ಪೊಲೀಸರಿಂದ ಮತ್ತೆ ಲಾಠಿಚಾರ್ಜ್; ಆರೋಪ ತಳ್ಳಿ ಹಾಕಿದ ಎಜಿ ಪ್ರಭುಲಿಂಗ್

ಲಾಕ್ಡೌನ್ ವೇಳೆ ಪೊಲೀಸರು ಅನಾಗತ್ಯವಾಗಿ ಲಾಠಿ ಚಾರ್ಚ್ ನಡೆಸದಂತೆ ಈ ಹಿಂದೆಯೇ ಹೈಕೋರ್ಟ್ ಆದೇಶ ಹೊರಡಿಸಿತ್ತು. ಇದಾದ ಬಳಿಕ ಅನಗತ್ಯ ಬಲಪ್ರಯೋಗಿಸದಂತೆ ಡಿಜಿಐಜಿ ಸುತ್ತೋಲೆ ಕಳಿಸಿದ್ದರು. ಆದರೆ ಇದರ ನಡುವೆಯೋ ಪೊಲೀಸರಿಂದ ಮತ್ತೆ ಲಾಠಿಚಾರ್ಜ್ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ವಕೀಲ X.M.ಜೋಸೆಫ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಅನಗತ್ಯ ಬಲಪ್ರಯೋಗಿಸದಂತೆ ಡಿಜಿಐಜಿ ಸುತ್ತೋಲೆ ಕಳಿಸಿದ್ದು ಲಾಠಿಚಾರ್ಜ್ ನಡೆಸುತ್ತಿಲ್ಲವೆಂದು ಎಜಿ ಸ್ಪಷ್ಟನೆ ನೀಡಿದೆ.

ಪೊಲೀಸರಿಂದ ಮತ್ತೆ ಲಾಠಿಚಾರ್ಜ್; ಆರೋಪ ತಳ್ಳಿ ಹಾಕಿದ ಎಜಿ ಪ್ರಭುಲಿಂಗ್
ಪೊಲೀಸ್ ಲಾಠಿ ಚಾರ್ಜ್ ಸಂಗ್ರಹ ಚಿತ್ರ
Follow us
ಆಯೇಷಾ ಬಾನು
|

Updated on: May 20, 2021 | 3:36 PM

ಬೆಂಗಳೂರು: ಲಾಕ್ಡೌನ್ ವೇಳೆ ಪೊಲೀಸರಿಂದ ಮತ್ತೆ ಲಾಠಿಚಾರ್ಜ್ ಆರೋಪ ಕೇಳಿ ಬಂದಿದೆ. ಈ ಬಗ್ಗೆ ವಕೀಲ X.M.ಜೋಸೆಫ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು ಎಜಿ ಪ್ರಭುಲಿಂಗ್ ನಾವದಗಿ ಆರೋಪ ನಿರಾಕರಿಸಿದ್ದಾರೆ.

ಲಾಕ್ಡೌನ್ ವೇಳೆ ಪೊಲೀಸರು ಅನಾಗತ್ಯವಾಗಿ ಲಾಠಿ ಚಾರ್ಚ್ ನಡೆಸದಂತೆ ಈ ಹಿಂದೆಯೇ ಹೈಕೋರ್ಟ್ ಆದೇಶ ಹೊರಡಿಸಿತ್ತು. ಇದಾದ ಬಳಿಕ ಅನಗತ್ಯ ಬಲಪ್ರಯೋಗಿಸದಂತೆ ಡಿಜಿಐಜಿ ಸುತ್ತೋಲೆ ಕಳಿಸಿದ್ದರು. ಆದರೆ ಇದರ ನಡುವೆಯೋ ಪೊಲೀಸರಿಂದ ಮತ್ತೆ ಲಾಠಿಚಾರ್ಜ್ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ವಕೀಲ X.M.ಜೋಸೆಫ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಅನಗತ್ಯ ಬಲಪ್ರಯೋಗಿಸದಂತೆ ಡಿಜಿಐಜಿ ಸುತ್ತೋಲೆ ಕಳಿಸಿದ್ದು ಲಾಠಿಚಾರ್ಜ್ ನಡೆಸುತ್ತಿಲ್ಲವೆಂದು ಎಜಿ ಸ್ಪಷ್ಟನೆ ನೀಡಿದೆ.

ಇನ್ನು ಲಾಠಿಚಾರ್ಜ್ ಪ್ರಶ್ನಿಸಿದ್ದ ಪಿಐಎಲ್ ವಜಾ ಹಿನ್ನೆಲೆಯಲ್ಲಿ ಹೈಕೋರ್ಟ್‌ನ ನಿನ್ನೆ ಆದೇಶದ ಪರಿಶೀಲನೆ ಅಗತ್ಯವೆಂದು ಸಿಜೆ ಹೇಳಿದ್ದು ಮಾಧ್ಯಮಗಳಲ್ಲಿ ವರದಿಯಾದ ಲಾಠಿ ಚಾರ್ಚ್ ಪ್ರಕರಣಗಳನ್ನು ಪರಿಗಣಿಸಲು ಸಾಧ್ಯವಿಲ್ಲ. ಲಾಠಿಚಾರ್ಜ್ ನಡೆಸಿದ ನಿದರ್ಶನವಿದ್ದರೆ ನೀಡಲು ಸೂಚನೆ ನೀಡಿದೆ. ಹಾಗೂ ಹೈಕೋರ್ಟ್ ವಿಚಾರಣೆ ಮುಂದಿನ ವಾರಕ್ಕೆ ಮುಂದೂಡಿದೆ.

ಹೈಕೋರ್ಟ್‌ನ ನಿನ್ನೆ ಆದೇಶ ಹೀಗಿದೆ ಲಾಕ್‌ಡೌನ್ ವೇಳೆ ಪೊಲೀಸರಿಂದ ಲಾಠಿಚಾರ್ಜ್ ಆರೋಪಕ್ಕೆ ಸಂಬಂಧಿಸಿ ಪೊಲೀಸರ ವಿರುದ್ಧ ಎಫ್ಐಆರ್ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾಗೊಳಿಸಲಾಗಿದೆ. ₹1,000 ದಂಡ ವಿಧಿಸಿ ವಕೀಲ ಬಾಲಕೃಷ್ಣನ್ ಅರ್ಜಿ ವಜಾ ಮಾಡಲಾಗಿದೆ. ಪೊಲೀಸರು ಬಾಯಿಮಾತಿನಲ್ಲಿ ಹೇಳಿದರೆ ಕೇಳುತ್ತಾರಾ? ನಮ್ಮ ಜನರು ಅಷ್ಟು ನಾಗರಿಕರಾಗಿದ್ದಾರಾ? ಕೊವಿಡ್‌ನಿಂದ ಎಷ್ಟು ಪೊಲೀಸರು ಸತ್ತಿದ್ದಾರೆ ತಿಳಿದಿದೆಯೇ? ಎಂದು ನ್ಯಾಯಪೀಠ ಪ್ರಶ್ನಿಸಿ, ಅರ್ಜಿ ವಜಾಗೊಳಿಸಿದೆ.

ನ್ಯಾಯಮೂರ್ತಿ ಸತೀಶ್‌ಚಂದ್ರ ಶರ್ಮಾ, ನ್ಯಾಯಮೂರ್ತಿ ಎಂ. ನಾಗಪ್ರಸನ್ನರಿದ್ದ ಪೀಠ ಹೀಗೆ ಪ್ರಶ್ನೆ ಮಾಡಿದೆ. ಪೊಲೀಸರು ತಮ್ಮ ಖುಷಿಗಾಗಿ ಲಾಠಿ ಎತ್ತುವುದಿಲ್ಲ. ಕೆಲವು ಪೊಲೀಸರಿಗೆ ನೀರು, ಊಟವೂ ಸಿಗುತ್ತಿಲ್ಲ. ಪ್ರಪಂಚವೇ ಕೊವಿಡ್ ಸೋಂಕಿನಿಂದ ನರಳುತ್ತಿದೆ. ಜನ ಮನೆಯಲ್ಲಿರಲೆಂದು ಪೊಲೀಸರು ಪ್ರಯತ್ನ ನಡೆಸುತ್ತಿದ್ದಾರೆ. ಪೊಲೀಸರಿಗೆ ಜೀವ ಭಯವಿದ್ದರೂ ಕರ್ತವ್ಯ ನಿರ್ವಹಿಸಿದ್ದಾರೆ. ಕರ್ನಾಟಕ ಪೊಲೀಸರು ಶಿಸ್ತುಬದ್ಧ ಅಧಿಕಾರಿಗಳು. ಒಂದೆರಡು ಕಡೆ ಪೊಲೀಸರು ಚೌಕಟ್ಟು ಮೀರಿರಬಹುದು. ಅದಕ್ಕಾಗಿ ಎಲ್ಲಾ ಪೊಲೀಸರ ಮೇಲೆ ವಿಚಾರಣೆ ಸಾಧ್ಯವಿಲ್ಲ ಎಂದು ಹೈಕೋರ್ಟ್ ತಿಳಿಸಿದೆ. ಆರೋಪಕ್ಕೆ ಪೂರಕವಾಗಿ ಯಾವುದೇ ದಾಖಲೆ ಒದಗಿಸಿಲ್ಲ. ಹಲ್ಲೆ ನಡೆಸಿದರೆ ಖಾಸಗಿ ದೂರು ದಾಖಲಿಸಬಹುದು ಎಂದು ಹೈಕೋರ್ಟ್ ವಿಭಾಗೀಯ ಪೀಠ ಅಭಿಪ್ರಾಯ ತಿಳಿಸಿದೆ. ಅಷ್ಟೇ ಅಲ್ಲದೆ, 1 ಸಾವಿರ ರೂಪಾಯಿ ದಂಡ ವಿಧಿಸಿ ಪಿಐಎಲ್ ವಜಾಗೊಳಿಸಿದೆ.

ಇದನ್ನೂ ಓದಿ: ಲಾಕ್​ಡೌನ್ ವೇಳೆ ಪೊಲೀಸರಿಂದ ಲಾಠಿಚಾರ್ಜ್ ಆರೋಪ; ಎಲ್ಲಾ ಪೊಲೀಸರ ಮೇಲೆ ವಿಚಾರಣೆ ಸಾಧ್ಯವಿಲ್ಲ: ಹೈಕೋರ್ಟ್