ಗರ್ಭಿಣಿಯೆಂದು ಲೆಕ್ಕಿಸದೆ ನನ್ನ ಪತಿ ನನ್ನ ಮೇಲೆ ದೌರ್ಜನ್ಯವೆಸಗಿ ಹತ್ಯೆಗೆ ಯತ್ನಿಸಿದ; ಹು-ಧಾ ಪಾಲಿಕೆ ಸದಸ್ಯೆಯಿಂದ ಪತಿ ವಿರುದ್ಧ ಕೇಸ್ ದಾಖಲು

| Updated By: ಆಯೇಷಾ ಬಾನು

Updated on: Jun 28, 2022 | 3:56 PM

ಪತಿ ಸಂತೋಷ್ ಪರಸ್ತ್ರಿಯೊಂದಿಗೆ ಮೊಬೈಲ್‌ನಲ್ಲಿ ಮಾತನಾಡುವುದು ಮತ್ತು ಮೆಸೇಜ್ ಮಾಡುವ ವಿಷಯಕ್ಕೆ ಹಲವಾರು ಬಾರಿ ಇಬ್ಬರ ಮಧ್ಯೆ ವಾಗ್ವಾದವಾಗಿದೆ. ಈ ಜಗಳ ಅತಿರೇಖಕ್ಕೆ ತಲುಪಿದ್ದು, ಪತ್ನಿ ಶೃತಿ ಗರ್ಭಿಣಿಯೆಂದು ಲೆಕ್ಕಿಸದೆ ಹಲ್ಲೆ ನಡೆಸಿದ್ದಾನೆ.

ಗರ್ಭಿಣಿಯೆಂದು ಲೆಕ್ಕಿಸದೆ ನನ್ನ ಪತಿ ನನ್ನ ಮೇಲೆ ದೌರ್ಜನ್ಯವೆಸಗಿ ಹತ್ಯೆಗೆ ಯತ್ನಿಸಿದ; ಹು-ಧಾ ಪಾಲಿಕೆ ಸದಸ್ಯೆಯಿಂದ ಪತಿ ವಿರುದ್ಧ ಕೇಸ್ ದಾಖಲು
ಶ್ರುತಿ , ಪತಿ ಸಂತೋಷ್ ಛಲವಾದಿ
Follow us on

ಹುಬ್ಬಳ್ಳಿ: ಹು-ಧಾ ನಗರ ಪಾಲಿಕೆ(Hubli Dharwad Municipal Corporation) ಸದಸ್ಯೆ ಶ್ರುತಿ ತನ್ನ ಪತಿ ಸಂತೋಷ್ ಛಲವಾದಿ ವಿರುದ್ಧವೇ ದೂರು ದಾಖಲಿಸಿದ್ದಾರೆ. ಹುಬ್ಬಳ್ಳಿಯ ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹು-ಧಾ ಪಾಲಿಕೆಯ 58ನೇ ವಾರ್ಡ್ನ ಕಾಂಗ್ರೆಸ್ ಸದಸ್ಯೆ ಶ್ರುತಿ ತನ್ನ ಪತಿ ಮೇಲೆ ದೌರ್ಜನ್ಯ ವೆಸಗಿದಲ್ಲದೇ ಕುತ್ತಿಗೆ ಹಿಸುಕಿ ಕೊಲೆ ಮಾಡಲು ಪ್ರಯತ್ನಿಸಿದ್ದಾನೆ ಎಂದು ಆರೋಪಿಸಿದ್ದಾರೆ.

ಪತಿ ಸಂತೋಷ್ ಪರಸ್ತ್ರಿಯೊಂದಿಗೆ ಮೊಬೈಲ್‌ನಲ್ಲಿ ಮಾತನಾಡುವುದು ಮತ್ತು ಮೇಸೆಜ್ ಮಾಡುವ ವಿಷಯಕ್ಕೆ ಇಬ್ಬರ ಮಧ್ಯೆ ಕಿರಿಕ್ ಶುರುವಾಗಿದೆ. ಹಲವಾರು ಬಾರಿ ಇಬ್ಬರ ಮಧ್ಯೆ ಆ ವಿಷಯಕ್ಕೆ ವಾಗ್ವಾದವಾಗಿದೆ. ಈ ಜಗಳ ಭಾನುವಾರ ಅತಿರೇಖಕ್ಕೆ ಹೋಗಿತ್ತು. ಪತ್ನಿ ಶೃತಿ ಗರ್ಭಿಣಿಯೆಂದು ಲೆಕ್ಕಿಸದೆ ಸಂತೋಷ್ ಹಲ್ಲೆ ನಡೆಸಿದ್ದ. ಈಗಾಗಲೇ ಪರಸ್ತ್ರಿಯೊಂದಿಗೆ ಸಂಬಂಧವಿದ್ದು, ನಾನು ಅವಳನ್ನು ಮದುವೆಯಾಗಿ ನಿನಗೆ ವಿಚ್ಛೆಧನ ನೀಡುತ್ತೇನೆ ಮನೆ ಬಿಟ್ಟು ಹೋಗು ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ ಎಂದು ಪಾಲಿಕೆ ಸದಸ್ಯೆ ದೂರಿನಲ್ಲಿ ತಿಳಿಸಿದ್ದಾರೆ.ಇದನ್ನೂ ಓದಿ: ಪ್ರೆಗ್ನೆನ್ಸಿ ಘೋಷಣೆಗೂ ಮೊದಲು ಆಲಿಯಾ ಭಟ್ ತೆಗೆದುಕೊಂಡಿದ್ರು ಒಂದು ಮಹತ್ವದ ನಿರ್ಧಾರ

ಅಷ್ಟೇ ಅಲ್ಲದೆ ನಿನ್ನನ್ನು ಮತ್ತು ನಿಮ್ಮ ಅಣ್ಣನನ್ನು ಹುಡುಗರ ಕರೆಸಿ ಕೊಲೆ ಮಾಡಿಸುತ್ತೇನೆ ಎಂದು ಪತ್ನಿಯ ಕುತ್ತಿಗೆ ಹಿಚುಕಿ ಕೊಲೆ ಮಾಡಲು ಯತ್ನಿಸಿದ ಎಂದು ದೂರಿನಲ್ಲಿ ಉಲ್ಲೇಖಿಸಿದ್ದು, ಈ ಕುರಿತು ಕೇಶ್ವಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಸಂತೋಷ ಛಲವಾದಿ ಕ್ರಿಮಿನಿಲ್ ಬ್ಯಾಗ್ರೌಂಡ್ ಹೊಂದಿದ್ದು, ಕೊಲೆ ಪ್ರಕಣದಲ್ಲಿ ಬಳ್ಳಾರಿ ಜೈಲಿನಲ್ಲಿದ್ದ. ಸಂತೋಷ ಇತ್ತೀಚೆಗಷ್ಟೇ ಬೇಲ್ ಮೇಲೆ ಹೊರಗಡೆ ಬಂದಿದ್ದ. ಪತ್ನಿ ಶೃತಿ ಹುಬ್ಬಳ್ಳಿ- ಧಾರವಾಡ ಪಾಲಿಕೆ ಸದಸ್ಯೆಯಾಗಿದ್ದು, ಸದ್ಯ ಪತಿಯ ವಿರುದ್ಧವೇ ದೂರು ದಾಖಲು ಮಾಡಿದ್ದಳು. ರೌಡಿ ಹಿನ್ನಲೆ ಹೊಂದಿರುವ ಸಂತೋಷ್ ಪಾಲಿಕೆ ಏಲೆಕ್ಷನ್ ಜೈಲಿನಲ್ಲೆ ಕುಳಿತುಕೊಂಡು ಸರ್ಪೋರ್ಟ್ ಮಾಡಿದ್ದ. ಸದ್ಯ ಅದ್ಯಾವದೋ ಮಹಿಳೆ ಸಂಬಂಧ ಬೆಳೆಸಿ ಪತ್ನಿಯ ವಿರುದ್ಧವೇ ತಿರುಗಿ ಬಿದ್ದಿದ್ದು ನಿಜಕ್ಕೂ ದುರಂತ.

ವರದಿ: ದತ್ತಾತ್ರೇಯ ಪಾಟೀಲ್, ಟಿವಿ9 ಹುಬ್ಬಳ್ಳಿ

Published On - 2:44 pm, Tue, 28 June 22