ಧಾರವಾಡ: ನಮ್ಮ ದೇಶದಕ್ಕೆ ಸ್ವಾತಂತ್ರ್ಯ ಬಂದಾಗಿಂದ ಒಂದು ಭ್ರಮೆ, ಭಯ ಬಿತ್ತೋ ಕೆಲಸ ಆಗಿದೆ. ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ ಬಂದರೆ ರಿಸರ್ವೇಶನ್ ತಗೀತಾರೆ, ಮುಸ್ಲಿಂರನ್ನ ಪಾಕಿಸ್ತಾನಕ್ಕೆ ಒಡಸ್ತಾರೆ ಅನ್ನೋ ಭಯ ಬಿತ್ತಲಾಗಿದೆ. ಆದರೆ ನಾವ ಕಳಸಿದರೂ ಅವರು ತಗೋಳಲ್ಲ, ನಾವ ಕಳಸೋದಿಲ್ಲ ಎಂದು ಹುಬ್ಬಳಿಯ ಖಾಸಗಿ ಹೊಟೇಲ್ನಲ್ಲಿ ನಡೆದ ದಮನಿತರ ಚಿಂತನ ಸಭೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad joshi) ಹೇಳಿದ್ದಾರೆ.
ಈಗ ಮುಸ್ಲಿಂರ ಜನಸಂಖ್ಯೆ 17 ರಿಂದ 18 ಕೋಟಿಗೆ ಏರಿಕೆಯಾಗಿದೆ. ಇವರನ್ನೇನು ಅರಬ್ಬಿ ಸಮುದ್ರಕ್ಕೆ ಹಾಕೋಕೆ ಆಗುತ್ತಾ? ಪಾಕಿಸ್ತಾನದಲ್ಲೆ ತಿನ್ನೋಕೆ ಇಲ್ಲ, ಇಲ್ಲಿಯವರನ್ನ ಯಾಕೆ ಅವರು ತಗೋತಾರೆ. ನಮ್ಮ ನೀತಿ ವಿರೋಧ ಸ್ಪಷ್ಟ ಇದೆ, ನಾವು ತುಷ್ಟೀಕರಣ ರಾಜಕಾರಣ ಮಾಡಲ್ಲ. ಅನೇಕ ಮುಸ್ಲಿಂರು ಒಳ್ಳೆದ ಮಾಡಿದ್ದಾರೆ. ರಿಸರ್ವೇಶನ್ ವಿಚಾರವಾಗಿ ಯಾವತ್ತೂ ನೆಗೆಟಿವ್ ಮಾತಾಡಿಲ್ಲ ಎಂದು ಹೇಳಿದರು.
ಅತೀ ಹೆಚ್ಚು ಎಸ್ಸಿ ಎಸ್ಟಿ ಜನರು ಇರೋದು ಬಿಜೆಪಿಯಲ್ಲಿ. ಆದರೆ ಬಿಜೆಪಿ ಬಗ್ಗೆ ಭ್ರಮೆ ಬಿತ್ತಿದರು. ಅನೇಕ ಜನ ಇದನ್ನು ನಂಬಿದರು. ಅದರ ಲಾಭ ಕೆಲ ಲೀಡರ್ಗಳಿಗೆ ಆಯ್ತು. ಸಿಲೆಕ್ಟೆಡ್ ಲೀಡರ್ಸ್ ಇದನ್ನು ಲಾಭ ತಗೆದುಕೊಂಡರು, ಆದರೆ ಸಮಾಜಕ್ಕೆ ಇದರಿಂದ ಯಾವದು ಲಾಭ ಇಲ್ಲ. ಬಿಜೆಪಿ ಸಂವಿಧಾನ ಬದ್ದವಾಗಿ ಕೆಲಸ ಮಾಡುತ್ತಿದೆ ಎಂದರು.
ಐತಿಹಾಸಿಕ ತಪ್ಪುಗಳಿಂದ ಒಂದು ಸಮಾಜ ಹಿಂದೆ ಉಳದಿದೆ. ಅವರನ್ನ ಎತ್ತರಕ್ಕೆ ಒಯ್ಯೋದೆ ಬಿಜೆಪಿ ಕೆಲಸ. ನಾವ ಯಾವತ್ತೂ ಡ್ರಾಮಾ ಮಾಡಿಲ್ಲ. ನಾವು ಆರ್ಎಸ್ಎಸ್ ಐಡಿಯಾಲಾಜಿ ಇಟಕೊಂಡು ಬಂದಿದ್ದೇವೆ. ಅಸ್ಪ್ರಶ್ಯತೆ ತಪ್ಪಲ್ಲ ಅಂದರೆ, ಜಗತ್ತಿನಲ್ಲಿ ಯಾವ ಪಾಪವೂ ಇಲ್ಲ. ನಮ್ಮ ಐಡಿಯಾಲಾಜಿ ಬಹಳ ಕ್ಲೀಯರ್ ಇದೆ ಎಂದು ತಿಳಿಸಿದರು.
ಮೋದಿ ನೇತೃತ್ವದದಲ್ಲಿ ನಮ್ಮ ಸರ್ಕಾರ ಉತ್ತಮ ಆಡಳಿತ ನಡೆಸುತ್ತಿದ್ದೇವೆ. ನಾವೇ ದಲಿತರ ಉದ್ದಾರಕರು ಎಂದು ಮಾತನಾಡೋವರು, ಡಾ. ಅಂಬೇಡ್ಕರ್ ಅವರನ್ನ ಹೇಗೆ ನೋಡಿಕೊಂಡರು ಅನ್ನೋದು ಗೊತ್ತಿದೆ. ಅಂಬೇಡ್ಕರ್ ಚುನಾವಣೆ ನಿಂತಾಗ ಕಾಂಗ್ರೆಸ್ ಪಾರ್ಟಿಯಲ್ಲಿ ಅವರ ವಿರುದ್ದ ಯಾರನ್ನ ನಿಲ್ಲಸಬೇಕು ಅನ್ನೋ ಚರ್ಚೆ ಇತ್ತು. ಅಂಬೇಡ್ಕರ್ ಸೋಲಸಿದ್ದು ನೆಹರು ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಈ ದೇಶಕ್ಕೆ ಮಾಹಾನ್ ಪಾಪ ಮಾಡಿದೆ. ಅಂಬೇಡ್ಕರ್ ಅಂತಹ ವ್ಯಕ್ತಿಯನ್ನ ಲೋಕಸಭೆಗೂ ಬರೋಕೆ ಕಾಂಗ್ರೆಸ್ ಬಿಡಲಿಲ್ಲ. ನಾವು ಮೀಸಲಾತಿ ತಗೆಯೋದಿದ್ದರೆ ಯಾಕೆ ಜಾಸ್ತಿ ಮಾಡುತ್ತಿದ್ದವಿ. ಅಂಬೇಡ್ಕರ್ ಕಾಂಗ್ರೆಸ್ ಸುಡುವ ಮನೆ ಎಂದು ಹೇಳಿದ್ದರು. ದಲಿತರಿಗೆ ನಮ್ಮ ಪಾರ್ಟಿಯಲ್ಲಿ ಇರೋ ಅಷ್ಟು ಅವಕಾಶ ಬೇರೆ ಎಲ್ಲೂ ಇಲ್ಲ. ಪ್ರತಿಭೆ ಇದ್ದವರಿಗೆ ಬಿಜೆಪಿ ಅವಕಾಶ ಕೊಟ್ಟಿದೆ. ನಾವ ಇವಾಗ ಕುಟುಂಬ ರಾಜಕಾರಣವನ್ನೂ ಬಂದ್ ಮಾಡುತ್ತಿದ್ದೇವೆ. ನಮ್ಮ ನಡೆ ಗುರಿ ಸ್ಪಷ್ಟ ಇದೆ ಎಂದು ಮಾತನಾಡಿದರು.
ಭಾರತ ಜೋಡೋ ಯಾತ್ರೆಯಿಂದ ರಾಹುಲ್ ಗಾಂಧಿ, ಸಿದ್ದರಾಮಯ್ಯಗೆ ಆರೋಗ್ಯ ಸುಧಾರಿಸಬಹುದು. ಯಾಕಂದರೆ ಪಾದಯಾತ್ರೆಯಿಂದಾಗಿ ವಾಕಿಂಗ್ ಆಗುತ್ತಿದೆ. ನನ್ನ ವಿರುದ್ಧ ಅಪಪ್ರಚಾರಕ್ಕೆ ಕೋಟಿ ಕೋಟಿ ಖರ್ಚು ಮಾಡುತ್ತಾರೆ. ರಾಹುಲ್ ಗಾಂಧಿ ವಿರುದ್ಧ ನಾವ್ಯಾಕೆ ಖರ್ಚು ಮಾಡಬೇಕು. ಅವರನ್ನು ನಿಷ್ಪ್ರಯೋಜಕ, ಅಪ್ರಯೋಜಕ, ಬುದ್ಧಿ ಇಲ್ಲದವ ಅಂತಾರೆ. ಇದನ್ನೆಲ್ಲಾ ನಾವು ಹೇಳೋದಿಲ್ಲ ಎಂದು ವ್ಯಂಗ್ಯ ವಾಡಿದರು.
ಇದು ಜನರಿಗೂ ಗೊತ್ತಾಗಿದೆ, ಅವರ ಪಕ್ಷದವರಿಗೂ ಗೊತ್ತು, ಕಾಂಗ್ರೆಸ್ಗೆ ವಿರೋಧ ಪಕ್ಷದಲ್ಲಿ ಇರುವುದಕ್ಕೂ ಅರ್ಹತೆ ಇಲ್ಲ ಅಂತ. ಸ್ಪರ್ಧೆ ಮಾಡುವ ಎಲ್ಲಾ ಚುನಾವಣೆಯಲ್ಲೂ ಸೋಲುತ್ತಿದ್ದಾರೆ. ಒಂದು ಕಾಲದಲ್ಲಿ 28 ರಾಜ್ಯಗಳಲ್ಲಿ 26 ,27 ರಾಜ್ಯಗಳಲ್ಲಿ ಅವರದೇ ಅಧಿಕಾರದಲ್ಲಿದ್ದರು. ಇವತ್ತು ಕೇವಲ ಎರಡು ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಅದರಲ್ಲಿ ರಾಜಸ್ತಾನ ಇದೀಗ ಅಲುಗಾಡುತ್ತಿದೆ. ಸ್ಪರ್ಧೆ ಮಾಡೋ ಎಲ್ಲ ಚುನಾವಣೆಯಲ್ಲಿ ಸೋಲುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಒಂದು ಸೀಟ್ ಗೆದ್ದಿಲ್ಲ. 398 ಸೀಟ್ ನಲ್ಲಿ 388 ಸೀಟ್ ನಲ್ಲಿ ಡಿಪಾಸೀಟ್ ಕಳೆದುಕೊಂಡಿದ್ದಾರೆ ಎಂದು ನುಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:36 pm, Sun, 9 October 22