ಲೋಡ್ ಶೆಡ್ಡಿಂಗ್ನಿಂದಾಗಿ ಬಳ್ಳಾರಿ ಜೀನ್ಸ್ ಉದ್ಯಮ (Bellary Jeans) ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ. “ಸುಳ್ಳು ಹೇಳುವುದು (lying) ಕಾಂಗ್ರೆಸಿಗರ ಜೀನ್ಸ್ (Congress Gene) ನಲ್ಲೇ ಇದೆ ಎಂಬಂತೆ, ದೂರದೃಷ್ಟಿಯ ಯೋಚನೆ ಇಲ್ಲದೆ ಅರ್ಥಹೀನ ಯೋಜನೆಗಳ ಘೋಷಿಸಿ, ಅದನ್ನು ಪೂರೈಸಲಾಗದೆ ಇಂದು ಇಡೀ ಕರ್ನಾಟಕವನ್ನು ದಿವಾಳಿ ಮಾಡುವತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ (Karnataka congress) ಸಾಗುತ್ತಿದೆ.
ಜೀನ್ಸ್ ಉದ್ಯಮವನ್ನೇ ಅವಲಂಬಿಸಿರುವ ರಾಜ್ಯದ 80,000ಕ್ಕೂ ಹೆಚ್ಚು ಕುಟುಂಬಗಳು ವಿದ್ಯುತ್ ಕೊರತೆಯಿಂದ ಬಳಲುತ್ತಿದೆ. ಬಿಟ್ಟಿ ಭಾಗ್ಯ ಪೂರೈಸಲಾಗದೆ ವಿದ್ಯುತ್ ಕಡಿತಗೊಳಿಸಿದ ಪರಿಣಾಮ ರಾಜ್ಯದ ಜನರ ಜೀವನವನ್ನೇ ನಾಶ ಮಾಡುತ್ತಿದೆ.
ಸುಳ್ಳು ಹೇಳುವುದು ಕಾಂಗ್ರೆಸಿಗರ “ಜೀನ್ಸ್” ನಲ್ಲೇ ಇದೆ ಎಂಬಂತೆ, ದೂರದೃಷ್ಟಿಯ ಯೋಚನೆ ಇಲ್ಲದೆ ಅರ್ಥಹೀನ ಯೋಜನೆ ಘೋಷಿಸಿ ಅದನ್ನು ಪೂರೈಸಲಾಗದೆ ಇಂದು ಇಡೀ ಕರ್ನಾಟಕವನ್ನು ದಿವಾಳಿ ಮಾಡುವತ್ತ ಮುಖ್ಯಮಂತ್ರಿ @siddaramaiah ಸರಕಾರ ಸಾಗುತ್ತಿದೆ
ಜೀನ್ಸ್ ಉದ್ಯಮವನ್ನೇ ಅವಲಂಬಿಸಿದ ರಾಜ್ಯದ 80,000 ಕ್ಕೂ ಹೆಚ್ಚು ಕುಟುಂಬಗಳು ವಿದ್ಯುತ್…
— Pralhad Joshi (@JoshiPralhad) October 25, 2023
ಬಳ್ಳಾರಿಯಿಂದ ಗೆದ್ದ ಸೋನಿಯಾ ಗಾಂಧಿ ಬಳ್ಳಾರಿಯನ್ನು ಬಿಟ್ಟು ಹೋದರು. ಜೀನ್ಸ್ ಉದ್ಯಮಕ್ಕೆ ನೆರವು ನೀಡುವ ಭರವಸೆ ನೀಡಿದ ರಾಹುಲ್ ಗಾಂಧಿ, ಈ ಉದ್ಯಮವನ್ನೇ ರಾಜ್ಯ ಕಾಂಗ್ರೆಸ್ಸಿಗರ ಮೂಲಕ ಸರ್ವನಾಶ ಮಾಡುತ್ತಿದ್ದಾರೆ. ರಾಜಕೀಯ ಲಾಭಕ್ಕಾಗಿ ಬಿಟ್ಟಿ ಭಾಗ್ಯ ಘೋಷಿಸಿದ ಕಾಂಗ್ರೆಸ್, ಪಂಜಾಬ್ ರಾಜ್ಯದ ಸ್ಥಿತಿಯನ್ನೇ ರಾಜ್ಯಕ್ಕೂ ತರುವ ಸಂಕಲ್ಪ ಮಾಡಿದ್ದಾರೆಯೇ? ಎಂದು ಪ್ರಶ್ನಿಸಿರುವ ಪ್ರಹ್ಲಾದ್ ಜೋಶಿಯವರು ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:47 pm, Thu, 26 October 23