ಪೆಟ್ರೋಲ್‌ ಬೆಲೆ ಏರಿಕೆಗೆ ಬೇಸತ್ತ ವಿದ್ಯಾರ್ಥಿ ಹೊಸ ಪ್ಲಾನ್; ಗುರು ಇಲ್ಲದೆ ಎಲೆಕ್ಟ್ರಿಕ್ ಸೈಕಲ್ ತಯಾರಿಸಿದ ಗದಗದ ಹುಡುಗ

|

Updated on: Apr 02, 2021 | 11:02 AM

ಎಲೆಕ್ಟ್ರಿಕ್​ ಸೈಕಲ್ 12 ವೋಲ್ಟ್​ನ ಎರಡು ಬ್ಯಾಟರಿ, 24 ಗೆರ್ಡ್ ಮೋಟಾರ್​ಗಳನ್ನು ಅಳವಡಿಸಲಾಗಿದ್ದು, ಬ್ಯಾಟರಿ ಸಂಪರ್ಕ ಕಲ್ಪಿಸಿ ಚಾರ್ಜ್ ಮಾಡಿದರೆ ಎಕ್ಸಿಲೆಟರ್ ಮೂಲಕ ಸೈಕಲ್ ಓಡಿಸಬಹುದು. ಒಂದು ನಿಮಿಷಕ್ಕೆ 2 ಕಿಲೋಮೀಟರ್ ವೇಗದಲ್ಲಿ ಸಂಚರಿಸುತ್ತದೆ.

ಪೆಟ್ರೋಲ್‌ ಬೆಲೆ ಏರಿಕೆಗೆ ಬೇಸತ್ತ ವಿದ್ಯಾರ್ಥಿ ಹೊಸ ಪ್ಲಾನ್; ಗುರು ಇಲ್ಲದೆ ಎಲೆಕ್ಟ್ರಿಕ್ ಸೈಕಲ್ ತಯಾರಿಸಿದ ಗದಗದ ಹುಡುಗ
ಎಲೆಕ್ಟ್ರಿಕ್ ಸೈಕಲ್ ತಯಾರಿಸಿದ ಪ್ರಜ್ವಲ್ ಹಬೀಬ್
Follow us on

ಗದಗ: ಇತ್ತೀಚೆಗೆ ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಗಗನಕ್ಕೆ ಏರಿದೆ. ಅದರಲ್ಲೂ ಪೆಟ್ರೋಲ್ ಬೆಲೆ ಸರಿ ಸುಮಾರು ನೂರಕ್ಕೆ ಏರಿಕೆಯಾಗಿದೆ. ಈಗಿನ ಕಾಲಘಟ್ಟಕ್ಕೆ ಒಂದು ಲೀಟರ್​ ಪೆಟ್ರೋಲ್​ನಲ್ಲಿ ಅದೆಷ್ಟು ಕಿಲೋಮೀಟರ್ ಬೈಕ್ ಚೆಲಿಸಬಲ್ಲದು? ಅಬ್ಬಬ್ಬಾ ಎಂದರೆ 30 ರಿಂದ 40 ಕಿಲೋಮೀಟರ್ ಮಾತ್ರ. ಆದರೆ ಗದಗದಲ್ಲಿನ ವಿದ್ಯಾರ್ಥಿಯೊಬ್ಬ ಇಂಧನದ ಬೆಲೆ ಏರುತ್ತಿರುವ ಈ ಸಮಮಯದಲ್ಲಿ ಕಂಡು ಹಿಡಿದ ಸೈಕಲ್, ಕೇವಲ 6 ರೂಪಾಯಿಯಲ್ಲಿ‌ 40 ಕಿಲೋಮೀಟರ್ ಓಡುತ್ತದೆ ಎನ್ನುವುದು ವಿಶೇಷ.

ಗದಗದ ಒಕ್ಕಲಗೇರಿ ನಿವಾಸಿ ಪ್ರಜ್ವಲ್ ಹಬೀಬ್ ಎಂಬ ಯುವಕ ಯಾರ ಸಹಾಯವೂ ಇಲ್ಲದೆ, ತನ್ನದೇ ಪ್ಲ್ಯಾನ್​ನಲ್ಲಿ ಮನೆಯಲ್ಲಿಯೇ ಎಲೆಕ್ಟ್ರಿಕ್ ಸೈಕಲ್ ತಯಾರಿಸಿದ್ದಾನೆ. ಗುಜರಿ ಸೇರಿದ್ದ ಸೈಕಲ್ ಈ ಯುವಕನ ಕೈಚಳಕದಿಂದ ಎಲೆಕ್ಟ್ರಿಕ್ ಬೈಸಿಕಲ್ ಆಗಿ‌ ಪರಿವರ್ತನೆಯಾಗಿದೆ. ಕೇವಲ 17 ನೇ ವಯಸ್ಸಿನ ಈ ಯುವಕ‌ ಮೊದಲ ವರ್ಷದ ಡಿಪ್ಲೋಮ್ ವಿದ್ಯಾರ್ಥಿ.

ಈ ಸೈಕಲ್​ಗೆ 12 ವೋಲ್ಟ್​ನ ಎರಡು ಬ್ಯಾಟರಿ, 24 ಗೆರ್ಡ್ ಮೋಟಾರ್​ಗಳನ್ನು ಅಳವಡಿಸಲಾಗಿದ್ದು, ಬ್ಯಾಟರಿ ಸಂಪರ್ಕ ಕಲ್ಪಿಸಿ ಚಾರ್ಜ್ ಮಾಡಿದರೆ ಎಕ್ಸಿಲೆಟರ್ ಮೂಲಕ ಸೈಕಲ್ ಓಡಿಸಬಹುದು. ಒಂದು ನಿಮಿಷಕ್ಕೆ 2 ಕಿಲೋಮೀಟರ್ ವೇಗದಲ್ಲಿ ಸಂಚರಿಸುತ್ತದೆ. ಇನ್ನು ಒಂದು ಗಂಟೆ ಚಾರ್ಜ್ ಮಾಡಿದರೆ ಸುಮಾರು 25ರಿಂದ 30 ಕಿಲೋಮೀಟರ್ ವರೆಗೆ ಓಡಿಸಬಹುದು ಎನ್ನವುದು ವಿಶೇಷ.

ಒಂದು ಗಂಟೆ ಚಾರ್ಜ್ ಮಾಡಿದರೆ ಸುಮಾರು 30ರಿಂದ 40 ಕಿಲೋಮೀಟರ್ ವರೆಗೆ ಸೈಕಲ್ ಓಡಿಸಬಹುದು

ಒಂದು ವೇಳೆ ದೂರ ಹೋದ ಸಂದರ್ಭದಲ್ಲಿ ಬ್ಯಾಟರಿ ಖಾಲಿಯಾದರೆ ಸೈಕಲ್​ ಅನ್ನು ಸಾಮಾನ್ಯವಾಗಿ ಬಳಸುವಂತೆ ಬಳಸಬಹುದು ಅಥವಾ ತುಳಿದುಕೊಂಡು ಬರಬಹುದು. ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಹಾಗೂ ವಾಯುವ್ಯ ಮಾಲಿನ್ಯ ನಿಯಂತ್ರಣಕ್ಕಾಗಿ ಈ ಸೈಕಲ್ ತಯಾರಿಸಿದ್ದೇನೆ. ಈ ಸೈಕಲ್ ತೆಗೆದುಕೊಂಡು ಹೊರಟರೆ ಸಾಕು, ಎಲ್ಲರೂ ನಿಲ್ಲಿಸಿ ಸೂಪರ್ ಆಗಿದೆ ಎಂದು ಕಾಮೆಂಟ್ ಮಾಡಿ, ಶಹಬಾಶ್ ಹೇಳಿ ಸೆಲ್ಫಿ ತೆಗೆದುಕೊಳ್ಳುತ್ತಾರೆ ಎಂದು ಸೈಕಲ್ ಆವಿಷ್ಕಾರ ಮಾಡಿದ ವಿದ್ಯಾರ್ಥಿ ಪ್ರಜ್ವಲ್ ಹಬೀಬ್ ಹೇಳಿದ್ದಾರೆ.

ಸೈಕಲ್​ಗೆ 12 ವೋಲ್ಟ್​ನ ಎರಡು ಬ್ಯಾಟರಿ ಬಳಸಲಾಗಿದೆ

ಇನ್ನು ಈ ಪ್ರಜ್ವಲ್ ಹಬೀಬ್ ಡಿಪ್ಲೋಮಾ ಇ & ಇ ಪ್ರಥಮ ವರ್ಷ ವ್ಯಾಸಂಗ ಮಾಡುತ್ತಿದ್ದಾರೆ. ಪ್ರಜ್ವಲ್ ತಂದೆ ಪರಶುರಾಮ ಹಬೀಬ್ ಎಗ್ ರೈಸ್ ಅಂಗಡಿಯನ್ನು ಇಟ್ಟುಕೊಂಡು ಜೀವನವನ್ನು ನಡೆಸುತ್ತಿದ್ದಾರೆ. ಇನ್ನು ಈ ಎಲೆಕ್ಟ್ರಿಕ್ ಸೈಕಲ್ ಕೇವಲ 9 ಸಾವಿರ ರೂಪಾಯಿನಲ್ಲಿ ತಯಾರಾಗಿದೆ. ಶಾಲಾ- ಕಾಲೇಜ್​ಗೆ ಹೋಗುವ ವಿದ್ಯಾರ್ಥಿಗಳು, ಆಫೀಸ್ ಇತರೆ ಕೆಲಸಕ್ಕೆ ಹೋಗುವವರು ಕೂಡ ಇಂತಹ ಎಲೆಕ್ಟ್ರಿಕ್ ಸೈಕಲ್ ಬಳಸಬಹುದು.

ಬಡತನದಲ್ಲಿ ಬೆಳೆದ ನನ್ನ ಮಗ ಎಲೆಕ್ಟ್ರಿಕ್ ಸೈಕಲ್ ಮಾಡಿ ನನಗೆ ಬಹಳ ಖುಷಿಯಾಗಿದೆ. ತಾಂತ್ರಿಕತೆಯ ಯಾವ ಕೋರ್ಸ್ ಮುಗಿಸದೇ ಚಿಕ್ಕವಯಸ್ಸಿನಲ್ಲಿ ಸಾಧನೆಗೆ ಮುಂದಾಗಿರುವುದು ತುಂಬಾನೆ‌ ಸಂತೋಷವಾಗಿದೆ ಎಂದು ಪ್ರಜ್ವಲ್​ ಅವರ ತಂದೆ ಪರಶುರಾಮ ಹಬೀಬ್ ಹೇಳಿದ್ದಾರೆ. ಇನ್ನು ಸ್ಥಳೀಯರು ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಈ ಯುವಕನಿಗೆ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದ್ದಾರೆ.

ಬ್ಯಾಟರಿ ಸಂಪರ್ಕ ಕಲ್ಪಿಸಿ ಚಾರ್ಜ್ ಮಾಡಿದರೆ ಎಕ್ಸಿಲೆಟರ್ ಮೂಲಕ ಸೈಕಲ್ ಓಡಿಸಬಹುದು

ಒಟ್ಟಿನಲ್ಲಿ ಗದಗ-ಬೆಟಗೇರಿ ಅವಳಿ ನಗರದಲ್ಲಿ ಈ ಎಲೆಕ್ಟ್ರಿಕ್ ಸೈಕಲ್ ತುಂಬಾನೆ ಸದ್ದು ಮಾಡಿದ್ದು, ವಿದ್ಯಾರ್ಥಿಯ ಕಮ್ಮಾಲ್ ನೋಡಿ ಎಲ್ಲರು ನಿಬ್ಬೆರಗಾಗಿದ್ದಾರೆ. ಸೂಕ್ತವಾದ ಪ್ರೋತ್ಸಾಹ ಸಿಕ್ಕರೆ ಎಲೆಕ್ಟ್ರಿಕ್ ಫೀಲ್ಡ್​ನಲ್ಲಿ ಈ ವಿದ್ಯಾರ್ಥಿ ಅಮೋಘವಾದ ಸಾಧನೆ ಮಾಡುವುದರಲ್ಲಿ ಸಂಶಯವಿಲ್ಲ.

(ವರದಿ: ಸಂಜೀವ ಪಾಂಡ್ರೆ, 9980914166)

ಇದನ್ನೂ ಓದಿ: ಸೈಕಲ್​ಗಾಗಿ ಕೂಡಿಟ್ಟ ಹಣವನ್ನು ರಾಮಮಂದಿರಕ್ಕೆ ದೇಣಿಗೆ ನೀಡಿದ ಪುಟ್ಟ ಬಾಲಕಿ !

(Diploma student create electric cycle in Gadag as fuel price is increasing)

Published On - 10:58 am, Fri, 2 April 21