ. ಕೋಲ್ಕತ್ತಾ ಪರ ವರುಣ್ ಚಕ್ರವರ್ತಿ 2 ವಿಕೆಟ್ ಪಡೆದಿದ್ದಾರೆ. ಶಿವಂ ಮಾವಿ ಹಾಗೂ ಸುನಿಲ್‌ ನರೈನ್ ರನ್ ನಿಯಂತ್ರಿಸಿದ್ದಾರೆ. ಆದರೂ ಪಂದ್ಯ ಗೆಲ್ಲಲು ಕೋಲ್ಕತ್ತಾ ವಿಫಲವಾಗಿದೆ.

ಇದಕ್ಕೂ ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ 20 ಓವರ್‌ಗೆ 9 ವಿಕೆಟ್ ಕಳೆದುಕೊಂಡು 133 ರನ್ ದಾಖಲಿಸಿತ್ತು. ಈ ಮೂಲಕ ರಾಜಸ್ಥಾನ್ ರಾಯಲ್ಸ್‌ಗೆ ಗೆಲ್ಲಲು 134 ರನ್ ಗುರಿ‌ ನೀಡಿತ್ತು. ಕೋಲ್ಕತ್ತಾ ಪರ ನಿತೀಶ್ ರಾಣಾ 22, ರಾಹುಲ್ ತ್ರಿಪಾಠಿ 36 ಹಾಗೂ ದಿನೇಶ್ ಕಾರ್ತಿಕ್ 25 ರನ್ ಗಳಿಸಿದ್ದರು. ಉಳಿದ ಪ್ರಮುಖ ಬ್ಯಾಟ್ಸ್‌ಮನ್‌ಗಳು ಒಂದಂಕಿ ದಾಟಲು ಪರದಾಡಿದ್ದರು.

ರಾಜಸ್ಥಾನ್ ರಾಯಲ್ಸ್ ಪರ ಕ್ರಿಸ್ ಮಾರಿಸ್ ಭರ್ಜರಿ ಬೌಲಿಂಗ್ ಪ್ರದರ್ಶಿಸಿದ್ದರು. 4 ಓವರ್‌ಗೆ 23 ರನ್‌ ನೀಡಿ 4 ವಿಕೆಟ್ ಕಬಳಿಸಿದ್ದರು. ಸಕರಿಯಾ, ಉನಾದ್ಕತ್ ಹಾಗೂ‌ ಮುಸ್ತಫಿಜುರ್ ರಹಮಾನ್ ತಲಾ 1 ವಿಕೆಟ್ ಪಡೆದಿದ್ದರು.

LIVE NEWS & UPDATES

The liveblog has ended.
  • 24 Apr 2021 11:24 PM (IST)

    6 ವಿಕೆಟ್​ಗಳ ಗೆಲುವು ದಾಖಲಿಸಿದ ರಾಜಸ್ಥಾನ್

    ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ 6 ವಿಕೆಟ್​ಗಳ ಗೆಲುವು ದಾಖಲಿಸಿದೆ. 18.5 ಓವರ್​ಗಳಲ್ಲೇ 134 ರನ್ ದಾಖಲಿಸಿ ಗುರಿ ತಲುಪಿದೆ. ಕೋಲ್ಕತ್ತಾ ಮತ್ತೆ ಸೋಲುಂಡಿದೆ.

  • 24 Apr 2021 11:16 PM (IST)

    12 ಬಾಲ್​ಗೆ ಕೇವಲ 5 ರನ್; ಗೆಲುವಿನತ್ತ ಆರ್​ಆರ್​

    ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಹಾಗೂ ಡೇವಿಡ್ ಮಿಲ್ಲರ್ ಜೊತೆಯಾಟ ತಂಡವನ್ನು ಗೆಲುವಿನತ್ತ ಕೊಂಡೊಯ್ಯುತ್ತಿದೆ. ರಾಜಸ್ಥಾನ್ ಗೆಲ್ಲಲು 12 ಬಾಲ್​ಗೆ ಕೇವಲ 5 ರನ್ ಬೇಕಾಗಿದೆ.

  • 24 Apr 2021 11:05 PM (IST)

    ರಾಜಸ್ಥಾನ್ ಗೆಲ್ಲಲು 24 ಬಾಲ್​ಗೆ 21 ರನ್ ಬೇಕು

    ರಾಜಸ್ಥಾನ್ ರಾಯಲ್ಸ್ 16 ಓವರ್​ಗೆ 4 ವಿಕೆಟ್ ಕಲೆದುಕೊಂಡು 113 ರನ್ ದಾಖಲಿಸಿದೆ. ತಂಡ ಗೆಲ್ಲಲು 24 ಬಾಲ್ ಉಳಿದಿರುವಂತೆ 21 ರನ್ ಬೇಕಿದೆ. ಸಂಜು ಸ್ಯಾಮ್ಸನ್ ಹಾಗೂ ಡೇವಿಡ್ ಮಿಲ್ಲರ್ ಕ್ರೀಸ್​ನಲ್ಲಿದ್ದಾರೆ.

  • 24 Apr 2021 10:59 PM (IST)

    ರಾಜಸ್ಥಾನ್ ಗೆಲ್ಲಲು 30 ಬಾಲ್​ಗೆ 30 ರನ್ ಬೇಕು

    ರಾಜಸ್ಥಾನ್ ರಾಯಲ್ಸ್ ಗೆಲ್ಲಲು 30 ಬಾಲ್​ಗೆ 30 ರನ್ ಬೇಕಾಗಿದೆ. ತಂಡದ ಮೊತ್ತ 15 ಓವರ್ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 104 ಆಗಿದೆ. ರಿಯಾನ್ ಪರಾಗ್, ಮಾರಿಸ್ ಬ್ಯಾಟಿಂಗ್​ಗೆ ಬಾಕಿ ಇದ್ದಾರೆ.

  • 24 Apr 2021 10:50 PM (IST)

    100 ರನ್ ಪೇರಿಸಿದ ರಾಜಸ್ಥಾನ್ ರಾಯಲ್ಸ್

    ರಾಜಸ್ಥಾನ್ ರಾಯಲ್ಸ್ 14 ಓವರ್​ಗಳ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 101 ರನ್ ದಾಖಲಿಸಿದೆ. ರಾಜಸ್ಥಾನ್ ಗೆಲ್ಲಲು 36 ಬಾಲ್​ಗೆ 33 ರನ್ ಬೇಕಿದೆ. ಸಂಜು ಸ್ಯಾಮ್ಸನ್ 34 ಬಾಲ್​ಗೆ 35 ಹಾಗೂ ಡೇವಿಡ್ ಮಿಲ್ಲರ್ 1 ಬಾಲ್​ಗೆ 1 ರನ್ ಗಳಿಸಿ ಆಡುತ್ತಿದ್ದಾರೆ.

  • 24 Apr 2021 10:33 PM (IST)

    ದುಬೆ ಔಟ್

    ಸಂಜು ಜೊತೆ ಉತ್ತಮ ಆಟ ಆಡುತ್ತಿದ್ದ ದುಬೆ, 22 ರನ್​ಗಳಿಸಿ ರಾಹುಲ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಹಿಂದಿನ ಎಸೆತದಲ್ಲಿ ರಾಹುಲ್ ಬೌಲಿಂಗ್​ನಲ್ಲಿ ಭರ್ಜರಿ ಬೌಂಡರಿ ಬಾರಿಸಿದ್ದ ದುಬೆ ಮುಂದಿನ ಎಸೆತದಲ್ಲಿ ಕ್ಯಾಚಿತ್ತು ಔಟಾಗಿದ್ದಾರೆ. ಈ ಜೋಡಿ ತಂಡದ ಮೊತ್ತವನ್ನು ಶತಕದತ್ತ ತೆಗೆದುಕೊಂಡು ಹೋಗುತ್ತಿದ್ದರು. ಆದರೆ ತಂಡಕ್ಕೆ ಈಗ ಸಂಕಷ್ಟ ಎದುರಾಗಿದೆ.

  • 24 Apr 2021 10:23 PM (IST)

    ಸಂಜು- ದುಬೆ ಜೊತೆಯಾಟ

    ಎರಡು ವಿಕೆಟ್ ಉರುಳಿದ ಬಳಿಕ ನಾಯಕ ಸಂಜುಗೆ ಜೊತೆಯಾಗಿರುವ ದುಬೆ ಉತ್ತಮ ಸಾಥ್ ನೀಡುತ್ತಿದ್ದಾರೆ. ಈ ಎರಡು ಜೋಡಿಯ ಆಟ ತಂಡಕ್ಕೆ ಅವಶ್ಯಕವಾಗಿದೆ. ಸಂಜು 19 ಬಾಲ್ಗೆ 27 ರನ್​ಗಳಿಸಿದರೆ, ದುಬೆ 17 ರನ್​ಗಳಿಸಿ ಬ್ಯಾಟಿಂಗ್​ನಲ್ಲಿದ್ದಾರೆ.

  • 24 Apr 2021 10:14 PM (IST)

    ಆರ್​ಆರ್​ ಗೆಲ್ಲಲು 78 ಬಾಲ್​ಗೆ 75 ರನ್ ಬೇಕು

    ರಾಜಸ್ಥಾನ್ ರಾಯಲ್ಸ್ ಗೆಲ್ಲಲು 78 ಬಾಲ್​ಗೆ 75 ರನ್ ಬೇಕಾಗಿದೆ. ಸಂಜು ಸ್ಯಾಮ್ಸನ್ 10 ಬಾಲ್​ಗೆ 15 ಹಾಗೂ ಶಿವಂ ದುಬೆ 8 ಬಲ್​ಗೆ 13 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

  • 24 Apr 2021 10:11 PM (IST)

    ಪವರ್​ಪ್ಲೇ ಅಂತ್ಯಕ್ಕೆ 50/2

    6 ಓವರ್​ಗಳ ಅಂತ್ಯಕ್ಕೆ ರಾಜಸ್ಥಾನ್ ರಾಯಲ್ಸ್ 50 ರನ್ ಗಳಿಸಿ 2 ವಿಕೆಟ್ ಕಳೆದುಕೊಂಡಿದೆ. ಗೆಲ್ಲಲು 84 ಬಾಲ್​ಗೆ 84 ರನ್ ಬೇಕಿದೆ. ತಂಡದ ಪರ ಸಂಜು ಸ್ಯಾಮ್ಸನ್ ಹಾಗೂ ಶಿವಂ ದುಎ ಬ್ಯಾಟ್ ಮಾಡುತ್ತಿದ್ದಾರೆ.

  • 24 Apr 2021 10:07 PM (IST)

    ಜೈಸ್ವಾಲ್ ಔಟ್

    ಯಶಸ್ವಿ ಜೈಸ್ವಾಲ್ 17 ಬಾಲ್​ಗೆ 22 ರನ್ ಗಳಿಸಿ ಔಟ್ ಆಗಿದ್ದಾರೆ. ಶಿವಂ ಮಾವಿ ಬೌಲಿಂಗ್​ಗೆ ನಾಗರ್ಕೋಟಿ ಕ್ಯಾಚ್ ಹಿಡಿದು ಎರಡನೇ ವಿಕೆಟ್ ಪಡೆದಿದ್ದಾರೆ. ಸಂಜು ಸ್ಯಾಮ್ಸನ್ ಹಾಗೂ ಶಿವಂ ದುಬೆ ಬ್ಯಾಟಿಂಗ್​ ಮಾಡುತ್ತಿದ್ದಾರೆ.

  • 24 Apr 2021 09:58 PM (IST)

    ಬಟ್ಲರ್ ಔಟ್

    ರಾಜಸ್ಥಾನ್ ರಾಯಲ್ಸ್ ಮೊದಲ ವಿಕೆಟ್ ಪತನವಾಗಿದೆ. ಜಾಸ್ ಬಟ್ಲರ್ 5 ರನ್ ಗಳಿಸಿ ವರುಣ್ ಚಕ್ರವರ್ತಿಗೆ ವಿಕೆಟ್ ಒಪ್ಪಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್ 4 ಓವರ್ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 30 ರನ್ ಪೇರಿಸಿದೆ. ರಾಜಸ್ಥಾನ್ ರಾಯಲ್ಸ್ ಪರ ಸಂಜು ಸ್ಯಾಮ್ಸನ್ ಹಾಗೂ ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಗೆಲ್ಲಲು 104 ರನ್ ಬೇಕಿದೆ.

  • 24 Apr 2021 09:48 PM (IST)

    ರಾಜಸ್ಥಾನ್ ರಾಯಲ್ಸ್ 12/0 (2 ಓವರ್)

    ರಾಜಸ್ಥಾನ್ ರಾಯಲ್ಸ್ 2 ಓವರ್​ನ ಅಂತ್ಯಕ್ಕೆ ವಿಕೆಟ್ ನ್ಟವಿಲ್ಲದೆ 12 ರನ್ ಗಳಿಸಿದೆ. ಗೆಲ್ಲಲು 122 ರನ್ ಬೇಕಿದೆ. ಜೋಸ್ ಬಟ್ಲರ್ ಹಾಗೂ ಯಶಸ್ವಿ ಜೈಸ್ವಾಲ್ ಕ್ರಿಸ್​ನಲ್ಲಿದ್ದಾರೆ.

  • 24 Apr 2021 09:22 PM (IST)

    ಕೋಲ್ಕತ್ತಾ ನೈಟ್ ರೈಡರ್ಸ್ 133/9 (20 ಓವರ್)

    ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ನಿಗದಿತ 20 ಓವರ್​ಗೆ 133 ರನ್ ಗಳಿಸಿ 9 ವಿಕೆಟ್ ಕಳೆದುಕೊಂಡಿದೆ. ರಾಜಸ್ಥಾನ್ ರಾಯಲ್ಸ್ ಗೆಲ್ಲಲು 134 ರನ್ ಗುರಿ ತಲುಪಬೇಕಿದೆ. ಇನ್ನಿಂಗ್ಸ್​ನ ಕೊನೆಯ ಬಾಲ್​ನಲ್ಲಿ ಶಿವಂ ಮಾವಿ ಔಟ್ ಆಗಿದ್ದಾರೆ.

  • 24 Apr 2021 09:18 PM (IST)

    ಕಮ್ಮಿನ್ಸ್ ಔಟ್

    ಕ್ರಿಸ್ ಮಾರಿಸ್ ಬೌಲಿಂಗ್​ಗೆ ರಿಯಾನ್ ಪರಾಗ್​ಗೆ ಕ್ಯಾಚ್ ನೀಡಿ ಕಮ್ಮಿನ್ಸ್ ಔಟ್ ಆಗಿದ್ದಾರೆ. 6 ಬಾಲ್​ಗೆ 10 ರನ್ ನೀಡಿ ನಿರ್ಗಮಿಸಿದ್ದಾರೆ. ಶಿವಂ ಮಾವಿ ಹಾಗೂ ಪ್ರಸಿದ್ಧ್ ಕೃಷ್ಣ ಕ್ರಿಸ್​ನಲ್ಲಿದ್ದಾರೆ.

  • 24 Apr 2021 09:16 PM (IST)

    ಕೆಕೆಆರ್ 127/7 (19 ಓವರ್)

    ಇನ್ನು ಒಂದು ಓವರ್ ಬಾಕಿ ಉಳಿದಿರುವಂತೆ ಕೋಲ್ಕತ್ತಾ ನೈಟ್ ರೈಡರ್ಸ್ ಮೊತ್ತ 7 ವಿಕೆಟ್ ಕಳೆದುಕೊಂಡು 127 ಆಗಿದೆ. ಕಮ್ಮಿನ್ಸ್ ಹಾಗೂ ಶಿವಂ ಮಾವಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

  • 24 Apr 2021 09:13 PM (IST)

    ರಸ್ಸೆಲ್ ಬೆನ್ನಲ್ಲಿ ಔಟಾದ ದಿನೇಶ್ ಕಾರ್ತಿಕ್

    ಕೋಲ್ಕತ್ತಾ ನೈಟ್ ರೈಡರ್ಸ್ ಪರ ಉತ್ತಮ ಆಟವಾಡಿದ್ದ ದಿನೇಶ್ ಕಾರ್ತಿಕ್ ಔಟ್ ಆಗಿದ್ದಾರೆ. 24 ಬಾಲ್​ಗೆ 25 ರನ್ ಗಳಿಸಿ, ಮಾರಿಸ್ ಬಾಲ್​ಗೆ ಸಕರಿಯಾಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ. ಕೆಕೆಆರ್ ತಂಡ 18 ಓವರ್​ಗೆ 118 ರನ್ ಗಳಿಸಿ 7 ವಿಕೆಟ್ ಕಳೆದುಕೊಂಡಿದೆ.

  • 24 Apr 2021 09:10 PM (IST)

    ರಸ್ಸೆಲ್ ಔಟ್

    ಆಂಡ್ರೆ ರಸ್ಸೆಲ್ 7 ಬಾಲ್​ಗೆ ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಪಾಟ್ ಕಮ್ಮಿನ್ಸ್ ಹಾಗೂ ದಿನೇಶ್ ಕಾರ್ತಿಕ್ ಕಣದಲ್ಲಿದ್ದಾರೆ.

  • 24 Apr 2021 09:05 PM (IST)

    100ರ ಗಡಿ ದಾಟಿದ ಕೋಲ್ಕತ್ತಾ

    ಕೋಲ್ಕತ್ತಾ ನೈಟ್ ರೈಡರ್ಸ್ 17 ಓವರ್ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 110 ರನ್ ದಾಖಲಿಸಿದೆ. ದಿನೇಶ್ ಕಾರ್ತಿಕ್ 22 ಬಾಲ್​ಗೆ 25 ಹಾಗೂ ರಸ್ಸೆಲ್ 4 ಬಾಲ್​ಗೆ 3 ರನ್ ಗಳಿಸಿ ಕ್ರಿಸ್​ನಲ್ಲಿದ್ದಾರೆ.

  • 24 Apr 2021 08:56 PM (IST)

    ರಾಹುಲ್ ತ್ರಿಪಾಠಿ ಔಟ್

    ಮುಸ್ತಫಿಜುರ್ ರಹಮಾನ್ ಬಾಲ್​ಗೆ ರಿಯಾನ್ ಪರಾಗ್​ಗೆ ಕ್ಯಾಚ್ ನೀಡಿ ರಾಹುಲ್ ತ್ರಿಪಾಠಿ ಔಟ್ ಆಗಿದ್ದಾರೆ. ಉತ್ತಮವಾಗಿ ಆಡುತ್ತಿದ್ದ ತ್ರಿಪಾಠಿ 36 ರನ್ ಗಳಿಸಿ ನಿರ್ಗಮಿಸಿದ್ದಾರೆ. ದಿನೇಶ್ ಕಾರ್ತಿಕ್ ಹಾಗೂ ಆಂಡ್ರೆ ರಸ್ಸೆಲ್ ಜೊತೆಯಾಗಿದ್ದಾರೆ. ಅಂತಿಮ ಓವರ್​ಗಳಲ್ಲಿ ಸ್ಫೋಟಕ ಆಟ ಕಾಣುವ ನಿರೀಕ್ಷೆ ಇದೆ. ಕೆಕೆಆರ್ 16 ಓವರ್​ಗೆ 98 ರನ್ ಗಳಿಸಿ 5 ವಿಕೆಟ್ ಕಳೆದುಕೊಂಡಿದೆ.

  • 24 Apr 2021 08:52 PM (IST)

    15 ಓವರ್ ಅಂತ್ಯಕ್ಕೆ 93/4

    ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 15ನೇ ಓವರ್ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 93 ರನ್ ದಾಖಲಿಸಿದೆ. ರಾಹುಲ್ ತ್ರಿಪಾಠಿ 25 ಬಾಲ್​ಗೆ 36 ರನ್ ಹಾಗೂ ದಿನೇಶ್ ಕಾರ್ತಿಕ್ 14 ಬಾಲ್​ಗೆ 14 ರನ್ ಪೇರಿಸಿ ಇನ್ನಿಂಗ್ಸ್ ಮೊತ್ತ ಹೆಚ್ಚಿಸಲು ಪ್ರಯತ್ಮಿಸುತ್ತಿದ್ದಾರೆ.

  • 24 Apr 2021 08:41 PM (IST)

    ಕೆಕೆಆರ್ 76/4 (13 ಓವರ್)

    ಕೋಲ್ಕತ್ತಾ ನೈಟ್ ರೈಡರ್ಸ್ 13 ಓವರ್​ಗೆ 76 ರನ್ ಗಳಿಸಿ 4 ವಿಕೆಟ್ ಕಳೆದುಕೊಂಡಿದೆ. ರಾಹುಲ್ ತ್ರಿಪಾಠಿ ಕೋಲ್ಕತ್ತಾಗೆ ಆಸರೆಯಾಗಿದ್ದಾರೆ. ದಿನೇಶ್ ಕಾರ್ತಿಕ್ ಕ್ರೀಸ್​ನಲ್ಲಿದ್ದಾರೆ.

  • 24 Apr 2021 08:32 PM (IST)

    ಮೋರ್ಗನ್ ರನ್ ಔಟ್

    ಕೆಕೆಆರ್ ನಾಯಕ ಇಯಾನ್ ಮೋರ್ಗನ್ ಶೂನ್ಯಕ್ಕೆ ಔಟ್ ಆಗಿದ್ದಾರೆ. ಕ್ರಿಸ್ ಮಾರಿಸ್​ಗೆ ರನ್ ಔಟ್ ಆಗುವ ಮೂಲಕ ಪೆವಿಲಿಯನ್ ಹಾದಿ ಹಿಡಿದಿದ್ದಾರೆ. ಇದು ಪಂದ್ಯದ ಎರಡನೇ ರನ್ ಔಟ್ ಆಗಿದೆ. ಪಂದ್ಯದಲ್ಲಿ ಶುಬ್​ಮನ್ ಗಿಲ್ ಕೂಡ ರನ್ ಔಟ್ ಆಗಿದ್ದರು. ಕೋಲ್ಕತ್ತಾ ನೈಟ್ ರೈಡರ್ಸ್ 11 ಓವರ್​ಗೆ 62 ರನ್ ಗಳಿಸಿ 4 ವಿಕೆಟ್ ಕಳೆದುಕೊಂಡಿದೆ. ತಂಡದ ಪರ ರಾಹುಲ್ ತ್ರಿಪಾಠಿ ಮತ್ತು ದಿನೇಶ್ ಕಾರ್ತಿಕ್ ಬ್ಯಾಟಿಂಗ್ ಮಾಡುತ್ತಿದ್ದಾರೆ.

  • 24 Apr 2021 08:26 PM (IST)

    ಸುನಿಲ್ ನರೈನ್ ಔಟ್

    ಸುನಿಲ್ ನರೈನ್ 7 ಬಾಲ್​ಗೆ 6 ರನ್ ಗಳಿಸಿ ಜಯದೇವ್ ಉನಾದ್ಕತ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಜೈಸ್ವಾಲ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ಪರ ರಾಹುಲ್ ತ್ರಿಪಾಠಿ ಹಾಗೂ ಇಯಾನ್ ಮೋರ್ಗನ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಕೆಕೆಆರ್ 10 ಓವರ್​ಗೆ 3 ವಿಕೆಟ್ ಕಳೆದುಕೊಂಡು 55 ರನ್ ದಾಖಲಿಸಿದೆ.

  • 24 Apr 2021 08:18 PM (IST)

    ನಿತೀಶ್ ರಾಣಾ ಔಟ್

    25 ಬಾಲ್​ಗೆ 22 ರನ್ ಗಳಿಸಿ ನಿತೀಶ್ ರಾಣಾ ಔಟ್ ಆಗಿದ್ದಾರೆ. ಚೇತನ್ ಸಕರಿಯಾ ಬಾಲ್​ಗೆ ಸಂಜು ಸ್ಯಾಮ್ಸನ್​ಗೆ ಕ್ಯಾಚ್ ಒಪ್ಪಿಸಿ ನಿರ್ಗಮಿಸಿದ್ದಾರೆ. ರಾಹುಲ್ ತ್ರಿಪಾಠಿ ಹಾಗೂ ಸುನಿಲ್ ನರೈನ್ ಬ್ಯಾಟಿಂಗ್ ಮಾಡುತ್ತಿದ್ದಾರೆ.

  • 24 Apr 2021 08:14 PM (IST)

    ಕೆಕೆಆರ್ 45/1 (8 ಓವರ್)

    ಕೋಲ್ಕತ್ತಾ ನೈಟ್ ರೈಡರ್ಸ್ 8 ಓವರ್​ಗಳ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 45 ರನ್ ದಾಖಲಿಸಿದೆ. ನಿತೀಶ್ ರಾಣಾ 24 ಬಾಲ್​ಗೆ 1 ಬೌಂಡರಿ, 1 ಸಿಕ್ಸರ್ ಸಹಿತ 22 ರನ್ ಪೇರಿಸಿದ್ದಾರೆ. ರಾಹುಲ್ ತ್ರಿಪಾಠಿ 5 ಬಾಲ್​ಗೆ 10 ರನ್ ಗಳಿಸಿದ್ದಾರೆ.

  • 24 Apr 2021 08:10 PM (IST)

    ಶುಬ್​ಮನ್ ಗಿಲ್ ರನೌಟ್ ಆಗಿದ್ದು ಹೀಗೆ

    ಶುಬ್​ಮನ್ ಗಿಲ್ ರನೌಟ್ ಆಗಿ ವಿಕೆಟ್ ಒಪ್ಪಿಸಿದ್ದು ಹೀಗೆ..

  • 24 Apr 2021 08:00 PM (IST)

    ಪವರ್​ಪ್ಲೇ ಅಂತ್ಯಕ್ಕೆ 25/1

    ಕೋಲ್ಕತ್ತಾ ನೈಟ್ ರೈಡರ್ಸ್ 6 ಓವರ್​ಗಳ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 25 ರನ್ ದಾಖಲಿಸಿದೆ. ನಿತೀಶ್ ರಾಣಾ ಹಾಗೂ ರಾಹುಲ್ ತ್ರಿಪಾಠಿ ಬ್ಯಾಟಿಂಗ್​ನಲ್ಲಿದ್ದಾರೆ.

  • 24 Apr 2021 07:59 PM (IST)

    ಶುಬ್​ಮನ್ ಗಿಲ್ ಔಟ್

    ಶುಬ್​ಮನ್ ಗಿಲ್ 19 ಬಾಲ್​ಗೆ 11 ರನ್ ಗಳಿಸಿ ಔಟ್ ಆಗಿದ್ದಾರೆ. ಜಾಸ್ ಬಟ್ಲರ್​ಗೆ ರನೌಟ್ ಆಗಿ ವಿಕೆಟ್ ಒಪ್ಪಿಸಿದ್ದಾರೆ.

  • 24 Apr 2021 07:55 PM (IST)

    ಕೆಕೆಆರ್ 23/0 (5 ಓವರ್)

    ಕೋಲ್ಕತ್ತಾ ನೈಟ್ ರೈಡರ್ಸ್ 5 ಓವರ್​ಗಳ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 23 ರನ್ ಗಳಿಸಿದೆ. ನಿತೀಶ್ ರಾಣಾ ಹಾಗೂ ಶುಬ್​ಮನ್ ಗಿಲ್ ಬ್ಯಾಟಿಂಗ್​ನಲ್ಲಿದ್ದಾರೆ.

  • 24 Apr 2021 07:52 PM (IST)

    ಕೋಲ್ಕತ್ತಾಗೆ ಉತ್ತಮ ಆರಂಭ

    ಕೋಲ್ಕತ್ತಾಗೆ ನಿತೀಶ್ ರಾಣಾ ಹಾಗೂ ಶುಬ್​ಮನ್ ಗಿಲ್ ಉತ್ತಮ ಆರಂಭ ಒದಗಿಸಿಕೊಟ್ಟಿದ್ದಾರೆ. ನಿತೀಶ್ ರಾಣಾ 13 ಬಾಲ್​ಗೆ 10 ರನ್ ಹಾಗೂ ಶುಬ್​ಮನ್ ಗಿಲ್ 14 ಬಾಲ್​ಗೆ 9 ರನ್ ಗಳಿಸಿ ಕಣದಲ್ಲಿದ್ದಾರೆ.

  • 24 Apr 2021 07:46 PM (IST)

    ಕೆಕೆಆರ್ 14/0 (3 ಓವರ್)

    ಕೋಲ್ಕತ್ತಾ ನೈಟ್ ರೈಡರ್ಸ್ 3 ಓವರ್​ ಅಂತ್ಯಕ್ಕೆ ವಿಕೆಟ್ ಕಳೆದುಕೊಳ್ಳದೆ 14 ರನ್ ಕಲೆಹಾಕಿದೆ. ಉನಾದ್ಕತ್, ಸಕರಿಯಾ ಹಾಗೂ ಮುಸ್ತಫಿಜುರ್ ರಹಮಾನ್ ತಲಾ ಒಂದು ಓವರ್ ಬೌಲಿಂಗ್ ಮಾಡಿದ್ದಾರೆ.

  • 24 Apr 2021 07:37 PM (IST)

    ಕೆಕೆಆರ್ 4/0 (1 ಓವರ್)

    ಕೋಲ್ಕತ್ತಾ ನೈಟ್ ರೈಡರ್ಸ್ 1 ಓವರ್​ಗೆ ವಿಕೆಟ್ ನಷ್ಟವಿಲ್ಲದೆ 4 ರನ್ ಗಳಿಸಿದೆ. ನಿತೀಶ್ ರಾಣಾ ಹಾಗೂ ಶುಬ್​ಮನ್ ಗಿಲ್ ಆರಂಭಿಕ ಆಟಗಾರರಾಗಿ ಕಣಕ್ಕಿಳಿದಿದ್ದಾರೆ. ಜಯದೇವ್ ಉನಾದ್ಕತ್ ಮೊದಲ ಓವರ್ ಬೌಲಿಂಗ್ ಮಾಡಿದ್ದಾರೆ.

  • 24 Apr 2021 07:18 PM (IST)

    ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇಯಿಂಗ್ ಇಲೆವೆನ್

    ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇಯಿಂಗ್​ನಲ್ಲಿ 1 ಬದಲಾವಣೆ ಮಾಡಿಕೊಳ್ಳಲಾಗಿದೆ. ನಾಗರ್ಕೋಟಿ ಬದಲಿಗೆ ಶಿವಂ ಮಾವಿ ಪ್ಲೇಯಿಂಗ್ ಇಲೆವೆನ್​ನಲ್ಲಿ ಸ್ಥಾನ ಪಡೆದಿದ್ದಾರೆ.

  • 24 Apr 2021 07:16 PM (IST)

    ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ ಇಲೆವೆನ್

    ಯಶಸ್ವಿ ಜೈಸ್ವಾಲ್ ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ ಇಲೆವೆನ್​ಗೆ ಹೊಸ ಸೇರ್ಪಡೆಯಾಗಿದ್ದಾರೆ..

  • 24 Apr 2021 07:13 PM (IST)

    ಆರ್​ಆರ್​ಗೆ ಕೆಕೆಆರ್ ಸವಾಲ್

    ರಾಜಸ್ಥಾನ್ ತಂಡದ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ಗೆಲ್ಲುವ ಉತ್ಸಾಹದಲ್ಲಿದೆ.

  • 24 Apr 2021 07:12 PM (IST)

    ಕೋಲ್ಕತ್ತಾ ವಿರುದ್ಧ ರಾಜಸ್ಥಾನ್ ರಾಯಲ್ಸ್ ಹಣಾಹಣಿ

    ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಸೆಣೆಸಾಡಲಿದೆ. ಸೋಲಿನ ಸುಳಿಯಿಂದ ಮೇಲೇಳಲು ಉಭಯ ತಂಡಗಳು ಪ್ರಯತ್ನ ನಡೆಸುತ್ತಿವೆ.

  • 24 Apr 2021 07:08 PM (IST)

    ರಾಜಸ್ಥಾನ್ ರಾಯಲ್ಸ್ ಟಾಸ್ ವಿನ್

    ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ಬೌಲಿಂಗ್ ಆಯ್ದುಕೊಂಡಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ಬ್ಯಾಟಿಂಗ್ ಮಾಡಲಿದೆ.

Published On - Apr 24,2021 11:24 PM

Follow us
ಪ್ರಕೃತಿಯ ಶಕ್ತಿ ಮುಂದೆ ನಾವೇನೂ ಅಲ್ಲ!; ಈ ವಿಡಿಯೋ ನೋಡಿ
ಪ್ರಕೃತಿಯ ಶಕ್ತಿ ಮುಂದೆ ನಾವೇನೂ ಅಲ್ಲ!; ಈ ವಿಡಿಯೋ ನೋಡಿ
ಕನ್ನಡ ಸಿನಿಮಾಗೆ ಬೆಳಗ್ಗೆ 9.30ರ ಶೋ ಕೊಟ್ಟರೆ ಜನ ಬರಲ್ಲ: ಶ್ರೀನಗರ ಕಿಟ್ಟಿ
ಕನ್ನಡ ಸಿನಿಮಾಗೆ ಬೆಳಗ್ಗೆ 9.30ರ ಶೋ ಕೊಟ್ಟರೆ ಜನ ಬರಲ್ಲ: ಶ್ರೀನಗರ ಕಿಟ್ಟಿ
ಬಿಹಾರದಲ್ಲಿ ಭಾರೀ ಮಳೆಯಿಂದ ಆರೆಂಜ್ ಅಲರ್ಟ್ ಘೋಷಣೆ;  14 ಜನರು ಸಾವು
ಬಿಹಾರದಲ್ಲಿ ಭಾರೀ ಮಳೆಯಿಂದ ಆರೆಂಜ್ ಅಲರ್ಟ್ ಘೋಷಣೆ;  14 ಜನರು ಸಾವು
ಮಧ್ಯಾಹ್ನ ಬೆಂಗಳೂರಿಂದ ಲಂಡನ್​ಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನ ರದ್ದು
ಮಧ್ಯಾಹ್ನ ಬೆಂಗಳೂರಿಂದ ಲಂಡನ್​ಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನ ರದ್ದು
ನಮ್ಮ ಸಚಿವ ಸ್ಥಾನ ಉಳಿಸಿಕೊಳ್ಳುವುದು ಕಷ್ಟವಾಗಿದೆ: ಸತೀಶ್ ಜಾರಕಿಹೊಳಿ
ನಮ್ಮ ಸಚಿವ ಸ್ಥಾನ ಉಳಿಸಿಕೊಳ್ಳುವುದು ಕಷ್ಟವಾಗಿದೆ: ಸತೀಶ್ ಜಾರಕಿಹೊಳಿ
‘ಥಗ್ ಲೈಫ್’ ರಿಲೀಸ್ ಆದರೂ ನೋಡಬೇಡಿ: ಶ್ರೀನಗರ ಕಿಟ್ಟಿ
‘ಥಗ್ ಲೈಫ್’ ರಿಲೀಸ್ ಆದರೂ ನೋಡಬೇಡಿ: ಶ್ರೀನಗರ ಕಿಟ್ಟಿ
ಗುಡ್ಡ ಕುಸಿತ: ಮನೆಗೆ ನುಗ್ಗಿದ ನೀರು,ಮಣ್ಣು:ಮನೆಯವರ ಪ್ರಾಣ ಉಳಿಸಿತು ಮದ್ವೆ!
ಗುಡ್ಡ ಕುಸಿತ: ಮನೆಗೆ ನುಗ್ಗಿದ ನೀರು,ಮಣ್ಣು:ಮನೆಯವರ ಪ್ರಾಣ ಉಳಿಸಿತು ಮದ್ವೆ!
ರಾಜ್ಯ ಬಿಜೆಪಿ ಶುದ್ಧೀಕರಣಯಾಗದ ಹೊರತು ವಾಪಸ್ಸು ಹೋಗಲ್ಲ: ಈಶ್ವರಪ್ಪ
ರಾಜ್ಯ ಬಿಜೆಪಿ ಶುದ್ಧೀಕರಣಯಾಗದ ಹೊರತು ವಾಪಸ್ಸು ಹೋಗಲ್ಲ: ಈಶ್ವರಪ್ಪ
ಮೃತ ರೇಣುಕಾ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದರು
ಮೃತ ರೇಣುಕಾ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದರು
ಮಹಿಳೆಯ ಚಿಕಿತ್ಸೆಗೆ ಹಣ ನೀಡಿರುವ ಯುವ ರಾಜ್​ಕುಮಾರ್ ತಂಡ
ಮಹಿಳೆಯ ಚಿಕಿತ್ಸೆಗೆ ಹಣ ನೀಡಿರುವ ಯುವ ರಾಜ್​ಕುಮಾರ್ ತಂಡ