Vade Bharat Train: ಕೇವಲ 14 ನಿಮಿಷಗಳಲ್ಲಿ ಚಮತ್ಕಾರ, ವಂದೇ ಭಾರತ್‌ ರೈಲು ಫುಲ್ ಕ್ಲೀನ್

| Updated By: Digi Tech Desk

Updated on: Oct 03, 2023 | 3:55 PM

ಭಾರತೀಯ ರೈಲ್ವೆ ಇಲಾಖೆಯು ಅಕ್ಟೋಬರ್ 1ರಿಂದ ವಂದೇ ಭಾರತ್‌ ರೈಲುಗಳ 'ಸ್ವಚ್ಛತೆಗೆ 14 ನಿಮಿಷಗಳ ಚಮತ್ಕಾರ' ಅನ್ನೋ ಪರಿಕಲ್ಪನೆಯನ್ನು ಪರಿಚಯಿಸಿದೆ. ಹೊಸ ತಂತ್ರಜ್ಞಾನದೊಂದಿಗೆ ಕೇವಲ 14 ನಿಮಿಷಗಳಲ್ಲಿ ವಂದೇ ಭಾರತ್ ರೈಲುಗಳನ್ನು ಸ್ವಚ್ಛಗೊಳಿಸಿ ಚಮತ್ಕಾರ ಮಾಡಿದೆ.

Vade Bharat Train: ಕೇವಲ 14 ನಿಮಿಷಗಳಲ್ಲಿ ಚಮತ್ಕಾರ, ವಂದೇ ಭಾರತ್‌ ರೈಲು ಫುಲ್ ಕ್ಲೀನ್
ವಂದೇ ಭಾರತ್‌ ರೈಲು
Follow us on

ಧಾರವಾಡ, ಅ.03: ದೇಶದಾದ್ಯಂತ ವಂದೇ ಭಾರತ್ ರೈಲು (Vande Bharat Express) ಪ್ರಯಾಣಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಭಾರತೀಯ ರೈಲ್ವೆ ಇಲಾಖೆಯು (Indian Railway Department) ಗಾಂಧಿ ಜಯಂತಿ ಅಂಗವಾಗಿ ಹೊಸ ತಂತ್ರಜ್ಞಾನದೊಂದಿಗೆ ಕೇವಲ 14 ನಿಮಿಷಗಳಲ್ಲಿ ವಂದೇ ಭಾರತ್ ರೈಲುಗಳನ್ನು ಸ್ವಚ್ಛಗೊಳಿಸುವ ತಂತ್ರವನ್ನು ಪರಿಚಯಿಸಿದ್ದು ಚಮತ್ಕಾರ ಮಾಡಿದೆ. ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 20662) ರೈಲನ್ನು ಕೇವಲ 14 ನಿಮಿಷಗಳಲ್ಲಿ ಸ್ವಚ್ಛಗೊಳಿಸಿ ಪವಾಡ ಮಾಡಿದೆ.

ಭಾರತೀಯ ರೈಲ್ವೆ ಇಲಾಖೆಯು ಅಕ್ಟೋಬರ್ 1ರಿಂದ ವಂದೇ ಭಾರತ್‌ ರೈಲುಗಳ ‘ಸ್ವಚ್ಛತೆಗೆ 14 ನಿಮಿಷಗಳ ಚಮತ್ಕಾರ’ ಅನ್ನೋ ಪರಿಕಲ್ಪನೆಯನ್ನು ಪರಿಚಯಿಸಿದೆ. ಇದು ಭಾರತೀಯ ರೈಲ್ವೆ ಇಲಾಖೆಯ ಇತಿಹಾಸದಲ್ಲೇ ಮೊಟ್ಟ ಮೊದಲ ಪ್ರಯತ್ನ. ದೇಶಾದ್ಯಂತ 29 ವಂದೇ ಭಾರತ್ ರೈಲುಗಳೊಂದಿಗೆ ಆಯಾ ರೈಲು ನಿಲ್ದಾಣಗಳಲ್ಲಿ ಈ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಈ ವೇಳೆ ಮುಖ್ಯ ಮೆಕ್ಯಾನಿಕಲ್ ಎಂಜಿನಿಯರ್ ವಿಕೆ ಅಗರ್ವಾಲ್, ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ಎಸ್‌ಡಬ್ಲ್ಯೂಆರ್ ಹುಬ್ಬಳ್ಳಿ ವಿಭಾಗ) ಹರೀಶ್ ಖರೆ, ಹೆಚ್ಚುವರಿ. DRM ಸಂತೋಷ್ ಕುಮಾರ್ ವರ್ಮಾ, ಹಿರಿಯ ವಿಭಾಗೀಯ ಮೆಕ್ಯಾನಿಕಲ್ ಎಂಜಿನಿಯರ್ ಇತರರು ಧಾರವಾಡ ರೈಲು ನಿಲ್ದಾಣದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ: ಬೆಂಗಳೂರು-ಹೈದರಾಬಾದ್‌ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಮುಹೂರ್ತ ಫಿಕ್ಸ್, ಇಲ್ಲಿದೆ ವೇಳಾಪಟ್ಟಿ

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಸ್ವಚ್ಛಗೊಳಿಸುವ ಯೋಜನೆಗೆ ಜಪಾನ್‌, ಟೋಕಿಯೊ ಮುಂತಾದ ರೈಲ್ವೆ ನಿಲ್ದಾಣದಲ್ಲಿ 7 ನಿಮಿಷಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳುವ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಜಪಾನ್‌, ಟೋಕಿಯೊಗಳಲ್ಲಿ ಒಂದು ಬುಲೆಟ್ ರೈಲು ಸ್ವಚ್ಛಗೊಳಿಸಲು ಕೇವಲ 7 ನಿಮಿಷ ಸಾಕು. ಕೇವಲ 14 ನಿಮಿಷಗಳಲ್ಲಿ ರೈಲು ಸ್ವಚ್ಛವಾಗಿದೆ ಮತ್ತು ಸಿದ್ಧವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಪ್ರತಿ ಕೋಚ್‌ಗೆ ಮೂರು ಕ್ಲೀನಿಂಗ್ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ. “ಇದು ದಕ್ಷತೆ, ಶುಚಿತ್ವ ಮತ್ತು ಪ್ರಯಾಣಿಕರ ತೃಪ್ತಿಗೆ ಭಾರತೀಯ ರೈಲ್ವೆಯ ಬದ್ಧತೆಗೆ ಸಾಕ್ಷಿಯಾಗಿದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತೀಯ ರೈಲ್ವೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಹೊಸ ಸ್ವಚ್ಛತಾ ಅಭಿಯಾನವನ್ನು ಪ್ರಾರಂಭಿಸಲು ಸಿದ್ಧವಾಗಿದೆ, ಕೇವಲ 14 ನಿಮಿಷಗಳಲ್ಲಿ ತಮ್ಮ ಗಮ್ಯಸ್ಥಾನದ ನಿಲ್ದಾಣಗಳಲ್ಲಿ ವಂದೇ ಭಾರತ್ ರೈಲುಗಳನ್ನು ಸ್ವಚ್ಛಗೊಳಿಸುವ ಗುರಿಯನ್ನು ಹೊಂದಿದೆ. ಈ ಹಿಂದೆ ಭಾರತೀಯ ರೈಲ್ವೆ ಇಲಾಖೆಯ ಸಿಬ್ಬಂದಿ, ಅಟೆಂಡೆಂಟ್‌ಗಳು ಒಂದು ರೈಲು ಸ್ವಚ್ಚಗೊಳಿಸಲು ಸುಮಾರು 28 ನಿಮಿಷಗಳನ್ನು ತೆಗೆದುಕೊಳ್ಳುತ್ತಿದ್ದರು. ಬಳಿಕ ಕಾರ್ಮಿಕರ ಸಂಖ್ಯೆಯನ್ನು ಹೆಚ್ಚಿಸಿದ ನಂತರ ಸ್ವಚ್ಛತಾ ಸಮಯ 18 ನಿಮಿಷಕ್ಕೆ ಇಳಿಯಿತು. ಆದರೆ ಈಗ ಹೊಸ ತಂತ್ರವನ್ನು ಬಳಸೋ ಮೂಲಕ ಕೇವಲ 14 ನಿಮಿಷಗಳಲ್ಲಿ ರೈಲುಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:48 pm, Tue, 3 October 23