ಈ ಬಾರಿ ಕೆಂಪು ಸುಂದರಿ ಒಣ ಮೆಣಸಿನಕಾಯಿಗೆ ಬಂಗಾರದ ಬೆಲೆ ಇದೆ. ಕೆಂಪು ಸುಂದರಿ ತನ್ನ ಡಿಮ್ಯಾಂಡ್ ಹೆಚ್ಚಿಸಿಕೊಂಡಿದ್ದು ಒಂದು ಕೆಜಿ ಒಣ ಮೆಣಸಿನಕಾಯಿ ಸಾವಿರದ ಸಮೀಪ ಬಂದು ನಿಂತಿದೆ. ಮಾರುಕಟ್ಟೆಯಲ್ಲಿ ಕೆಂಪು ಸುಂದರಿಗೆ ಬೇಡಿಕೆ ಹೆಚ್ಚಾಗ್ತಿರೋದು ಸಹಜವಾಗಿ ಗ್ರಾಹಕರಿಗೆ ಹೊರೆ ಅಗಿದೆ, ಇದೇ ಕಾರಣಕ್ಕೆ ಒಣ ಮೆಣಸಿನಕಾಯಿ ಮೇಳ ಆಯೋಜನೆ ಮಾಡಲಾಗಿತ್ತು. ದರ ಹೆಚ್ಚಿದ್ರೂ ಕೆಂಪು ಸುಂದರಿ ಖರೀದಿಗೆ ಗ್ರಾಹಕರ ದಂಡೇ ಅಲ್ಲಿ ನೆರದಿತ್ತು! ಈ ದೃಶ್ಯಗಳು ಕಂಡು ಬಂದಿದ್ದು ಹುಬ್ಬಳ್ಳಿಯಲ್ಲಿ. ಹುಬ್ಬಳ್ಳಿಯ ಮೂರು ಸಾವಿರ ಮಠದ ಹೈಸ್ಕೂಲ್ ಆವರಣದಲ್ಲಿ (Moorusavir Mutt High School Grounds, Hubballi) ಒಣಮೆನಸಿನಕಾಯಿ ಮೇಳ ಆಯೋಜನೆ ಮಾಡಲಾಗಿದೆ. ಕಳೆದ ಎರಡು ವರ್ಷ ಕೊರೊನಾ ಇದ್ದ ಕಾರಣ ಮೇಳ (Dry Red Chilli Mela) ಆಯೋಜನೆ ಮಾಡಿರಲಿಲ್ಲ. ಈ ಬಾರಿ ಸಾಂಬಾರ ಪದಾರ್ಥಗಳ ಅಭಿವೃದ್ಧಿ ಮಂಡಳಿ, ತೋಟಗಾರಿಕೆ ಇಲಾಖೆ ಸಹಯೋಗದೊಂದಿಗೆ ಮೇಳ ಆಯೋಜನೆ ಮಾಡಲಾಗಿದೆ. ಮೇಳದಲ್ಲಿ ನೇರವಾಗಿ ರೈತರಿಂದ (Farmers) ಗ್ರಾಹಕರಿಗೆ ಮೆಣಸಿನಕಾಯಿ ಮಾರಾಟ ಮಾಡಲಿದ್ದಾರೆ.
ಒಣ ಮೆಣಸಿನಕಾಯಿ ಮೇಳದಲ್ಲಿ 100 ಕ್ಕೂ ಹೆಚ್ಚು ರೈತರು ಭಾಗಿಯಾಗಿದ್ದಾರೆ. ಹೈಸ್ಕೂಲ್ ಆವರಣದಲ್ಲಿ ಬಂದ ರೈತರಿಗೆ ಪ್ರತ್ಯೇಕ ಮಳಿಗೆ ಹಾಕಲಾಗಿದೆ. ಇನ್ನು ಗದಗ, ಹಾವೇರಿ, ಬ್ಯಾಡಗಿ, ಧಾರವಾಡ, ಬಳ್ಳಾರಿಯಿಂದ ರೈತರು ಮೇಳದಲ್ಲಿ ಭಾಗಿಯಾಗಿದ್ದಾರೆ. ಈ ಮೇಳದಲ್ಲಿ 10ಕ್ಕೂ ಹೆಚ್ಚು ವಿವಿಧ ತಳಿಯ ಒಣ ಮೆಣಸಿನಕಾಯಿ ಮಾರಾಟ ಮಾಡಲಾಗ್ತಿದೆ. ಬ್ಯಾಡಗಿ ಮೆಣಸಿನಕಾಯಿ, ಸೀಜಂಟ್, ಬ್ಯಾಡಗಿ ದಪ್ಪಕಾಯಿ, ಬ್ಯಾಡಗಿ ಕಡ್ಡಿ ಕಾಯಿ ಸೇರಿ ವಿವಿಧ ತಳಿಯ ಮೆಣಸಿನಕಾಯಿ ಮಾರಾಟ ಮಾಡಲಾಗ್ತಿದೆ. ಇನ್ನು ಕೆಜಿಗೆ 500-600 ರೂಪಾಯಿ ವರೆಗೂ ದರವಿದೆ. ಈ ಬಾರಿ ಮೆಣಸಿನಕಾಯಿ ದರ ಹೆಚ್ಚಾಗಿರೋದು ಗ್ರಾಹಕರಿಗೆ ಹೊರೆಯಾಗಿದ್ದರೆ, ಇತ್ತ ಮೇಳದಲ್ಲಿ ಭಾಗಿಯಾದ ರೈತರು ಖುಷಿಯಾಗಿದ್ದಾರೆ.
ಇನ್ನು ಮೆಣಸಿನಕಾಯಿ ಉತ್ತರ ಕರ್ನಾಟಕದಲ್ಲಿ ಬಹಳ ಫೇಮಸ್. ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲೂ ಒಣ ಮೆನಸಿನಕಾಯಿಗೆ ಬೇಡಿಕೆ ಹೆಚ್ಚಾಗಿದೆ. ಅದರಲ್ಲೂ ಬ್ಯಾಡಗಿ ಮೆಣಸಿನಕಾಯಿ ಬಹಳ ಫೇಮಸ್ ಆಗಿದ್ದು, ಈ ಬಾರಿ ಕೆಂಪು ಸುಂದರಿ ಮೆಣಸಿನಕಾಯಿ ಬೆಲೆ ಗಗನಕ್ಕೇರಿದೆ. ಒಂದು ಕ್ವಿಂಟಾಲ್ ಗೆ ಹೆಚ್ಚು ಕಡಿಮೆ 8 ಸಾವಿರ ಇದೆ. ಮಾರುಕಟ್ಟೆಯಲ್ಲಿ ಕೆಂಪು ಬೆಡಗಿಗೆ ಬೇಡಿಕೆ ಹೆಚ್ಚಾಗಿದ್ದು, ಪ್ರತಿ ವರ್ಷ ಹುಬ್ಬಳ್ಳಿಯಲ್ಲಿ ಒಣ ಮೆಣಸಿನಕಾಯಿ ಮೇಳ ಆಯೋಜನೆ ಮಾಡಲಾಗ್ತಿದೆ.
ಕೊರೊನಾ ಹಿನ್ನೆಲೆಯಲ್ಲಿ ಎರಡು ವರ್ಷ ಮೇಳಕ್ಕೆ ಬ್ರೇಕ್ ಬಿದ್ದಿತ್ತು.ಆಯೋಜಕರಿಗೆ ಪ್ರತಿ ವರ್ಷ ಮೇಳ ಆದಾಯ ನೀಡಿದೆ. ಹೀಗಾಗಿ ಆಯೋಜಕರು ಇಂದಿನಿಂದ ಮೂರು ದಿನಗಳ ಕಾಲ ಹುಬ್ಬಳ್ಳಿ ಯಲ್ಲಿ ಒಣ ಮೆಣಸಿನಕಾಯಿ ಮೇಳ ಆಯೋಜನೆ ಮಾಡಿದ್ದಾರೆ. ಮೇಳದಲ್ಲಿ ವಿವಿಧ ತಳಿಯ ಮೆಣಸಿನಕಾಯಿ ಮಾರಾಟಕ್ಕಿದ್ದು, ಹುಬ್ಬಳ್ಳಿಗೆ ಬಂದ ಜನ ಸಹಜವಾಗಿ ಮೇಳದತ್ತ ಧಾವಿಸುತ್ತಿದ್ದಾರೆ. ಎಲ್ಲರೂ ರೇಟ್ ಬಹಳ ಜಾಸ್ತಿ ಆಗಿದೆ ಎಂದು ಮಾತಾಡ್ತಿದ್ದರೂ ಮೆಣಸಿನಕಾಯಿ ಖರೀದಿ ಮಾಡಿಕೊಂಡೇ ಹೋಗ್ತೀದಾರೆ.
ಮಾರುಕಟ್ಟೆಯಲ್ಲಿ ಕೆಲ ಕಡೆ ಕಲಬೆರಕೆ ಮೆಣಸಿನಕಾಯಿ ಸಿಗತ್ತೆ ಅನ್ನೋ ಮಾತುಗಳು ಕೇಳಿ ಬರ್ತಿದೆ. ಹೀಗಾಗಿ ನೇರವಾಗಿ ರೈತರಿಂದ ಮೆಣಸಿನಕಾಯಿ ಖರೀದಿ ಮಾಡಲು ಒಣ ಮೆಣಸಿನಕಾಯಿ ಮೇಳ ಆಯೋಜನೆ ಮಾಡಲಾಗಿದೆ. ಗ್ರಾಹಕರೂ ಕೂಡಾ ಮೇಳದತ್ತ ನಿಧಾನವಾಗಿ ಆಗಮಿಸುತ್ತಿದ್ದಾರೆ.
ವರದಿ: ಶಿವಕುಮಾರ್ ಪತ್ತಾರ್, ಟಿವಿ9, ಹುಬ್ಬಳ್ಳಿ