AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಕಾಲದಲ್ಲಿ ಮಾರ್ಗಸೂಚಿ ಉಲ್ಲಂಘನೆ: ಸಿಎಂ ಪುತ್ರ ವಿಜಯೇಂದ್ರ ವಿರುದ್ಧ FIR ಸಾಧ್ಯತೆ- ಹೈಕೋರ್ಟ್ ಅಭಿಪ್ರಾಯ

Epidemic Diseases Act, BY Vijayendra: ಬಿ.ವೈ. ವಿಜಯೇಂದ್ರ ಕುಟುಂಬ ಸಮೇತ ನಂಜನಗೂಡು ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಶ್ರೀಕಂಠೇಶ್ವರ ದೇಗುಲದಲ್ಲಿ ವಿಶೇಷ ಪೂಜೆ, ಹೋಮ ಹವನ ನಡೆಸಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪರ ಮಗನಿಂದಲೇ ಕೊರೊನಾ ಲಾಕ್​ಡೌನ್ ನಿಯಮ ಉಲ್ಲಂಘನೆ ಆದ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು.

ಕೊರೊನಾ ಕಾಲದಲ್ಲಿ ಮಾರ್ಗಸೂಚಿ ಉಲ್ಲಂಘನೆ: ಸಿಎಂ ಪುತ್ರ ವಿಜಯೇಂದ್ರ ವಿರುದ್ಧ FIR ಸಾಧ್ಯತೆ- ಹೈಕೋರ್ಟ್ ಅಭಿಪ್ರಾಯ
ಬಿ.ವೈ.ವಿಜಯೇಂದ್ರ
ಸಾಧು ಶ್ರೀನಾಥ್​
| Updated By: Digi Tech Desk|

Updated on:May 20, 2021 | 3:31 PM

Share

ಬೆಂಗಳೂರು/ನಂಜನಗೂಡು: ಮಾರಕ ಕೊರೊನಾವನ್ನು ಮಣಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅನೇಕ ಮಾರ್ಗಸೂಚಿ ಜಾರಿಗೊಳಿಸಿವೆ. ಆದರೆ ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ ಮಾರ್ಗಸೂಚಿ ಉಲ್ಲಂಘಿಸಿದ್ದಾರೆ ಎಂಬಾರೋಪದ ಮೇಲೆ ವಿಜಯೇಂದ್ರ ವಿರುದ್ಧ ಎಫ್​ಐಆರ್ ದಾಖಲಿಸುವ ಸಾಧ್ಯತೆಯಿದೆ. ​ ನಂಜನಗೂಡಿನಲ್ಲಿ ಮಾರ್ಗಸೂಚಿ ಉಲ್ಲಂಘಿಸಿ, ಗುಂಪುಗೂಡಿ ಅವರು ಪೂಜೆ ಸಲ್ಲಿಸಿದ್ದರು ಎಂಬುದು ಆರೋಪದ ತಿರುಳು. ಹಾಗಾಗಿ ವಕೀಲ ಜಿ.ಆರ್.ಮೋಹನ್ ಎಂಬುವವರು ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ವಿರುದ್ಧ ಹೈಕೋರ್ಟ್‌ಗೆ ಮೆಮೋ ಸಲ್ಲಿಸಿದ್ದರು. ಆ ಮೆಮೋ ವಿಚಾರಣೆ ನಡೆಸಿದ ಹೈಕೋರ್ಟ್‌, ಎಪಿಡೆಮಿಕ್ ಡಿಸೀಸ್ ಕಾಯ್ದೆಯಡಿ (Epidemic Diseases Act, 1897) ಆರೋಪಿಯ ನಡಾವಳಿ ಅಪರಾಧದಿಂದ ಕೂಡಿದೆ. ಹಾಗಾಗಿ FIR ದಾಖಲಿಸಬೇಕಾಗಿದೆ ಎಂದು ಅಭಿಪ್ರಾಯ ಪಟ್ಟಿದೆ. ಇದೇ ವೇಳೆ, ಸರ್ಕಾರ ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ನೀಡುವತೆಯೂ ಕೋರ್ಟ್​ ಸೂಚನೆ ನೀಡಿದೆ. ಮೆಮೋ ಬಗ್ಗೆ ಮೂಲ ಪ್ರಕರಣದೊಂದಿಗೆ ವಿಚಾರಣೆಗೆ ಹೈಕೋರ್ಟ್​ ನಿರ್ಧಾರ ಮಾಡಿದೆ.

ಏನಿದು ಪ್ರಕರಣ: 

ಬಿ.ವೈ. ವಿಜಯೇಂದ್ರ ಕುಟುಂಬ ಸಮೇತ ನಂಜನಗೂಡು ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಶ್ರೀಕಂಠೇಶ್ವರ ದೇಗುಲದಲ್ಲಿ ವಿಶೇಷ ಪೂಜೆ, ಹೋಮ ಹವನ ನಡೆಸಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪರ ಮಗನಿಂದಲೇ ಕೊರೊನಾ ಲಾಕ್​ಡೌನ್ ನಿಯಮ ಉಲ್ಲಂಘನೆ ಆದ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು.

ಕೊರೊನಾ ಹಾಗೂ ಲಾಕ್​ಡೌನ್ ನಡುವೆಯೂ ನಂಜನಗೂಡು ದೇಗುಲದಲ್ಲಿ ಬಿ.ವೈ. ವಿಜಯೇಂದ್ರ ಪೂಜೆ ಮಾಡಿಸಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪುತ್ರ ವಿಜಯೇಂದ್ರ ವಿರುದ್ಧ ಮೈಸೂರು ಜಿಲ್ಲಾಧಿಕಾರಿಗೆ ಸಹ ದೂರು ನೀಡಲಾಗಿದೆ. ಜಿಲ್ಲಾಧಿಕಾರಿಗಳಿಗೆ ಮೈಸೂರು ಜಿಲ್ಲಾ ಕಾಂಗ್ರೆಸ್​ ಘಟಕ ಈ ಬಗ್ಗೆ ದೂರು ನೀಡಿದೆ. ವಿಜಯೇಂದ್ರ ವಿರುದ್ಧ ಎಫ್​ಐಆರ್ ದಾಖಲಿಸುವಂತೆ ದೂರಿನಲ್ಲಿ ತಿಳಿಸಲಾಗಿದೆ.

ಸರ್ಕಾರದ ನಿಯಮ ಉಲ್ಲಂಘಿಸಿದ್ದಕ್ಕೆ ಕೇಸ್​ ದಾಖಲಿಸಬೇಕು. ಎಫ್​ಐಆರ್ ದಾಖಲಿಸಲು ಪೊಲೀಸರಿಗೆ ಸೂಚನೆ ನೀಡಬೇಕು. ದೇಗುಲದ ಆಡಳಿತ ಮಂಡಳಿ ಹಾಗೂ ಸರ್ಕಾರಿ ಸಿಬ್ಬಂದಿ ಮತ್ತು ಪುರೋಹಿತ ವರ್ಗವನ್ನು ಸಸ್ಪೆಂಡ್ ಮಾಡಿ ಎಫ್​ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಿ ಮೈಸೂರು ಜಿಲ್ಲಾ ಕಾಂಗ್ರೆಸ್‌ ಘಟಕದಿಂದ ಜಿಲ್ಲಾಧಿಕಾರಿಗೆ ದೂರು ನೀಡಲಾಗಿತ್ತು.

(under the Epidemic Diseases Act, 1897 file fir against by vijayendra for violating guidelines at nanjangud opines karnataka high court)

Also Read:

ಸರ್ಕಾರದ ನಿಯಮ ಉಲ್ಲಂಘಿಸಿ ದೇಗುಲದಲ್ಲಿ ಪೂಜೆ; ಬಿ.ವೈ.ವಿಜಯೇಂದ್ರ ವಿರುದ್ಧ ಮೈಸೂರು ಜಿಲ್ಲಾಧಿಕಾರಿಗೆ ದೂರು

Published On - 3:11 pm, Thu, 20 May 21

‘ನಡೀರಿ ಹೋಗೋಣ ಎಂದರು’; ವೀರಪ್ಪನ್ ಕಂಡಾಗ ರಾಜ್​ಕುಮಾರ್ ಪ್ರತಿಕ್ರಿಯೆ
‘ನಡೀರಿ ಹೋಗೋಣ ಎಂದರು’; ವೀರಪ್ಪನ್ ಕಂಡಾಗ ರಾಜ್​ಕುಮಾರ್ ಪ್ರತಿಕ್ರಿಯೆ
ಕಂಠ ಪೂರ್ತಿ ಕುಡಿದು ಬಂದು ಶಾಲೆಯಲ್ಲಿ ಮಲಗಿದ ಮುಖ್ಯ ಶಿಕ್ಷಕ: ವಿಡಿಯೋ ನೋಡಿ
ಕಂಠ ಪೂರ್ತಿ ಕುಡಿದು ಬಂದು ಶಾಲೆಯಲ್ಲಿ ಮಲಗಿದ ಮುಖ್ಯ ಶಿಕ್ಷಕ: ವಿಡಿಯೋ ನೋಡಿ
ವಿಮಾನಯಾನ ಸಚಿವರೊಂದಿಗೆ ನಡೆದ ಸಭೆ ಅತ್ಯಂತ ಫಲಪ್ರದವಾಗಿತ್ತು: ಪಾಟೀಲ್
ವಿಮಾನಯಾನ ಸಚಿವರೊಂದಿಗೆ ನಡೆದ ಸಭೆ ಅತ್ಯಂತ ಫಲಪ್ರದವಾಗಿತ್ತು: ಪಾಟೀಲ್
ಮಾಲ್ಡೀವ್ಸ್​​ನಲ್ಲಿ ಪ್ರಧಾನಿ ಮೋದಿಗೆ ಅಧ್ಯಕ್ಷ ಮುಯಿಝು ಅವರಿಂದ ಸ್ವಾಗತ
ಮಾಲ್ಡೀವ್ಸ್​​ನಲ್ಲಿ ಪ್ರಧಾನಿ ಮೋದಿಗೆ ಅಧ್ಯಕ್ಷ ಮುಯಿಝು ಅವರಿಂದ ಸ್ವಾಗತ
ನ್ಯಾಯಮೂರ್ತಿ ಕುನ್ಹಾ ವರದಿಯನ್ನು ಸರ್ಕಾರ ಅಂಗೀಕರಿಸಿದೆ: ಪರಮೇಶ್ವರ್
ನ್ಯಾಯಮೂರ್ತಿ ಕುನ್ಹಾ ವರದಿಯನ್ನು ಸರ್ಕಾರ ಅಂಗೀಕರಿಸಿದೆ: ಪರಮೇಶ್ವರ್
ರಾಜ್​ಕುಮಾರ್ ಅಪಹರಣ: ಕರಾಳ ಅನುಭವದ ಗೋವಿಂದರಾಜು ಮಾತು
ರಾಜ್​ಕುಮಾರ್ ಅಪಹರಣ: ಕರಾಳ ಅನುಭವದ ಗೋವಿಂದರಾಜು ಮಾತು
ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆಯುವ ಪ್ರಯತ್ನದಲ್ಲಿರುವ ಎಐಸಿಸಿ
ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆಯುವ ಪ್ರಯತ್ನದಲ್ಲಿರುವ ಎಐಸಿಸಿ
ಮಳೆ ಕಾರಣ ಶಾಲೆಗಳಿಗೆ ರಜೆ ಘೋಷಣೆ ಈ ಮಳೆಗಾಲದಲ್ಲಿ ಹೆಚ್ಚುತ್ತಿದೆ!
ಮಳೆ ಕಾರಣ ಶಾಲೆಗಳಿಗೆ ರಜೆ ಘೋಷಣೆ ಈ ಮಳೆಗಾಲದಲ್ಲಿ ಹೆಚ್ಚುತ್ತಿದೆ!
‘ಅವರನ್ನು ಕಳಿಸು’; ವೀರಪ್ಪನ್ ಬಳಿ ಅಂಗಲಾಚಿದ್ದ ರಾಜ್​ಕುಮಾರ್
‘ಅವರನ್ನು ಕಳಿಸು’; ವೀರಪ್ಪನ್ ಬಳಿ ಅಂಗಲಾಚಿದ್ದ ರಾಜ್​ಕುಮಾರ್
ರಾಜಸ್ಥಾನ: ಪ್ರಾರ್ಥನೆ ವೇಳೆ ಶಾಲೆಯ ಮೇಲ್ಛಾವಣಿ ಕುಸಿತ
ರಾಜಸ್ಥಾನ: ಪ್ರಾರ್ಥನೆ ವೇಳೆ ಶಾಲೆಯ ಮೇಲ್ಛಾವಣಿ ಕುಸಿತ