ಶಾಸಕ ಅರವಿಂದ ಬೆಲ್ಲದಗೆ ಸಚಿವ ಸ್ಥಾನ ನೀಡುವಂತೆ ಪತ್ರ ಬರೆದ ಹಿರಿಯ ಸಾಹಿತಿ ಚನ್ನವೀರ ಕಣವಿ

| Updated By: guruganesh bhat

Updated on: Aug 05, 2021 | 4:19 PM

ಬಿ.ಎಸ್.ಯಡಿಯೂರಪ್ಪ ಅವರ ನಂತರದ ಮುಖ್ಯಮಂತ್ರಿಯಾಗಿ ಅರವಿಂದ ಬೆಲ್ಲದ ಆಯ್ಕೆಯಾಗುತ್ತಾರೆ ಎಂದೇ ಬಿಂಬಿತವಾಗಿತ್ತು.

ಶಾಸಕ ಅರವಿಂದ ಬೆಲ್ಲದಗೆ ಸಚಿವ ಸ್ಥಾನ ನೀಡುವಂತೆ ಪತ್ರ ಬರೆದ ಹಿರಿಯ ಸಾಹಿತಿ ಚನ್ನವೀರ ಕಣವಿ
ಚನ್ನವೀರ ಕಣವಿ ಮತ್ತು ಅರವಿಂದ ಬೆಲ್ಲದ
Follow us on

ಧಾರವಾಡ: ಶಾಸಕ ಅರವಿಂದ ಬೆಲ್ಲದಗೆ ಸಚಿವ ಸ್ಥಾನ ನೀಡಲು ಸಾಹಿತ್ಯ ವಲಯದಿಂದಲೂ ಆಗ್ರಹ ವ್ಯಕ್ತವಾಗುತ್ತಿದೆ. ಹಿರಿಯ ಕವಿ ನಾಡೋಜ ಚನ್ನವೀರ ಕಣವಿ ಶಾಸಕ ಅರವಿಂದ ಬೆಲ್ಲದ ಸಚಿವ ಸ್ಥಾನ ನೀಡುವಂತೆ ಕೋರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ. ಬಿ.ಎಸ್.ಯಡಿಯೂರಪ್ಪ ಅವರು ರಾಜೀನಾಮೆ ಸಲ್ಲಿಸುವಲ್ಲಿ ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ (Arvind Bellad) ಪ್ರಮುಖ ಪಾತ್ರ ವಹಿಸಿದ್ದರು ಎಂದು ರಾಜಕೀಯ ವಲಯದಲ್ಲಿ ಮಾತುಗಳು ಕೇಳಿಬಂದಿದ್ದವು. ಅಲ್ಲದೇ ಬಿ.ಎಸ್.ಯಡಿಯೂರಪ್ಪ (BS Yediyurappa) ಅವರ ನಂತರದ ಮುಖ್ಯಮಂತ್ರಿಯಾಗಿ ಅರವಿಂದ ಬೆಲ್ಲದ ಆಯ್ಕೆಯಾಗುತ್ತಾರೆ ಎಂದೇ ಬಿಂಬಿತವಾಗಿತ್ತು.

ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸೂಚನೆ ಸಿಗುತ್ತಿದ್ದಂತೆ ಕರ್ನಾಟಕದಲ್ಲಿ ಮುಖ್ಯಮಂತ್ರಿ ಆಕಾಂಕ್ಷಿಗಳು ಅಲರ್ಟ್ ಆಗಿದ್ದರು. ಸಿಎಂ ಹುದ್ದೆ ಆಕಾಂಕ್ಷಿ ಲಿಂಗಾಯತ ನಾಯಕ ಅರವಿಂದ ಬೆಲ್ಲದ ಹೆಸರು ಮತ್ತೆ ಮುಖ್ಯವಾಹಿನಿಗೆ ಬಂದಿತ್ತು. ನಿನ್ನೆಯಿಂದ ದೆಹಲಿಯಲ್ಲಿರುವ ಶಾಸಕ ಅರವಿಂದ ಬೆಲ್ಲದ ದೆಹಲಿಯಲ್ಲಿ ಬಿಜೆಪಿ ಹೈಕಮಾಂಡ್ ನಾಯಕರನ್ನು ಭೇಟಿಯಾಗುತ್ತಿದ್ದರು.‌ ಮುಖ್ಯಮಂತ್ರಿ ಸ್ಥಾನಕ್ಕೆ ಪರಿಗಣಿಸುವಂತೆ ಹೈಕಮಾಂಡ್ ನಾಯಕರಲ್ಲಿ ಮನವಿ ಮಾಡಿದ್ದರು.

ಬೆಂಗಳೂರಿನಿಂದ ನಿನ್ನೆ ವಾರಾಣಾಸಿಗೆ ತೆರಳಿದ್ದ ಶಾಸಕ ಅರವಿಂದ ಬೆಲ್ಲದ ವಿಶ್ವನಾಥನ ದರ್ಶನ ಪಡೆದು ಬಂದಿದ್ದರು. ಜತೆಗೆ ವಾರಾಣಾಸಿಯ ಜಂಗಮವಾಡಿ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದಿದ್ದರು.  ವಾರಾಣಾಸಿಗೆ ಭೇಟಿ ನೀಡುವ ಒಂದು ದಿನ ಮೊದಲು ಮುರುಗೇಶ್ ನಿರಾಣಿ ಕೂಡ ಭೇಟಿ ನೀಡಿ ಕಾಶಿ ವಿಶ್ವನಾಥನ ದರ್ಶನ ಪಡೆದಿದ್ದರು.

ಇದನ್ನೂ ಓದಿ:

 Basavaraj Bommai: ಬಸವರಾಜ ಬೊಮ್ಮಾಯಿ ಆಯ್ಕೆಗೆ ಅರವಿಂದ ಬೆಲ್ಲದ್, ಯತ್ನಾಳ್ ಹರ್ಷ

Arvind Bellad: ದೂರವಾಣಿ ಕದ್ದಾಲಿಕೆ ಆರೋಪ ಸಂಕಷ್ಟ; ಬಿಜೆಪಿ ಶಾಸಕ ಅರವಿಂದ ಬೆಲ್ಲದ್​ಗೆ ಶೇಷಾದ್ರಿಪುರಂ ಎಸಿಪಿ ನೋಟಿಸ್

(Senior writer Chennaveera Kanavi wrote letter to CM Basavaraj Bommai to give Ministry to MLA Arvind Bellad)

Published On - 7:44 pm, Sun, 1 August 21