ಕೊರೊನಾ ಮೃತದೇಹ ಅದಲು ಬದಲು; ಶಿವಮೊಗ್ಗ ಮೆಗ್ಗಾನ್ ಶವಾಗಾರದಲ್ಲಿ ಯಡವಟ್ಟು
ಮಲೆನಾಡಿನಲ್ಲಿ ಕೊರೊನಾ ಎರಡನೇ ಅಲೆಗೆ ಶಿವಮೊಗ್ಗ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಯ ಜನರಿಗೆ ಭೀತಿ ಹೆಚ್ಚಾಗಿದೆ. ಸದ್ಯ ಶಿವಮೊಗ್ಗ ಸೇರಿದಂತೆ ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆ ಬಡವರು ಬಹುತೇಕ ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಯನ್ನೇ ಕೊವಿಡ್ ಚಿಕಿತ್ಸೆಗೆ ಅವಲಂಬಿಸಿದ್ದಾರೆ.
ಶಿವಮೊಗ್ಗ: ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ಕೊವಿಡ್ಗೆ ಬಲಿಯಾಗುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಕೊರೊನಾದಿಂದ ಮೃತಪಟ್ಟ ಬಳಿಕ ಶವ ಸಂಸ್ಕಾರ ಮಾಡುವುದು ಕುಟುಂಬಕ್ಕೆ ದೊಡ್ಡ ಸವಾಲಾಗಿದೆ. ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಯ ಶವಾಗಾರದ ಸಿಬ್ಬಂದಿಗಳು ಕೊರೊನಾ ಶವಗಳನ್ನೇ ಅದಲು ಬದಲು ಮಾಡುವ ಮೂಲಕ ಕುಟುಂಬಸ್ಥರಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ. ಯಾರದೋ ಶವ ಮತ್ಯಾರೋ ಅಂತ್ಯಕ್ರಿಯೆ ಮಾಡುವುದಕ್ಕೆ ಮೃತದೇಹವನ್ನು ತೆಗೆದುಕೊಂಡು ಹೋಗಿದ್ದರು. ಆ ಬಳಿಕ ಕುಟುಂಬಸ್ಥರಿಗೆ ಶವ ಅದಲು ಬದಲಾಗಿರುವ ವಿಚಾರ ತಿಳಿದಿದೆ.
ಮಲೆನಾಡಿನಲ್ಲಿ ಕೊರೊನಾ ಎರಡನೇ ಅಲೆಗೆ ಶಿವಮೊಗ್ಗ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಯ ಜನರಿಗೆ ಭೀತಿ ಹೆಚ್ಚಾಗಿದೆ. ಸದ್ಯ ಶಿವಮೊಗ್ಗ ಸೇರಿದಂತೆ ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆ ಬಡವರು ಬಹುತೇಕ ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಯನ್ನೇ ಕೊವಿಡ್ ಚಿಕಿತ್ಸೆಗೆ ಅವಲಂಬಿಸಿದ್ದಾರೆ. ಶಿವಮೊಗ್ಗ ತಾಲೂಕಿನ ಮಲವಗೊಪ್ಪದ ಷಡಾಕ್ಷರಪ್ಪ (63) ನಿನ್ನೆ ಬೆಳಗಿನ ಜಾವ ಕೊವಿಡ್ಗೆ ಬಲಿಯಾಗಿದ್ದರು. ಇದರ ಬೆನ್ನಲ್ಲೇ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಕೆಂಚಿಕೊಪ್ಪ ಗ್ರಾಮದ ಮಲ್ಲಿಕಾರ್ಜುನಪ್ಪ (55) ನಿನ್ನೆ ಬೆಳಿಗ್ಗೆ ಮೃತಪಟ್ಟಿದ್ದಾರೆ. ಕೊವಿಡ್ಗೆ ಬಲಿಯಾಗಿರುವ ವಿಷಯ ಕುಟುಂಬಗಳಿಗೆ ಗೊತ್ತಾಗುತ್ತಿದ್ದಂತೆ ಅವರು ಅಂತ್ಯಕ್ರಿಯೆಗೆ ಎಲ್ಲ ಸಿದ್ಧತೆಗಳನ್ನು ತಮ್ಮ ತಮ್ಮ ಗ್ರಾಮದಲ್ಲಿ ಮಾಡಿಕೊಂಡಿದ್ದರು.
ಮಲಗೊಪ್ಪದ ಮೃತ ಕುಟುಂಬಸ್ಥರು ಅಂತ್ಯಕ್ರಿಯೆಗೆಂದು ಶಿವಮೊಗ್ಗದ ರೋಟವರಿ ಚಿತಾಗಾರದಲ್ಲಿ ವ್ಯವಸ್ಥೆ ಮಾಡಿಕೊಂಡಿದ್ದರು. ಶವಾಗಾರದಲ್ಲಿ ಕುಳಿತು ಸುಸ್ತಾದ ಷಡಾಕ್ಷರಪ್ಪ ಕುಟುಂಬಕ್ಕೆ ಮೃತದೇಹ ಸಿಗಲಿಲ್ಲ. ಇದರಿಂದ ಆತಂಕಗೊಂಡ ಕುಟುಂಬಸ್ಥರು ಶವಾಗಾರದ ಒಳಗೆ ಹೋಗಿ ಅಲ್ಲಿರುವ ಮೃತದೇಹಗಳನ್ನು ಪರಿಶೀಲನೆ ಮಾಡಿದ್ದಾರೆ. ಆದರೆ ಅಲ್ಲಿ ಷಡಾಕ್ಷರಪ್ಪ ಅವರ ಮೃತದೇಹ ಮಿಸ್ಸಿಂಗ್ ಆಗಿತ್ತು. ಇದರಿಂದ ಕಂಗಾಲಾದ ಕುಟುಂಬಸ್ಥರು ಶವಾಗಾರದ ಸಿಬ್ಬಂದಿಗಳ ವಿರುದ್ಧ ಆಕ್ರೋಶ ಹೊರಹಾಕಿದರು. ಷಡಾಕ್ಷರಪ್ಪ ಅವರ ಮೃತದೇಹ ಪತ್ತೆ ಮಾಡಿಕೊಡಿ ಅಂತಾ ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಿಬ್ಬಂದಿಗಳು ಶಿವಮೊಗ್ಗದ ಮೃತದೇಹವನ್ನು ದಾವಣಗೆರೆ ನ್ಯಾಮತಿಗೆ ಅಂತ್ಯಕ್ರಿಯೆಗಾಗಿ ರವಾನಿಸಿ ಬಿಟ್ಟಿದ್ದಾರೆ. ಷಡಾಕ್ಷರಿ ಮೃತದ ಹುಡುಕಾಟ ಎಲ್ಲೆಡೆ ಶುರುವಾಗಿತ್ತು. ಬೆಳಿಗ್ಗೆಯಿಂದ ಶವಾಗಾರದಿಂದ ರವಾನಿಸಿದ ಎಲ್ಲ ಶವಗಳ ವಿವರಣೆ ಮತ್ತು ತಪಾಸಣೆಗೆ ಶವಾಗಾರ ಸಿಬ್ಬಂದಿಗಳೂ ಮುಂದಾಗಿದ್ದರು. ಕೊನೆಗೆ ಅವರ ಪರಿಶೀಲನೆ ವೇಳೆ ಶಿವಮೊಗ್ಗದ ಡೆಡ್ ಬಾಡಿಯು ದಾವಣಗೆರೆಯ ನ್ಯಾಮತಿಯಲ್ಲಿ ಕೆಂಚಿಕೊಪ್ಪ ಗ್ರಾಮದಲ್ಲಿ ಅಂತ್ಯಕ್ರಿಯೆಗೆ ಎಲ್ಲ ಸಿದ್ಧತೆಗಳ್ನು ಮಾಡಿಕೊಂಡಿದ್ದರು. ಕೊನೆ ಕ್ಷಣದಲ್ಲಿ ಶವ ಅದಲು ಬದಲು ಆಗಿರುವ ಕುರಿತು ನ್ಯಾಮತಿ ಕುಟುಂಬಸ್ಥರಿಗೆ ಮಾಹಿತಿ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಅವರು ಅಂತ್ಯಕ್ರಿಯೆ ರದ್ದುಗೊಳಿಸಿ, ಮೃತದೇಹವನ್ನು ವಾಪಸ್ ಶವಾಗಾರಕ್ಕೆ ತಂದಿದ್ದಾರೆ. ಶವಾಗಾರದಲ್ಲಿರುವ ತಮ್ಮ ಕುಟುಂಬದ ಮಲ್ಲಿಕಾರ್ಜುನಪ್ಪ ಮೃತದೇಹವನ್ನು ಪಡೆದುಕೊಂಡಿದ್ದಾರೆ.
ನಿತ್ಯ 10 ರಿಂದ 15 ಜನರು ಕೊವಿಡ್ ಬಲಿಯಾಗುತ್ತಿದ್ದಾರೆ. ಕೊವಿಡ್ ಹಿನ್ನೆಲೆಯಲ್ಲಿ ಶವವನ್ನು ಪೂರ್ಣವಾಗಿ ಪ್ಯಾಕ್ ಮಾಡಿ ಕುಟುಂಬಸ್ಥರಿಗೆ ಶವಾಗಾರದ ಸಿಬ್ಬಂದಿಗಳು ಹಸ್ತಾಂತರಿಸುತ್ತಿದ್ದಾರೆ. ಶವಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶವಾಗಾರದಲ್ಲಿರುವ ಸಿಬ್ಬಂದಿಗಳು ಗೊಂದಲದಲ್ಲಿದ್ದಾರೆ. ಪ್ಯಾಕ್ ಮಾಡಿರುವ ಶವವನ್ನು ಅದಲು ಬದಲು ಮಾಡಿದ್ದಾರೆ. ಮೊದಲೇ ಕೊರೊನಾಗೆ ಬಲಿಯಾಗಿದ್ದರಿಂದ ಕುಟುಂಬಸ್ಥರಿಗೆ ದೊಡ್ಡ ಸಮಸ್ಯೆ ಎದುರಾಗಿದೆ. ಶವ ಮುಟ್ಟುವ ಹಾಗಿಲ್ಲ. ಪ್ಯಾಕ್ ಮಾಡಿರುವುದನ್ನು ನೋಡಲು ಆಗುತ್ತಿಲ್ಲ.
ಕೊರೊನಾ ಎನ್ನುವ ಮಹಾಮಾರಿ ಆರ್ಭಟಕ್ಕೆ ಈಗಾಗಲೇ ಎಲ್ಲರೂ ಬೆಚ್ಚಿಬಿದ್ದಿದ್ದಾರೆ. ಮೊದಲೇ ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಅನೇಕರು ಕೊವಿಡ್ಗೆ ಬಲಿಯಾಗುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹೊಡೆತದಿಂದ ಚೇತರಿಸಿಕೊಳ್ಳಲು ಕೊವಿಡ್ ಸೋಂಕಿತರ ಕುಟುಂಬಕ್ಕೆ ಆಗುತ್ತಿಲ್ಲ. ಈ ನಡುವೆ ಕೊರೊನಾದಿಂದ ಮೃತಪಟ್ಟವರ ಅಂತ್ಯಕ್ರಿಯೆ ಮಾಡಬೇಕೆಂದರೆ ಅದು ಕೂಡಾ ಸಾಧ್ಯವಾಗುತ್ತಿಲ್ಲ. ಶವಾಗಾರದಲ್ಲಿ ನಡೆಯುತ್ತಿರುವ ಯಡವಟ್ಟಿನಿಂದ ಕೊರೊನಾದಿಂದ ಮೃತಪಟ್ಟ ಕುಟುಂಬಸ್ಥರು ಮತ್ತಷ್ಟು ಪರದಾಡುವಂತಾಗಿದೆ.
ಇದನ್ನೂ ಓದಿ
Viral Video: ಕೂದಲೆಳೆ ಅಂತರದಲ್ಲಿ ಪ್ರಾಣ ಉಳಿಯಿತು; ಸೆಕೆಂಡುಗಳಲ್ಲಿ ಅಪಾಯದಿಂದ ಪಾರಾದ ಮಹಿಳೆ
Cyclone Tauktae ತೌಕ್ತೆ ಚಂಡಮಾರುತಕ್ಕೆ ಮುಂಬೈನಲ್ಲಿ ಮುಳುಗಿದ ಬಾರ್ಜ್ , 37 ಮೃತದೇಹ ಪತ್ತೆ
(Corona corpse was replaced at Shivamogga Mcgann Hospital)