ಧಾರವಾಡ : 102 ವರ್ಷದ ಅಜ್ಜಿಯ ಜನ್ಮದಿನ ಆಚರಿಸಿದ ಗ್ರಾಮಸ್ತರು

ಧಾರವಾಡ ಜಿಲ್ಲೆಯ ಕಲಘಟಗಿ ಕಲಘಟಗಿ ತಾಲೂಕಿನ ತುಮರಿಕೊಪ್ಪ ಗ್ರಾಮದಲ್ಲಿ ವೀರಬಸವ್ವ ಚಂದ್ರಗೌಡ ಪಾಟೀಲ್ ಎಂಬವರ 102ನೇ ವರ್ಷದ ಹುಟ್ಟುಹಬ್ಬವನ್ನು ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಆಚರಿಸಲಾಯಿತು.

ಧಾರವಾಡ : 102 ವರ್ಷದ ಅಜ್ಜಿಯ ಜನ್ಮದಿನ ಆಚರಿಸಿದ ಗ್ರಾಮಸ್ತರು
ವೀರಬಸವ್ವ ಚಂದ್ರಗೌಡ ಪಾಟೀಲ್
Updated By: ವಿವೇಕ ಬಿರಾದಾರ

Updated on: Jan 28, 2023 | 6:38 AM

ಹುಬ್ಬಳ್ಳಿ: ಕಲಘಟಗಿ ತಾಲೂಕಿನ ತುಮರಿಕೊಪ್ಪ ಗ್ರಾಮದಲ್ಲಿ ಹಬ್ಬದ ವಾತಾವರಣ. ಇಡಿ ಗ್ರಾಮದ ಜನರಲ್ಲಿ ಅದೇನೊ ಸಂತಸ, ಪ್ರತಿಯೊಬ್ಬರ ಮನೆಯಲ್ಲೂ ಖುಷಿಯ ಸಿಂಚನ. ಊರಬ್ಬದಲ್ಲು ಇಲ್ಲದ ಆನಂದ ಅವತ್ತು ಎಲ್ಲರ ಮನೆ ಮನದಲ್ಲೂ ತುಂಬಿ ತುಳುಕುತ್ತಿತ್ತು. ಇಡಿ ಹಳ್ಳಿಯ ಜನ ಹಿರಿಹಿರಿ ಹಿಗ್ಗಿ ಸುಗ್ಗಿಯಂತ ದಿನ ಆಚರಣೆ ಮಾಡುತ್ತಿದ್ದಾರೆ ಅಂತ ಹೇಳಿದ್ರೆ ನೀವು ಕೂಡ ಅಚ್ಚರಿಪಡುತ್ತೀರಿ. ಇಡಿ ತುಮರಿಕೊಪ್ಪ ಗ್ರಾಮದ ಹಿರಿಯ ಜೀವದ ಜನ್ಮದಿನದ ಆಚರಣೆಗೆ ಎಲ್ಲರೂ ದೇವಸ್ಥಾನದಲ್ಲಿ ಸೇರಿದ್ದರು. ವೀರಬಸವ್ವ ಚಂದ್ರಗೌಡ ಪಾಟೀಲ್ ಎಂಬವರ 102ನೇ ವರ್ಷದ ಹುಟ್ಟುಹಬ್ಬವನ್ನು ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಆಚರಿಸಲಾಯಿತು. 4ಜನ ಮಕ್ಕಳು, 30 ಜನ ಮರಿಮೊಮ್ಮಕ್ಕಳು, 20 ಗಿರಿ ಮೊಮ್ಮಕ್ಕಳು ಸೇರಿ ನೂರಾರು ಬಂಧು-ಬಳಗ ಎಲ್ಲ ಸೇರಿ ಮುತ್ತಜ್ಜಿಗೆ ಶುಭ ಹಾರೈಸಿದರು. ವೀರ ಬಸವ್ವ ಇನ್ನೂ ಆರೋಗ್ಯವಂತ ದೇಹ ಕಾಪಾಡಿಕೊಂಡು ಬಂದಿದ್ದಾರೆ. ಯಾವುದೇ ವಯೋಸಹಜ ಖಾಯಿಲೆ ಕೂಡ ಬಸವ್ವಗೆ ಇಲ್ಲ. ತನ್ನ 102ನೇ ವಯಸ್ಸಲ್ಲಿ ಅಜ್ಜಿ ಫಿಟ್ ಅಂಡ್ ಫೈನ್ ಆಗಿದ್ದಾಳೆ. ಕಾರ್ಯಕ್ರಮಕ್ಕೆ ಬಂದವರು ಶತಾಯುಷಿ ಬಸವ್ವಲಿಗೆ ಮತ್ತೊಂದು ನೂರು ವರ್ಷ ಬದುಕಮ್ಮಾ ಅಂತ ಶುಭ ಹಾರೈಸಿದರು.

ಕಾರ್ಯಕ್ರಮಕ್ಕೆ ಹನ್ನೆರಡು ಮಠದ ಶ್ರೀ ರೇವಣಸಿದ್ದ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ತುಮರಿಕೊಪ್ಪ ಗ್ರಾಮದ ಹಿರಿಯರಾದ ಸೋಮನಗೌಡ ಪಾಟೀಲ್ ರುದ್ರಗೌಡ ಪಾಟೀಲ್ ರುದ್ರಯ್ಯ ಸೇರಿ ನೂರಾರು ಬಂಧು-ಬಳಗ ಎಲ್ಲರೂ ಭಾಗವಹಿಸಿ, ಹ್ಯಾಪಿ ಬರ್ತ್ ಡೇ ವೀರಮ್ಮ ಅಂತ ಹಾಡಿ ಹೊಗಳಿ ದೊಡ್ಡ ಕೇಕ್ ಕಟ್ ಮಾಡಿಸಿದ್ದು, ಗ್ರಾಮಸ್ತರಲ್ಲಿ ಹೆಮ್ಮೆ ಪಡುವಂತೆ ಮಾಡಿತ್ತು.