ಸರ್ಕಾರದ ಕುಮ್ಮಕ್ಕಿನಿಂದ ಹು-ಧಾ ಪಾಲಿಕೆ ಆಯುಕ್ತರು ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡುತ್ತಿಲ್ಲ: ಮಹೇಶ್​ ಟೆಂಗಿನಕಾಯಿ

| Updated By: ವಿವೇಕ ಬಿರಾದಾರ

Updated on: Sep 15, 2023 | 10:05 AM

ಕಳೆದ ವರ್ಷದಂತೆ ಈ ವರ್ಷವು ಚನ್ನಮ್ಮ ಮೈದಾನದಲ್ಲಿ ಗಣಪತಿ ಆಚರಣೆಗೆ ಅನುಮತಿ ನೀಡಬೇಕು. ನಿನ್ನೆ (ಸೆ.14) ಬೆಳಗಿನಿಂದ ಶಾಸಕರು, ಮುಖಂಡರು, ಕಾರ್ಯಕರ್ತರು ಅಹೋರಾತ್ರಿ ಪ್ರತಿಭಟನೆ ನಡೆಸಿದರು ಇದುವರೆಗೂ ಅನುಮತಿ ನೀಡಿಲ್ಲ ಎಂದು ಶಾಸಕ ಮಹೇಶ್​ ಟೆಂಗಿನಕಾಯಿ ಹೇಳಿದರು.

ಸರ್ಕಾರದ ಕುಮ್ಮಕ್ಕಿನಿಂದ ಹು-ಧಾ ಪಾಲಿಕೆ ಆಯುಕ್ತರು ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡುತ್ತಿಲ್ಲ: ಮಹೇಶ್​ ಟೆಂಗಿನಕಾಯಿ
ಶಾಸಕ ಮಹೇಶ್​ ಟೆಂಗಿನಕಾಯಿ
Follow us on

ಹುಬ್ಬಳ್ಳಿ ಸೆ.15: ವಾಣಿಜ್ಯ ನಗರಿ ಹುಬ್ಬಳ್ಳಿಯ (Hubballi) ಹೃದಯಭಾಗ ಚನ್ನಮ್ಮ ವೃತ್ತದ (Chennamma Circle) ಪಕ್ಕದಲ್ಲಿರುವ ಈದ್ಗಾ (ಚೆನ್ನಮ್ಮ ಮೈದಾನ)ದಲ್ಲಿ ಗಣೇಶ ಪ್ರತಿಷ್ಠಾಪನೆಗೆ (Ganesha Pratishtapane) ಅನುಮತಿ ನೀಡುವಂತೆ ಹಿಂದೂಪರ ಸಂಘಟನೆಗಳು ಮತ್ತು ಬಿಜೆಪಿ ಕಾರ್ಯಕರ್ತರು ಗುರುವಾರ ಸಾಯಂಕಾಲದಿಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಕಚೇರಿ ಮುಂಭಾಗ ಪ್ರತಿಭಟನೆ ಮಾಡುತ್ತಿದ್ದಾರೆ. ಈ ಬಗ್ಗೆ ಹು-ಧಾ ಸೆಂಟ್ರಲ್ ಬಿಜೆಪಿ (BJP) ಶಾಸಕ ಮಹೇಶ್ ಟೆಂಗಿನಕಾಯಿ (Mahesh Tenginkai) ಮಾತನಾಡಿ ಈದ್ಗಾ ಮೈದಾನದಲ್ಲಿ (Idgah Ground) ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡಬೇಕು. ಆ.31ರಂದು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಸರ್ವಸಮ್ಮತದಿಂದ ಠರಾವು ಪಾಸ್ ಆಗಿತ್ತು. ಈಗ ಸರ್ಕಾರದ ಕುಮ್ಮಕ್ಕಿನಿಂದ ಆಯುಕ್ತರು ಅನುಮತಿ ಕೊಡುತ್ತಿಲ್ಲ ಎಂದು ಆರೋಪಿಸಿದರು.

ಹೈಕೋರ್ಟ್​ನಲ್ಲಿ ಪ್ರಕರಣ ದಾಖಲಿಸುವ ಕೆಲಸ ಮಾಡುತ್ತಿದ್ದಾರೆ. ನಾವು ಕೂಡ ಕಾನೂನು ಹೋರಾಟಕ್ಕೆ ತಯಾರಿದ್ದೇವೆ. ಕಳೆದ ವರ್ಷದಂತೆ ಈ ವರ್ಷವು ಚನ್ನಮ್ಮ ಮೈದಾನದಲ್ಲಿ ಗಣಪತಿ ಆಚರಣೆಗೆ ಅನುಮತಿ ನೀಡಬೇಕು. ನಿನ್ನೆ (ಸೆ.14) ಬೆಳಗಿನಿಂದ ಶಾಸಕರು, ಮುಖಂಡರು, ಕಾರ್ಯಕರ್ತರು ಅಹೋರಾತ್ರಿ ಪ್ರತಿಭಟನೆ ನಡೆಸಿದರು ಇದುವರೆಗೂ ಅನುಮತಿ ನೀಡಿಲ್ಲ ಎಂದರು.

ಇದನ್ನೂ ಓದಿ: ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣಪತಿ ಪ್ರತಿಷ್ಠಾಪನೆಗೆ ಆಗ್ರಹಿಸಿ ಪ್ರತಿಭಟನೆ ಜೋರು; ರಾಜ್ಯ ಸರ್ಕಾರಕ್ಕೆ ಬೆಲ್ಲದ ಎಚ್ಚರಿಕೆ

ಚನ್ನಮ್ಮ ಮೈದಾನದಲ್ಲಿ ಧ್ವಜಾರೋಹಣ ಮಾಡಬೇಕಾದರೂ ಹೀಗೆಯೇ ಮೊಂಡುತನ ಮಾಡಿದರು. ಕೇವಲ ಗಣಪತಿ ಹಬ್ಬ ಅಲ್ಲಾ, ಎಲ್ಲಾ ಆಚರಣೆಗೆ ಅನುಮತಿ ಕೊಡಬೇಕು ಎಂದು ಕಳೆದ ಬಾರಿ ಹೈಕೋರ್ಟ್​ನಿಂದ ಆದೇಶ ನೀಡಿದೆ. ಸರ್ಕಾರ ಆಯುಕ್ತರಿಗೆ ಒತ್ತಡ ಹೇರುತ್ತಿದೆ. ಇದನ್ನು ಬಿಟ್ಟು ಸರ್ಕಾರ ಗಣಪತಿ ಆಚರಣೆಗೆ ಅನುಕೂಲ ಮಾಡಿ ಕೊಡಬೇಕು ಎಂದು ಒತ್ತಾಯಿಸಿದರು.

ಅಂಜುಮನ್ ಸಂಸ್ಥೆಯವರು ಅನುಮತಿ ಕೊಡಬಾರದು ಅಂತ ಕಳೆದ ಬಾರಿ ಕೂಡ ಕೋರ್ಟ್​ಗೆ ಹೋಗಿದ್ದರು. ಎಲ್ಲಾ ಕಾರ್ಯಕ್ರಮ ಪಾಲಿಕೆ ನಿರ್ಧಾರ ಮಾಡಬೇಕು ಅಂತ ಕೋರ್ಟ್ ನಿರ್ದೇಶನ ಇದೆ. ಇದು ಗೊತ್ತಿದ್ದರು ಪದೇ ಪದೇ ಅಂಜುಮನ್ ಅವರು ಕೋರ್ಟ್​​ಗೆ ಹೋಗುವುದು ಸರಿ ಅಲ್ಲ. ಏನೇ ಆಗಲಿ ನಾವು ಗಣಪತಿ ಕೂರಿಸಿಯೇ ಕೂರಿಸುತ್ತೇವೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:00 am, Fri, 15 September 23