ಗುಣಮಟ್ಟದ ಮಾಸ್ಕ್, ಸ್ಯಾನಿಟೈಸರ್ ಸಿಗುತ್ತಿಲ್ಲ; ಧಾರವಾಡ ಮಹಾನಗರ ಪಾಲಿಕೆಯ ಸ್ವಚ್ಛತಾ ಕಾರ್ಮಿಕರ ಆರೋಪ

ಸರ್ಕಾರ ಕೊವಿಡ್ ಸಮಯದಲ್ಲಿ ಮಹಾನಗರ ಪಾಲಿಕೆಯ ಸ್ವಚ್ಛತಾ ಕಾರ್ಮಿಕರಿಗೆ ಮಾಸ್ಕ್ ಕೊಡುವುದಕ್ಕೂ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ. ಬೆಳಿಗ್ಗೆಯಿಂದ ಮಹಾನಗರ ಸ್ವಚ್ಛ ಮಾಡುವ ಪೌರ ಕಾರ್ಮಿಕರ ಜೀವ ಕೈಯಲ್ಲಿ ಹಿಡಿದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಪ್ರಯೋಜನವೇನು ಎನ್ನುವಂತೆ ಕಂಡುಬರುತ್ತಿದೆ.

ಗುಣಮಟ್ಟದ ಮಾಸ್ಕ್, ಸ್ಯಾನಿಟೈಸರ್ ಸಿಗುತ್ತಿಲ್ಲ; ಧಾರವಾಡ ಮಹಾನಗರ ಪಾಲಿಕೆಯ ಸ್ವಚ್ಛತಾ ಕಾರ್ಮಿಕರ ಆರೋಪ
ಸ್ವಚ್ಛತಾ ಕಾರ್ಮಿಕರು
Follow us
sandhya thejappa
|

Updated on: May 20, 2021 | 12:52 PM

ಹುಬ್ಬಳ್ಳಿ: ಹೇಳಿ ಕೇಳಿ ಈಗ ಕೊವಿಡ್ ಕಾಲ. ಜೊತೆಯಲ್ಲಿ ಲಾಕ್​ಡೌನ್​ ಬೇರೆ. ಪರಿಸ್ಥಿತಿ ತುಂಬಾನೆ ಸೂಕ್ಷ್ಮವಾಗಿದೆ. ಇಂತಹ ಸಮಯದಲ್ಲಿ ಕೊರೊನಾ ವಾರಿಯರ್ಸ್ ಸೇವೆಯನ್ನು ಎಷ್ಟು ಹೊಗಳಿದರೂ ಕಮ್ಮಿನೇ. ವಾರಿಯರ್ಸ್ ಯಾರೇ ಆಗಿರಲಿ, ಅವರ ಜೀವ ಮತ್ತು ಜೀವನವನ್ನೆ ಪಣಕ್ಕಿಟ್ಟು ಶ್ರಮವಹಿಸುತ್ತಿರೋದನ್ನು ಸರ್ಕಾರ ಗಮನವೇ ಹರಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸ್ವಚ್ಛತಾ ಕಾರ್ಮಿಕರನ್ನು ನಿರ್ಲಕ್ಷ್ಯ ಮಾಡಲಾಗಿದೆ.

ಸರ್ಕಾರ ಕೊವಿಡ್ ಸಮಯದಲ್ಲಿ ಮಹಾನಗರ ಪಾಲಿಕೆಯ ಸ್ವಚ್ಛತಾ ಕಾರ್ಮಿಕರಿಗೆ ಮಾಸ್ಕ್ ಕೊಡುವುದಕ್ಕೂ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ. ಬೆಳಿಗ್ಗೆಯಿಂದ ಮಹಾನಗರ ಸ್ವಚ್ಛ ಮಾಡುವ ಪೌರ ಕಾರ್ಮಿಕರ ಜೀವ ಕೈಯಲ್ಲಿ ಹಿಡಿದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಪ್ರಯೋಜನವೇನು ಎನ್ನುವಂತೆ ಕಂಡುಬರುತ್ತಿದೆ.

ಮಹಾನಗರದ ಹಳೇ ಹುಬ್ಬಳ್ಳಿ ವಿವಿಧ ಬಡಾವಣೆಯಲ್ಲಿ ಸ್ವಚ್ಛತೆ ಮಾಡುವ ಪೌರ ನೌಕರರಿಗೆ ಮಹಾನಗರ ಪಾಲಿಕೆ ಕಡಿಮೆ ಗುಣಮಟ್ಟದ ಮಾಸ್ಕ್, ಗುಣಮಟ್ಟವಿಲ್ಲದ ಸ್ಯಾನಿಟೈಜರ್ ಕೇಲವರಿಗೆ ಮಾತ್ರ ನೀಡಿದ್ದಾರೆ. ಉಳಿದ ಪೌರ ಕಾರ್ಮಿಕರು ಕನಿಷ್ಟ ಕೊವಿಡ್ ಸೌಲಭ್ಯವಿಲ್ಲದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಬಗ್ಗೆ ಕೇಳೋಣ ಎಂದರೆ ಅವರು ಯಾರು ಸಂಪರ್ಕಕ್ಕೆ ಸಿಗುತ್ತಿಲ್ಲ. ಹೀಗಾಗಿ ತಮ್ಮ ಗೋಳು ಕೇಳೋರು ಯಾರು ಅಂತಾ ಸ್ವಚ್ಛ ಮಾಡುವ ಪೌರ ಕಾರ್ಮಿಕರು ಗೋಳಾಡುತ್ತಿದ್ದಾರೆ.

ಕೊರೊನಾ ವಾರಿಯರ್ಸ್​ಗೆ ಹ್ಯಾಂಡ್ ಗ್ಲೌಸ್ ಸೇರಿದಂತೆ ಗುಣಮಟ್ಟದ ಮಾಸ್ಕ್ ಮತ್ತು ಸ್ಯಾನಿಟೈಜರ್ ಒದಗಿಸಬೇಕಾಗಿದೆ. ಇಂತಹ ಸೂಕ್ಷ್ಮ ಸಂದರ್ಭದಲ್ಲಿ ತಮ್ಮ ಬದುಕನ್ನೇ ಪಣಕ್ಕಿಟ್ಟು ಸಾರ್ವಜನಿಕರಿಗಾಗಿ ದುಡಿಯುವ ಕೈಗಳಿಗೆ ರಕ್ಷಣೆ ನೀಡಬೇಕಾಗಿದೆ. ಇವರ ವಿರುದ್ಧ ನಿರ್ಲಕ್ಷ್ಯ ವಹಿಸಿದರೆ ಭವಿಷ್ಯ ಪರಿಣಾಮ ಮಾತ್ರ ಊಹಿಸಕ್ಕೂ ಸಾಧ್ಯವಿಲ್ಲ. ಇಂತಹ ಸಮಯದಲ್ಲಿ ಮುನಿಸಿಕೊಂಡರೆ ಆಮೇಲೆ ಸಾರ್ವಜನಿಕರ ಗತಿ ಹೀನಾಯ ಸ್ಥಿತಿಗೆ ತಲುಪುವುದರಲ್ಲಿ ಅನುಮಾನವಿಲ್ಲ.

ಇದನ್ನೂ ಓದಿ

ಐಸಿಎಂಆರ್ ಅನುಮತಿ ನೀಡಿರುವ ಕಿಟ್ ಬಳಸಿ ಮನೆಯಲ್ಲಿಯೇ ಮಾಡಬಹುದು ಕೊವಿಡ್ ಟೆಸ್ಟ್; ವಿಧಾನ ಹೇಗೆ? 

ಕೊರೊನಾ, ಬ್ಲಾಕ್ ಫಂಗಸ್ ಮುನ್ನೆಚ್ಚರಿಕಾ ಕ್ರಮಗಳ ಪರಿಶೀಲನೆಗಾಗಿ ಉತ್ತರ ಕರ್ನಾಟಕ ಪ್ರವಾಸ ಕೈಗೊಂಡ ಸಚಿವ ಸುಧಾಕರ್

(Hubli municipal corporation cleaning workers complaining that they are not getting a quality mask and sanitizer)