ಸಿದ್ದಾರೂಢ ಮಠಕ್ಕೆ ಬಂದವರ ಮೇಲೆ ಕಲ್ಲು ತೂರಿದ್ರಾ? ಅನ್ಯ ಕೋಮಿನ ಜನರ ವಿರುದ್ಧ ಭಕ್ತರ ಆರೋಪ

|

Updated on: May 26, 2023 | 5:50 PM

ಸಿದ್ದಾರೂಢ ಮಠಕ್ಕೆ ಮಧ್ಯರಾತ್ರಿ ಬರುತ್ತಿದ್ದ ಭಕ್ತರ ಮೇಲೆ ಅನ್ಯ ಕೋಮಿನ ಜನರು ಕಲ್ಲು ಎಸೆದಿರುವ ಆರೋಪ ಕೇಳಿಬಂದಿದೆ. ಈ ಕುರಿತಾಗಿ ಅನ್ಯ ಕೋಮಿನ ಜನರ ಮೇಲೆ ಆರೋಪ ಮಾಡಿರುವ ವಿಡಿಯೋ ಒಂದು ವೈರಲ್​ ಆಗಿದೆ.

ಸಿದ್ದಾರೂಢ ಮಠಕ್ಕೆ ಬಂದವರ ಮೇಲೆ ಕಲ್ಲು ತೂರಿದ್ರಾ? ಅನ್ಯ ಕೋಮಿನ ಜನರ ವಿರುದ್ಧ ಭಕ್ತರ ಆರೋಪ
ಭಕ್ತರ ಮೇಲೆ ಕಲ್ಲು ತೂರಾಟ ಆರೋಪ
Follow us on

ಹುಬ್ಬಳ್ಳಿ: ಸಿದ್ದಾರೂಢ ಮಠ (siddharoodha math)  ಕ್ಕೆ ಮಧ್ಯರಾತ್ರಿ ಬರುತ್ತಿದ್ದ ಭಕ್ತರ ಮೇಲೆ ಅನ್ಯ ಕೋಮಿನ ಜನರು ಕಲ್ಲು ಎಸೆದಿರುವ ಆರೋಪ ಕೇಳಿಬಂದಿದೆ. ಈ ಕುರಿತಾಗಿ ಅನ್ಯ ಕೋಮಿನ ಜನರ ಮೇಲೆ ಆರೋಪ ಮಾಡಿರುವ ವಿಡಿಯೋ ಒಂದು ವೈರಲ್​ ಆಗಿದೆ. ತಡರಾತ್ರಿ ಕುಟುಂಬದೊಂದಿಗೆ ಭಕ್ತರು ಸಿದ್ದರೂಢ ಮಠಕ್ಕೆ ಆಗಮಿಸುತ್ತಿದ್ದರು. ಈ ವೇಳೆ ಟೋಪಿ ಹಾಕಿಕೊಂಡವರು ಕಲ್ಲು ಹೊಡೆದಿದ್ದಾರೆ ಎಂದು ಭಕ್ತರೊಬ್ಬರು ಹೇಳಿದ್ದಾರೆ.

ಅದೇ ಕಲ್ಲು ನಾನು ಅವರಿಗೆ ವಾಪಸ್ ಹೊಡೆಯಲು ಇಟ್ಟುಕೊಂಡಿದ್ದೇನೆ ಎಂದು ಭಕ್ತ ಕಲ್ಲು ತೋರಿಸಿದ್ದಾರೆ. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮೊರಬ ಗ್ರಾಮದಿಂದ ಕುಟುಂಬ ಸಮೇತರಾಗಿ ಭಕ್ತರು ಬಂದಿದ್ದಾರೆ.

ಇದನ್ನೂ ಓದಿ: Yadgir News: ಆ್ಯಂಬುಲೆನ್ಸ್ ಸಿಬ್ಬಂದಿಗಳ ಸಮಯ ಪ್ರಜ್ಞೆ: ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಹೆಣ್ಣು ಮಗವಿಗೆ ಜನ್ಮ ನೀಡಿದ ಮಹಿಳೆ

ಅನ್ಯ ಕೋಮಿನ ಜನರು ಕಲ್ಲು ತೂರಾಟ ಮಾಡಿರುವುದನ್ನು ಸಿದ್ದಾರೂಢ ಭಕ್ತರು ಸ್ಥಳೀಯರ ಮುಂದೆ ಹೇಳಿಕೊಂಡಿದ್ದಾರೆ. ಸದ್ಯ ಸ್ಥಳೀಯರೊಂದಿಗೆ ಭಕ್ತರು ಅಳಲು ತೋಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಶಿವಮೊಗ್ಗ: ನಗರದ ಹೊರವಲಯದ ಸೋಮಿನಕೊಪ್ಪದ ಪ್ರಾರ್ಥನಾ ಮಂದಿರ ಎದುರು ಆಟೋಚಾಲಕನ ಮೇಲೆ ಅನ್ಯಕೋಮಿನ ಕಿಡಿಗೇಡಿಗಳು ಹಲ್ಲೆ ಮಾಡಿರುವ ಆರೋಪ ಕೇಳಿಬಂದಿತ್ತು. ಹರೀಶ್ ರಾವ್ ಗೋರ್ಪಡೆ ಹಲ್ಲೆಗೊಳಗಾದ ಆಟೋ ಚಾಲಕ.

ಇದನ್ನೂ ಓದಿ: Dharwad Double Murder: ರಿಯಲ್ ಎಸ್ಟೇಟ್ ಉದ್ಯಮಿ ಸೇರಿ ಇಬ್ಬರ ಬರ್ಬರ ಹತ್ಯೆ, ಮನೆ ಎದುರೇ ಕೊಚ್ಚಿ ಕೊಲೆ

ಆಟೋ ಚಾಲಕ ಬಿಜೆಪಿಗೆ ಮತ ಹಾಕಿದಕ್ಕೆ ಅನ್ಯಕೋಮಿನ ಕಿಡಿಗೇಡಿಗಳು ಕೈಯಿಂದ ಗುದ್ದಿ, ಕಲ್ಲಿನಿಂದ ಆಟೋಗೆ ಹೊಡೆದಿದ್ದಾರೆ ಎಂದು ಎಸ್​​ಪಿ ಕಚೇರಿಗೆ ಬಂದು ಹರೀಶ್ ರಾವ್​ ಘಟನೆ ಬಗ್ಗೆ ಮಾಹಿತಿ ನೀಡಿದ್ದರು. ಇನ್ನು ಘಟನೆ ವಿವರ ತಿಳಿದು ಹರೀಶ್ ರಾವ್​ ಅವರಿಗೆ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಧನಸಹಾಯ ಮಾಡಿದ್ದಾರೆ. ಇನ್ನು ಕಿಡಿಗೇಡಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಕೆಎಸ್ ಈಶ್ವರಪ್ಪ ಎಸ್ಪಿಗೆ ಮನವಿ ಮಾಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:38 pm, Fri, 26 May 23