ಹುಬ್ಬಳ್ಳಿ: ವಿಧಾನ ಪರಿಷತ್ ಚುನಾವಣೆಗೆ ಈಗಾಗಲೇ ಸಿದ್ಧತೆಗಳು ಶುರುವಾಗಿವೆ. ಆದರೆ ಸಭಾಪತಿ ಬಸವರಾಜ ಹೊರಟ್ಟಿ ಕಡೆಯ ವ್ಯಕ್ತಿಯಿಂದ ಜೀವ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ.
ಇನ್ನು ಚುನಾವಣೆಗೆ ಸಾಕಷ್ಟು ದಿನಗಳು ಬಾಕಿ ಇವೆ. ಆದ್ರೆ ತಮ್ಮ ತಮ್ಮ ಅಭ್ಯರ್ಥಿಗಳ ಪರ ಅಭಿಮಾನಿಗಳ ಈಗಿನಿಂದಲೇ ಬ್ಯಾಟ್ ಬಿಸುತ್ತಿದ್ದಾರೆ. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ತಮ್ಮ ಅಭ್ಯರ್ಥಿ ಪರ ಅಪಪ್ರಚಾರ ಮಾಡುತ್ತಿದ್ದಾರೆಂದು ರವೀಂದ್ರ ಪಾಟೀಲ್ ಎಂಬುವವರಿಗೆ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿಯವರ ಪರ ಎಂದು ಹೇಳಿಕೊಂಡು ಗಜಾನನ ಅನ್ವೇಕರ್ ಎಂಬುವವರು ಜೀವ ಬೆದರಿಕೆ ಹಾಕಿದ್ದಾರಂತೆ.
ಬಸವರಾಜ್ ಹೊರಟ್ಟಿಯವರ ವಿರುದ್ಧ ಸಂಘ ಮಾಡಿ ಮತ್ತು ಚುನಾವಣೆಯಲ್ಲಿ ಅವರ ವಿರುದ್ಧ ಪ್ರಚಾರ ಮಾಡಬಾರದು ಎಂದು ರವೀಂದ್ರ ಪಾಟೀಲ್ ಎಂಬುವರಿಗೆ ಅವಾಜ್ ಹಾಕಲಾಗಿದೆ. ತನ್ನ ಸಹಚರರೊಂದಿಗೆ ಆಗಮಿಸಿದ ಗಜಾನನ ಹಾಗೂ ತನ್ನಿಬ್ಬರು ಸಹಚರರು ರವಿಚಂದ್ರ ಅವರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದ್ದು ಈ ಕುರಿತು ಅಶೋಕ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ: Telangana MLC Polls: ತೆಲಂಗಾಣ ವಿಧಾನ ಪರಿಷತ್ ಚುನಾವಣೆಯಲ್ಲಿ ಪಿ.ವಿ. ನರಸಿಂಹರಾವ್ ಪುತ್ರಿ ಸುರಭಿ ವಾಣಿ ದೇವಿಗೆ ಗೆಲುವು
Published On - 10:45 am, Wed, 20 October 21