ನಾಳೆ ತಮಿಳರು ಕೇಳಿದ್ರೂ ಅಭಿವೃದ್ಧಿ ನಿಗಮ ಮಾಡುತ್ತೇವೆ -DCM ಡಾ. ಅಶ್ವತ್ಥ್ ನಾರಾಯಣ

|

Updated on: Dec 04, 2020 | 4:18 PM

ಮರಾಠರು ನಮ್ಮವರು, ನಮ್ಮ ನಾಡಿನವರು. ಹಾಗಾಗಿ ಅಭಿವೃದ್ಧಿ ನಿಗಮ ಮಾಡುತ್ತಿದ್ದೇವೆ. ನಾಳೆ ತಮಿಳಿಗರು ಕೇಳಿದರೂ ನಿಗಮ ಮಾಡುತ್ತೇವೆ ಎಂದು ಡಾ.ಅಶ್ವತ್ಥ್ ನಾರಾಯಣ ಹೇಳಿದ್ದಾರೆ. ತನ್ಮೂಲಕ ತಮಿಳರ ನಿಗಮ ರಚನೆ ಮಾಡುವ ಬಗ್ಗೆ ಪರೋಕ್ಷ ಸುಳಿವು ನೀಡಿದ್ದಾರೆ.

ನಾಳೆ ತಮಿಳರು ಕೇಳಿದ್ರೂ ಅಭಿವೃದ್ಧಿ ನಿಗಮ ಮಾಡುತ್ತೇವೆ -DCM ಡಾ. ಅಶ್ವತ್ಥ್ ನಾರಾಯಣ
ಡಿಸಿಎಂ ಡಾ.ಅಶ್ವತ್ಥ್ ನಾರಾಯಣ
Follow us on

ಬೆಂಗಳೂರು: ನಾಳೆ ತಮಿಳರು ಕೇಳಿದರೂ ಅಭಿವೃದ್ಧಿ ನಿಗಮ ಮಾಡುತ್ತೇವೆ ಎಂದು ಡಿಸಿಎಂ ಡಾ.ಅಶ್ವತ್ಥ್ ನಾರಾಯಣ ಹೇಳಿದ್ದಾರೆ. ನಾಳೆ ರಾಜ್ಯದಲ್ಲಿ ಬಂದ್ ಆಚರಿಸಲಾಗುತ್ತಿದೆ. ಮರಾಠರು ನಮ್ಮವರು, ನಮ್ಮ ನಾಡಿನವರು. ಹಾಗಾಗಿ ಅಭಿವೃದ್ಧಿ ನಿಗಮ ಮಾಡುತ್ತಿದ್ದೇವೆ. ನಾಳೆ ತಮಿಳಿಗರು ಕೇಳಿದರೂ ನಿಗಮ ಮಾಡುತ್ತೇವೆ ಎಂದು ಡಾ.ಅಶ್ವತ್ಥ್ ನಾರಾಯಣ ಹೇಳಿದ್ದಾರೆ.

ತಮಿಳಿಗರು ಕೂಡ ನಮ್ಮ ರಾಜ್ಯದಲ್ಲಿ 10 ವರ್ಷಗಳಿಂದ ಇದ್ದಾರೆ. ಇಲ್ಲಿ 10‌ ವರ್ಷಗಳಿಂದ ಇದ್ದರೆ ಅವರು ಕನ್ನಡಿಗರು ಎಂದಾಗುತ್ತಾರೆ. ಹೀಗಾಗಿ, ಅವರ ಹೆಸರಲ್ಲೂ ನಿಗಮ ಮಾಡುತ್ತೇವೆ ಎಂದು ತಮಿಳರ ನಿಗಮ ರಚನೆ ಮಾಡುವ ಬಗ್ಗೆ ಡಾ.ಅಶ್ವತ್ಥ್ ನಾರಾಯಣ ಪರೋಕ್ಷ ಸುಳಿವು ನೀಡಿದ್ದಾರೆ.

ಮರಾಠ ಅಭಿವೃದ್ಧಿ ನಿಗಮ ಖಂಡಿಸಿ ನಾಳೆ ಬಂದ್​ ವಿಚಾರವಾಗಿ ಕನ್ನಡ ಹೋರಾಟಗಾರರು ಯಾರೂ ನನ್ನನ್ನ ಸಂಪರ್ಕಿಸಿಲ್ಲ. ಸಿಎಂ ಯಡಿಯೂರಪ್ಪ ಅವರ ಜೊತೆ ಚರ್ಚಿಸಿರಬಹುದು. ಆದರೆ, ಬೆಳಗಾವಿ ಯಾವತ್ತಿದ್ರೂ ನಮ್ಮದೇ, ಒಂದಿಂಚೂ ಕೊಡಲ್ಲ. ಒಂದಿಂಚೂ ಭೂಮಿಯನ್ನೂ ಬಿಟ್ಟುಕೊಡುವುದಿಲ್ಲಎಂದು ಡಿಸಿಎಂ ಡಾ.ಅಶ್ವತ್ಥ್ ನಾರಾಯಣ ಹೇಳಿದ್ದಾರೆ.

ಮರಾಠ ಪ್ರಾಧಿಕಾರ ರಚನೆ: ಇದರ ಹಿಂದೆ ಪ್ರಧಾನಿ ಮೋದಿ ಇದ್ದಾರೆ -ವಾಟಾಳ್ ಕಿಡಿ

‘ಯಡಿಯೂರಪ್ಪರನ್ನ ನಂಬಬೇಡಿ.. ಬಿಟ್ರೇ.. ಬೆಳಗಾವಿಯ ಸುವರ್ಣಸೌಧನೂ ಮಾರಿಬಿಡ್ತಾರೆ’

 

Published On - 3:28 pm, Fri, 4 December 20