
ಹುಬ್ಬಳ್ಳಿ, ಅ.28: ಮುಂಬರುವ ದೀಪಾವಳಿ ಹಬ್ಬ ಹಾಗೂ ಛತ್ ಪೂಜೆಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು ನೈಋತ್ಯ ರೈಲ್ವೆ (SWR) ಮಹತ್ವದ ನಿರ್ಧಾರ ಕೈಗೊಂಡಿದೆ. ಶ್ರೀ ಸಿದ್ಧಾರೂಢ ಸ್ವಾಮೀಜಿ (SSS) ಹುಬ್ಬಳ್ಳಿ ಜಂಕ್ಷನ್ ಹಾಗೂ ರಾಜಸ್ಥಾನದ ಖಾತಿಪುರ (ಜೈಪುರ) ನಡುವೆ ಪ್ರತಿ ವಾರ ವಿಶೇಷ ವಾರಕ್ಕೊಮ್ಮೆ ಎಕ್ಸ್‌ಪ್ರೆಸ್ ರೈಲು ಕಾರ್ಯಾಚರಣೆ ನಡೆಸಲು ರೈಲ್ವೆ ಇಲಾಖೆ ತೀರ್ಮಾನಿಸಿದೆ. ಎರಡೂ ದಿಕ್ಕುಗಳಲ್ಲಿ ತಲಾ 6 ಪ್ರತ್ರಿಗಳು ಈ ರೈಲು ಸಂಚರಿಸಲಿದ್ದು, ಕರ್ನಾಟಕ, ಮಹಾರಾಷ್ಟ್ರ, ಗುಜರಾತ್ ಹಾಗೂ ರಾಜಸ್ಥಾನದ ಪ್ರಮುಖ ನಗರಗಳಿಗೆ ಸಂಚರಿಸುವ ಪ್ರಯಾಣಿಕರಿಗೆ ಈ ಸೌಲಭ್ಯ ಅನುಕೂಲಕರವಾಗಲಿದೆ.
ರೈಲು ಸಂಖ್ಯೆ 07371 (SSS ಹುಬ್ಬಳ್ಳಿ – ಖಾತಿಪುರ ವಿಶೇಷ ಎಕ್ಸ್‌ಪ್ರೆಸ್):
ಈ ರೈಲು ಅಕ್ಟೋಬರ್ 31 ರಿಂದ ಡಿಸೆಂಬರ್ 05 ರವರೆಗೆ ಪ್ರತೀ ಶನಿವಾರ ರಾತ್ರಿ 23:50 ಗಂಟೆಗೆ (11:50 PM) ಹುಬ್ಬಳ್ಳಿಯಿಂದ ಹೊರಟು, ಸೋಮವಾರ ಮಧ್ಯಾಹ್ನ 14:40 ಗಂಟೆಗೆ (2:40 PM) ಖಾತಿಪುರ ತಲುಪಲಿದೆ.
ರೈಲು ಸಂಖ್ಯೆ 07372 (ಖಾತಿಪುರ – SSS ಹುಬ್ಬಳ್ಳಿ ವಿಶೇಷ ಎಕ್ಸ್‌ಪ್ರೆಸ್):
ಮರುಪ್ರಯಾಣದ ಈ ರೈಲು ನವೆಂಬರ್ 02 ರಿಂದ ಡಿಸೆಂಬರ್ 07 ರವರೆಗೆ ಪ್ರತೀ ಸೋಮವಾರ ರಾತ್ರಿ 20:45 ಗಂಟೆಗೆ (8:45 PM) ಖಾತಿಪುರದಿಂದ ಹೊರಟು, ಬುಧವಾರ ಬೆಳಿಗ್ಗೆ 09:30 ಗಂಟೆಗೆ ಹುಬ್ಬಳ್ಳಿ ಜಂಕ್ಷನ್ ತಲುಪಲಿದೆ.
ಈ ವಿಶೇಷ ರೈಲು ಎರಡೂ ದಿಕ್ಕುಗಳಲ್ಲಿ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್ ಹಾಗೂ ರಾಜಸ್ಥಾನದ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಇದೆ.
ಕರ್ನಾಟಕ: ಗದಗ್, ಹೊಳೆ ಆಲೂರು, ಬಾದಾಮಿ, ಬಾಗಲಕೋಟೆ, ಆಲಮಟ್ಟಿ, ಬಸವನ ಬಾಗೇವಾಡಿ ರೋಡ್, ವಿಜಯಪುರ, ಇಂಡಿ ರೋಡ್.
ಮಹಾರಾಷ್ಟ್ರ: ಸೋಲಾಪುರ, ದೌಂಡ್, ಪುಣೆ, ಲೋನಾವಳ, ಕಲ್ಯಾಣ್, ವಸೈ ರೋಡ್.
ಗುಜರಾತ್ ಮತ್ತು ಮಧ್ಯಪ್ರದೇಶ: ವಾಪಿ, ವಲ್ಸಾದ್, ಉಧ್ನಾ, ವಡೋದರಾ, ಗೋಧ್ರಾ, ರತ್ಲಾಂ.
ರಾಜಸ್ಥಾನ: ಚಿತ್ತೋರ್‌ಗಢ, ಭಿಲ್ವಾರಾ, ಬಿಜೈನಗರ, ನಾಸಿರಾಬಾದ್, ಅಜ್ಮೇರ್, ಕಿಶನ್‌ಗಢ ಹಾಗೂ ಜೈಪುರ.
ಈ ವಿಶೇಷ ರೈಲು ಒಟ್ಟು 20 ಬೋಗಿಗಳನ್ನು ಒಳಗೊಂಡಿರಲಿದೆ:
AC 2-ಟೈರ್ ಬೋಗಿಗಳು: 3
AC 3-ಟೈರ್ ಇಕಾನಮಿ ಬೋಗಿಗಳು: 2
AC 3-ಟೈರ್ ಬೋಗಿಗಳು: 5
ಸ್ಲೀಪರ್ ಕ್ಲಾಸ್ ಬೋಗಿಗಳು: 4
ಜನರಲ್ ಸೆಕೆಂಡ್ ಕ್ಲಾಸ್ ಬೋಗಿಗಳು: 4
ಲಗೇಜ್-ಕಮ್-ಬ್ರೇಕ್ ವ್ಯಾನ್ ವಿತ್ ಜೆನರೇಟರ್ ಕಾರ್: 2
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ